ಬ್ರಿಕ್ಸ್ ಸಂಘಟನೆ ಕುರಿತು ನೆನಪಿನಲ್ಲಿಡಬೇಕಾದ ಅಂಶಗಳು
# ಬ್ರಿಕ್ಸ್ ಸಂಘಟನೆ ಹುಟ್ಟಿದ್ದು ಹೇಗೆ..?
ಬ್ರಿಕ್ಸ್ ಅಥವಾ ಬ್ರಿಕ್ಸ್ ಸಂಘಟನೆ – ಬ್ರೆಜಿಲ್, ರಶಿಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ಐದು ರಾಷ್ಟ್ರಗಳನ್ನು ಒಳಗೊಂಡ ಒಂದು ಸಂಘಟನೆ. ಈ ದೇಶಗಳ ಮೊದಲಕ್ಕರಗಳಾದ (ಅಕ್ರೊನಿಮ್ ಅಥವಾ ಪ್ರಥಮಾಕ್ಷರ) B –ಬ್ರೆಜಿಲ್, R-ರಶಿಯ, I –ಭಾರತ ಅಥವಾ ಇಂಡಿಯಾ, C- ಚೀನಾ ಮತ್ತು S- ದಕ್ಷಿಣ ಆಫ್ರಿಕ (ಸೌತ್ ಆಫ್ರಿಕಾ) ಸೇರಿಸಿದ ಹೆಸರು BRICS. ಮೊದಲು ಈ ಮೊದಲಕ್ಕರವನ್ನು ಗೋಲ್ಡ್‌ಮನ್ ಸ್ಯಾಕ್ಸ್ (ಒಂದು ಜಾಗತಿಕ ಹಣಕಾಸು ಕಾರ್ಪರೇಶನ್) 2001ರಲ್ಲಿ (ನಾಲ್ಕು ದೇಶಗಳನ್ನು ಒಳಗೊಂಡ ಬ್ರಿಕ್ ಆಗಿ) ಬಳಸಿತು. 2009ರಲ್ಲಿ ನಾಲ್ಕು ದೇಶಗಳ BRIC ಸಂಘಟನೆಯಾಗಿ ಆರಂಭಗೊಂಡ ಇದು 2010ರಲ್ಲಿ ದಕ್ಷಿಣ ಆಫ್ರಿಕವೂ ಸೇರಿದ ನಂತರ ಬ್ರಿಕ್ಸ್ ಆಯಿತು. 2009ರಿಂದಲೂ ಈ ಸಂಘಟನೆ ವಾರ್ಷಿಕವಾಗಿ ಶೃಂಗಸಭೆ ಸೇರುತ್ತಾ ಬಂದಿದೆ.
2015ರಂತೆ ಬ್ರಿಕ್ಸ್‌ನ ಜನಸಂಖ್ಯೆ 3.6 ಲಕ್ಷ ಕೋಟಿ (ಟ್ರಿಲಿಯನ್) ಅಥವಾ ಜಾಗತಿಕ ಜನಸಂಖ್ಯೆಯ ಅರ್ಧ ಮತ್ತು ಈ ದೇಶಗಳ ಒಟ್ಟಾರೆ ನಾಮಮಾತ್ರ ಜಿಡಿಪಿ ಅಥವಾ ಒಟ್ಟಾರೆ ಅಂತರಿಕ ಉತ್ಪಾದನೆ (ನಾಮಿನಲ್ ಅಥವಾ ಇಂದಿನ ಬೆಲೆಯಲ್ಲಿನ ಜಿಡಿಪಿ) 16.6 ಲಕ್ಷಕೋಟಿ ಅಮೆರಿಕನ್ ಡಾಲರ್ ಆಗಿದ್ದು ಇದು ಜಾಗತಿಕ ಒಟ್ಟಾರೆ ಉತ್ಪಾದನೆಯ ಶೇ 22ರಷ್ಟು. ಈ ಸಂಘಟನೆ ಹೊಗಳಿಕೆ ಮತ್ತು ತೆಗಳಿಕೆಗಳೆರಡಕ್ಕೂ ಗುರಿಯಾಗಿದೆ.
# ಇತಿಹಾಸ :
ಗೋಲ್ಡ್‌ಮನ್ ಸ್ಯಾಕ್ಸ್ ತನ್ನ 2001ರ ಒಂದು ಜಾಗತಿಕ ಆರ್ಥಿಕತೆಯ ಮೇಲಿನ ಪ್ರಬಂಧದಲ್ಲಿ ಬ್ರಿಕ್ ಮೊದಲಕ್ಕರಗಳನ್ನು ಬಳಸಿತು. ಈ ಪ್ರಬಂಧದ ಪ್ರಕಾರ ಬೆಳೆಯುತ್ತಿರು ಆರ್ಥಿಕತೆಗಳಾದ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನಾ 2050ರ ಸುಮಾರಿಗೆ ಬಿಡಿಬಿಡಿಯಾಗಿ ಮತ್ತು ಒಟ್ಟಾರೆಯಾಗಿ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಪಡೆದುಕೊಳ್ಳುತ್ತವೆ ಮತ್ತು ಜಗತ್ತಿನ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುತ್ತವೆ ಎಂದು ಅಭಿಪ್ರಾಯ ಪಟ್ಟಿತು. ಜೂಲೈ 2006ರ ಸೇಯಿಂಟ್ ಪೀಟರ್ಸ್‌ರ್ಬರ್ಗ್ ಜಿ-8 ಗುಂಪಿನ (ಸದ್ಯ ರಶಿಯದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ ಹೀಗಾಗಿ ಜಿ-7) ಹಿನ್ನೆಯಲ್ಲಿ ಸೇರಿದ ಹಿಗ್ಗಿಸಲ್ಪಟ್ಟ ಜಾಗತಿಕ ನಾಯಕರುಗಳ ಬೇಟಿಯಲ್ಲಿ ಮೊದಲು ಬ್ರಿಕ್ ಬಗೆಗೆ ರಶಿಯ, ಭಾರತ ಮತ್ತು ಚೀನಾ ಮಾತುಕತೆ ನಡೆಸಿದವು.
ಆರಂಭಿಕ ದೇಶಗಳಾದ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನಾಗಳ ವಿದೇಶಾಂಗ ಸಚಿವರುಗಳು ನ್ಯೂಯಾರ್ಕಿನಲ್ಲಿ ಸೆಪ್ಟೆಂಬರ್ 2006ರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯ ಚರ್ಚೆಯ ಸಂದರ್ಭದಲ್ಲಿ ಬೇಟಿಯಾಗಿ ಈ ಬಗೆಗೆ ಚರ್ಚಿಸಿದರು.
# ನೆನಪಿನಲ್ಲಿಡಬೇಕಾದ ಅಂಶಗಳು :
➤ ಭಾರತವು 2016 ಅಕ್ಟೋಬರ್ 15-16 ರಂದು ಗೋವಾದಲ್ಲಿ 8 ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿದ್ದು, ಅದು ಅತಿಥೇಯ ರಾಷ್ಟ್ರವಾಗಿರುವುದು. ಈ ಶೃಂಗಸಭೆಯಲ್ಲಿ ಪ್ರಪಂಚದಾದ್ಯಂತ ತೀವ್ರವಾಗಿ ಆರ್ಥಿಕ ನಿದಾನ ಗತಿಗೆ ಬಂದ ಸಮಯದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶಯವಿದೆ.
➤ ಬ್ರಿಕ್ಸ್ ಮೂಲತಃ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಅಥವಾ ‘ಬ್ರಿಕ್’ (Brazil, Russia, India and China, or BRIC) ಎನ್ನುವ ನಾಲ್ಕು ಸದಸ್ಯರ ಗುಂಪು ಆಗಿತ್ತು. ನಾಲ್ಕೂ ದೇಶಗಳ ಮೊದಲ ಬ್ರಿಕ್ ಶೃಂಗಸಭೆಯು 2009 ರಲ್ಲಿ, ರಶಿಯಾದ ಯೆಕಟೇನ್ಬರ್ಗ್,ನಲ್ಲಿ ನಡೆಯಿತು. ಕೇವಲ ಎರಡು ವರ್ಷಗಳ ನಂತರ,2001 ರಲ್ಲಿ ಜಿಮ್ ಒ ನೀಲ್ ರವರಿಂದ ಒಂದು ಯೋಜನೆ ಪ್ರಕಟಣೆಯಾಗಿ ಉತ್ತಮ ಜಾಗತಿಕ ಆರ್ಥಿಕ ಸಹಕಾರಕ್ಕೆ ‘ಬ್ರಿಕ್ ‘ (BRIC)ಎಂಬ ಒಂದು ಯೋಜನೆ ಸೃಷ್ಟಿಸಲ್ಪಟ್ಟಿತ್ತು. ಇದು ಉತ್ತಮ ಜಾಗತಿಕ ಆರ್ಥಿಕ ಸಂಬಂಧ ಬೆಳೆಸುವ ಉದ್ದೇಶ ಹೊಂದಿತ್ತು.
➤ 2010 ರಲ್ಲಿ ದಕ್ಷಿಣ ಆಫ್ರಿಕಾ “ದ್ರಿಕ್” ಜೊತೆ ಸೇರಿತು. ದಕ್ಷಿಣ ಆಫ್ರಿಕಾ ಅಧಿಕೃತವಾಗಿ ‘ಬ್ರಿಕ್’ ಗುಂಪು ಸೇರಿದ್ದರಿಂದ ‘ಬ್ರಿಕ್’ ಗೆ ಮರುನಾಮಕರಣ ಮಾಡುವ ಅಗತ್ಯ ಉಂಟಾಯಿತು. ಅದನ್ನು ‘ಬ್ರಿಕ್ಸ್’ BRICS ಎಂದು BRIC ಗೆ S (South Africa) ಸೇರಿಸಿ ಹೊಸದಾಗಿ ನಾಮಕರಣ ಮಾಡಲಾಯಿತು. ಈ ಐದು ಬ್ರಿಕ್ಸ್ ದೇಶಗಳಲ್ಲಿ 360 ಕೋಟಿ ಜನರು ಇದ್ದು, ವಿಶ್ವದ ಅರ್ಧ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ,
➤ ಐದು ಬ್ರಿಕ್ಸ್ ದೇಶಗಳಲ್ಲಿ ಒಟ್ಟು 16.6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ. ಭಾರತದ 2.38 ಟ್ರಿಲಿಯನ್ ಡಾ.ಆರ್ಥಿಕ ಸಂಪತ್ತು ವಾರ್ಷಿಕವಾಗಿ 7.5 ಪ್ರತಿಶತ ಬೆಳೆಯುತ್ತಿದೆ. ಇದು ಐದು ಬ್ರಿಕ್ಸ್ ದೇಶಗಳಲ್ಲೇ ಅತಿ ವೇಗದ ಬೆಳವಣಿಗೆ.
➤ 11.4 ಟ್ರಿಲಿಯನ್ ಡಾ.ನ ಸಂಪತ್ತಿನ ಚೀನಾ ಬ್ರಿಕ್ಸ್ ದೇಶಗಳಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. 2015 ರಲ್ಲಿ $ 327 ಬಿಲಿಯನ್ ನ ದಕ್ಷಿಣ ಆಫ್ರಿಕಾದ ಆರ್ಥಿಕ ಸಂಪತ್ತು, ಬ್ರಿಕ್ಸ್ ರಾಷ್ಟ್ರಗಳಲ್ಲಿ ಅತಿ ಕಡಿಮೆಯ ಆರ್ಥಿಕ ಸಂಪತ್ತು.
➤ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ, 2015 ರಲ್ಲಿ ತನ್ನದೇ ಆದ ಬ್ಯಾಂಕ್ ನ್ನು ಸ್ಥಾಪಿಸಲಾಗಿದೆ. ಬ್ರಿಕ್ಸ್ ಬ್ಯಾಂಕ್‍ನ್ನು ಅಧಿಕೃತವಾಗಿ ‘ಹೊಸ ಅಭಿವೃದ್ಧಿ ಬ್ಯಾಂಕ್’ (ಎನ್.ಡಿ.ಬಿ.New Development Bank:NDB), ಎಂದು ನಾಮಕರಣ ಮಾಡಲಾಗಿದೆ.
➤ ಇಲ್ಲಿಯವರೆಗೆ ಒಟ್ಟು ಆರು ಬ್ರಿಕ್ಸ್ ಶೃಂಗಸಭೆಗಳು ನಡೆದಿವೆ.
➤ ಭಾರತ 20102 ರಲ್ಲಿ ನಡೆದ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿತು.
➤ ಇತ್ತೀಚಿಗೆ ಬ್ರಿಜಿಲ್ ನಲ್ಲಿ 6ನೇ ಬ್ರಿಕ್ಸ್ ಶೃಂಗಸಭೆ ನಡೆಯಿತು.
➤ ಈ ಸಭೆಯಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.
➤ ಈ ಬ್ಯಾಂಕಿನ ಹೆಸರು ‘ನ್ಯೂ ಡೆವಲೆಪಮೆಂಟ್ ಬ್ಯಾಂಕ್’.
➤ 100 ಶತಕೋಟಿ(6 ಲಕ್ಷ ಕೋಟಿ) ಬಂಡವಾಳದಲ್ಲಿ ಈ ಬ್ಯಾಂಕ್ 2016 ವೇಳೆಗೆ ಕಾರ್ಯಾರಂಭ ಮಾಡಲಿದೆ.
➤ ಈ ಬ್ಯಾಂಕಿನ ಕೇಂದ್ರ ಕಛೇರಿ ಚೀನಾದ ಶಾಂಘೈನಲ್ಲಿರಲಿದೆ ಹಾಗೂ ಈ ಬ್ಯಾಂಕಿನ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಿಕೊಡಲಾಗಿದೆ.
➤ ಬ್ರಿಕ್ಸ್ ನ ಸಂಕ್ಷೀಪ್ತ ರೂಪ ಹೀಗಿದೆ : B – ಬ್ರಿಜಿಲ್, R – ರಷ್ಯಾ, I – ಇಂಡಿಯಾ, C – ಚೀನಾ, S – ದಕ್ಷಿಣ ಆಫ್ರಿಕಾ