32 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ (Abhishek Sharma)
Abhishek Sharma goes berserk: 12-ball fifty, 32-ball hundred : ಟಿ20 ಕ್ರಿಕೆಟ್‌ನಲ್ಲಿ ತನ್ನ ಬ್ಯಾಟಿಂಗ್‌ಗಾಗಿ ಪ್ರಸಿದ್ಧನಾಗಿರುವ ಅಭಿಷೇಕ್ ಶರ್ಮಾ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿನ ಬಂಗಾಳ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಹೊಸ ದಾಖಲೆ ತನ್ನದಾಗಿಸಿಕೊಂಡಿದ್ದಾರೆ. ಹೈದರಾಬಾದ್‌ನ ಜಿಮ್‌ಖಾನ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ಪಂಜಾಬ್ ಪರ ಅಭಿಷೇಕ್ ಶರ್ಮಾ ಹಾಗೂ ಪ್ರಭ್ ಸಿಮ್ರಾನ್ ಸಿಂಗ್ ಜೋಡಿ ಭರ್ಜರಿ ಆರಂಭ ಒದಗಿಸಿತು. ಆರಂಭಿಕ ಹಂತದಿಂದಲೇ ವೇಗದ ಬ್ಯಾಟಿಂಗ್ ಮುಂದುವರಿಸಿದ ಅಭಿಷೇಕ್, ಬಂಗಾಳದ ಅನುಭವಿ ಬೌಲರ್‌ಗಳನ್ನು ಗುರಿಯಾಗಿಸಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಇನಿಂಗ್ಸ್‌ನಲ್ಲಿ ಮಾತ್ರ 16 ಸಿಕ್ಸ್‌ಗಳೊಂದಿಗೆ, ಅಭಿಷೇಕ್ 2024 ರ ದಾಖಲೆಯನ್ನು ಮೀರಿ, ವರ್ಷಕ್ಕೆ 90ಕ್ಕೂ ಹೆಚ್ಚು ಟಿ20 ಸಿಕ್ಸ್‌ಗಳನ್ನು ಹೋರಾಟ ಮಾಡುವ ಮೊದಲ ಭಾರತೀಯನಾಗಿದ್ದಾರೆ.
ಹಾಫ್ ಸೆಂಚುರಿ ನಂತರವೂ ಅಬ್ಬರ ಕಡಿಮೆಯಾಗದೆ, ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್, ಟಿ20 ಕ್ರಿಕೆಟ್ ಇತಿಹಾಸದಲ್ಲಿ 35 ಕ್ಕಿಂತ ಕಡಿಮೆ ಬಾಲ್‌ಗಳಲ್ಲಿ 2 ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಗುಜರಾತ್‌ನ ಉರ್ವಿಲ್ ಪಟೇಲ್ ಈ ಸಾಧನೆ ಮಾಡಿದ್ದರು.
2024ರ ಟೂರ್ನಿಯಲ್ಲಿ ಉರ್ವಿಲ್ ಪಟೇಲ್ ಕ್ರಮವಾಗಿ 28 ಹಾಗೂ 31 ಎಸೆತಗಳಲ್ಲಿ ಎರಡು ಶತಕಗಳನ್ನು ಬಾರಿಸಿ ವಿಶ್ವದ ಮೊದಲ ದಾಖಲೆ ಸ್ಥಾಪಿಸಿದ್ದರು. ಈಗ ಅಭಿಷೇಕ್ ಶರ್ಮಾ 2024ರಲ್ಲಿ ಮಧ್ಯಪ್ರದೇಶ ವಿರುದ್ಧ 28 ಎಸೆತಗಳಲ್ಲಿ ಮಾಡಿದ ಶತಕಕ್ಕೆ ಇದೀಗ 32 ಎಸೆತಗಳ ಮತ್ತೊಂದು ಸೆಂಚುರಿ ಸೇರಿಸಿ ಅದೇ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೊತೆಗೆ 35ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಎಡಗೈ ದಾಂಡಿಗ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಈ ಪಂದ್ಯದಲ್ಲಿ ಅಭಿಷೇಕ್ ಒಟ್ಟು 52 ಎಸೆತಗಳನ್ನು ಎದುರಿಸಿ 16 ಸಿಕ್ಸ್ ಮತ್ತು 8 ಫೋರ್‌ಗಳ ನೆರವಿನಿಂದ 148 ರನ್ ಸಿಡಿಸಿದರು. ಪ್ರಭ್ ಸಿಮ್ರಾನ್ ಸಿಂಗ್ 35 ಎಸೆತಗಳಲ್ಲಿ 70 ರನ್ ದಾಖಲಿಸಿದರು. ಅಂತಿಮ ಓವರ್‌ಗಳಲ್ಲಿ ರಮಣ್‌ದೀಪ್ ಸಿಂಗ್ ಕೇವಲ 15 ಎಸೆತಗಳಲ್ಲಿ 39 ರನ್ ಗಳಿಸಿ ಪಂಜಾಬ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 310 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಅಭಿಷೇಕ್ ಶರ್ಮಾ ಸಾಧನೆ :
ಕೇವಲ 12 ಎಸೆತಗಳಲ್ಲಿ ಅರ್ಧಶತಕ
ಕೇವಲ 32 ಎಸೆತಗಳಲ್ಲಿ ಶತಕ
35ಕ್ಕಿಂತ ಕಡಿಮೆ ಬಾಲ್‌ಗಳಲ್ಲಿ 2 ಟಿ20 ಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್
ಈ ಸಾಧನೆ ಮಾಡಿದ ಮೊದಲವರು: ಗುಜರಾತ್‌ನ ಉರ್ವಿಲ್ ಪಟೇಲ್
2024ರಲ್ಲಿ ಉರ್ವಿಲ್ ಪಟೇಲ್: 28 & 31 ಎಸೆತಗಳಲ್ಲಿ ಶತಕಗಳು – ವಿಶ್ವ ದಾಖಲೆ
35ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಎಡಗೈ ಬ್ಯಾಟರ್ ಅಭಿಷೇಕ್
ಟಿ20 ಕ್ರಿಕೆಟ್‌ನಲ್ಲಿ ಭಾರತದವರ ಸಿಕ್ಸ್ ದಾಖಲೆಗಳು
91* (33 ಇನಿಂಗ್ಸ್) – ಅಭಿಷೇಕ್ ಶರ್ಮಾ (2025)
87 (38 ಇನಿಂಗ್ಸ್) – ಅಭಿಷೇಕ್ ಶರ್ಮಾ (2024)
85 (41 ಇನಿಂಗ್ಸ್) – ಸುರ್ಯಕುಮಾರ್ ಯಾದವ್ (2022)
71 (33 ಇನಿಂಗ್ಸ್) – ಸುರ್ಯಕುಮಾರ್ ಯಾದವ್ (2023)
66 (31 ಇನಿಂಗ್ಸ್) – ರಿಷಭ್ ಪಾಂಟ್ (2018)
63 (42 ಇನಿಂಗ್ಸ್) – ಶ್ರೇಯಾಸ್ ಐಯರ್ (2019)
60 (32 ಇನಿಂಗ್ಸ್) – ಸಾನ್ಜು ಸ್ಯಾಮ್ಸನ್ (2024)
- ಸಂವಿಧಾನ ಕುರಿತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಾಮಾನ್ಯ ಅಂಶಗಳು (Constitution of India)
- ಭಾರತದ ಪ್ರಧಾನ ಮಂತ್ರಿ(Prime Minister of India)ಯನ್ನು ಯಾರು ನೇಮಿಸುತ್ತಾರೆ..? ಪ್ರಕ್ರಿಯೆ ಏನು..?
- ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ (Hardik Pandya)
- ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ
- ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್ಚೇರ್ ಗಗನಯಾತ್ರಿಯಾಗಿ ಮೈಕೆಲಾ ಬೆಂಥೌಸ್ (Michaela Benthaus)

