ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
Italy and Netherlands Qualify for ICC T20 World Cup 2026 : T20 WC 2026 : ಕ್ರಿಕೆಟ್ ಇತಿಹಾಸದಲ್ಲೇ ಕ್ರಿಕೆಟ್ ಶಿಶು ಇಟಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಮೆಂಟ್‌ಗೆ ((T20 World Cup 2026) ) ಅರ್ಹತೆ ಪಡೆದಿದೆ. ಯುರೋಪಿಯನ್ ವಲಯದಿಂದ ನೆದರ್ಲ್ಯಾಂಡ್ಸ್ ಜೊತೆಗೆ ಇಟಲಿ ಮೆಗಾ ಈವೆಂಟ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ನೆದರ್ಲ್ಯಾಂಡ್ಸ್ ತಮ್ಮ ಅಂತಿಮ ಪಂದ್ಯವನ್ನು ಗೆದ್ದರೆ, ಇಟಲಿಯ ಉತ್ತಮ ನಿವ್ವಳ ರನ್ ದರವು ಸೋಲಿನ ನಂತರವೂ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ತಲುಪಲು ಸಹಾಯ ಮಾಡಿತು.
ಯುರೋಪ್ ವಲಯ ಕ್ವಾಲಿಫಿಕೇಶನ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್(italy vs scotland) ವಿರುದ್ಧ 9 ವಿಕೆಟ್ ಅಂತರದ ಸೋಲು ಕಂಡರೂ ರನ್ ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡಿತು. ಮುಂದಿನ ವರ್ಷ(2026) ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ. ಇದು ಇಟಲಿ ತಂಡಕ್ಕೆ ಮೊದಲ ಐಸಿಸಿ ಟೂರ್ನಿಯಾಗಿದೆ. ಫುಟ್ಬಾಲ್ ನೆಚ್ಚಿಕೊಂಡಿರುವ ಈ ದೇಶದಲ್ಲಿ ಇದೀಗ ಕ್ರಿಕೆಟ್ ಪ್ರಗತಿ ಕಾಣಲಾರಂಭಿಸಿದೆ.
ಶುಕ್ರವಾರ ತಡ ರಾತ್ರಿ ನಡೆದಿದ್ದ ಕೊನೆಯ ಯುರೋಪ್ ಪ್ರಾದೇಶಿಕ ಫೈನಲ್ ಅರ್ಹತಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಟಲಿ ನಿಗದಿತ 20 ಒವರ್‌ಗಳಲ್ಲಿ 7 ವಿಕೆಟ್‌ಗೆ 134 ರನ್ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 16.2 ಓವರ್‌ಗಳಲ್ಲಿಒಂದು ವಿಕೆಟ್ ನಷ್ಟಕ್ಕೆ 135 ರನ್ ಬಾರಿಸಿ ಅಗ್ರಸ್ಥಾನಿಯಾಗಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಿತು. ಇಟಲಿ ಮತ್ತು ಜೆರ್ಸಿ ತಂಡಕ್ಕೆ ತಲಾ 5 ಅಂಕ ಹೊಂದಿದ್ದರೂ ಕೂಡ ರನ್ ರೇಟ್ ಆಧಾರದಲ್ಲಿ ಮುಂದಿದ್ದ ಕಾರಣ ಇಟಲಿಗೆ ಅದೃಷ್ಟ ಒಲಿಯಿತು.
2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ಗೆ ಇದುವರೆಗೆ 15 ತಂಡಗಳು ಅರ್ಹತೆ ಪಡೆದಿವೆ. ಏಷ್ಯಾ ಇಎಪಿ ಅರ್ಹತಾ ಪಂದ್ಯದಲ್ಲಿ ಇನ್ನೂ ಮೂರು ತಂಡಗಳು ಸ್ಪರ್ಧೆಯಿಂದ ಅರ್ಹತೆ ಪಡೆಯಲಿದ್ದು, ಆಫ್ರಿಕಾ ಅರ್ಹತಾ ಪಂದ್ಯದಲ್ಲಿ ಇನ್ನೂ ಎರಡು ತಂಡಗಳು ಅರ್ಹತೆ ಪಡೆಯಲಿವೆ.
ಸದ್ಯ ಟಿ 20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳೆಂದರೆ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್, ಇಟಲಿ, ನೆದರ್ಲೆಂಡ್ಸ್ .
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026 ರ ಟಿ 20 ವಿಶ್ವಕಪ್, ಇಟಲಿಯಂತಹ ಹೊಸ ತಂಡಗಳು ವಿಶ್ವ ವೇದಿಕೆಯಲ್ಲಿ ಪಾದಾರ್ಪಣೆ ಮಾಡುವುದರೊಂದಿಗೆ, ಇದುವರೆಗಿನ ಅತಿದೊಡ್ಡ ಆವೃತ್ತಿಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025) |
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ |
- ಇಂದಿನ ಪ್ರಚಲಿತ ವಿದ್ಯಮಾನಗಳು / 12-07-2025 (Today’s Current Affairs)
- ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
- Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ