Current AffairsLatest Updates

Agni Prime Missile : ಇದೇ ಮೊದಲ ಬಾರಿಗೆ ರೈಲಿನಿಂದಲೂ ಉಡಾಯಿಸಬಲ್ಲ ಅಗ್ನಿ-ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ : Explained

Share With Friends

Agni Prime Missile : ರಕ್ಷಣಾ ವಲಯದಲ್ಲಿ ಭಾರತ ಮತ್ತೊಂದು ಪ್ರಮುಖ ಪ್ರಗತಿಯನ್ನು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಗ್ನಿ-ಪ್ರೈಮ್ ಕ್ಷಿಪಣಿ(Agni Prime Missile)ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ವಿಶೇಷ ಅಂದರೆ ಈ ಕ್ಷಿಪಣಿಯು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಉಡಾಯಿಸಲಾಗಿದೆ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಭಾರತ (India), ಸ್ವದೇಶಿ ಅಸ್ತ್ರಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರ ಸೇರ್ಪಡೆಯಾಗಿದೆ.

ಒಡಿಶಾದ (Odisha) ಬಾಲಾಸೋರ್‌ನಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆ ನಡೆಸಲಾಗಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ (Mobile launcher) ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ತನ್ನ ಗುರಿ ನಿಖರವಾಗಿ ತಲುಪಿದೆ. ಈ ಕ್ಷಿಪಣಿಯು 2,000 ಕಿಲೋಮೀಟರ್‌ವರೆಗಿನ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಈ ಕ್ಷಿಪಣಿಯು 2000 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಸಾಧನೆಗಾಗಿ ಡಿಆರ್‌ಡಿಒ, ಸಶಸ್ತ್ರ ಪಡೆಗಳು ಹಾಗೂ ಸ್ಟ್ರಾಟೆಜಿಕ್‌ ಫೋರ್ಸ್‌ ಕಮಾಂಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆಯಿಂದ ಭಾರತವು ಜಾಗತಿಕ ರಕ್ಷಣಾ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿದೆ. ಇದು ಶತ್ರುಗಳಿಗೆ ನಮ್ಮ ಕ್ಷಿಪಣಿ ಎಲ್ಲಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಯುದ್ಧದ ಸಮಯದಲ್ಲಿ ಇದನ್ನು ದೇಶದ ಯಾವುದೇ ಮೂಲೆಯಿಂದ ಉಡಾಯಿಸಬಹುದಾಗಿದೆ.

ಏನಿದು ರೈಲು-ಮೊಬೈಲ್ ಲಾಂಚರ್ ಸಿಸ್ಟಮ್?
ಏನಿದು ರೈಲು-ಮೊಬೈಲ್ ಲಾಂಚರ್, ಅದರ ವಿಶೇಷತೆ ಏನು ಎಂಬುದನ್ನು ಗಮನಿಸಿದರೆ, ಇದರ ಲಾಂಚಿಂಗ್ ವಿಧಾನ ದೇಶದ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೇಮ್ ಅನ್ನು ಉಡಾಯಿಸಲಾಗಿದೆ. ಇನ್ನು, ಈ ಲಾಂಚರ್ ಅನ್ನು ದೇಶದ ವಿಶಾಲವಾದ ರೈಲ್ವೇ ಜಾಲದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ, ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಇದು ಶತ್ರುಗಳಿಗೆ ನಮ್ಮ ಕ್ಷಿಪಣಿ ಎಲ್ಲಿದೆ ಎಂದು ಪತ್ತೆಹಚ್ಚುವುದನ್ನು ಅಸಾಧ್ಯವಾಗಿಸುತ್ತದೆ. ಯುದ್ಧದ ಸಮಯದಲ್ಲಿ ಇದನ್ನು ದೇಶದ ಯಾವುದೇ ಮೂಲೆಯಿಂದ ಅತಿ ಕಡಿಮೆ ಅವಧಿಯಲ್ಲಿ ಲಾಂಚ್ ಮಾಡಬಹುದು. ಇನ್ನು, ಈ ವ್ಯವಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿ ದಾಳಿಗೆ ರೆಡಿಯಾಗುತ್ತದೆ. ಯಾವುದೇ ಪೂರ್ವ ತಯಾರಿ ಇಲ್ಲದೆ, ಕ್ಷಿಪಣಿಯನ್ನು ಉಡಾವಣೆಗೆ ಸಿದ್ಧಪಡಿಸಬಹುದು. ಸಾಮಾನ್ಯ ರೈಲಿನ ಬೋಗಿಗಳಂತೆ ಕಾಣುವುದರಿಂದ, ಉಪಗ್ರಹಗಳ ಮೂಲಕವೂ ಇದನ್ನು ಪತ್ತೆಹಚ್ಚುವುದು ಕಷ್ಟ. ಇದು ನಮ್ಮ ಕ್ಷಿಪಣಿ ವ್ಯವಸ್ಥೆಯ ಭದ್ರತೆ ಮತ್ತು ಸರ್ವೈವ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೈಲು-ಮೊಬೈಲ್ ಲಾಂಚರ್ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ತಂದಿದೆ.

ವಿಶೇಷತೆ ಏನು..?
ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಿಸೈಲ್‌ ಸುಧಾರಿತ ಸಂಚರಣೆ, ಮಾರ್ಗದರ್ಶಿ ವ್ಯವಸ್ಥೆ ಹೊಂದದ್ದು, ಹೆಚ್ಚಿನ ನಿಖರತೆಯೊಂದಿಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕ್ಷಿಪಣಿಯು ತ್ವರಿತವಾಗಿ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಉಡಾವಣೆಗೊಳಿಸಲು ಅನುಕೂಲವಾಗಿದೆ. ಈ‌ ಯಶಸ್ವಿ ಪರೀಕ್ಷೆಯಿಂದ ಭಾರತ ಮೊಬೈಲ್ ರೈಲು ಜಾಲಗಳಿಂದ (ಆನ್ ದಿ ಮೂವ್) ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ಹಾಗೂ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆ ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಸೇರಲಿದೆ.

ಅಗ್ನಿ-ಪ್ರೈಮ್ ಕ್ಷಿಪಣಿಯ ವೈಶಿಷ್ಟ್ಯಗಳೇನು?
ಅಗ್ನಿ-ಪ್ರೈಮ್ 2,000 ಕಿಲೋಮೀಟರ್‌ಗಳ ದೂರದವರೆಗೆ ಟಾರ್ಗೆಟ್ ಮಾಡಲಿದೆ. ಈ ಕ್ಷಿಪಣಿ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. DRDO ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಅಗ್ನಿ-ಪ್ರೈಮ್ ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ನ್ಯೂ ಜನರೇಷನ್ ಬ್ಯಾಲಿಸ್ಟಿಕ್ ಕ್ಷಿಪಣಿ, ಅಗ್ನಿ-ಪ್ರೈಮ್, ಹೆಚ್ಚಿನ ನಿಖರತೆಯೊಂದಿಗೆ ಎಲ್ಲಾ ಮಿಷನ್ ಉದ್ದೇಶಗಳನ್ನು ಸಾಧಿಸುತ್ತದೆ.

ಭಾರತದ ಇತರ ಮಾರಕ ಕ್ಷಿಪಣಿಗಳು
ಭಾರತದ ಬಳಿಯೂ ಅಗ್ನಿ-1 ರಿಂದ ಅಗ್ನಿ-5 ರವರೆಗಿನ ಕ್ಷಿಪಣಿಗಳಿವೆ. ಅಗ್ನಿ-1 ರಿಂದ ಅಗ್ನಿ-4 ರವರೆಗಿನ ಕ್ಷಿಪಣಿಗಳು 700 ಕಿ.ಮೀ ನಿಂದ 3,500 ಕಿ.ಮೀ ವರೆಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿವೆ. ಅಗ್ನಿ-5 5,000 ಕಿ.ಮೀ ವರೆಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

ಮುಂದಿನ ಪೀಳಿಗೆಯ ಬ್ರಹ್ಮಾಸ್ತ್ರ ಅಗ್ನಿ-ಪೈಮ್!
ಇನ್ನು, ಈ ರೈಲು-ಮೊಬೈಲ್ ಲಾಂಚರ್ ಮೂಲಕ ಉಡಾಯಿಸಿರುವ ಅಗ್ನಿ ಪ್ರೈಮ್ ಕ್ಷಿಪಣಿ ಕೂಡ ಈಗ ದೇಶದ ಗಮನ ಸೆಳೆಯುತ್ತಿದೆ. ಅಗ್ನಿ ಪ್ರೈಮ್ ಅಥವಾ ಅಗ್ನಿ – ಪಿ ಕೇವಲ ಮಿಸೈಲ್ ಆಗಿ ದೇಶಕ್ಕೆ ಕಾಣಿಲ್ಲ. ಭಾರತದ ಕ್ಷಿಪಣಿ ತಂತ್ರಜ್ಞಾನದಲ್ಲಿ ಅಗ್ನಿ ಪ್ರೈಮ್ ಬಹು ದೊಡ್ಡ ಮುನ್ನಡೆಯಾಗಿದೆ. ಇದು ನೆಕ್ಸ್ ಜನರೇಷನ್ ಮಿಸೈಲ್ ಆಗಿದೆ. ಇದು ಎರಡು ಹಂತದ, ಘನ ಇಂಧನವನ್ನು ಬಳಸುವ, ಕ್ಯಾನಿಸ್ಟರೈಸ್ಟ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಅಂದರೆ, ಇದನ್ನು ಒಂದು ಡಬ್ಬಿಯೊಳಗೆ ಸುರಕ್ಷಿತವಾಗಿಟ್ಟು, ಎಲ್ಲಿಗೆ ಬೇಕಾದರೂ ಸಾಗಿಸಿ ಉಡಾವಣೆ ಮಾಡಬಹುದು. ಇದು ಅಗ್ನಿ-1 ಮತ್ತು ಅಗ್ನಿ-1 ಕ್ಷಿಪಣಿಗಳ ಸ್ಥಾನವನ್ನು ತುಂಬಲಿದೆ. ಇನ್ನು, ಹಿಂದಿನ ಅಗ್ನಿ-111 ಕ್ಷಿಪಣಿಗೆ ಹೋಲಿಸಿದರೆ, ಅಗ್ನಿ-ಪ್ರೈಮ್ ಕನಿಷ್ಠ ಶೇ.50ರಷ್ಟು ಕಡಿಮೆ ತೂಕವನ್ನು ಹೊಂದಿದೆ. ಇದಕ್ಕೆ ಕಾರಣ, ಇದರಲ್ಲಿ ಬಳಸಲಾಗಿರುವ ಸುಧಾರಿತ ಕಾಂಪೋಸಿಟ್ ವಸ್ತುಗಳು. ಕಡಿಮೆ ತೂಕ ಇರುವುದರಿಂದ ಇದನ್ನು ರಸ್ತೆ ಮತ್ತು ರೈಲು ಎರಡೂ ಮಾರ್ಗಗಳಲ್ಲಿ ಸುಲಭವಾಗಿ ಸಾಗಿಸಬಹುದು.

ಅದಲ್ಲದೇ ಅಗ್ನಿ ಪ್ರೈಮ್‌ನಲ್ಲಿ ರಿಡ್ಯೂಂಡರ್ ಡ್ಯುಯಲ್ ನ್ಯಾವಿಗೇಷನ್ ಸಿಸ್ಟಮ್ಸ್ ಅಳವಡಿಸಲಾಗಿದೆ. ಒಂದು ವ್ಯವಸ್ಥೆ ವಿಫಲವಾದರು ಕೂಡ ಮತ್ತೊಂದು ಕಾರ್ಯನಿರ್ವಹಿಸುತ್ತದೆ. ಇದರಿಂದ ಟಾರ್ಗೆಟ್ ಅನ್ನು ಅತ್ಯಂತ ನಿಖರವಾಗಿ ತಲುಪಲು ಸಾಧ್ಯವಾಗುತ್ತದೆ. ಇನ್ನು, ಈ ಕ್ಷಿಪಣಿಯು 1,000 ದಿಂದ 2,000 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಅದಲ್ಲದೇ ಸುಮಾರು 1.5 ಟನ್ ತೂಕದ ಪರಮಾಣು ಅಥವಾ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಕೂಡ ಇದಕ್ಕಿದೆ. ಅಗ್ನಿ-ಪ್ರೇಮ್ ಕ್ಷಿಪಣಿಯು ಮ್ಯಾನುವರಬಲ್ ರೀ-ಎಂಟ್ರಿ ವೆಹಿಕಲ್ ಅಂದ್ರೆ ಮಾರ್ವ್ ತಂತ್ರಜ್ಞಾನವನ್ನು ಹೊಂದಿದೆ. ಅಂದರೆ, ವಾತಾವರಣವನ್ನು ಮರುಪ್ರವೇಶಿಸುವಾಗ, ಇದು ತನ್ನ ಪಥವನ್ನು ಬದಲಾಯಿಸಬಲ್ಲದು. ಇದರಿಂದ ಶತ್ರುಗಳ ಅಂಟಿ ಮಿಸೈಲ್ ಸಿಸ್ಟಮ್ಗಳಿಗೆ ಇದನ್ನು ತಡೆಯಲು ಆಗಲ್ಲ. ಅದರ ಜೊತೆ ಒಂದೇ ಕ್ಷಿಪಣಿಯಲ್ಲಿ ಅನೇಕ ಸಿಡಿತಲೆಗಳನ್ನು ಹೊತ್ತೊಯ್ದು, ಬೇರೆ ಬೇರೆ ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವ ಮಲ್ಟಿಪಲ್ ಇಂಡಿಜಿಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ ತಂತ್ರಜ್ಞಾನದ ಪರೀಕ್ಷೆಯ ನಡೆಯುತ್ತಿದೆ. ಇದು ಭಾರತದ ದಾಳಿ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಲಿದೆ.

ಕ್ಯಾನಿಸ್ಟರ್-ಉಡಾವಣಾ ವ್ಯವಸ್ಥೆ ಎಂದರೇನು?
ಕ್ಯಾನಿಸ್ಟರ್-ಉಡಾವಣಾ ವ್ಯವಸ್ಥೆಯು ಕ್ಷಿಪಣಿಯ ಉಡಾವಣಾ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಕ್ಷಿಪಣಿಯ ಕಾರ್ಯಾಚರಣೆಯನ್ನು ಸಹ ಸುಗಮಗೊಳಿಸುತ್ತದೆ. ಅಗತ್ಯವಿದ್ದರೆ, ಅದನ್ನು ರೈಲು ಅಥವಾ ರಸ್ತೆಯ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಹೊಸ ಕ್ಷಿಪಣಿಯು ಚೀನಾ ಮತ್ತು ಪಾಕಿಸ್ತಾನ ಎರಡರಿಂದಲೂ ಯಾವುದೇ ಬೆದರಿಕೆಯ ವಿರುದ್ಧ ಭಾರತವನ್ನು ಬಲಪಡಿಸುತ್ತದೆ.

ಕಳೆದ ಡಿಸೆಂಬರ್‌ನಲ್ಲಿ, ಭಾರತವು ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ -5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು, ಇದು 5,000 ಕಿಲೋಮೀಟರ್‌ಗಳವರೆಗಿನ ಗುರಿಗಳನ್ನು ತಲುಪಬಹುದು. ಅಗ್ನಿ 1 ರಿಂದ 4 ಕ್ಷಿಪಣಿಗಳು 700 ಕಿಲೋಮೀಟರ್‌ಗಳಿಂದ 3,500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿವೆ ಮತ್ತು ಈಗಾಗಲೇ ನಿಯೋಜಿಸಲಾಗಿದೆ.

ಭಾರತದ ಬಲಿಷ್ಠ ಕ್ಷಿಪಣಿ ಶಸ್ತ್ರಾಗಾರ ಹೇಗಿದೆ?
ಈಗ ರೈಲು-ಮೊಬೈಲ್ ಲಾಂಚರ್ ನೋಡಿದ್ವಿ, ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ನೋಡಿದ್ವಿ. ಇದರ ಜೊತೆ ಭಾರತದ ಕ್ಷಿಪಣಿ ಶಸ್ತ್ರಾಗಾರದಲ್ಲಿ ಯಾವೆಲ್ಲಾ ಮಿನ್ನೆಲ್‌ಗಳಿವೆ ಎಂಬುದನ್ನು ನೋಡಿದರೆ, ಅಗ್ನಿ ಸರಣಿಯ ಕ್ಷಿಪಣಿಗಳು ದೇಶದ ಗಮನ ಸೆಳೆಯುತ್ತವೆ. ಅಗ್ನಿ 1 ರಿಂದ ಅಗ್ನಿ 5 ರವರೆಗೆ ಮಿಸೈಲ್ ಇದ್ದು, 700 ಕಿಮೀನಿಂದ 8000 ಕಿಮೀ ಟಾರ್ಗೆಟ್ ವ್ಯಾಪ್ತಿಯನ್ನು ಹೊಂದಿವೆ. ಇನ್ನು ಪೃಥ್ವಿ ಸರಣಿಯ ಶಾರ್ಟ್ ರೇಂಜ್ ಮಿಸೈಲ್‌ಗಳು ಕೂಡ ಇದ್ದು, 150 ಕಿಮೀನಿಂದ 600 ಕಿಮೀವರೆಗೂ ಟಾರ್ಗೆಟ್ ರೀಚ್ ಹೊಂದಿರುವ ಮರು ಕ್ಷಿಪಣಿಗಳು ಇವೆ. ಶೌರ್ಯ, ಧನುಷ್ ಕೂಡ ಇದ್ದು, ಶತ್ರುಗಳಲ್ಲಿ ನಡುಕ ಹುಟ್ಟಿಸಿವೆ. ಇದರ ಜೊತೆ ಬ್ರಹ್ಮನ್, ನಿರ್ಭಯ್ ಮಿಸೈಲ್ ಅನ್ನು ನೋಡಿ ಪಾಕಿಸ್ತಾನ, ಚೀನಾ ದಂಗಾಗಿವೆ. ಇನ್ನು, ಇದರ ಜೊತೆ ಪ್ರಾಜೆಕ್ಟ್ ವಿಷ್ಣು ಹಾಗೂ ಅಗ್ನಿ 6 ಕ್ಷಿಪಣಿಯು ಶೀಘ್ರದಲ್ಲೇ ಭಾರತದ ರಕ್ಷಣಾ ಬತ್ತಳಿಕೆಗೆ ನೇರಲಿವೆ. ಇವು ಬಂದ ಬಳಿಕ ಭಾರತದಿಂದಲೇ ಯಾವುದೇ ಮೂಲೆಯನ್ನು ಟಾರ್ಗೆಟ್ ಮಾಡಿ ಹೊಡೆಯಬಹುದಾಗಿದೆ. ಇವುಗಳ ಜೊತೆ ಪ್ರಳಯ್, ಪ್ರಹಾರ್, ಅನ್ನ, ವಿಕ್ರಾಂತ್, ಆಕಾಶ್ ಮಿಸೈಲ್‌ಗಳು ದೇಶದ ಭದ್ರತೆಗೆಹೆಚ್ಚಿನ ರಕ್ಷಣೆಯನ್ನು ಒದಗಿಸಿವೆ.

error: Content Copyright protected !!