ಬೆಸ್ಕಾಂನಲ್ಲಿ 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Bangalore Electricity Supply Company Limited (BESCOM) ವತಿಯಿಂದ 2026ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಬಿದ್ದಿದ್ದು, ಒಟ್ಟು 520 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬೆಸ್ಕಾಂ ಅಧಿಕೃತ ವೆಬ್ಸೈಟ್ bescom.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿಗಳು 12-02-2026 ರಿಂದ ಆರಂಭವಾಗಿದ್ದು, 02-03-2026 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ : ಒಟ್ಟು-520
B.E./B.Tech (Electrical & Electronics Engineering)-130
B.A./B.Sc./B.Com./B.B.A./B.C.A./B.B.M./B.E./B.Tech (E&E ಹೊರತುಪಡಿಸಿ) 315
ಡಿಪ್ಲೊಮಾ (ಎಲ್ಲಾ ಶಾಖೆಗಳು)-75
ಉದ್ಯೋಗ ಪ್ರಕಾರ: ಕರಾರಿನ (Contract Basis)
ವಿದ್ಯಾರ್ಹತೆ : Graduate Apprentices
ಕರ್ನಾಟಕದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E./B.Tech (Electrical & Electronics Engineering)
ಅಥವಾ B.A., B.Sc., B.Com., B.B.A., B.C.A., B.B.M., B.E./B.Tech (ಇತರೆ ಶಾಖೆಗಳು) (ಪದವಿ ಜನವರಿ 2021 ನಂತರ ಪಡೆದಿರಬೇಕು)
Diploma Apprentices:
ಕರ್ನಾಟಕದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷದ ಡಿಪ್ಲೊಮಾ
ಜನವರಿ 2021 ನಂತರ ಪಡೆದಿರಬೇಕು
ವಯೋಮಿತಿ : ಕನಿಷ್ಠ ವಯಸ್ಸು: 18 ವರ್ಷ
ವೇತನ : ಪದವೀಧರರು ₹9,008/-, ಡಿಪ್ಲೊಮಾ ಹೋಲ್ಡರ್ಗಳು₹8,000/-
ಅರ್ಜಿ ಶುಲ್ಕ : ಎಲ್ಲಾ ವರ್ಗಗಳಿಗೆ ಶುಲ್ಕವಿಲ್ಲ (Nil)
ಪ್ರಮುಖ ದಿನಾಂಕಗಳು :
ಆನ್ಲೈನ್ ಅರ್ಜಿ ಆರಂಭ: 12 ಫೆಬ್ರವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2026
ಶಾರ್ಟ್ಲಿಸ್ಟ್ ಪಟ್ಟಿಯ ಪ್ರಕಟಣೆ: 10 ಮಾರ್ಚ್ 2026
ದಾಖಲೆ ಪರಿಶೀಲನೆ: 23 ರಿಂದ 25 ಮಾರ್ಚ್ 2026
(ಸ್ಥಳ: BESCOM HRD ಸೆಂಟರ್, ರಾಮನಗರ)
ಆಯ್ಕೆ ಪ್ರಕ್ರಿಯೆ :
ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಶಾರ್ಟ್ಲಿಸ್ಟಿಂಗ್
ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ
ಬೆಸ್ಕಾಂ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
“Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ನಮೂನೆವನ್ನು ಸರಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳು (ಫೋಟೋ, ಸಹಿ, ಪ್ರಮಾಣಪತ್ರಗಳು) ಅಪ್ಲೋಡ್ ಮಾಡಿ.
ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಭವಿಷ್ಯಕ್ಕಾಗಿ ಅರ್ಜಿಯ ಪ್ರಿಂಟ್ ಅಥವಾ ಪ್ರತಿಯನ್ನು ಉಳಿಸಿಕೊಳ್ಳಿ.
ಅಧಿಸೂಚನೆ : : CLICK HERE
✶ Read this also : Current Recruitments : ಪ್ರಸ್ತುತ ನೇಮಕಾತಿಗಳು
- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


