AwardsCurrent AffairsLatest Updates

ಇನ್ಫೋಸಿಸ್‍ ನಾರಾಯಣಮೂರ್ತಿ(Narayana Murthy)ಗೆ ವಿಶ್ವ ಡಿಜಿಟಲ್ ಅವಾರ್ಡ್​

Share With Friends

Narayana Murthy : ಇದೇ ಪ್ರಥಮ ಬಾರಿಗೆ ನೀಡಲಾಗುತ್ತಿರುವ ವಿಶ್ವ ಡಿಜಿಟಲ್ ಅವಾರ್ಡ್‍ಗೆ ಇನ್ಫೋಸಿಸ್‍ನ ನಾರಾಯಣಮೂರ್ತಿ, ರತನ್ ಟಾಟಾ , ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಅವರು ಭಾಜನರಾಗಿದ್ದಾರೆ.ಐಎಎ ಸಂಸ್ಥೆ ಘೋಷಣೆ ಮಾಡಿರುವ ವಿಶ್ವ ಡಿಜಿಟಲ್ ಅವಾರ್ಡ್‍ನಲ್ಲಿ ಜೀವ ಮಾನ ಸಾಧನೆಗಾಗಿ ಈ ನಾಲ್ವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅದೇ ರೀತಿ ಇತರ ವಿಭಾಗಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರಿಗೂ ಡಿಜಿಟಲ್ ಪ್ರಶಸ್ತಿ ನೀಡಲಾಗಿದೆ.

ಪ್ರಖ್ಯಾತ ಸೈಕಾಲಜಿಸ್ಟ್ ಡಾ.ಜವಾಹರ್ ಸೂರಿ ಶೆಟ್ಟಿ , ನಾಸ್ಕಾಂ ಅಧ್ಯಕ್ಷ ದೇಬ್ ಜಾನಿ ಘೋಷ್ , ಸ್ಟಾರ್ ಚೆಫ್ ವಿಕಾಸ್ ಖನ್ನಾ ಹಾಗೂ ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಖ್ಯಾತ ಬಾಲಿವುಡ್ ನಟ ಸೋನು ಸೂದ್, ವಿಜಯ್ ಶೇಖರ್ ಶರ್ಮ, ರಿತೇಶ್ ಅಗರ್‍ವಾಲ್, ಅಶೋಕ್ ಕಠಾರಿಯಾ ಮತ್ತಿತರರು ಡಿಜಿಟಲ್ ಅವಾರ್ಡ್‍ಗೆ ಭಾಜನರಾಗಿದ್ದಾರೆ. ಹೆಲ್ತ್‍ಕೇರ್ ವಿಭಾಗದಲ್ಲಿ ಮಣಿಪಾಲ್ ಗ್ರೂಪ್‍ನ ಸಲಹೆಗಾರ ಮೋಹನದಾಸ್ ಪೈ , ಡಾ.ದೇವಿಶೆಟ್ಟಿ , ಡಾ.ಕಿರಣ್ ಮಜುಂದಾರ್, ಡಾ.ಬಲರಾಮ್ ಭಾರ್ಗವ ಮತ್ತಿತರರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

author avatar
spardhatimes

Leave a Reply

Your email address will not be published. Required fields are marked *

error: Content Copyright protected !!