ಕೃತಕ ಉಪಗ್ರಹಗಳು ಮತ್ತು ವಿಧಗಳು
ಭೂಮಿಯ ಸುತ್ತಲೂ ಸುತ್ತುತ್ತಿರುವ ಯಾವುದೇ ಮಾನವ ನಿರ್ಮಿತ ವಸ್ತುವನ್ನು ‘ಕೃತಕ ಭೂ ಉಪಗ್ರಹ’ ವೆಂದು ಕರೆಯುವರು. ಇಂದು ಮಾನವನಿಗೆ ಬೇಕಾದ ಬಹುತೇಕ ಕಾರ್ಯಗಳನ್ನು ಕೃತಕ ಉಪಗ್ರಹಗಳು ನಿರ್ವಹಿಸಿ ಕೊಡುತ್ತಿವೆ. ಹವಾಮಾನ ಮುನ್ಸೂಚನೆ, ಸಂಪರ್ಕ ಮಾಹಿತಿ, ಗೂಡಚರ್ಯೆ , ದೇಶದ ಗಡಿ ಕಾಯುವುದು, ಖನಿಜಗಳ ಅನ್ವೇಷಣೆ ಮುಂತಾದ ಅನೇಕ ಕಾರ್ಯಗಳನ್ನು ಇವು ನಿರ್ವಹಿಸುತ್ತಿವೆ. ‘ಆರ್ಯಭಟ’ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. 1957 ರಲ್ಲಿ ಸೋವಿಯತ್ ಒಕ್ಕೂಟವು ವಿಶ್ವದ ಮೊದಲ ಕೃತಕ ಉಪಗ್ರಹವಾದ ಸ್ಪುಟ್ನಿಕ್ 1 ಅನ್ನು ಪ್ರಾರಂಭಿಸಿತು.
ಉಪಗ್ರಹಗಳ ವಿಧಗಳು
• ಸಂಪರ್ಕ ಉಪಗ್ರಹ
ಇಂದು ಸಂಪರ್ಕ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಗೆ ನಾಂದಿ ಹಾಡಿದ್ದೇ ಈ ಸಂಪರ್ಕ ಉಪಗ್ರಹಗಳು. ಮಾಹಿತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸಲು ಸಹಾಯ ಮಾಡುತ್ತಿರುವುದೇ ಈ ಸಂಪರ್ಕ ಉಪಗ್ರಹಗಳು. ಇವುಗಳು ದೂರದರ್ಶನ ಪ್ರಸಾರ, ರೇಡಿಯೋ ಪ್ರಸಾರ, ಇಂಟರ್‍ನೆಟ್, ಇ- ಮೇಲ್, ವಿಡೀಯೋ ಕಾನ್‍ಫೆರೆನ್ಸಿಂಗ್, ಮೊಬೈಲ್ ಸಂಪರ್ಕ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಸಂಪರ್ಕ ಉಪಗ್ರಹಗಳು ಭೂ ಸ್ಥಿರ ಉಪಗ್ರಹಗಳಾಗಿವೆ.
ಭೂಸ್ಥಿರ ಉಪಗ್ರಹಗಳೆಂದರೆ, ಭೂಮಿಯ ಸಮಭಾಜಕ ವೃತ್ತ ಪ್ರದೇಶದ ಮೇಲೆ ಸುಮಾರು 36000 ಕಿ.ಮೀ ಎತ್ತರದ ಕಕ್ಷೆಯಲ್ಲಿ, ಭೂಮಿಗೆ ಸಾಪೇಕ್ಷವಾಗಿ ಸ್ಥಿರ ಸ್ಥಾನದಲ್ಲಿ ಉಳಿಯಬಲ್ಲ ಉಪಗ್ರಹಗಳನ್ನು ‘ಭೂಸ್ಥಿರ ಉಪಗ್ರಹಗಳೆನ್ನುವರು. ಈ ಉಪಗ್ರಹಗಳ ಪರಿಭ್ರಮಣೆಯು ಭೂಮಿಯ ಭ್ರಮಣೆಯಷ್ಟೇ ಇರುವುದರಿಂದ ಇವು ಭೂಮಿಗೆ ಸ್ಥಿರ ಸ್ಥಾನದಲ್ಲಿದ್ದ ಹಾಗೆ ತೋರುತ್ತವೆ.
• ಹವಾಮಾನ ಉಪಗ್ರಹ
ಭೂಮಿಯ ವಾತಾವರಣದ ಸ್ಥಿತಿಯನ್ನು ಹಗಲೂ ರಾತ್ರಿ ಅಭ್ಯಸಿಸಿ, ಹವಾ ಮನ್ಸೂಚನೆಗೆ ಅಮೂಲ್ಯವಾದ ನೆರವನ್ನು ನೀಡುವ ಕೃತಕ ಭೂ ಉಪಗ್ರಹವೇ ಹವಾಮಾನ ಉಪಗ್ರಹ. ಇಂದು ಭಾರತವು ಸೇರಿದಂತೆ ಬಹುತೇಕ ರಾಷ್ಟ್ರಗಳು ಹವಾಮಾನ ಉಪಗ್ರಹಗಳನ್ನು ಉಡಾಯಿಸಿ ಅವುಗಳಿಂದ ಅಗತ್ಯ ಮಾಹಿತಯನ್ನು ಪಡೆಯುತ್ತಿವೆ.
• ಹವಾಮಾನ ಉಪಗ್ರಹಗಳಿಗೆ ಕೆಲವು ಉದಾಹರಣೆಗಳು
ಭಾರತ – ಇನ್ಸಾಟ್
ಜಪಾನ್ – ಹಿಮವಾರಿ
ಯುರೋಪ್ – ಮೀಟಿಯೋಸ್ಯಾಟ್
ಅಮೇರಿಕ – ಗೋಸ್, ನೋವಾ
ರಷ್ಯಾ – ಮೀಟಿಯೋರ್
• ದೂರಸಂವೇದಿ ಉಪಗ್ರಹ
ಸೂಕ್ಷ್ಮ ಎಲೆಕ್ಟ್ರಾನಿಕ್ ಕ್ಯಾಮರಾ ಅಥವಾ ವಿಶೇಷ ರಾಡಾರ್ ಕಣ್ಣುಗಳನ್ನು ಹೊಂದಿ, ಭೂಮಿ ಸ್ಫುಟವಾದ ಚಿತ್ರಗಳನ್ನು ತೆಗೆಯುವ ಉಪಗ್ರಹಗಳು ದೂರಸಂವೇದಿ ಉಪಗ್ರಹಗಳು.
ಈ ಉಪಗ್ರಹಗಳು ಕೃಷಿ, ಅರಣ್ಯಗಾರಿಕೆ, ಅಂತರ್ಜಲ, ಸಂಪನ್ಮೂಲಗಳ ಅನ್ವೇಷಣೆ, ಭೂ ಹಾಗೂ ಜಲ ಪ್ರದೇಶಗಳ ಸಮೀಕ್ಷೆ ಮುಂತಾದ ವಿಷಯಗಳನ್ನು ಕುರಿತಂತೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.
ದೂರಸಂವೇದಿ ಉಪಗ್ರಹಗಳು 600 ರಿಂದ 1000 ಕಿ.ಮೀ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. ಈ ಎತ್ತರದ ಕಕ್ಷೆಯಿಮದ ಭೂಮಿಯ ಮೇಲಿನ ಚಿತ್ರಗಳನ್ನು ಸ್ಪಷ್ಟವಾಗಿ ತೆಗೆಯಬಹುದು.
• ಯಾನ ನಿರ್ವಹಣಾ ಉಪಗ್ರಹಗಳು
ಪ್ರಯಾಣಿಕನೊಬ್ಬನ ಸ್ಥಾನವನ್ನು ನಿಖರವಾಗಿ ನಿರ್ಧರಿಸುವಲ್ಲಿ ನೆರವಿಗೆ ಬರುವ ಉಪಗ್ರಹಗಳೇ ಯಾನ ನಿರ್ವಹಣಾ ಉಪಗ್ರಹಗಳು.ಮರಳುಗಾಡು, ಹಡಗು, ವಿಮಾನ, ಜಲಾಂತರ್ಗಾಮಿ( ಸಬ್‍ಮೆರಿನ್) ನಲ್ಲಿರುವ ವ್ಯಕ್ತಿಗಳಿಗೆ ತಾವು ಇರುವ ಸ್ಥಾನದ ಬಗ್ಗೆಯಾಗಲಿ, ತಾವು ಪ್ರಯಾಣಿಸಬೇಕಾದ ಗುರಿಯ ಬಗ್ಗೆಯಾಗಲಿ ನಿಖರವಾದ ಮಾಹಿತಿ ಇರುವುದಿಲ್ಲ. ಆಗ ಅವರ ನೆರವಿಗೆ ಬರುವುದೇ ಯಾನ ನಿರ್ವಹಣಾ ಉಪಗ್ರಹಗಳು. ವಿಮಾನ ಚಾಲಕರು, ಹಡಗಿನ ನಾವಿಕರು ಮುಂತಾದವರು ಇವುಗಳ ಆಧಾರದ ಮೇಲೆ ತಾವು ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗುತ್ತಿದೆ.
• ಗೂಢಚಾರ ಉಪಗ್ರಹಗಳು
ಮುಖ್ಯವಾಗಿ ಸೇನಾ ಕ್ಷೇತ್ರದ ಚಟುವಟಿಕೆಗಳಿಗೆ ನೆರವನ್ನು ನೀಡುವ ಸಾಮಥ್ರ್ಯವುಳ್ಳ ಕೃತಕ ಭೂ ಉಪಗ್ರಹಗಳನ್ನು ಗೂಢಚಾರ ಉಪಗ್ರಹಗಳು ಎನ್ನುವರು. ಈ ಉಪಗ್ರಹಗಳು ಗಡಿಯೊಳಗೆ ನುಸುಳುವ ಸೈನಿಕರ ಬಗ್ಗೆ ಮಾಹಿತಿ ನೀಡಬಲ್ಲವು. ಭೂ ಮಾರ್ಗವಾಗಿ, ಜಲಮಾರ್ಗವಾಗಿ, ಜಲಾಂತಗಾಮಿಗಳಲ್ಲಿ, ವಾಯು ಮಾರ್ಗವಾಗಿ ಬರುವ ಶತ್ರು ಸೈನಿಕರನ್ನು ಇವು ಪತ್ತೆ ಹಚ್ಚ ಬಲ್ಲವು. ಭೂ, ವಾಯು, ಜಲ ಮಾರ್ಗಗಳಿಂದ ಉಡಾಯಿಸಿದ ಕ್ಷಿಪಣಿಗಳ ಬಗ್ಗೆಯೂ ಈ ರೀತಿಯ ಉಪಗ್ರಹಗಳು ಮಾಹಿತಿಯನ್ನು ನೀಡಬಲ್ಲವು.
• ವೈಜ್ಞಾನಿಕ ಉಪಗ್ರಹ
ಭೂಮಿಯನ್ನು ಸುತ್ತುವರೆದಿರುವ ವಾತಾವರಣ, ಇತರ ಗ್ರಹಗಳು, ಅವುಗಳ ಉಪಗ್ರಹಗಳು, ಸೌರವ್ಯೂಹ, ಗೆಲಾಕ್ಸಿಗಳು – ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವ ಉಪಗ್ರಹಗಳನ್ನು ‘ ವೈಜ್ಞಾನಿಕ ಉಪಗ್ರಹಗಳು ಎನ್ನುವರು.
ಭೂಮಿಯ ಮೇಲಿನ ದೂರದರ್ಶಕಗಳಿಂದ ಭೂಮಿಯಾಚೆಗಿನ ಕಾಯಗಳ ಬಗ್ಗೆ ಸ್ಪಷ್ಟವಾದ ಮಾಹಿತ (ಚಿತ್ರಗಳು) ದೊರೆಯುವುದಿಲ್ಲ. ವೈಜ್ಞಾನಿಕ ಉಪಗ್ರಹಗಳಲ್ಲಿ ಹೆಚ್ಚು ಸಾಮಥ್ರ್ಯದ ದೂರದರ್ಶಕಗಳು ಇರುತ್ತವೆ. ಇವು ಸ್ಫಷ್ಟವಾದ ಮಾಹಿತಿಯನ್ನು ಭೂಮಿಗೆ ರೇಡಿಯೋ ಅಲೆಗಳ ರೂಪದಲ್ಲಿ ರವಾನಿಸುತ್ತವೆ.
# ಇಸ್ರೋ ಉಪಗ್ರಹಗಳು
ಇಸ್ರೋ ಭಾರತದ ಮೊದಲ ಉಪಗ್ರಹವಾದ ಆರ್ಯಭಟವನ್ನು ನಿರ್ಮಿಸಿತು, ಇದನ್ನು ಸೋವಿಯತ್ ಒಕ್ಕೂಟವು ಏಪ್ರಿಲ್ 19, 1975 ರಂದು ಉಡಾಯಿಸಿತು. ಅದಕ್ಕೆ ಗಣಿತಜ್ಞ ಆರ್ಯಭಟ ಅವರ ಹೆಸರನ್ನು ಇಡಲಾಗಿದೆ. 1980 ರಲ್ಲಿ, ರೋಹಿಣಿ ಭಾರತೀಯ ನಿರ್ಮಿತ ಉಡಾವಣಾ ವಾಹನ ಎಸ್‌ಎಲ್‌ವಿ -3 ಕಕ್ಷೆಯಲ್ಲಿ ಇರಿಸಿದ ಮೊದಲ ಉಪಗ್ರಹವು. ಇಸ್ರೋ ತರುವಾಯ ಇತರ ಎರಡು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿತು: ಧ್ರುವೀಯ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಉಡಾಯಿಸಲು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮತ್ತು ಉಪಗ್ರಹಗಳನ್ನು ಭೂಸ್ಥಾಯೀ ಕಕ್ಷೆಗಳಲ್ಲಿ ಇರಿಸಲು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ)ಬಳಸಿತು. ಈ ರಾಕೆಟ್‌ಗಳು ಹಲವಾರು ಸಂವಹನ ಉಪಗ್ರಹಗಳು ಮತ್ತು ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಿವೆ. ಗಗನ್ ಮತ್ತು ಐಆರ್‌ಎನ್‌ಎಸ್‌ಎಸ್‌ನಂತಹ ಉಪಗ್ರಹ ಸಂಚರಣೆ ವ್ಯವಸ್ಥೆಗಳನ್ನು ನಿಯೋಜಿಸಲಾಯಿತು. ಜನವರಿ 2014 ರಲ್ಲಿ, ಜಿಎಸ್ಎಟಿ -14 ರ ಜಿಎಸ್ಎಲ್ವಿ-ಡಿ 5 ಉಡಾವಣೆಯಲ್ಲಿ ಇಸ್ರೋ ಸ್ಥಳೀಯ ಕ್ರಯೋಜೆನಿಕ್ ಎಂಜಿನ್ ಸಿಇ -7.5 ಅನ್ನು ಬಳಸಿತು.
# ಉಪಗ್ರಹಗಳನ್ನು ಕಕ್ಷೆಗಳಲ್ಲಿ ಇಡುವ ವಿಧಾನ:
ಉಪಗ್ರಹಗಳನ್ನು ಕಕ್ಷೆಗಳಲ್ಲಿ ಇಡಲು ಉಡಾವಣೆ ವಾಹಕವನ್ನು(ಎಲ್.ವಿ.ಎಸ್) ಉಪಯೋಗಿಸುತ್ತಾರೆ. ಭಾರತವು 1963ರ ನವೆಂಬರ್ 21 ರಂದು ಪ್ರಪ್ರಥಮ ಬಾರಿಗೆ ಶಬ್ಧ ಮಾಡುವ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶದತ್ತ ತನ್ನ ಹೆಜ್ಜೆ ಇಟ್ಟಿತು.ಭಾರತವು 1970ರ ದಶಕದ ಆರಂಭದಲ್ಲಿ ಉಡಾವಣೆ ವಾಹಕಗಳನ್ನು ಅಭಿವೃಧ್ಧಿಪಡಿಸುವ ಕಾರ್ಯದಲ್ಲಿ ತೊಡಗಿತು.
# ಎಸ್.ಎಲ್.ವಿ,ಎಸ್ ಮತ್ತು ಎ.ಎಸ್.ಎಲ್.ವಿ:
ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34; ಉಪಗ್ರಹ ಉಡ್ಡಯನ ವಾಹನ ಉಪಗ್ರಹ ಉಡಾವಣೆ ವಾಹನ (ಎಸ್.ಎಲ್.ವಿ.ಎಸ್)ಭಾರತದ ಮೊದಲ ಪ್ರಾಯೋಗಿಕ ಉಡಾವಣೆ ವಾಹಕವಾಗಿತ್ತು.ಇದು ಕೆಳಸ್ಥಾಯಿಕಕ್ಷೆಯಲ್ಲಿ 40ಕೆಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು.1979ರಲ್ಲಿ ಉಡಾವಣೆ ವೈಫಲ್ಯ ಕಂಡಿತು.ಹಾಗಾಗಿ 1980 ಜುಲೈ 18ರಂದು ಎಸ್.ಎಲ್.ವಿ-3ವಾಹನದ ಮೂಲಕ ರೋಹಿಣಿ (ಆರ್.ಎಸ್-1)ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.ಈ ಮುಲಕ ಭಾರತವು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ
ಆರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು.ಎಸ್.ಎಲ್.ವಿ ಪ್ರೋಗ್ರಾಮ್ ನ ಯಶಸ್ಸಿನ ನಂತರ ಇಸ್ರೋ ಸಂಸ್ಥೆಯು ಅಗ್ ಮೆಂಟೆಡ್ ಸೆಟಲೈಟ್ ಲಾಂಚ್ ವೆಹಿಕಲ್ (ಎ.ಎಸ್.ಎಲ್.ವಿ)ಪ್ರೋಗ್ರಾಮ್ ಅಭಿವೃಧ್ಧಿಪಡಿಸಿತು.ಇದು ಎಸ್.ಎಲ್.ವಿಗಿಂತ ಮುರು ಪಟ್ಟು ಅಂದರೆ 150ಕೆಜಿ ತೂಕ ಹೊಂದಬಲ್ಲ ಸಮರ್ಥ್ಯ ಹೊಂದಿತ್ತು.
# ಕೆಳಸ್ಥಾಯಿ ಉಪಗ್ರಹ
ಪಿ.ಎಸ್.ಎಲ್.ವಿ ಕೆಳಸ್ಥಾಯಿ ಉಪಗ್ರಹಗಳನ್ನು ಸೂರ್ಯನ ಸಮಕಾಲಿಕ ಧ್ರುವದ ಕಕ್ಷೆಗೆ ಉಡಾವಣೆ ಮಾಡುವ ವ್ಯವಸ್ಥೆಯನ್ನು ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಎಂದು ಕರೆಯಲಾಗುತ್ತದೆ.ಇದು ಎಸ್.ಎಲ್.ವಿ ಮತ್ತು ಎ.ಎಸ್.ಎಲ್.ವಿ ಪ್ರೋಗಾಮ್ ನ ನಂತರದ ಹಂತದ್ದಾಗಿದೆ.ಭಾರತದ ದೂರಗ್ರಾಹಿ ಉಪಗ್ರಹಗಳನ್ನು (ಐ.ಆರ್.ಎಸ್) ಉಡಾವಣೆ ಮಾಡಲು ಪಿ.ಎಸ್.ಎಲ್.ವಿ ಯನ್ನು ಅಭಿವೃಧ್ಧಿಪಡಿಸಲಾಯಿತು.ಪಿ.ಎಸ್.ಎಲ್.ವಿಯ ಮೊದಲ ಉಡಾವಣೆ 1993ರಲ್ಲಿ ನಡೆಯಿತು. ಆದರೆ ವಾಹನವು ಐ.ಆರ್.ಎಸ್-1ಇ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ವಿಫಲವಾಯಿತು.1996ರ ಸೆಪ್ಟೆಂಬರ್ 29ರಂದು ಐ,ಆರ್,ಎಸ್-1ಡಿ ಉಪಗ್ರಗಹವನ್ನು ಉಡಾವಣೆ ಮಾಡಲು ಈ ವಾಹಕವನ್ನು ಉಪಯೋಗಿಸಲಾಯಿತು.ಅಲ್ಲಿಂದ ಆಚೆಗೆ ಅಂದರೆ 1999ರಿಂದ ಈ ವಾಹಕವು 19 ದೇಶಗಳ 40 ಉಪಗ್ರಹಗಳನ್ನು ಉಡಾವಣೆ ಮಾಡಿದೆ.ಚಂದ್ರಯಾನ-1 ಮತ್ತು ಮಾರ್ಸ್ ಆರ್ಬಿಟರ್ ಮಿಷನ್ ಉಡಾವಣೆಗೂ ಪಿ,ಎಸ್.ಎಲ್.ವಿಯನ್ನು ಉಪಯೋಗಿಸಲಾಗಿದೆ.
# ಜಿ.ಎಸ್.ಎಲ್.ವಿ ಪ್ರೋಗ್ರಾಮ್: ಭೂಸ್ಥಾಯಿ ಉಪಗ್ರಹ ಉಡಾವಣೆ
ಭಾರತದ ಭೂಸ್ಥಾಯಿ ಉಪಗ್ರಹ ಉಡಾವಣೆ ವಾಹನ (ಜಿ.ಎಸ್.ಎಲ್.ವಿ) ಪ್ರೋಗ್ರಾಮ್ ಅನ್ನು 1990ರಲ್ಲಿ ಆರಂಭಿಸಲಾಯಿತು.1991ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ರಷ್ಯಾದ ಕಂಪನಿಯು ಉಡಾವಣೆ ವಾಹನಕ್ಕೆ ಅಗತ್ಯವಾದ ಕ್ರಯೋಜೆನಿಕ್ ಎಂಜಿನ್ ಒದಗಿಸಬೇಕಿತ್ತು.
1992ರಲ್ಲಿ ಅಮೇರಿಕವು ನಿರ್ಬಂಧ ವಿಧಿಸಿದ್ದರಿಂದ ರಷ್ಯಾದ ಕಂಪನಿಯು ಒಪ್ಪಂದದಿಂದ ದೂರ ಸರಿಯಿತು.ತದನಂತರ ರಷ್ಯಾವು ಭಾರತಕ್ಕೆ 7ಕ್ರಯೋಜೆನಿಕ್ ಎಂಜಿನ್ ಗಳನ್ನು ಮಾರಟ ಮಾಡಲು ಒಪ್ಪಿಕೊಂಡಿತು.ಇವುಗಳನ್ನು ಜಿ,ಎಸ್,ಎಲ್,ವಿ ಉಡಾವಣೆ ವಾಹಕಕ್ಕೆ ಇಂಧನ ತುಂಬಲು ಉಪಯೋಗಿಸಿಕೊಳ್ಳಲಾಗುತಿತ್ತು.2014ರಲ್ಲಿ ಭಾರತವು ಸ್ವದೇಶೀಯವಾಗಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃಧ್ಧಿಪಡಿಸಿ ಜಿ.ಎಸ್.ಎಲ್.ವಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.
# ಆರ್ಯಭಟ (ಉಪಗ್ರಹ)
ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವ ತೆರನಾಗಿತ್ತು. ಏಪ್ರಿಲ್ 21, 1975 ರಲ್ಲಿ ರಷ್ಯದ ಸಹಾಯದಿಂದ ರಷ್ಯದ ಕಪುಟ್ಸಿನ್ ಯಾರ್ ಎಂಬ ಉಡ್ಡಯನ ಕೇ0ದ್ರದಿ0ದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ 26 ಮುಖಗಳನ್ನು ಹೊ0ದಿದ್ದು, ಸುಮಾರು 1.4 ಮೀ ವ್ಯಾಸವನ್ನು ಹೊಂದಿತ್ತು . 24 ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಆರ್ಯಭಟ ಉಪಗ್ರಹದ ಮುಖ್ಯ ಉದ್ದೇಶಗಳು ಹೀಗಿದ್ದವು:
ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ
ಸೌರಭೌತಶಾಸ್ತ್ರದ (solar physics) ಅಧ್ಯಯನ
ಆದರೆ ಕಕ್ಷೆಯಲ್ಲಿ ಬಿಟ್ಟು ನಾಲ್ಕೇ ದಿನಗಳಲ್ಲಿ ಆರ್ಯಭಟ ಉಪಗ್ರಹದಲ್ಲಿ ವಿದ್ಯುಚ್ಛಕ್ತಿ ವೈಫಲ್ಯ ಉ0ಟಾಗಿ ಐದನೇ ದಿನ ಭೂಮಿಯಿಂದ ಉಪಗ್ರಹಕ್ಕೆ ಇದ್ದ ಸ0ಪರ್ಕ ಕಡಿದುಹೋಯಿತು. ಫೆಬ್ರವರಿ 11, 1992 ರಂದು ಉಪಗ್ರಹವನ್ನು ಅದರ ಕಕ್ಷೆಯಿಂದ ಭೂಮಿಯ ವಾತಾವರಣಕ್ಕೆ ಕುಸಿಯಿತು.
# ಇವುಗಳನ್ನೂ ಓದಿ…
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)