ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಕುರಿತ ಮಹತ್ವದ ಪ್ರಶ್ನೆಗಳು
( #NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ )
1) ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದ ದಿನಾಂಕ..?
1) ಜುಲೈ 22
2) ಜುಲೈ 23
3) ಜುಲೈ 24
4) ಜುಲೈ 25
2) ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಭಾರತೀಯರ ಸಂಖ್ಯೆ (ಆಟಗಾರರು, ತರಬೇತುದಾರರು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿ) ಎಷ್ಟು..?
1) 228
2) 336
3) 248
4) 196
3) ಈ ಕೆಳಗಿನ ಬ್ಯಾಡ್ಮಿಂಟನ್ ಆಟಗಾರರಲ್ಲಿ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ವಿಫಲರಾದವರು ಯಾರು..?
1) ಸೈನಾ ನೆಹ್ವಾಲ್
2) ಪಿ.ವಿ ಸಿಂಧು
3) ಬಿ ಸಾಯಿ ಪ್ರಣೀತ್
4) ಚಿರಾಗ್ ಶೆಟ್ಟಿ
4) ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮತ್ತು ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಯಾರು..?
1) ವಿನೇಶ್ ಫೋಗಟ್
2) ಅನ್ಶು ಮಲಿಕ್
3) ಸೋನಮ್ ಮಲಿಕ್
4) ಸಾಕ್ಷಿ ಮಲಿಕ್
5) ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಕೆಳಗಿನ ಯಾವ ಟೆನಿಸ್ ಆಟಗಾರ ಆಡುತ್ತಿಲ್ಲ.?
1) ರೋಹನ್ ಬೋಪಣ್ಣ
2) ಸಾನಿಯಾ ಮಿರ್ಜಾ
3) ಅಂಕಿತಾ ರೈನಾ
4) ಸುಮಿತ್ ನಾಗ್ಪಾಲ್
6) ಮಹಿಳಾ ಕಲಾತ್ಮಕ ಕಾರ್ಯಕ್ರಮ (Women’s Artistic event)ದಲ್ಲಿ ಭಾರತವನ್ನು ಪ್ರತಿನಿಧಿಸುವವರು ಯಾರು?
1) ಅನ್ನೂ ರಾಣಿ
2) ಮಾನಾ ಪಟೇಲ್
3) ಪ್ರಣತಿ ನಾಯಕ್
4) ಪ್ರಿಯಾಂಕಾ ಗೋಸ್ವಾಮಿ
7) ಟೋಕಿಯೊ ಒಲಿಂಪಿಕ್ಸ್ 2020ಗೆ ಎಷ್ಟು ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ..?
1) 32
2) 40
3) 26
4) 15
8) ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಈ ಕೆಳಗಿನ ಯಾವ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಅರ್ಹತೆಯನ್ನು ಪಡೆದಿಲ್ಲ..?
1) ಡ್ಯೂಟಿ ಚಂದ್
2) ಹಿಮಾ ದಾಸ್
3) ಸೀಮಾ ಪುನಿಯಾ
4) ಕಮಲ್‌ಪ್ರೀತ್ ಕೌರ್
9) ಈ ಕೆಳಗಿನ ಯಾವ ಕ್ರೀಡೆ ಒಲಿಂಪಿಕ್ಸ್ 2020ರಲ್ಲಿ ಪಾದಾರ್ಪಣೆ ಮಾಡುತ್ತಿದೆ?
1) ಕರಾಟೆ
2) ಫೆನ್ಸಿಂಗ್
3) ಜೂಡೋ
4) ಕುದುರೆ ಸವಾರಿ
10) ಈ ಹಿಂದೆ ಕೈಬಿಡಲಾಗಿದ್ದ ಯಾವ ಕ್ರೀಡೆ ಮತ್ತೆ ಈ ವರ್ಷ ಯಾವ ಕ್ರೀಡೆ ಒಲಿಂಪಿಕ್ಸ್‌ಗೆ ಮರಳಲಿದೆ.. ?
1) ಬೇಸ್‌ಬಾಲ್
2) ಗಾಲ್ಫ್
3) ಜೂಡೋ
4) ಫೆನ್ಸಿಂಗ್
11) ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ಈ ಕೆಳಗಿನ ಯಾವ ಕ್ರೀಡೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದೆ..?
1) ಸರ್ಫಿಂಗ್
2) ಗಾಲ್ಫ್
3) ಕುದುರೆ ಸವಾರಿ
4) ಫೆನ್ಸಿಂಗ್ (ಕತ್ತಿವರಸೆ)
12) ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಶೂಟಿಂಗ್ ಕ್ರೀಡೆಯ ತೀರ್ಪುಗಾರರಾಗಿ ಆಯ್ಕೆಯಾದ ಮೊದಲ ಭಾರತೀಯ ಯಾರು..?
1) ಪುಲ್ಲೇಲಾ ಗೋಪಿಚಂದ್
2) ಪವನ್ ಸಿಂಗ್
3) ಅಭಿನವ್ ಬಿಂದ್ರಾ
4) ಗಗನ್ ನಾರಂಗ್
13) ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲನೆಯ ಭಾರತೀಯ ಫೆನ್ಸರ್ ಯಾರು..?
1) ರಾಜೀವ್ ಮೆಹ್ತಾ
2) ಭವಾನಿ ದೇವಿ
3) ಗಿಶೋ ನಿಧಿ ಕುಮಾರೇಶನ್ ಪದ್ಮ
4) ಕಬಿತಾ ದೇವಿ
14) 2020 ಟೋಕಿಯೊ ಒಲಿಂಪಿಕ್ಸ್‌ನ ಅಧ್ಯಕ್ಷರು (ಫೆಬ್ರವರಿ 21 ರಲ್ಲಿ) ಯಾರು..?
1) ಯೋಶಿರೋ ಮೋರಿ
2) ಸೈಕೊ ಹಾಶಿಮೊಟೊ
3) ಉಷಾ ರಾವ್-ಮೊನಾರಿ
4) ಯಸುಶಿ ಅಕಿಮೊಟೊ
15) ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
1) ಗ್ರೀಕರು
2) ಪ್ರೆಂಚರು
2) ಆಂಗ್ಲರು
4) ಡಚ್ಚರು
16) ಒಲಿಂಪಿಕ್ ಕ್ರೀಡಾಪಟು ಗೆದ್ದ ಅತಿ ಹೆಚ್ಚು ಪದಕಗಳ ದಾಖಲೆ 28. ಆ ದಾಖಲೆ ಯಾರ ಹೆಸರಲ್ಲಿದೆ..?
1)ಉಸೇನ್ ಬೋಲ್ಟ್
2) ಮಾರ್ಕ್ ಸ್ಪಿಟ್ಜ್
3) ಮೈಕೆಲ್ ಫೆಲ್ಪ್ಸ್
4) ಪಾವೊ ನೂರ್ಮಿ
17) ಯಾವ ಪ್ರಾಚೀನ ಗ್ರೀಕ್ ನಗರದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸಲಾಯಿತು..?
1)ಅಥೆನ್ಸ್
2)ಒಲಿಂಪಿಯಾ
3)ಡೆಲ್ಫಿ
4)ಹೆರಾಕ್ಲಿಯನ್
18) ರೋಮನ್ ಚಕ್ರವರ್ತಿ ಥಿಯೋಡೋಸಿಯಸ್-I ನಿಂದ ನಿಷೇಧಿಸಲ್ಪಟ್ಟ 1500 ವರ್ಷಗಳ ನಂತರ 1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಯಿತು. ಆಧುನಿಕ ಆಟಗಳನ್ನು ಯಾವ ನಗರದಲ್ಲಿ ನಡೆಸಲಾಯಿತು?
1)ಅಥೆನ್ಸ್
2)ಲಂಡನ್
3)ನ್ಯೂ ಯಾರ್ಕ್
4)ಬರ್ಲಿನ್
19) 1988ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಯಾವ ಕ್ರೀಡೆಯ ಮೂಲಕ ಜಮೈಕಾ ದೇಶ ಒಲಿಂಪಿಕ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿತು..?
1) Alpine Skiing
2) Figure Skating
3) Bobsleigh
4) Curling
20) ಒಲಿಂಪಿಕ್ ಚಿನ್ನದ ಪದಕವನ್ನು ಯಾವುದರಿಂದ ಮಾಡಬೇಕು.. ?
1) ಗಟ್ಟಿ ಚಿನ್ನ
2) ಕನಿಷ್ಠ 92.5% ಬೆಳ್ಳಿ ಮತ್ತು 7.5% ಚಿನ್ನ
3) 50% ಬೆಳ್ಳಿ ಮತ್ತು 50% ಚಿನ್ನ
4) ಕನಿಷ್ಠ 5% ಚಿನ್ನ
21) ಪ್ರತಿ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗಳ ಮೆರವಣಿಗೆಯಲ್ಲಿ ಯಾವ ದೇಶ ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತದೆ..?
1) ಯುಎಸ್ಎ
2) ಯುಕೆ
3) ಗ್ರೀಸ್
4) ಆತಿಥೇಯ ದೇಶ
22) ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್ ಒಂದೇ ವರ್ಷದಲ್ಲಿ ನಡೆಯುತ್ತಿತ್ತು. ಇದು ಕೊನೆಯ ಬಾರಿಗೆ ಯಾವಾಗ ಸಂಭವಿಸಿತು..?
1) 1976
2) 1988
3) 1992
4) 1996
23) ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು 1894 ರಲ್ಲಿ ಪಿಯರೆ ಡಿ ಕೂಬರ್ಟಿನ್ (Pierre de Coubertin) ಸ್ಥಾಪಿಸಿದರು, ಇದರ ಕೇಂದ್ರ ಕಚೇರಿ ಎಲ್ಲಿದೆ..?
1) ನ್ಯೂಯಾರ್ಕ್, ಯುಎಸ್ಎ
2) ಲೌಸೇನ್, ಸ್ವಿಟ್ಜರ್ಲೆಂಡ್
3) ಒಲಿಂಪಿಯಾ, ಗ್ರೀಸ್
4) ಪ್ಯಾರಿಸ್, ಫ್ರಾನ್ಸ್
24) 1986ರಲ್ಲಿ ನಡೆದ ಮೊದಲ ಒಲಿಂಪಿಕ್ ಕ್ರೀಡಾಕೂಟದ ನಂತರ ಯಾವ ದೇಶವು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆದ್ದಿದೆ..?
1) ಯುಎಸ್ಎ
2) ಸೋವಿಯತ್ ಒಕ್ಕೂಟ
3) ಚೀನಾ
4) ಯುಕೆ
25) ದೂರದರ್ಶನದಲ್ಲಿ ಪ್ರಸಾರವಾದ ವಿಶ್ವದ ಮೊದಲ ಒಲಿಂಪಿಕ್ ಕ್ರೀಡಾಕೂಟ ಯಾವುದು..?
1) 1936 ಮ್ಯೂನಿಚ್
2) 1948 ಲಂಡನ್
3) 1960 ರೋಮ್
4) 1964 ಟೋಕಿಯೊ
# ಉತ್ತರಗಳು :
1. 2) ಜುಲೈ 23
ಟೋಕಿಯೋ 2020 ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಜುಲೈ 23, 2021 ರಂದು ಜಪಾನ್ನ ಟೋಕಿಯೊದಲ್ಲಿ ಹೊಸದಾಗಿ ನಿರ್ಮಿಸಲಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು.
2. 1) 228
3. 1) ಸೈನಾ ನೆಹ್ವಾಲ್
ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. 2008 ರಲ್ಲಿ ಹದಿಹರೆಯದವಳಾಗಿದ್ದ ಒಲಿಂಪಿಕ್ ಚೊಚ್ಚಲ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದ ಆಕೆ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಳು. ಗಾಯದಿಂದಾಗಿ ಅವರು 2016 ರಲ್ಲಿ ರಿಯೊ ಒಲಿಂಪಿಕ್ಸ್ನಲ್ಲಿ ನಿರ್ಗಮಿಸಬೇಕಾಯಿತು.
4. 4) ಸಾಕ್ಷಿ ಮಲಿಕ್
ರಿಯೊ ಒಲಿಂಪಿಕ್ಸ್ 2016 ರಲ್ಲಿ ಮಹಿಳಾ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸಾಕ್ಷಿ ಮಲಿಕ್ ಭಾರತಕ್ಕೆ ಹೆಮ್ಮೆ ತಂದಿದ್ದರು. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಮತ್ತು ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಟೋಕಿಯೊ ಒಲಿಂಪಿಕ್ಸ್ 2020ಗೆ ಅರ್ಹತೆ ಪಡೆಯಲು ಅವರು ವಿಫಲರಾಗಿದ್ದಾರೆ.
5. 1) ರೋಹನ್ ಬೋಪಣ್ಣ
6. 3) ಪ್ರಣತಿ ನಾಯಕ್
7. 3) 26
ಒಟ್ಟಾರೆಯಾಗಿ, 26 ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳು 18 ಕ್ರೀಡಾ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) 26 ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನು ಜುಲೈ 05, 2021 ರಂದು ಬಿಡುಗಡೆ ಮಾಡಿತ್ತು.
8. 2) ಹಿಮಾ ದಾಸ್
ಐಎಎಎಫ್ ವಿಶ್ವ ಯು 20 ಚಾಂಪಿಯನ್ಶಿಪ್ನಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಹಿಮಾ ದಾಸ್ ತನ್ನ ಟೋಕಿಯೊ ಒಲಿಂಪಿಕ್ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. 100 ಮೀ ಮತ್ತು 200 ಮೀ ಓಟಗಳನ್ನು ತನ್ನ ಆದ್ಯತೆಯ 400 ಮೀಟರ್ ಓಟಕ್ಕೆ ಓಡಿಸಲು ಮುಖ್ಯ ಕಾರಣ.
9. 1) ಕರಾಟೆ
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಕರಾಟೆ, ಸ್ಕೇಟ್ಬೋರ್ಡಿಂಗ್, ಸ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಎಂಬ ನಾಲ್ಕು ಕ್ರೀಡೆಗಳು ಪಾದಾರ್ಪಣೆ ಮಾಡಲಿವೆ.
10. 1) ಬೇಸ್ಬಾಲ್
ಈ ಹಿಂದೆ ಕೈಬಿಡಲಾಗಿದ್ದ ಎರಡು ಕ್ರೀಡೆಗಳು ಈ ವರ್ಷ ಒಲಿಂಪಿಕ್ಸ್ಗೆ ಮರಳಲಿವೆ ಮತ್ತು ಅವುಗಳಲ್ಲಿ ಬೇಸ್ಬಾಲ್ ಮತ್ತು ಸಾಫ್ಟ್ಬಾಲ್ ಸೇರಿವೆ.
11. 1) ಸರ್ಫಿಂಗ್
12. 2) ಪವನ್ ಸಿಂಗ್
13. 2) ಭವಾನಿ ದೇವಿ
14. 2) ಸೈಕೊ ಹಾಶಿಮೊಟೊ
15. 1) ಗ್ರೀಕರು
16. 4) ಪಾವೊ ನೂರ್ಮಿ (ಅಮೇರಿಕಾದ ಈಜುಗಾರ)
17. 2)ಒಲಿಂಪಿಯಾ
18. 1)ಅಥೆನ್ಸ್
19. 3) Bobsleigh
20. 2) ಕನಿಷ್ಠ 92.5% ಬೆಳ್ಳಿ ಮತ್ತು 7.5% ಚಿನ್ನ
21. 3) ಗ್ರೀಸ್
22. 3) 1992
23. 2) ಲೌಸೇನ್, ಸ್ವಿಟ್ಜರ್ಲೆಂಡ್
24. 1) ಯುಎಸ್ಎ
25. 1) 1936 ಮ್ಯೂನಿಚ್