RBI Recruitment : 572 ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿ
RBI Recruitment : ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ವತಿಯಿಂದ 2026ನೇ ಸಾಲಿನ ಆಫೀಸ್ ಅಟೆಂಡೆಂಟ್ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ದೇಶಾದ್ಯಂತ ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 15, 2026ರಿಂದ ಆರಂಭವಾಗಿದ್ದು, ಫೆಬ್ರವರಿ 04, 2026 ಕೊನೆಯ ದಿನಾಂಕವಾಗಿದೆ. ಆಸಕ್ತರು ಆರ್‌ಬಿಐ ಅಧಿಕೃತ ವೆಬ್‌ಸೈಟ್ rbi.org.in ಮೂಲಕ ಅರ್ಜಿ ಸಲ್ಲಿಸಬೇಕು.
ನೇಮಕಾತಿ ವಿವರಗಳು :
ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI)
ಹುದ್ದೆ ಹೆಸರು: ಆಫೀಸ್ ಅಟೆಂಡೆಂಟ್
ಒಟ್ಟು ಹುದ್ದೆಗಳು: 572
ವೇತನ ಶ್ರೇಣಿ: ₹24,250 – ₹53,550
ಅಧಿಕೃತ ವೆಬ್‌ಸೈಟ್: https://rbi.org.in
ಅರ್ಹತಾ ಮಾನದಂಡ :
*ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ 10ನೇ ತರಗತಿ (SSLC/ಮ್ಯಾಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು
*01-01-2026ರ ವೇಳೆಗೆ ಪದವಿ ಹೊಂದಿರಬಾರದು (Graduates ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು ಅರ್ಹರಲ್ಲ)
*ಎಕ್ಸ್-ಸರ್ವಿಸ್‌ಮನ್ ಅಭ್ಯರ್ಥಿಗಳು ಕನಿಷ್ಠ 15 ವರ್ಷಗಳ ರಕ್ಷಣಾ ಸೇವೆ ಸಲ್ಲಿಸಿರಬೇಕು
*ಅರ್ಜಿ ಸಲ್ಲಿಸುವ ರಾಜ್ಯ/ಯುಟಿಯ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ಜ್ಞಾನ ಇರಬೇಕು
ವಯೋಮಿತಿ :
ಕನಿಷ್ಠ: 18 ವರ್ಷ
ಗರಿಷ್ಠ: 25 ವರ್ಷ
ವಯೋಸಡಿಲಿಕೆ:
SC/ST: 5 ವರ್ಷ
OBC: 3 ವರ್ಷ
PwBD: 10–15 ವರ್ಷ (ವರ್ಗದ ಅನುಸಾರ)
ಮಾಜಿ ಸೈನಿಕರು: ಸೇವಾ ಅವಧಿ + 3 ವರ್ಷ (ಗರಿಷ್ಠ 50 ವರ್ಷ)
ವಿಧವೆಯರು/ವಿಚ್ಛೇದಿತ ಮಹಿಳೆಯರು: 35 ವರ್ಷ (SC/ST – 40 ವರ್ಷ)
ವೇತನ ಮತ್ತು ಭತ್ಯೆಗಳು :
ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ ₹24,250/- ಆಗಿದ್ದು, ವಿವಿಧ ಹಂತಗಳೊಂದಿಗೆ ಗರಿಷ್ಠ ₹53,550/- ವರೆಗೆ ವೃದ್ಧಿಯಾಗಲಿದೆ.
ಪ್ರಸ್ತುತ ಮಾಸಿಕ ಒಟ್ಟು ವೇತನ (HRA ಹೊರತುಪಡಿಸಿ) ಸುಮಾರು ₹46,029/- ಆಗಿರುತ್ತದೆ.
ಬ್ಯಾಂಕ್ ವಸತಿ ಲಭ್ಯವಿಲ್ಲದವರಿಗೆ 15% ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ.
ಅರ್ಜಿ ಶುಲ್ಕ
SC/ST/PwBD/Ex-Servicemen: ₹50 + 18% GST
GEN/OBC/EWS: ₹450 + 18% GST
RBI ಸಿಬ್ಬಂದಿ: ಶುಲ್ಕವಿಲ್ಲ
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಆರಂಭ: 15 ಜನವರಿ 2026
ಅರ್ಜಿ ಕೊನೆ ದಿನಾಂಕ: 04 ಫೆಬ್ರವರಿ 2026
ಆನ್‌ಲೈನ್ ಪರೀಕ್ಷೆ (ತಾತ್ಕಾಲಿಕ): 28 ಫೆಬ್ರವರಿ & 01 ಮಾರ್ಚ್ 2026
ಅಧಿಸೂಚನೆ : CLICK HERE
✶ Read this also : Current Recruitments : ಪ್ರಸ್ತುತ ನೇಮಕಾತಿಗಳು
- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


