Job NewsLatest Updates

KPCL Recruitment 2025 : ಮೆಡಿಕಲ್ & ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

KPCL Recruitment 2025 – 04 Medical Officer, Accounts Officer Posts

ಬೆಂಗಳೂರು : ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್‌ (KPCL) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 04 ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಡಿಕಲ್ ಆಫೀಸರ್ ಹಾಗೂ ಅಕೌಂಟ್ಸ್ ಆಫೀಸರ್ ಹುದ್ದೆಗಳು ಲಭ್ಯವಿದ್ದು, ಆಸಕ್ತ ಹಾಗೂ ಅರ್ಹ SC ವರ್ಗದ Non-Hyderabad Karnataka ಅಭ್ಯರ್ಥಿಗಳು ಆಫ್‌ಲೈನ್ (Email) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 26, 2025. KPCL ಪ್ರಕಟಿಸಿರುವ ದಿನಾಂಕ ಪ್ರಕಾರ, ಆನ್‌ಲೈನ್ ಅರ್ಜಿ ಪ್ರಕ್ರಿಯೆ 27 ನವೆಂಬರ್ 2025ರಿಂದ ಪ್ರಾರಂಭವಾಗುತ್ತಿದ್ದು, ಡಿಸೆಂಬರ್ 26, 2025 ಸಂಜೆ 5 ಗಂಟೆವರೆಗೆ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

ಹುದ್ದೆಗಳ ವಿವರ :
ಮೆಡಿಕಲ್ ಆಫೀಸರ್ – 03 ಹುದ್ದೆಗಳು (SC Backlog – Non-HK)
ಅಕೌಂಟ್ಸ್ ಆಫೀಸರ್ – 01 ಹುದ್ದೆ (SC Backlog – Non-HK)
ಒಟ್ಟು 04 ಹುದ್ದೆಗಳು ಮೆರಿಟ್ ಆಧಾರದಲ್ಲಿ ಭರ್ತಿಯಾಗಲಿವೆ.

ವಿದ್ಯಾರ್ಹತೆ :
ಮೆಡಿಕಲ್ ಆಫೀಸರ್‌ಗೆ: MBBS ಪದವಿ, Karnataka Medical Council ನೋಂದಣಿ ಕಡ್ಡಾಯ. PG ಅರ್ಹತೆ ಮತ್ತು ಅನುಭವವಿದ್ದವರಿಗೆ ಆದ್ಯತೆ.
ಅಕೌಂಟ್ಸ್ ಆಫೀಸರ್‌ಗೆ: CA ಅಥವಾ ICWA ಅರ್ಹತೆ. Cost Analysis ಅನುಭವ ಇರುವವರಿಗೆ ಆದ್ಯತೆ.

ಅರ್ಜಿಶುಲ್ಕ : ₹100 (NEFT/RTGS/IMPS ಮೂಲಕ ಪಾವತಿಸಬೇಕು)
ಬ್ಯಾಂಕ್ ವಿವರಗಳು:
Beneficiary : Karnataka Power Corporation Ltd
A/c No : 10503342643
IFSC : SBIN0009077
ಬ್ಯಾಂಕ್ : SBI, IFB Branch, Residency Road, Bengaluru

ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ವೆಬ್ಸೈಟ್‌ kpcl.karnataka.gov.in ನಿಂದ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ, ದಾಖಲೆಗಳ ಜೊತೆಗೆ ಒಂದೇ PDF ಆಗಿ ಸ್ಕ್ಯಾನ್ ಮಾಡಿ kpclbacklog@gmail.com
ಗೆ ಕಳುಹಿಸಬೇಕು. ಹಾರ್ಡ್ ಕಾಪಿ ಅಗತ್ಯವಿಲ್ಲ.

ಅಧಿಕೃತ ವೆಬ್ಸೈಟ್‌ನಿಂದ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ
ಎಲ್ಲಾ ದಾಖಲೆಗಳಿಗೆ ಸ್ವ-ಸಾಕ್ಷ್ಯೀಕರಣ ಮಾಡಿ
₹100/- ಶುಲ್ಕ ಪಾವತಿಸಿ ರಸೀದಿ ಸಂರಕ್ಷಿಸಿ
ಅರ್ಜಿ + ದಾಖಲೆಗಳು + ಶುಲ್ಕ ರಸೀದಿ ಒಂದೇ PDF ಆಗಿ ಸ್ಕ್ಯಾನ್ ಮಾಡಿ
Email ಕಳುಹಿಸಬೇಕಾದ ವಿಳಾಸ: kpclbacklog@gmail.com
Subject: Post Code – Post Name (ಉದಾ: FN – Medical Officer)
ಹಾರ್ಡ್ ಕಾಪಿ ಕಳುಹಿಸುವ ಅಗತ್ಯವಿಲ್ಲ
ಮಾತ್ರ ಇಮೇಲ್ ಮೂಲಕ ಸಲ್ಲಿಸಿದ ಅರ್ಜಿಗಳು ಸ್ವೀಕಾರ್ಯ

ಆಯ್ಕೆ ವಿಧಾನ :
ವಿದ್ಯಾರ್ಹತೆ ಆಧಾರಿತ ಮೆರಿಟ್
ದಾಖಲೆ ಪರಿಶೀಲನೆ
ಕನ್ನಡ ಭಾಷಾ ಪರೀಕ್ಷೆ (ಅಗತ್ಯವಿದ್ದಲ್ಲಿ)

ಮುಖ್ಯ ದಿನಾಂಕಗಳು :
ಅಧಿಸೂಚನೆ ಬಿಡುಗಡೆ : 27/11/2025
ಅರ್ಜಿ ಸ್ವೀಕೃತಿ ಪ್ರಾರಂಭ : 27/11/2025
ಅರ್ಜಿ ಸಲ್ಲಿಕೆ ಕೊನೆಯ ದಿನ : 26/12/2025 ಸಂಜೆ 5:00 ಗಂಟೆ


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!