Uncategorized

Carnatic music : ಅರುಣಾಚಲ ರಾಜ್ಯದ ಮೊದಲ ಕರ್ನಾಟಕ ಸಂಗೀತ ವಿದ್ವಾಂಸೆ ಡೆಲ್ಲಾಂಗ್

Share With Friends

Carnatic music : Arunachal’s Ashapmai Dellang becomes state’s first Carnatic music graduate

ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶದ ಯುವತಿಯೊಬ್ಬಳು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸೆಯಾಗಿ ಹೊರಹೊಮ್ಮಿದ್ದಾಳೆ. ಚೆನ್ನೈನ ಪ್ರತಿಷ್ಠಿತ ಕಲಾಕ್ಷೇತ್ರ ಫೌಂಡೇಶನ್‌ನಲ್ಲಿ ನಡೆದ ಸಂಗೀತಗೋಷ್ಠಿಯ ನಂತರ, ವಾಕ್ರೋ ಸಿಸ್ಟರ್ಸ್‌ನ ಆಶಾಪ್‌ಮೈ ಡೆಲ್ಲಾಂಗ್ ಅವರು ಅರುಣಾಚಲ ಪ್ರದೇಶದ ಮೊದಲ ಕರ್ನಾಟಕ ಸಂಗೀತ ಪದವೀಧರೆಯಾಗಿ ಹೊರಹೊಮ್ಮಿದ್ದಾರೆ.

ಈ ಐತಿಹಾಸಿಕ ಸಾಧನೆಯತ್ತ ಅವರ ಪ್ರಯಾಣದಲ್ಲಿ ಈ ಪ್ರದರ್ಶನವು ಮಹತ್ವದ ಹೆಜ್ಜೆಯಾಗಿದೆ. ಈ ವಿಶೇಷ ಸಂಗೀತ ಶಿಕ್ಷಣವನ್ನು ಪೂರ್ಣಗೊಳಿಸಿದ ಅರುಣಾಚಲ ಪ್ರದೇಶದ ಮೊದಲ ವ್ಯಕ್ತಿಯಾಗಿ, ಡೆಲ್ಲಾಂಗ್ ಅವರ ಸಾಧನೆಯು ಒಂದು ಪ್ರಮುಖ ಸಾಂಸ್ಕೃತಿಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, “ಈ ಸಾಧನೆಯು ಅವರ ಸಮರ್ಪಣೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವುದಲ್ಲದೆ, ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ಶ್ರೀಮಂತ ಸಾಂಸ್ಕೃತಿಕ ವಿನಿಮಯಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ” ಎಂದು ಹೇಳಿದರು.

ಅರುಣಾಚಲ ರಾಜ್ಯದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ವಾಕ್ರೋ ಸಿಸ್ಟರ್ಸ್, ಕರ್ನಾಟಕ ಸಂಗೀತದ ವ್ಯಾಪ್ತಿಯನ್ನು ಅದರ ಸಾಂಪ್ರದಾಯಿಕ ಭೌಗೋಳಿಕ ಗಡಿಗಳನ್ನು ಮೀರಿ ವಿಸ್ತರಿಸುವ ವಿಶಾಲ ಚಳುವಳಿಯ ಭಾಗವಾಗಿದೆ. ಡೆಲ್ಲಾಂಗ್ ಅವರ ಮುಂಬರುವ ಪದವಿ ಪ್ರದಾನವು ಈಶಾನ್ಯ ಮತ್ತು ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಪ್ರದಾಯಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆಯಾಗಲಿದೆ.

ಕರ್ನಾಟಕ ಸಂಗೀತ ಹಿನ್ನೆಲೆ :
ಕರ್ನಾಟಕ ಸಂಗೀತ (ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ(ಸಂಗೀತ) (ಲಯಕ್ಕೆ ಸಂಬಂಧಪಟ್ಟದ್ದು).

ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತದೊಂದಿಗೆ ಪ್ರಾಚೀನ ಹಿಂದೂ ಧರ್ಮದ ಅಧ್ಯಾತ್ಮಿಕ ಸಂಗೀತವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು. 12 ನೆ ಮತ್ತು 13 ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಉತ್ತರ ಭಾರತದಲ್ಲಿ ಭಾರತೀಯ ಸಂಗೀತ ಅರಾಬಿಕ್ ಸಂಗೀತದ ಪ್ರಭಾವಕ್ಕೆ ಒಳಗಾಗಿ ಹಿಂದುಸ್ತಾನಿ ಸಂಗೀತ ಪದ್ಧತಿಗೆ ದಾರಿ ಮಾಡಿಕೊಟ್ಟಿತು.

ಕರ್ನಾಟಕ ಸಂಗೀತ ಹೆಸರು ಬಂದಿದ್ದು ಹೇಗೆ..?
ಕರ್ನಾಟಕ ಸಂಗೀತ ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿದೆ. ಪುರಂದರದಾಸರ ಸಮಕಾಲೀನನಾದ ಪುಂಡರೀಕ ವಿಠಲ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕಾಚಾರ್ಯನಾದ ಕನ್ನಡಿಗನು. ಶ್ರೀ ಪುರಂದರದಾಸರು (1494 – 1564) ‘ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ’ ಎಂದು ಹೆಸರಾದವರು. ಪುರಂದರದಾಸರು ಕರ್ನಾಟಕದವರು ಹಾಗು ದಾಸಪದ್ಧತಿಯ ಪ್ರಮುಖರು. ಮುಖ್ಯವಾಗಿ ಪುಂಡರೀಕ ವಿಠಲ, ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.

ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು 1000 ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.

ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನ ಬಹುದು. ಶ್ರೀ ಪುರಂದರದಾಸರು 5 ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು 4,75,000 ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.

Current Affairs Today Current Affairs