ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಶುಲ್ಕ ಶೀಘ್ರದಲ್ಲೇ ಏರಿಕೆ
ಎಟಿಎಂನಿಂದ(ATM)ಹಣ ವಿತ್ ಡ್ರಾ ಮಾಡಲು ಇನ್ಮುಂದೆ ಇನ್ನಷ್ಟು ಹೆಚ್ಚಿನ ಶುಲ್ಕ ತೆರಬೇಕಾಗಲಿದೆ. ಹೌದು ಎಟಿಎಂನಿಂದ ನಗದು ವಿತ್ ಡ್ರಾ ಮಾಡುವ ಶುಲ್ಕ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ. ಎಟಿಎಂನಿಂದ ನಗದು ವಿತ್ ಡ್ರಾ ಮಾಡುವ ಶುಲ್ಕ ಏರಿಕೆ ಮಾಡಬೇಕೆಂದು ದ ಕಾನ್ ಫೆಡರೇಸನ್ ಆಫ್ ಎಟಿಎಂ ಇಂಡಸ್ಟ್ರಿ(CATMI) ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ಕ್ಕೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ. ಉದ್ಯಮಕ್ಕೆ ಹೆಚ್ಚಿನ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರತಿ ವಿತ್ ಡ್ರಾಕ್ಕೆ ಗರಿಷ್ಠ 23 ರೂಪಾಯಿವರೆಗೆ ಶುಲ್ಕ ವಿಧಿಸಬೇಕೆಂದು ಸಿಎಟಿಎಂಐ ಮನವಿ ಮಾಡಿದೆ. ಈ ಶುಲ್ಕವನ್ನು ಎಟಿಎಂ ಕಾರ್ಡ್ ವಿತರಿಸುವ ಬ್ಯಾಂಕ್ ಗಳಿಗೆ ಪಾವತಿಸಲಾಗುತ್ತದೆ.
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ಆಯಾ ಬ್ಯಾಂಕ್ ಗಳು ಪ್ರತಿ ತಿಂಗಳು ಕನಿಷ್ಠ ಐದು ಬಾರಿ ಉಚಿತವಾಗಿ ಹಣವನ್ನು ಎಟಿಎಂನಿಂದ ವಿತ್ ಡ್ರಾ ಮಾಡಬಹುದಾಗಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂ ದಿರುವ ಗ್ರಾಹಕರಿಗೆ ಆಯಾ ಬ್ಯಾಂಕ್ಗಳಲ್ಲಿಪ್ರತಿ ತಿಂಗಳು ಕನಿಷ್ಠಐದು ಬಾರಿ ಉಚಿತವಾಗಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ. ಇದಕ್ಕೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ನಮ್ಮ ಖಾತೆ ಹೊಂದಿರುವ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ಗಳ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು
ಅವಕಾಶವಿದೆ. ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ನವದೆಹಲಿ – ಆರು ಪ್ರಮುಖ ನಗರಗಳಲ್ಲಿ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ನೀಡುತ್ತವೆ. ಇತರ ಬ್ಯಾಂಕುಗಳ ಎಟಿಎಂಗಳಲ್ಲಿ, ತಿಂಗಳಿಗೆ ಮೂರು ವಹಿವಾಟುಗಳು ಉಚಿತವಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಮುಂಬೈ, ನವ ದೆಹಲಿ ಸೇರಿದಂತೆ ಮೆಟ್ರೋ ನಗರಗಳಲ್ಲಿ ಐದು ಬಾರಿ ಎಟಿಎಂನಿಂದ ಉಚಿತವಾಗಿ ಹಣ ತೆಗೆಯಬಹುದಾಗಿದೆ. ನಮ್ಮ ಖಾತೆ ಹೊಂದಿರುವ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಗಳ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿತ್ತು. ಇದೀಗ ಕಾನ್ಫೆಡರೇಶನ್ ಆಫ್ ಎಟಿಎಂ ಇಂಡಸ್ಟ್ರಿ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ಹಣವನ್ನು ಪಡೆಯಲು ಇಂಟರ್ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ ಗರಿಷ್ಠ 23 ರೂ.ಗೆ ಹೆಚ್ಚಿಸಲು ಸಲಹೆ ನೀಡುತ್ತಿದೆ.
2021ರಲ್ಲಿ, ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು 15 ರೂ.ಗಳಿಂದ 17 ರೂ.ಗೆ ಹೆಚ್ಚಿಸಲಾಗಿತ್ತು. ಆ ನಂತರ ಶುಲ್ಕದಲ್ಲಿಯಾವುದೇ ರೀತಿಯ ಹೆಚ್ಚಳವಾಗಿಲ್ಲ. ಹೀಗಾಗಿ ಉದ್ಯಮಕ್ಕೆ ಹೆಚ್ಚಿನ ಹಣ ಸಂಗ್ರಹಿಸುವ ನಿಟ್ಟಿನಲ್ಲಿಪ್ರತಿ ವಿತ್ ಡ್ರಾಗೆ ಗರಿಷ್ಠ 23 ರೂ. ವರೆಗೆ ಶುಲ್ಕ ವಿಧಿಸಬೇಕೆಂದು ಸಿಎಟಿಎಂಐ ಮನವಿ ಮಾಡಿದೆ. ಈ ಶುಲ್ಕವು ಕಾರ್ಡ್ ಅನ್ನು (ವಿತರಕ) ನೀಡುವ ಬ್ಯಾಂಕ್ ಪಾವತಿಸುವ ಶುಲ್ಕವಾಗಿದ್ದು, ಅಲ್ಲಿ ಹಣವನ್ನು ಹಿಂಪಡೆಯಲು (ಸ್ವಾಧೀನಪಡಿಸಿಕೊಳ್ಳುವವರು) ಕಾರ್ಡ್ ಅನ್ನು ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರಿಗೆ ವಿಧಿಸಬಹುದಾದ ಶುಲ್ಕದ ಮಿತಿಯನ್ನು ಪ್ರತಿ ವಹಿವಾಟಿಗೆ 20 ರೂ.ಗಳಿಂದ 21 ರೂ.ಗೆ ಹೆಚ್ಚಿಸಲಾಗಿದೆ.
ಇಂಟರ್‌ಚೇಂಜ್ ಶುಲ್ಕ ಎಂದರೇನು?
ಎಟಿಎಂ ಇಂಟರ್ ಚೇಂಚ್ ಶುಲ್ಕವು ಎಟಿಎಂ ಕಾರ್ಡ್ ಅನ್ನು ವಿತರಿಸುವ ಬ್ಯಾಂಕ್ (ವಿತರಕರು) ಪಾವತಿಸುವ ಶುಲ್ಕವಾಗಿದೆ. ಎಟಿಎಂ ಕಾರ್ಡ್ ಅನ್ನು ನಗದು ಹಿಂಪಡೆಯಲು ಬಳಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಗ್ರಾಹಕರಿಗೆ ವಿಧಿಸಬಹುದಾದ ಶುಲ್ಕವಾಗಿದೆ. ಪ್ರಸ್ತುತ ಆರು ಪ್ರಮುಖ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬಯಿ ಮತ್ತು ನವದೆಹಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ಹಾಗೂ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟು ಸೌಲಭ್ಯವನ್ನು ಒದಗಿಸುತ್ತದೆ. ಬಳಿಕ ನಡೆಯುವ ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ.