GKIndian ConstitutionMultiple Choice Questions SeriesQUESTION BANKQuizSpardha Times

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4

Share With Friends

1. ರಾಷ್ಟ್ರಪತಿಗಳ ಚುನಾವಣೆ ಕುರಿತ ವಿವಾದವನ್ನು ಯಾರು ತಿರ್ಮಾನಿಸುತ್ತಾರೆ..?
ಎ. ಚುನಾವಣಾ ಆಯೋಗ
ಬಿ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ಗಳು
ಸಿ. ಸುಪ್ರೀಂಕೋರ್ಟ್
ಡಿ. ಸಂಸತ್ತು

2. ಸಂಸತ್ತನ್ನು ಯಾರು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ..?
ಎ. ರಾಷ್ಟ್ರಪತಿಗಳು
ಬಿ.ವಿರೋಧಪಕ್ಷದ ನಾಯಕರ ಒಪ್ಪಿಗೆಯ ಮೇರೆಗೆ ಮಂತ್ರಿಮಂಡಲ
ಸಿ. ಸಂಸತ್ತಿನ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ
ಡಿ. ಯಾರೂ ಅಲ್ಲ

3. ಭಾರತದಲ್ಲಿ ಯಾರು ಯುದ್ಧವನ್ನು ಘೋಷಿಸುವ ಅಥವಾ ಶಾಂತಿ ಒಪ್ಪಂದವನ್ನು ಅಂತ್ಯಗೊಳಿಸುವ ಅಧಿಕಾರವನ್ನು ಹೊಂದಿದ್ದಾರೆ..?
ಎ. ಪ್ರಧಾನಮಂತ್ರಿಗಳು
ಬಿ. ಕೇಂದ್ರ ಮಂತ್ರಿಮಂಡಲ
ಸಿ. ರಾಷ್ಟ್ರಪತಿಗಳು
ಡಿ. ಸಂಸತ್ತು

4. ಈ ಕೆಳಗಿನವುಗಳಲ್ಲಿ ಯಾವುದು ರಾಜಕೀಯ ಹಕ್ಕಾಗಿದೆ..?
ಎ. ಸ್ವಾತಂತ್ರ್ಯದ ಹಕ್ಕು
ಬಿ. ಚುನಾವಣೆಯಲ್ಲಿ ಸ್ಫರ್ಧಿಸುವ ಹಕ್ಕು
ಸಿ. ಕಾನೂನಿನ ಮುಂದೆ ಸಮಾನತೆಯ ಹಕ್ಕು
ಡಿ. ಜೀವಿಸುವ ಹಕ್ಕು

5. ನ್ಯಾಯಾಂಗದ ಪ್ರಮುಖ ಕಾರ್ಯವೆಂದರೆ..
ಎ. ಕಾನೂನು ರೂಪಿಸುವುದು
ಬಿ. ಕಾನೂನನ್ನು ಕಾರ್ಯರೂಪಕ್ಕೆ ತರುವುದು
ಸಿ. ಕಾನೂನು ನಿರ್ಣಯಿಸುವುದು
ಡಿ. ಕಾನೂನು ಅನ್ವಯಿಸುವುದು

6. ಈ ಕೆಳಗಿನ ಯಾವುದು ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ಸಂಬಳ ಮತ್ತು ಭತ್ಯೆಯನ್ನು ಭರಿಸುತ್ತದೆ..?
ಎ. ಭಾರತದ ರಿಸರ್ವ್ ಬ್ಯಾಂಕ್
ಬಿ. ಭಾರತದ ಸಾದಿಲ್ವಾರು ನಿಧಿ
ಸಿ. ಭಾರತದ ಸಂಚಿತ ನಿಧಿ
ಡಿ. ಭಾರತದ ಹಣಕಾಸು ಆಯೋಗ

7. ಭಾರತದ ಸಂವಿದಾನದ 14 ನೆಯ ವಿಧಿಯು ಭಾರತದ ಪರಜೆಗಳಿಗೆ ಯಾವ ಖಾತರಿಯನ್ನು ನೀಡುತ್ತದೆ..?
ಎ. ಕಾನೂನಿನ ಸಮಾನ ರಕ್ಷಣೆ
ಬಿ. ಕಾನೂನಿನ ಮುಂದೆ ಸಮಾನತೆ
ಸಿ. ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆ
ಡಿ. ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆ

8. ಸಂವಿಧಾನದ 19 ನೇ ವಿಧಿಯು ಎಷ್ಟು ಸ್ವಾತಂತ್ರ್ಯಗಳ ಖಾತರಿ ನೀಡುತ್ತವೆ..?
ಎ. 6 ಸ್ವಾತಂತ್ರ್ಯಗಳು
ಬಿ. 7 ಸ್ವಾತಂತ್ರ್ಯಗಳು
ಸಿ. 8 ಸ್ವಾತಂತ್ರ್ಯಗಳು
ಡಿ. 9 ಸ್ವಾತಂತ್ರ್ಯಗಳು

9. ಸಂವಿದಾನದ ಯಾವ ವಿಧಿಯ ಅನ್ವಯ ದೇಶದಲ್ಲಿ ಹಣಕಾಸಿನ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು..?
ಎ. 356 ನೇ ವಿಧಿ
ಬಿ. 370 ನೆ ವಿಧಿ
ಸಿ. 360 ನೆ ವಿಧಿ
ಡಿ. 350 ನೇ ವಿಧಿ

10. ಸಂಸತ್ತಿನಲ್ಲಿ ಅಧಿಕೃತ ಪಕ್ಷವಾಗಿ ಗುರುತಿಸಲ್ಪಡಲು, ಸದರಿ ಪಕ್ಷವು ಎಷ್ಟು ಸ್ಥಾನಗಳನ್ನು ಹೊಂದಿರಬೇಕು..?
ಎ. ಒಟ್ಟು ಸ್ಥಾನಗಳ 1/3 ಭಾಗ
ಬಿ. ಒಟ್ಟು ಸ್ಥಾನಗಳ 1/4 ಭಾಗ
ಸಿ. ಒಟ್ಟು ಸ್ಥಾನಗಳ 1/6 ಭಾಗ
ಡಿ. ಒಟ್ಟು ಸ್ಥಾನಗಳ 1/10 ಭಾಗ

11. ಭಾರತದ ಸಂಸದೀಯ ಆಚರಣೆಯಲ್ಲಿ ‘ ಶೂನ್ಯ ಅವಧಿ’ ಯಾವಾಗ ಉದಯವಾಯಿತು..?
ಎ. 1952
ಬಿ. 1962
ಸಿ. 1972
ಡಿ. 1982

12. ಭಾರತದ ಉಪರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದ ವಿವಾದವನ್ನು ಯಾರು ತಿರ್ಮಾನಿಸುತ್ತಾರೆ..?
ಎ.ರಾಷ್ಟ್ರಪತಿಗಳು
ಬಿ.ಸಂಸತ್ತು
ಸಿ. ಸುಪ್ರೀಂಕೋರ್ಟ್
ಡಿ. ಚುನಾವಣಾ ಆಯೋಗ

13. ಲೋಕಸಭೆಯ ಸದಸ್ಯನಾಗಿ ಚುನಾಯಿತರಾಗ ಬಯಸುವ ವ್ಯಕ್ತಿಗೆ ಆಗಿರಬೇಕಾದ ಕನಿಷ್ಠ ವಯಸ್ಸೆಷ್ಟು.?
ಎ. 21 ವರ್ಷಗಳು
ಬಿ. 25 ವರ್ಷಗಳು
ಸಿ. 30 ವರ್ಷಗಳು
ಡಿ. 28 ವರ್ಷಗಳು

14. ಹೈಕೋರ್ಟ್‍ಗಳ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ..?
ಎ. ರಾಷ್ಟ್ರಪತಿಗಳು
ಬಿ. ರಾಜ್ಯಪಾಲರು
ಸಿ. ಭಾರತದ ಮುಖ್ಯ ನ್ಯಾಯಾಧೀಶರು
ಡಿ. ಸಂಬಂಧಿತ ರಾಜ್ಯದ ರಾಜ್ಯಪಾಲರು ಹಾಗೂ ಭಾರತದ ಮುಖ್ಯ ನ್ಯಾಯಾಧೀಶರ ಸಲಹೆ ಮೇರೆಗೆ ರಾಷ್ಟ್ರಪತಿಗಳು

15. ಭಾರತದ ಯೋಜನಾ ಯೋಜನಾ ಆಯೋಗವು..
ಎ. ಒಂದು ಶಾಸನಬದ್ದ ಸಂಸ್ಥೆ
ಬಿ. ಒಂದು ಸಲಹಾ ಸಂಸ್ಥೆ
ಸಿ. ಒಂದು ಸಾಂವಿದಾನಿಕ ಸಂಸ್ಥೆ
ಡಿ. ಒಂದು ಸ್ವತಂತ್ರ ಮತ್ತು ಸ್ವಾಯುತ್ತ

16. ಭಾರತದ ಅಟಾರ್ನಿ ಜನರಲ್‍ರವರನ್ನು ಯಾರು ನೇಮಕ ಮಾಡುತ್ತಾರೆ..?
ಎ.ಭಾರತದ ಮುಖ್ಯ ನ್ಯಾಯಾಧೀಶರು
ಬಿ. ಪ್ರಧಾನಮಂತ್ರಿಗಳು
ಸಿ. ಭಾರತದ ರಾಷ್ಟ್ರಪತಿಗಳು
ಡಿ. ಕೇಂದ್ರ ಲೋಕಸೇವಾ ಆಯೋಗ

17. ಸಂವಿಧಾನದ ಯಾವ ವಿಧಿಯನ್ವಯ ಭಾರತದ ರಾಷ್ಟ್ರಪತಿಗಳನ್ನು ದೋಷಾರೋಪಣೆಗೆ ಗುರಿ ಮಾಡಬಹುದು..?
ಎ. 61 ನೇ ವಿಧಿ
ಬಿ. 75 ನೇ ವಿಧಿ
ಸಿ. 356 ನೇ ವಿಧಿ
ಡಿ. 76 ನೇ ವಿಧಿ

18. ಭಾರತದ ಯಾವುದೇ ರಾಜ್ಯದ ರಾಜ್ಯಪಾಲರು..
ಎ. ಜನರಿಂದಲೆ ನೇರವಾಗಿ ಚುನಾಯಿಸಲ್ಪಡುವರು
ಬಿ. ಪ್ರಧಾನಮಂತ್ರಿಯವರಿಂದ ನೇಮಕಗೊಳ್ಳುವರು
ಸಿ. ರಾಷ್ಟ್ರಪತಿಗಳಿಂದ ನೇಮಕಗೊಳ್ಳುವರು
ಡಿ. ಸಂಬಂಧಿತ ರಾಜ್ಯದ ಮುಖ್ಯಮಂತ್ರಿಗಳಿಂದ ನೇಮಕಗೊಳ್ಳುವರು

19. ಸಂಸತ್ತಿನ ಚುನಾವಣೆಯೊಂದರಲ್ಲಿ ಮತದಾನ ಮಾಡುವ ಹಕ್ಕು…
ಎ. ಸಾಂವಿಧಾನಿಕ ಹಕ್ಕು
ಬಿ. ಸಹಜ ಹಕ್ಕು
ಸಿ. ಕಾನೂನುಬದ್ಧ ಹಕ್ಕು
ಡಿ. ಮೂಲಭೂತ ಹಕ್ಕು

20. ಭಾರತದ ರಾಷ್ಟ್ರಪತಿಗಳು ಈ ಕೆಳಗಿನ ಯಾರು ಹೊಂದಿರುವ ಸಾಂವಿಧಾನಿಕ ಅಧಿಕಾರಕ್ಕೆ ಸಮನಾದ ಅಧಿಕಾರವನ್ನು ಹೊಂದಿರುತ್ತಾರೆ..?
ಎ. ಪಾಕಿಸ್ತಾನ ಅಧ್ಯಕ್ಷರು
ಬಿ. ಬ್ರಿಟಿಷ್ ರಾಣಿ
ಸಿ. ಅಮೇರಿಕಾದ ಅಧ್ಯಕ್ಷರು
ಡಿ. ಫ್ರಾನ್ಸ್‍ನ ಅಧ್ಯಕ್ಷರು

# ಉತ್ತರಗಳು :
1. ಸಿ. ಸುಪ್ರೀಂಕೋರ್ಟ್
2. ಡಿ. ಯಾರೂ ಅಲ್ಲ
3. ಸಿ. ರಾಷ್ಟ್ರಪತಿಗಳು
4. ಬಿ. ಚುನಾವಣೆಯಲ್ಲಿ ಸ್ಫರ್ಧಿಸುವ ಹಕ್ಕು
5. ಸಿ. ಕಾನೂನು ನಿರ್ಣಯಿಸುವುದು
6. ಸಿ. ಭಾರತದ ಸಂಚಿತ ನಿಧಿ
7. ಡಿ. ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆ
8. ಎ. 6 ಸ್ವಾತಂತ್ರ್ಯಗಳು
9. ಸಿ. 360 ನೆ ವಿಧಿ
10. ಡಿ. ಒಟ್ಟು ಸ್ಥಾನಗಳ 1/10 ಭಾಗ

11. ಬಿ. 1962
12. ಸಿ. ಸುಪ್ರೀಂಕೋರ್ಟ್
13. ಬಿ. 25 ವರ್ಷಗಳು
14. ಡಿ. ಸಂಬಂಧಿತ ರಾಜ್ಯದ ರಾಜ್ಯಪಾಲರು ಹಾಗೂ ಭಾರತದ ಮುಖ್ಯ ನ್ಯಾಯಾಧೀಶರ ಸಲಹೆ ಮೇರೆಗೆ ರಾಷ್ಟ್ರಪತಿಗಳು
15. ಎ. ಒಂದು ಶಾಸನಬದ್ದ ಸಂಸ್ಥೆ
16. ಸಿ. ಭಾರತದ ರಾಷ್ಟ್ರಪತಿಗಳು
17. ಎ. 61 ನೇ ವಿಧಿ
18. ಸಿ. ರಾಷ್ಟ್ರಪತಿಗಳಿಂದ ನೇಮಕಗೊಳ್ಳುವರು
19. ಡಿ. ಮೂಲಭೂತ ಹಕ್ಕು
20. ಬಿ. ಬ್ರಿಟಿಷ್ ರಾಣಿ

# ಹಿಂದಿನ ಸಂಚಿಕೆಗಳನ್ನೂ ಓದಿ..
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2 
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3

error: Content Copyright protected !!