Job NewsLatest Updates

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 78 ಚಾಲಕ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ

Share With Friends

KKRTC Recruitment : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC-Kalyana Karnataka Road Transport Corporation) 2026ನೇ ಸಾಲಿನ ಚಾಲಕ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 78 ಚಾಲಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ವಾಕ್-ಇನ್ ಸಂದರ್ಶನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಗಳು ಫೆಬ್ರವರಿ 3 ಮತ್ತು 4, 2026 ರಂದು ನಡೆಯಲಿವೆ.

ನೇಮಕಾತಿ ವಿವರಗಳು
ಸಂಸ್ಥೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
ಹುದ್ದೆ: ಚಾಲಕ
ಒಟ್ಟು ಹುದ್ದೆಗಳು: 78 (ಸಾಮಾನ್ಯ ಹುದ್ದೆಗಳು: 56, ಬ್ಯಾಕ್ಲಾಗ್ ಹುದ್ದೆಗಳು: 22)
ವೇತನ: ಚಾಲಕರಿಗೆ ಜಾರಿಯಲ್ಲಿರುವ ಕನಿಷ್ಠ ವೇತನದಂತೆ
ಅರ್ಹತೆ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ, ಭಾರೀ ಪ್ರಯಾಣಿಕ/ಸರಕು ವಾಹನ ಚಾಲನೆಗೆ ಕನಿಷ್ಠ 2 ವರ್ಷಗಳ HTV ಲೈಸೆನ್ಸ್
ಕರ್ನಾಟಕ ಬ್ಯಾಡ್ಜ್, KSRTC ಅಥವಾ ಸಹೋದರ ಸಂಸ್ಥೆಗಳು (BMTC/NWKRTC) ನಡೆಸುವ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟ್ರ್ಯಾಕ್ ಟೆಸ್ಟ್ ಪಾಸ್ ಪ್ರಮಾಣಪತ್ರ

ವಯೋಮಿತಿ (04-02-2026ಕ್ಕೆ):
ಕನಿಷ್ಠ 24 ವರ್ಷ; ಗರಿಷ್ಠ ವಯಸ್ಸು ವರ್ಗಾನುಸಾರ 35–40 ವರ್ಷ

ಆಯ್ಕೆ ಪ್ರಕ್ರಿಯೆ
ಕಂಪ್ಯೂಟರೈಸ್ಡ್ ಡ್ರೈವಿಂಗ್ ಟ್ರ್ಯಾಕ್ ಟೆಸ್ಟ್ ಪಾಸ್ ಆದ ಅಭ್ಯರ್ಥಿಗಳನ್ನಷ್ಟೇ ಪರಿಗಣಿಸಲಾಗುತ್ತದೆ
ವಾಕ್-ಇನ್ ಸಂದರ್ಶನ
ರೋಸ್ಟರ್ ನಿಯಮಗಳ ಪ್ರಕಾರ ಮೆರಿಟ್ ಪಟ್ಟಿ

ಅಗತ್ಯ ದಾಖಲೆಗಳು
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
HTV ಲೈಸೆನ್ಸ್ ಹಾಗೂ ಕರ್ನಾಟಕ ಬ್ಯಾಡ್ಜ್
ಡ್ರೈವಿಂಗ್ ಟ್ರ್ಯಾಕ್ ಟೆಸ್ಟ್ ಪಾಸ್ ಪ್ರಮಾಣಪತ್ರ
ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ
ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ 4 ಫೋಟೋಗಳು

ಸಾಮಾನ್ಯ ಸೂಚನೆಗಳು
ಬೀದರ್ ವಿಭಾಗದ ಯಾವುದೇ ಡಿಪೋದಲ್ಲಿ (ಬೀದರ್-1, ಬೀದರ್-2, ಭಾಲ್ಕಿ, ಬಸವಕಲ್ಯಾಣ, ಔರಾದ್, ಹುಮ್ನಾಬಾದ್) ಕೆಲಸಕ್ಕೆ ಸಿದ್ಧರಿರಬೇಕು
ನೇಮಕಾತಿ ಔಟ್‌ಸೋರ್ಸಿಂಗ್ ಆಧಾರದ ಮೇಲೆ ಗರಿಷ್ಠ 11 ತಿಂಗಳು
ಇದು ಶಾಶ್ವತ ಹುದ್ದೆಯಲ್ಲ
ಸಂದರ್ಶನ ದಿನಗಳಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಹೆಸರು ನೋಂದಣಿ ಕಡ್ಡಾಯ
ಮೂಲ ದಾಖಲೆಗಳೊಂದಿಗೆ 2 ಸೆಟ್ ಪ್ರತಿಗಳು ಮತ್ತು 2 ಪಾಸ್‌ಪೋರ್ಟ್ ಫೋಟೋಗಳು ತರಬೇಕು

ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಫೆಬ್ರವರಿ 3 ರಿಂದ 4, 2026ರೊಳಗೆ, ಕೆಕೆಆರ್‌ಟಿಸಿ ಹಳೆಯ ಬಸ್ ನಿಲ್ದಾಣ, ಬೀದರ್ ವಿಭಾಗೀಯ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ನಡೆಯುವ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ kkrtc.karnataka.gov.in ವೆಬ್‌ಸೈಟ್ ಭೇಟಿ ನೀಡಲು ಕೆಕೆಆರ್‌ಟಿಸಿ ಮನವಿ ಮಾಡಿದೆ.

ಅಧಿಸೂಚನೆ : CLICK HERE


✶ Read this also : Current Recruitments : ಪ್ರಸ್ತುತ ನೇಮಕಾತಿಗಳು



author avatar
spardhatimes
error: Content Copyright protected !!