Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು / 09-07-2025 (Today’s Current Affairs)

Share With Friends

ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs

ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಗೌರವ
ಜಿಲ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ `ಗ್ರ‍್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಬ್ರೆಸಿಲಿಯಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿದರು.

ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಬ್ರಿಕ್ಸ್, ಜಿ-20 ಮತ್ತು ಯುಎನ್‌ನಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿಯವರ ಕೊಡುಗೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಮೋದಿ ಅವರು ಮೇ 2014ರಲ್ಲಿ ಪ್ರಧಾನಿಯಾದ ನಂತರ ವಿವಿಧ ದೇಶಗಳಿಂದ ಸಿಕ್ಕ 26ನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.


ಇಂಟರ್‌ನೆಟ್‌ ಸೇವೆಗೆ ಭಾರತದ ಬಾಹ್ಯಾಕಾಶ ನಿಯಂತ್ರಕದಿಂದ ಪರವಾನಗಿ ಪಡೆದುಕೊಂಡಿದ ಸ್ಟಾರ್‌ಲಿಂಕ್
ದೇಶದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಭಾರತದ ಬಾಹ್ಯಾಕಾಶ ನಿಯಂತ್ರಕದಿಂದ ಪರವಾನಗಿ ಪಡೆದುಕೊಂಡಿದೆ. ಭಾರತದ ಬಾಹ್ಯಾಕಾಶ ನಿಯಂತ್ರಕದಿಂದ ಅನುಮತಿ ಪಡೆಯುವುದು ಅಂತಿಮ ಹಂತವಾಗಿತ್ತು. ಇದರೊಂದಿಗೆ, ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಸ್ಟಾರ್‌ಲಿಂಕ್ ಎದುರು ಇದ್ದ ಎಲ್ಲ ಅಡತಡೆಗಳು ನಿವಾರಣೆಯಾದಂತಾಗಿದೆ ಎಂದು ಮೂಲಗಳು ತಿಳಿಸಿವೆ.

ಮಸ್ತ್ ಒಡೆತನದ ಉದ್ಯಮವು, ಭಾರತದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಕ್ಕೆ ಪರವಾನಗಿ ಪಡೆದುಕೊಳ್ಳಲು 2022ರಿಂದ ಕಾಯುತ್ತಿತ್ತು. ಕೇಂದ್ರ ದೂರಸಂಪರ್ಕ ಇಲಾಖೆಯು ಕಳೆದ ತಿಂಗಳಷ್ಟೇ ಅನುಮೋದನೆ ನೀಡಿತ್ತು. ಆದರೂ, ಬಾಹ್ಯಾಕಾಶ ನಿಯಂತ್ರಕದಿಂದ ಅನುಮತಿ ದೊರೆತಿರಲಿಲ್ಲ.ಈ ಕುರಿತು ಸ್ಪಾರ್‌ಲಿಂಕ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯುಟೆಲ್‌ಸ್ಯಾಟ್ ಒನ್‌ವೆಬ್ ಮತ್ತು ಜಿಯೊ ಸ್ಮಾಟ್‌ಲೈಟ್ ಕಮ್ಯುನಿಕೇಷನ್ ಈಗಾಗಲೇ ಈ ಪರವಾನಗಿಯನ್ನು ಪಡೆದಿವೆ. ಸ್ಟಾರ್‌ಲಿಂಕ್ ಮೂರನೇ ಕಂಪನಿಯಾಗಿದೆ. ಇದೇ ರೀತಿ, ಅಮೆಜಾನ್‌ನ ಕೈಪರ್ ಅನುಮತಿಗಾಗಿ ಕಾಯುತ್ತಿದೆ.

ವಾಣಿಜ್ಯ ಉಪಗ್ರಹ ಸಂವಹನದ ತರಂಗಾಂತರದ ಬೆಲೆ, ನಿಯಮ ಮತ್ತು ನಿಬಂಧನೆಗಳ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಸರ್ಕಾರಕ್ಕೆ ಈಚೆಗಷ್ಟೇ ಶಿಫಾರಸು ಸಲ್ಲಿಸಿದೆ. ರೇಡಿಯೊ ತರಂಗಾಂತರದ ಆವರ್ತನಗಳ ಹಂಚಿಕೆಯ ನಂತರ ಸ್ಪಾರ್‌ಲಿಂಕ್ ಸೇವೆಗಳನ್ನು ಆರಂಭಿಸಬಹುದಾಗಿದೆ.


ಆ್ಯಪಲ್‌ ಕಂಪನಿಯ COO ಆಗಿ ಭಾರತ ಮೂಲದ ಸಾಬಿಹ್ ಖಾನ್‌ ನೇಮಕ
ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲಕ ಸಾಬಿತ್ ಖಾನ್ (58) ಅವರನ್ನು ನೇಮಕ ಮಾಡಿದೆ. ಕಳೆದ 30 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಖಾನ್ ಅವರು ಪ್ರಸ್ತುತ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಸಿಒಒ ಜಿಫ್ ವಿಲಿಯಮ್ಸ್ ಅವರ ಜಾಗಕ್ಕೆ ಖಾನ್ ನೇಮಕಗೊಳ್ಳುತ್ತಿದ್ದಾರೆ.

1966ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದ್ದ ಖಾನ್, ತಮ್ಮ ಶಾಲಾ ಶಿಕ್ಷಣವನ್ನು ಸಿಂಗಪುರದಲ್ಲಿ ಪೂರೈಸಿದ್ದರು. ನಂತರ ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಉನ್ನತ ಪದವಿ ಪಡೆದಿದ್ದಾರೆ.3 ದಶಕಗಳ ಕಾಲ ಆ್ಯಪಲ್‌ನಲ್ಲಿ ಸೇವೆ ಸಲ್ಲಿಸಿರುವ ಖಾನ್, 2019ರಲ್ಲಿ ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.ಕಳೆದ ಆರು ವರ್ಷಗಳಿಂದ ಖಾನ್ ಅವರು ಆ್ಯಪಲ್ ಉತ್ಪನ್ನಗಳ ಜಾಗತಿಕ ಪೂರೈಕೆ ಸರಪಳಿ, ಯೋಜನೆ, ಸಂಗ್ರಹಣೆ. ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಉತ್ಪನ್ನ ಪೂರೈಕೆಯ ಮೇಲ್ವಿಚಾರಣೆ ನಡೆಸುತ್ತಿದ್ದರು.


ಏಷ್ಯಾದ ಅತಿ ಹಿರಿಯ ಆನೆ ವತ್ಸಲಾ ಇನ್ನಿಲ್ಲ
ಏಷ್ಯಾದ ಅತಿ ಹಿರಿಯ ಆನೆ ಎಂದೇ ಹೆಸರಾಗಿದ್ದ ‘ವತ್ಸಲಾ’ ಮಂಗಳವಾರ ಮೃತಪಟ್ಟಿದೆ. ‘ವತ್ಸಲಾ’ ವಯಸ್ಸು 100 ವರ್ಷ ದಾಟಿತ್ತು ಎಂದು ವರದಿಯಾಗಿದೆ.ಆನೆಯನ್ನು ಕೇರಳದ ನರ್ಮದಾಪುರಂನಿಂದ ಕರೆತಂದು ಬಳಿಕ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಬಿಡಲಾಗಿತ್ತು.

ಇತರ ಆನೆಗಳು ಮರಿಗಳಿಗೆ ಜನ್ಮ ನೀಡುವಾಗ ಅಜ್ಜಿಯಾಗಿರುತ್ತಿದ್ದ ‘ವತ್ಸಲಾ’, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಮಂಗಳವಾರ ಹಿನೌಟಾ ಪ್ರದೇಶದ ಖೈರಾಯನ್ ಚರಂಡಿ ಬಳಿ ಮುಂದಿನ ಕಾಲುಗಳಿಗೆ ಗಾಯವಾಗಿ ವತ್ಸಲಾ ಕುಳಿತುಕೊಂಡಿತ್ತು. ಇದನ್ನು ಕಂಡ ಅರಣ್ಯ ಅಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಆದರೂ ಮಧ್ಯಾಹ್ನದ ಹೊತ್ತಿಗೆ ಆನ ಮೃತಪಟ್ಟಿದೆ’.

ವಯಸ್ಸಿನ ಕಾರಣದಿಂದ ‘ವತ್ರಲಾ’ಗೆ ಹೆಚ್ಚು ದೂರ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಅದರ ಆರೋಗ್ಯದ ಮೇಲೆ ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು ನಿಗಾ ವಹಿಸಿದ್ದರು ಎಂದು ಹೇಳಲಾಗಿದೆ.


ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೆ ಏರಿದ ಶುಭಮನ್ ಗಿಲ್
ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ 400 ಕ್ಕೂ ಅಧಿಕ ರನ್ ಕಲೆ ಹಾಕಿದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಇದೀಗ ಐಸಿಸಿ ಹೊಸ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ನೂತನ ರ್‍ಯಾಕಿಂಗ್‌ನಲ್ಲಿ 15 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿರುವ ಶುಭಮನ್ ಗಿಲ್ ಆರನೇ ಸ್ಥಾನಕ್ಕೆ ಬಂದಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ 21 ನೇ ಸ್ಥಾನದಲ್ಲಿದ್ದ ಶುಭ್​ಮನ್ ಗಿಲ್ ಇದೀಗ ಎರಡನೇ ಟೆಸ್ಟ್ ನಂತರ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಉಳಿದಂತೆ ಇಂಗ್ಲೆಂಡ್‌ ತಂಡದ ಉಪನಾಯಕ ಹ್ಯಾರಿ ಬ್ರೂಕ್ ನಂಬರ್ 1 ಸ್ಥಾನವನ್ನು ಅಲಂಕರಿಸಿಕೊಂಡಿದ್ದರೆ, ಜೋ ರೂಟ್ ನಂಬರ್ 1 ರಿಂದ ನಂಬರ್ 2 ಸ್ಥಾನಕ್ಕೆ ಕುಸಿದಿದ್ದಾರೆ.

ಶುಭ್‌ಮನ್ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬರೋಬ್ಬರಿ 430 ರನ್ ಬಾರಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ, 807 ರೇಟಿಂಗ್ ಪಾಯಿಂಟ್ ಪಡೆದಿರುವ ಶುಭ್​ಮನ್ ಗಿಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ.


ರಾಜಸ್ಥಾನದಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನ
ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಗುಜರಾತ್​​ನ ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 170ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.


ಜುಲೈ 16 ರಂದು ಯೆಮೆನ್‌ನಲ್ಲಿ ಕೊಲೆ ಅಪರಾಹ ನಿಮಿಷಾ ಪ್ರಿಯಾಗೆ ಮರಣದಂಡನೆ ನಿಗದಿ
ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಜುಲೈ 16 ರಂದು ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಲಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.ಯೆಮೆನ್ ವಿಚಾರಣಾ ನ್ಯಾಯಾಲಯವು ಆಕೆಗೆ 2018 ರಲ್ಲಿ ಅವರಿಗೆ ಮರಣದಂಡನೆ ವಿಧಿಸಿತ್ತು ಮತ್ತು ಆ ತೀರ್ಪನ್ನು ಅಲ್ಲಿನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕಳೆದ ವರ್ಷ ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಆಕೆಗೆ ಮರಣದಂಡನೆಯನ್ನು ಅನುಮೋದಿಸಿದರು.

ತಲಾಲ್ ಅಬ್ದೋ ಮೆಹದಿ ಅವರ ಕುಟುಂಬ ಮತ್ತು ಯೆಮೆನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್ ಅವರನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಪಬ್ಲಿಕ್ ಪ್ರಾಸಿಕ್ಯೂಟರ್ ಜೈಲು ಅಧಿಕಾರಿಗಳಿಗೆ ಕಾನೂನು ಕ್ರಮದ ಪತ್ರವನ್ನು ನೀಡಿದ್ದಾರೆ. ಜುಲೈ 16 ರಂದು ಮರಣದಂಡನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಆಯ್ಕೆಗಳು ಇನ್ನೂ ಮುಕ್ತವಾಗಿವೆ. ಭಾರತ ಸರ್ಕಾರವು ಅವರ ಜೀವ ಉಳಿಸಲು ಈ ವಿಷಯದಲ್ಲಿ ಮಧ್ಯಪ್ರವೇಶಿಸಬಹುದು” ಎಂದು ಹೇಳಿದ್ದಾರೆ. ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ, ಕೊಚ್ಚಿಯಲ್ಲಿ ಮನೆಕೆಲಸ ಮಾಡುತ್ತಿದ್ದು, ಕ್ಷಮಾದಾನ ಪಡೆಯಲು ಒಂದು ವರ್ಷದಿಂದ ಯೆಮೆನ್‌ನಲ್ಲಿದ್ದಾರೆ.ಅವರು ನಿಮಿಷಾ ಅವರನ್ನು ಜೈಲಿನಲ್ಲಿ ಹಲವಾರು ಬಾರಿ ಭೇಟಿಯಾಗಿದ್ದಾರೆ.


ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025)
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್
error: Content Copyright protected !!