Job NewsLatest Updates

Intelligence Bureau Recruitment : 362 ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

IB (Intelligence Bureau) MTS Recruitment 2025: Apply Online for 362 Multi-Tasking Staff (General) Posts

ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಟೆಲಿಜೆನ್ಸ್ ಬ್ಯೂರೋ (IB) ಸಂಸ್ಥೆಯು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಜನರಲ್) {MTS(G)} ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶವ್ಯಾಪಿ ಒಟ್ಟು 362 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‍ಲೈನ್ ಅರ್ಜಿ ಪ್ರಕ್ರಿಯೆ ನವೆಂಬರ್‌ 22ರಿಂದ ಆರಂಭವಾಗಿದೆ.

ಅರ್ಹ ಅಭ್ಯರ್ಥಿಗಳು ಡಿಸೆಂಬರ್ 14, 2025ರೊಳಗೆ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಅಥವಾ NCS ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಈ ಹುದ್ದೆಗಳು ಗ್ರೂಪ್ ‘C’ ನಾನ್-ಗ್ಯಾಜೆಟೆಡ್, ನಾನ್-ಮಿನಿಸ್ಟೀರಿಯಲ್ ವರ್ಗಕ್ಕೆ ಸೇರಿದ್ದು, ಅಖಿಲ ಭಾರತೀಯ ವರ್ಗಾವಣೆ ಜವಾಬ್ದಾರಿ ಹೊಂದಿರುತ್ತವೆ.

ಹುದ್ದೆಗಳ ವಿವರ
ಹುದ್ದೆಯ ಹೆಸರು: ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS-General)
ಒಟ್ಟು ಹುದ್ದೆಗಳು: 362

ವಿದ್ಯಾರ್ಹತೆ : ಮಾನ್ಯತೆ ಪಡೆದ ಮಂಡಳಿಯಿಂದ ಮ್ಯಾಟ್ರಿಕ್ಯುಲೇಷನ್ (SSLC) ಅಥವಾ ಸಮಾನ ಅರ್ಹತೆ + ಸಂಬಂಧಿತ ರಾಜ್ಯದ ಡೊಮಿಸೈಲ್ ಪ್ರಮಾಣಪತ್ರ

ವಯೋಮಿತಿ: 18 ರಿಂದ 25 ವರ್ಷ (14/12/2025ರಂತೆ)
ವಿವಿಧ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಲಭ್ಯವಿದೆ.

ಮುಖ್ಯ ದಿನಾಂಕಗಳು
ಅಧಿಸೂಚನೆ ಬಿಡುಗಡೆ: ನ.22, 2025
ಅರ್ಜಿ ಸಲ್ಲಿಕೆಯ ಪ್ರಾರಂಭ: ನ.22, 2025
ಅರ್ಜಿ ಸಲ್ಲಿಕೆ ಕೊನೆ ದಿನ: ಡಿ.14, 2025
ಆನ್‍ಲೈನ್ ಶುಲ್ಕ ಪಾವತಿ ಕೊನೆ ದಿನ: ಡಿ.14, 2025
SBI Challan ಶುಲ್ಕ ಪಾವತಿ ಕೊನೆ: ಡಿ.16, 2025

ಟಿಯರ್-I ಮತ್ತು ಟಿಯರ್-II ಪರೀಕ್ಷೆಗಳ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು.

ನೇಮಕಾತಿ ಪ್ರಕ್ರಿಯೆಯಲ್ಲಿ ಟಿಯರ್-I (ಆನ್‍ಲೈನ್ MCQ) ಮತ್ತು ಟಿಯರ್-II (ವಿವರಣಾತ್ಮಕ, ಅರ್ಹತೆ ಆಧಾರಿತ) ಪರೀಕ್ಷೆಗಳಿರಲಿವೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಐಬಿ ತಿಳಿಸಿದೆ.


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!