ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಲ್ಲಿ 515 ತಾಂತ್ರಿಕ ಹುದ್ದೆಗಳ ನೇಮಕಾತಿ
BHEL Recruitment 2025 : ಭಾರತ್ ಹೆವಿ ಎಲೆಕ್ಟಿಕಲ್ಸ್ ಲಿಮಿಟೆಡ್ (BHEL)ನಲ್ಲಿ 515 ತಾಂತ್ರಿಕ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. BHEL ತನ್ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಜುಲೈ 16, 2025ರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿ ಟರ್ನರ್(Turner), ಮೆಕ್ಯಾನಿಸ್ಟ್(Mechanist), ಫಿಟ್ಟರ್(Fitter), ವೆಲ್ಡರ್(Welder), ಎಲೆಕ್ಟ್ರಿಷಿಯನ್(Electrician), ಫೌಂಡ್ರಿ ಮ್ಯಾನ್(Foundry Man) ಮತ್ತು ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್(Electronics Mechanic) ಹುದ್ದೆಗಳಿಗಾಗಿ ಆಗಿದೆ.
ಒಟ್ಟು ಹುದ್ದೆಗಳು : 515
ಹುದ್ದೆಗಳ ಪ್ರಕಾರ: ತಾಂತ್ರಿಕ/ಅಪ್ರೆಂಟಿಸ್.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜುಲೈ 16, 2025
ಅಧಿಕೃತ ವೆಬ್‌ಸೈಟ್: https://bhel.com
ವಿದ್ಯಾರ್ಹತೆ:
ಕನಿಷ್ಠ ಅರ್ಹತೆ: SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
ಐಟಿಐ (ITI) ಜೊತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ NTC (National Trade Certificate) ಅಥವಾ NAC (National Apprenticeship Certificate) ಹೊಂದಿರಬೇಕು.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕಗಳು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 55% ಅಂಕಗಳು ಕಡ್ಡಾಯ.
ವಯೋಮಿತಿ :
ಸಾಮಾನ್ಯ ವರ್ಗ: ಗರಿಷ್ಠ 27 ವರ್ಷ.
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ.
ಎಸ್‌ಸಿ/ಎಸ್‌ಟಿ: 5 ವರ್ಷ ಸಡಿಲಿಕೆ.
ದಿವ್ಯಾಂಗ ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಕೆಯ ವಿಧಾನ ಕೆಳಗಿನಂತಿದೆ:
1.BHEL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – https://bhel.com
2.‘Apprentice Recruitment 2025’ ಲಿಂಕ್ ಆಯ್ಕೆಮಾಡಿ.
3.ಹೊಸದಾಗಿ ರಿಜಿಸ್ಟರ್ ಮಾಡಿ ಅಥವಾ ಲಾಗಿನ್ ಆಗಿ.
4.ಅಗತ್ಯ ಮಾಹಿತಿಯನ್ನು ಪೂರೈಸಿ, ಪ್ರಮಾಣಪತ್ರಗಳು ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5.ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
Current Recruitments : ಪ್ರಸ್ತುತ ನೇಮಕಾತಿಗಳು

- ಇಂದಿನ ಪ್ರಚಲಿತ ವಿದ್ಯಮಾನಗಳು / 12-07-2025 (Today’s Current Affairs)
- ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
- Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ