Current AffairsLatest UpdatesSports

Steve Smith : ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್

Share With Friends

Steve Smith: ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲನುಭವಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

2010ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲೆಗ್ ಸ್ಪಿನ್ನಿಂಗ್ ಆಲ್‌ರೌಂಡರ್ ಆಗಿ ಸ್ಮಿತ್ ಪದಾರ್ಪಣೆ ಮಾಡಿದ್ದರು. ಅದಾದ ನಂತರ, 170 ODIಗಳಲ್ಲಿ 12 ಶತಕಗಳು ಮತ್ತು 35 ಅರ್ಧ ಶತಕಗಳು ಒಳಗೊಂಡಂತೆ 43.28 ಸರಾಸರಿಯಲ್ಲಿ 5800 ರನ್ ಗಳಿಸಿದ್ದಾರೆ ಮತ್ತು 28 ವಿಕೆಟ್‌ಗಳನ್ನು ಪಡೆದಿದ್ದಾರೆ.

*ಆಸ್ಟ್ರೇಲಿಯಾದ 2015 ಮತ್ತು 2023 ಐಸಿಸಿ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದ ಸ್ಮಿತ್, 2015 ರಲ್ಲಿ ಏಕದಿನ ಕ್ರಿಕೆಟ್ ನಾಯಕರಾದರು. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.

*ಸ್ಮಿತ್ ಅವರಿಗೆ 2015 ಮತ್ತು 2021 ರಲ್ಲಿ ಆಸ್ಟ್ರೇಲಿಯನ್ ಪುರುಷರ ODI ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ. 2015 ರಲ್ಲಿ ICC ಪುರುಷರ ODI ತಂಡದ ಸದಸ್ಯರಾಗಿದ್ದರು.

*ಮೈಕೆಲ್ ಕ್ಲಾರ್ಕ್ ನಿವೃತ್ತರಾದ ನಂತರ ಸ್ಮಿತ್ ಏಕದಿನ ತಂಡದ ನಾಯಕತ್ವ ವಹಿಸಿಕೊಂಡರು. 64 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದಾರೆ. 32 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 28 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ನಾಲ್ಕು ಪಂದ್ಯ ಡ್ರಾ ಕಂಡಿದೆ.

*35 ವಯಸ್ಸಿನ ಸ್ಮಿತ್ 170 ಏಕದಿನ ಪಂದ್ಯಗಳಲ್ಲಿ ಆಡಿದ್ದು, 43.28 ಸರಾಸರಿಯಲ್ಲಿ 5800 ರನ್ ಗಳಿಸಿದ್ದಾರೆ. 12 ಶತಕಗಳು ಮತ್ತು 35 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ಪರ ಏಕದಿನ ಪಂದ್ಯಗಳಲ್ಲಿ 12 ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧ 164 ರನ್ ಗಳಿಸಿದ್ದು ಅವರ ಅತ್ಯಧಿಕ ಸ್ಕೋರ್. ಲೆಗ್ ಸ್ಪಿನ್ನಿಂಗ್ ಆಲ್‌ರೌಂಡರ್ ಆಗಿ ಪಾದಾರ್ಪಣೆ ಮಾಡಿದ ಅವರು 28 ವಿಕೆಟ್‌ಗಳನ್ನು ಪಡೆದಿದ್ದಾರೆ. 90 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

Current Affairs Today Current Affairs