LIC Recruitment : ಭಾರತೀಯ ಜೀವ ವಿಮಾ ನಿಗಮ ದಲ್ಲಿ 841 ಹುದ್ದೆಗಳ ನೇಮಕಾತಿ
LIC Recruitment : ಭಾರತೀಯ ಜೀವ ವಿಮಾ ನಿಗಮ (LIC) 2025 ನೇ ಸಾಲಿಗೆ ಸಹಾಯಕ ಆಡಳಿತಾಧಿಕಾರಿಗಳು (AAO) ಮತ್ತು ಸಹಾಯಕ ಎಂಜಿನಿಯರ್‌ಗಳು (AE) ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ತ ಒಟ್ಟು 841 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8, 2025 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ licindia.in ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
*ಸಹಾಯಕ ಇಂಜಿನಿಯರ್ ಹುದ್ದೆಗಳು – 81
*ಸಹಾಯಕ ಸಾಮಾನ್ಯ ಆಡಳಿತ ಅಧಿಕಾರಿ ಹುದ್ದೆಗಳು – 350
*ಸಹಾಯಕ (ತಜ್ಞರು) ಆಡಳಿತ ಅಧಿಕಾರಿ – 410 ಹುದ್ದೆಗಳು
ಶೈಕ್ಷಣಿಕ ಅರ್ಹತೆ
: ಸಾಮಾನ್ಯ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದಾದರೂ ಒಂದು ಪದವಿ ಮುಗಿಸಿರಬೇಕು. ಸ್ಪೆಷಲಿಸ್ಟ್ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಮುಗಿಸಿರಬೇಕು. ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು.
ಅರ್ಜಿ ಶುಲ್ಕ :
SC, ST ಮತ್ತು PwBD ವರ್ಗಗಳ ಅಭ್ಯರ್ಥಿಗಳು 85 ರೂಪಾಯಿ ಜೊತೆಗೆ ವಹಿವಾಟು ಶುಲ್ಕಗಳು ಮತ್ತು GST ಪಾವತಿಸಬೇಕಾಗುತ್ತದೆ. ಇತರ ಎಲ್ಲಾ ವರ್ಗಗಳ ಅರ್ಜಿದಾರರು 700 ರೂಪಾಯಿ ಜೊತೆಗೆ ವಹಿವಾಟು ಶುಲ್ಕಗಳು ಮತ್ತು GST ಪಾವತಿಸಬೇಕಾಗುತ್ತದೆ.
ಎಲ್ಐಸಿ ಎಎಒ ಮತ್ತು ಎಇ ನೇಮಕಾತಿ: ಮುಖ್ಯ ಪರೀಕ್ಷೆಯ ಮೂಲಕ ಆಯ್ಕೆ
ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಸಂದರ್ಶನ ಸುತ್ತಿಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಬಳಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
“ಕಾಲಕಾಲಕ್ಕೆ ಎಲ್‌ಐಸಿಯ ಪ್ರಚಲಿತ ನಿಯಮಗಳ ಪ್ರಕಾರ ಸೇವಾ ನಿಯಮಗಳು ಅನ್ವಯವಾಗುತ್ತವೆ. ಜಾಹೀರಾತು ಮಾಡಲಾದ ಹುದ್ದೆಗಳು ನಿಯಮಿತವಾಗಿರುತ್ತವೆ ಮತ್ತು ನೇಮಕಾತಿಯ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ನಿಗಮದ ಅವಶ್ಯಕತೆಗೆ ಅನುಗುಣವಾಗಿ ಭಾರತದ ಯಾವುದೇ ಸ್ಥಳಕ್ಕೆ ಪೋಸ್ಟ್ ಮಾಡಲಾಗುತ್ತದೆ ಅಥವಾ ನಂತರ ವರ್ಗಾಯಿಸಲಾಗುತ್ತದೆ” ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ವಿವರಗಳು ಮತ್ತು ನವೀಕರಣಗಳಿಗಾಗಿ, ಅಭ್ಯರ್ಥಿಗಳು ಎಲ್‌ಐಸಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.
Current Recruitments : ಪ್ರಸ್ತುತ ನೇಮಕಾತಿಗಳು

- Nobel Prize 2025 : 2025ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪ್ರಕಟ : ಇಲ್ಲಿದೆ ವಿಜೇತರ ಪಟ್ಟಿ
- RRB Recruitment : ರೈಲ್ವೆ ನೇಮಕಾತಿ ಮಂಡಳಿ (RRB)ಯಲ್ಲಿ 8050 ಹುದ್ದೆಗಳಿಗೆ ಅರ್ಜಿ ಆಹ್ವಾನ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (30-09-2025)
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (29-09-2025)
- Asia Cup 2025 : ಏಷ್ಯಾಕಪ್ 2025 ಗೆದ್ದ ಭಾರತ