Anganwadi Recruitment : ತುಮಕೂರು ಜಿಲ್ಲೆಯಲ್ಲಿ 946 ಅಂಗನವಾಡಿ ಸಹಾಯಕಿ-ಕಾರ್ಯಕರ್ತೆ ಹುದ್ದೆಗಳ ನೇಮಕಾತಿ
Anganwadi Recruitment : : 946 Anganwadi Worker and Helper Posts Recruitment in WCD Tumkur
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD ತುಮಕೂರು) 2025 ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು 946 ಖಾಲಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಡಿಸೆಂಬರ್ 10, 2025ರಿಂದ ಜನವರಿ 09, 2026ರವರೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :
ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD ತುಮಕೂರು)
ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ
ಒಟ್ಟು ಹುದ್ದೆಗಳು: 946
ಶೈಕ್ಷಣಿಕ ಅರ್ಹತೆ: 10ನೇ / 12ನೇ ತರಗತಿ ಉತ್ತೀರ್ಣ
ಅರ್ಜಿ ಪ್ರಾರಂಭ: 10-12-2025
ಅರ್ಜಿ ಕೊನೆ ದಿನ: 09-01-2026
ಅರ್ಜಿಯ ವಿಧಾನ: ಆನ್ಲೈನ್
ಅಧಿಕೃತ ವೆಬ್ಸೈಟ್: karnemakaone.kar.nic.in
| ತಾಲೂಕುವಾರು ಹುದ್ದೆಗಳ ವಿವರ | ||
|---|---|---|
| ತಾಲ್ಲೂಕು | ಕಾರ್ಯಕರ್ತೆ | ಸಹಾಯಕಿ |
| ಚಿಕ್ಕನಾಯಕನಹಳ್ಳಿ | 10 | 61 |
| ಗುಬ್ಬಿ | 10 | 118 |
| ಕೊರಟಗೆರೆ | 12 | 89 |
| ಕುಣಿಗಲ್ | 8 | 68 |
| ಮಧುಗಿರಿ | 12 | 79 |
| ಪಾವಗಡ | 7 | 51 |
| ಸಿರ | 26 | 103 |
| ತಿಪಟೂರು | 10 | 54 |
| ತುಮಕೂರು ಗ್ರಾಮೀಣ | 12 | 109 |
| ತುಮಕೂರು ನಗರ | 5 | 22 |
| ತುರುವೇಕೆರೆ | 5 | 75 |
ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ : ಅರ್ಜಿದಾರರು ಮಾನ್ಯತೆಯಾತ ವಿದ್ಯಾಸಂಸ್ಥೆಯಿಂದ 10ನೇ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಕನಿಷ್ಠ: 19 ವರ್ಷ, ಗರಿಷ್ಠ: 35 ವರ್ಷ (ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯ.)
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಆಧಾರದ ಮೇಲೆ ನಡೆಯಲಿದೆ:
ಲಿಖಿತ ಪರೀಕ್ಷೆ / ಆನ್ಲೈನ್ ಪರೀಕ್ಷೆ
ಕೌಶಲ್ಯ ಪರೀಕ್ಷೆ (ಅಗತ್ಯವಿದ್ದಲ್ಲಿ)
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳು:
ಜನನ ಪ್ರಮಾಣ ಪತ್ರ/ಎಸ್ಎಸ್ಎಲ್ಸಿ ಅಂಕಪಟ್ಟಿ
ವಿದ್ಯಾರ್ಹತೆಯ ದೃಢೀಕೃತ ಪ್ರಮಾಣ ಪತ್ರ
ಮೂರು ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ
ಸ್ಥಳೀಯತೆ ದೃಢೀಕರಿಸುವ ದಾಖಲೆಗಳು (ಆಧಾರ್, ರೇಷನ್, ಮತದಾರ ಚೀಟಿ)
ಜಾತಿ ಪ್ರಮಾಣ ಪತ್ರ (ಎಸ್ಸಿ/ಎಸ್ಟಿ)
ಅಗತ್ಯವಿದ್ದಲ್ಲಿ ಅಂಗವಿಕಲತೆ, ವಿಚ್ಛೇದನೆ, ಮಾಜಿ ದೇವದಾಸಿಯರ ಮಕ್ಕಳ, ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ
ಅಂಗವಿಕಲರು, ವಿಚ್ಛೇದಿತೆಯರು, ಮಾಜಿ ದೇವದಾಸಿಯರ ಮಕ್ಕಳು ಮತ್ತು ಯೋಜನಾ ನಿರಾಶ್ರಿತರಿಗೆ ವಿದ್ಯಾರ್ಹತೆಯ ಅಂಕಗಳಲ್ಲಿ +5 ಬೋನಸ್ ಅಂಕಗಳನ್ನು ನೀಡಲಾಗುವುದು.
ವಿಧವೆಯರಿಗೆ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ರೈತ ಆತ್ಮಹತ್ಯೆ ಮಾಡಿದ ವಿಧವೆಗೆ ಪ್ರಥಮ ಆದ್ಯತೆ ಇರಲಿದೆ. ಎರಡು ವಿಧವೆಯರು ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ ಗರಿಷ್ಠ ಅಂಕ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ಕೆಳಗಿನ ಕ್ರಮಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು: ಅಧಿಕೃತ ವೆಬ್ಸೈಟ್ karnemakaone.kar.nic.in ಗೆ ಭೇಟಿ ನೀಡಿ
“Anganwadi Worker and Helper Recruitment 2025” ಸೂಚನೆಯನ್ನು ತೆರೆದು ವಿವರ ಓದಿ
“Apply Online” ಮೇಲೆ ಕ್ಲಿಕ್ ಮಾಡಿ
ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿ
ಅರ್ಜಿ ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ನಿಖರವಾಗಿ ನಮೂದಿಸಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ (ಫೋಟೋ, ಸಹಿ, ಪ್ರಮಾಣಪತ್ರಗಳು)
ಅರ್ಜಿ ಶುಲ್ಕ ಪಾವತಿಸಿ
ಅರ್ಜಿಯನ್ನು ಸಲ್ಲಿಸಿ ಪ್ರಿಂಟ್ಔಟ್ ತೆಗೆದುಕೊಳ್ಳಿ
ಮುಖ್ಯ ದಿನಾಂಕಗಳು :
ಪ್ರಕಟಣೆ ಬಿಡುಗಡೆ-10-12-2025
ಅರ್ಜಿ ಪ್ರಾರಂಭ-10-12-2025
ಅರ್ಜಿ ಕೊನೆ ದಿನ-09-01-2026
ಶುಲ್ಕ ಪಾವತಿ ಕೊನೆ ದಿನ-09-01-2026
ಪರೀಕ್ಷಾ ದಿನಾಂಕ-ಬಳಿಕ ಪ್ರಕಟಣೆ
ಪ್ರವೇಶಪತ್ರ-ನಂತರ ಪ್ರಕಟಣೆ
ಹೆಚ್ಚಿನ ಮಾಹಿತಿ ಮತ್ತು ನೇರ ಲಿಂಕ್ಗಳಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡುವಂತೆ ಸೂಚಿಸಲಾಗಿದೆ.
ಅಧಿಸೂಚನೆ : CLICK HERE
Current Recruitments : ಪ್ರಸ್ತುತ ನೇಮಕಾತಿಗಳು

- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


