BMRCL Recruitment : ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ 150 ಮೇಂಟೆನರ್ ಹುದ್ದೆಗಳ ನೇಮಕಾತಿ
BMRCL Recruitment : ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ (BMRCL) 150 ಮೇಂಟೆನರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು 5 ವರ್ಷಗಳ ಗುತ್ತಿಗೆ ಆಧಾರದಲ್ಲಿ ಇರಲಿದ್ದು, ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತವಾಗಿ ಅವುಗಳನ್ನು ವಿಸ್ತರಿಸಲಾಗುವುದು.
ಅರ್ಹತೆಗಳು :
ಮಾಜಿ ಸೈನಿಕ ಅಭ್ಯರ್ಥಿಗಳು ಎರಡು ವರ್ಷದ ಐಟಿಐ ಶಿಕ್ಷಣವನ್ನು – ಟೆಕ್ನಿಕಲ್ ಟ್ರೇಡ್‌ಗಳಾದ ಇಲೆಕ್ಟ್ರೀಷಿಯನ್, ಇನ್‌ಸ್ಟ್ರುಮೆಂಟೇಷನ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ವೈಯರ್‌ಮೆನ್, ಫಿಟ್ಟರ್, ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್, ಮೆಕ್ಯಾನಿಕ್ -ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಇಲೆಕ್ಟ್ರಾನಿಕ್ ಸಿಸ್ಟಮ್ ಮೇಂಟೆನನ್ಸ್, ಮೆಕ್ಯಾನಿಕಲ್ ಕಂಮ್ಯುನಿಕೇಷನ್ ಸಾಧನಗಳ ನಿರ್ವಹಣೆ, ಮೆಕ್ಯಾನಿಕ್ ಮೆಕಾಟ್ರಾನಿಕ್ಸ್ ಅಥವಾ ಎನ್‌ಸಿವಿಟಿ / ಎನ್‌ಸಿಟಿವಿಟಿ / ಎನ್‌ಎಸಿ ಪ್ರಮಾಣಪತ್ರಗಳಿಗೆ ತತ್ಸಮಾನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದು. 31-05-2025ಕ್ಕೆ ಮಿಲಿಟರಿ ಸೇವೆಯಿಂದ ಬಿಡುಗಡೆಗೊಳ್ಳಲಿರುವವರು ಸಹ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ : ಈ ಹುದ್ದೆಗಳ ಅಧಿಸೂಚನೆ ದಿನಾಂಕಕ್ಕೆ ಗರಿಷ್ಠ 50 ವರ್ಷ ವಯಸ್ಸು ದಾಟಿರಬಾರದು.
ನೇಮಕ ವಿಧಾನ :
ಮೆರಿಟ್ ಆಧಾರಿತವಾಗಿ ಶಾರ್ಟ್ ಲಿಸ್ಟ್ ಆದವರಿಗೆ ಲಿಖಿತ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುವುದು. ಹಾಗೂ ಮೆಡಿಕಲ್ ಟೆಸ್ಟ್ ಸೇರಿದಂತೆ, ಇತರೆ ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ www.bmrc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಯ ಪ್ರಿಂಟ್ ಔಟ್ (Print out) ತೆಗೆದು, ಪಾಸ್‌ಪೋರ್ಟ್ ಫೋಟೋ ಅಂಟಿಸಿ, ಸಹಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು:
ಅರ್ಜಿ ಸಲ್ಲಿಸುವ ವಿಳಾಸ :
ಜೆನೆರಲ್ ಮ್ಯಾನೇಜರ್ (ಹೆಚ್‌ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027.7
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 22-05-2025
ಸಹಿಮಾಡಲಾದ ಅರ್ಜಿಗಳ ಪ್ರಿಂಟ್‌ಔಟ್‌ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 27-05-2025 ರ ಸಂಜೆ 4.00 ಗಂಟೆವರೆಗೆ.
ಅಧಿಸೂಚನೆ : Click here
Current Recruitments : ಪ್ರಸ್ತುತ ನೇಮಕಾತಿಗಳು
