Current AffairsLatest UpdatesSports

KL Rahul : ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಲ್ಲಿ ಹಲವು ದಾಖಲೆ ಬರೆದ ಕೆ.ಎಲ್‌.ರಾಹುಲ್‌

Share With Friends

KL Rahul : ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರು ಈ ಬಾರಿ ಹಲವು ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್‌ 177 ಎಸೆತಗಳಲ್ಲಿ 13 ಫೋರ್‌ಗಳೊಂದಿಗೆ 100 ರನ್‌ ಬಾರಿಸಿದ್ದಾರೆ. ಈ ಶತಕದೊಂದಿಗೆ ಕನ್ನಡಿಗನ ಹೆಸರಿಗೆ ಹಲವು ದಾಖಲೆಗಳು ಸೇರ್ಪಡೆಯಾಗಿದೆ.

*ಕೆಎಲ್ ರಾಹುಲ್ ಈ ಶತಕದ ಮೂಲಕ ಭಾರತದ ಪರ ಲಾರ್ಡ್ಸ್ ಮೈದಾನದಲ್ಲಿ 2 ಶತಕ ಸಿಡಿಸಿದ 2ನೇ ಹಾಗೂ ಏಷ್ಯಾದಲ್ಲೇ ಮೊದಲ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

*ಅವರು 176 ಎಸೆತಗಳಲ್ಲಿ ತಮ್ಮ 10ನೇ ಟೆಸ್ಟ್ ಶತಕವನ್ನು ಪೂರೈಸಿದರು, ಇದರಲ್ಲಿ 13 ಬೌಂಡರಿಗಳು ಸೇರಿದ್ದವು. ಇಂಗ್ಲೆಂಡ್‌ನಲ್ಲಿ ಇದು ಅವರ ನಾಲ್ಕನೇ ಟೆಸ್ಟ್ ಶತಕವಾಗಿದ್ದು, ಆರಂಭಿಕ ಆಟಗಾರನಾಗಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರಾಹುಲ್ ಬರೆದರು.

*ಕೆಎಲ್ ರಾಹುಲ್ ಈ ಶತಕದ ಮೂಲಕ ಭಾರತದ ಪರ ಲಾರ್ಡ್ಸ್ ಮೈದಾನದಲ್ಲಿ 2 ಶತಕ ಸಿಡಿಸಿದ 2ನೇ ಹಾಗೂ ಏಷ್ಯಾದಲ್ಲೇ ಮೊದಲ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

*ಒಟ್ಟಾರೆ ಇಂಗ್ಲೆಂಡ್ ನೆಲದಲ್ಲಿ 4ನೇ ಟೆಸ್ಟ್ ಶತಕವಾಗಿದೆ. ರಾಹುಲ್ ದ್ರಾವಿಡ್ 6, ರಿಷಭ್ ಪಂತ್ 4, ಸಚಿನ್ ತೆಂಡೂಲ್ಕರ್ 4, ದಿಲೀಪ್ ವೆಂಗ್​ಸರ್ಕರ್ 4 ಶತಕ ಸಿಡಿಸಿದ್ದಾರೆ. ಆದರೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ನಲ್ಲಿ ಇದು 5ನೇ ಶತಕವಾಗಿದೆ. ಪಂತ್, ಸಚಿನ್ ಕೂಡ 5 ಅಂತಾರಾಷ್ಟ್ರೀಯ ಶತಕ ಸಿಡಿಸಿ ದ್ರಾವಿಡ್ ನಂತರದ ಸ್ಥಾನದಲ್ಲಿದ್ದಾರೆ.

ಕೆ*ಎಲ್ ರಾಹುಲ್ SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ಭಾರತದ 2ನೇ ಆರಂಭಿಕ ಬ್ಯಾಟರ್ ಎನಿಸಿಕೊಂಡರು. ಸುನಿಲ್ ಗವಾಸ್ಕರ್ 57 ಇನ್ನಿಂಗ್ಸ್​ಗಳಲ್ಲಿ 2464 ರನ್ ರನ್​ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ 45 ಇನ್ನಿಂಗ್ಸ್​ಗಳಲ್ಲಿ 1608 ರನ್​ಗಳಿಸಿದ್ದಾರೆ. ಸೆಹ್ವಾಗ್ 1574 ರನ್​ , ಮುರಳಿ ವಿಜಯ್ 1285 ರನ್, ಗೌತಮ್ ಗಂಭೀರ್ 960 ರನ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.

*ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆಎಲ್‌ ರಾಹುಲ್‌ ಸಚಿನ್‌ ತೆಂಡೂಲ್ಕರ್‌, ದಿಲೀಪ್‌ ವೆಂಗ್‌ಸರ್ಕಾರ್‌ ಮತ್ತು ರಿಷಭ್‌ ಪಂತ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರೆಲ್ಲರೂ ಆಂಗ್ಲರ ನಾಡಿನಲ್ಲಿ 6 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

*ಕೆಎಲ್‌ ರಾಹುಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗೆ 10 ಶತಕ ಸಿಡಿಸಿದ್ದಾರೆ. ಇದರಲ್ಲಿ 9 ಸೆಂಚುರಿಗಳು ಮೂಡಿಬಂದಿರುವುದು ವಿದೇಶದಲ್ಲಿ ಎಂಬುದು ವಿಶೇಷ. ಈ ಮೂಲಕ ಮೊದಲ 10 ಶತಕಗಳನ್ನು ಅತೀ ಹೆಚ್ಚು ವಿದೇಶಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ಕೂಡ ಕೆಎಲ್‌ ರಾಹುಲ್‌ ತಮ್ಮದಾಗಿಸಿಕೊಂಡಿದ್ದಾರೆ.

error: Content Copyright protected !!