Job NewsLatest Updates

Bank Recruitment : ರಾಯಚೂರು ಡಿಸಿಸಿಸಿ ಬ್ಯಾಂಕ್ ನೇಮಕಾತಿ 2025 – 70 ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

Bank Recruitment : 70 Branch Manager, Assistant, Attendant Posts in Raichur DCC Bank

ರಾಯಚೂರು ಹಾಗೂ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur DCC Bank) 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 70 ಬ್ರಾಂಚ್ ಮ್ಯಾನೇಜರ್, ಅಸಿಸ್ಟೆಂಟ್ ಹಾಗೂ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ಜಾಲತಾಣದ ಮೂಲಕ ಡಿಸೆಂಬರ್ 22, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಲಾಗಿದೆ.

ಶೈಕ್ಷಣಿಕ ಅರ್ಹತೆ :
ಬ್ಯಾಂಕ್ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಹುದ್ದೆಗಳಿಗಾಗಿ Any Graduate, B.Sc, 10th, BBM, M.Com, MBA/PGDM ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಕನಿಷ್ಠ ವಯೋಮಿತಿ 18 ವರ್ಷವಾಗಿದ್ದು, ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸಂಬಳ ಶ್ರೇಣಿ ₹37,500 ರಿಂದ ₹1,12,900 ರವರೆಗಿದೆ.

ಹುದ್ದೆಗಳ ವಿವರ :
ನೇಮಕಾತಿಯಲ್ಲಿ ಒಟ್ಟು 70 ಹುದ್ದೆಗಳಿದ್ದು, ಬ್ರಾಂಚ್ ಮ್ಯಾನೇಜರ್ ಗ್ರೇಡ್-Iಗೆ 15, ಅಸಿಸ್ಟೆಂಟ್ ಗ್ರೇಡ್-Iಗೆ 45, ಹಾಗೂ ಅಟೆಂಡೆಂಟ್ ಹುದ್ದೆಗೆ 10 ಸ್ಥಾನಗಳು ಪ್ರಕಟಗೊಂಡಿವೆ.

ಅರ್ಜಿ ಶುಲ್ಕ :
ಅರ್ಜಿ ಶುಲ್ಕವಾಗಿ ಸಾಮಾನ್ಯ / OBC / EWS / 2A / 2B / 3A / 3B ಅಭ್ಯರ್ಥಿಗಳಿಗೆ ₹1000 + GST ಹಾಗೂ SC / ST / Cat-I / PwBD ಅಭ್ಯರ್ಥಿಗಳಿಗೆ ₹500 + GST ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ನವೆಂಬರ್ 21, 2025 ರಿಂದ ಪ್ರಾರಂಭವಾಗಿದ್ದು, ಡಿಸೆಂಬರ್ 22, 2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ಜಾಲತಾಣ raichurdcc.bank.in ಗೆ ಭೇಟಿ ನೀಡಬಹುದು.

ಮುಖ್ಯ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ: 21-11-2025
ಆನ್‌ಲೈನ್ ಅರ್ಜಿ ಕೊನೆಯ ದಿನ: 22-12-2025


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!