Chinese Products : ಚೀನಾದ ಐದು ಸರಕುಗಳ ಮೇಲೆ ಡಂಪಿಂಗ್ ವಿರೋಧಿ ಸುಂಕ ವಿಧಿಸಿದ ಭಾರತ
India imposes anti-dumping duties on five Chinese products
ವ್ಯಾಕ್ಯೂಮ್ ಫ್ಲಾಸ್ಕ್, ಅಲ್ಯೂಮೀನಿಯಂ ಫಾಯಿಲ್ ಸೇರಿದಂತೆ ಭಾರತಕ್ಕೆ ಚೀನಾದಿಂದ ಆಮದಾಗುವ ಐದು ಉತ್ಪನ್ನಗಳ(Chinese products) ಮೇಲೆ ಕೇಂದ್ರ ಸರ್ಕಾರ ಡಂಪಿಂಗ್ ವಿರೋಧಿ ಸುಂಕ(Anti-Dumping Duty) ವಿಧಿಸಿದೆ. ಸಾಫ್ಟ್ ಫೆರೈಟ್ ಕೋರೆಸ್, ವ್ಯಾಕುಮ್ ಫ್ಲಾಸ್ಕ್, ಅಲ್ಯೂಮಿನಿಯಂ ಫಾಯಿಲ್ (ಹಾಳೆ), ಟ್ರೈಕ್ಲೋರೊ ಐಸೋಸೈನೂರಿಕ್ ಆಮ್ಲ ಮತ್ತು ಪಿವಿಸಿ (Poly Vinyl Chloride)ಪೇಸ್ಟ್ ರೆಸಿನ್ ಉತ್ಪನ್ನಗಳ ಅಮದು ಮೇಲೆ ಈ ತೆರಿಗೆ ವಿಧಿಸಲಾಗಿದೆ.
ಭಾರತದಲ್ಲಿ ಈ ಉತ್ಪನ್ನಗಳು ಸಹಜ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಇದರಿಂದ ದೇಶದ ಮಾರಾಟಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಮಾರಾಟಗಾರರ ರಕ್ಷಣೆ ದೃಷ್ಟಿಯಿಂದ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ತ್ಯೇಕ ಅಧಿಸೂಚನೆಗಳಲ್ಲಿ, ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು, ಸಾಫ್ಟ್ ಫೆರೈಟ್ ಕೋರ್ಗಳು, ವ್ಯಾಕ್ಯೂಮ್ ಇನ್ಸುಲೇಟೆಡ್ ಫ್ಲಾಸ್ಕ್ ಮತ್ತು ಟ್ರೈಕ್ಲೋರೋ ಐಸೊಸೈನೂರಿಕ್ ಆಮ್ಲದ ಆಮದಿನ ಮೇಲೆ ವಿಧಿಸಲಾದ ಸುಂಕವನ್ನು “ಐದು ವರ್ಷಗಳ ಅವಧಿಗೆ ವಿಧಿಸಲಾಗುತ್ತದೆ” ಎಂದು ಹೇಳಿದೆ.
ಆರು ತಿಂಗಳ ಕಾಲ ಅಲ್ಯೂಮಿನಿಯಂ ಫಾಯಿಲ್ ಮೇಲೆ ತಾತ್ಕಾಲಿಕವಾಗಿ ಪ್ರತಿ ಟನ್ಗೆ USD 873 ವರೆಗಿನ ಡಂಪಿಂಗ್ ವಿರೋಧಿ ಸುಂಕವನ್ನು ವಿಧಿಸಲಾಯಿತು. ಚೀನಾ ಮತ್ತು ಜಪಾನ್ನಿಂದ ಆಮದಾಗುವ ಆಮ್ಲ (ನೀರು ಸಂಸ್ಕರಣಾ ರಾಸಾಯನಿಕ)ದ ಮೇಲೆ ಸರ್ಕಾರವು ಪ್ರತಿ ಟನ್ಗೆ 276 ಡಾಲರ್ನಿಂದ 986 ಡಾಲರ್ಗಳವರೆಗೆ ಸುಂಕ ವಿಧಿಸಿದೆ.
ಸಾಫ್ಟ್ ಫೆರೈಟ್ ಕೋರ್ಗಳ (ಎಲೆಕ್ಟ್ರಿಕ್ ವಾಹನಗಳು, ಚಾರ್ಜರ್ಗಳು ಮತ್ತು ದೂರಸಂಪರ್ಕ ಸಾಧನಗಳಲ್ಲಿ ಬಳಸಲಾಗುವ) ಆಮದಿನ ಮೇಲೆ, CIF (ವೆಚ್ಚ, ವಿಮಾ ಸರಕು ಸಾಗಣೆ) ಮೌಲ್ಯದ ಮೇಲೆ ಶೇಕಡಾ 35 ರಷ್ಟು ಸುಂಕ ವಿಧಿಸಲಾಯಿತು. ಅದೇ ರೀತಿ ನಿರ್ವಾತ ನಿರೋಧಕ ಫ್ಲಾಸ್ಕ್ ಮೇಲೆ, ಪ್ರತಿ ಟನ್ಗೆ USD 1,732 ಆಂಟಿ-ಡಂಪಿಂಗ್ ಸುಂಕವನ್ನು ವಿಧಿಸಲಾಯಿತು.
ವಾಣಿಜ್ಯ ಸಚಿವಾಲಯದ ತನಿಖಾ ವಿಭಾಗ ಡಿಜಿಟಿಆರ್ (ವ್ಯಾಪಾರ ಪರಿಹಾರಗಳ ನಿರ್ದೇಶನಾಲಯ) ಶಿಫಾರಸುಗಳನ್ನು ಮಾಡಿದ ನಂತರ ಈ ಸುಂಕಗಳನ್ನು ವಿಧಿಸಲಾಗುತ್ತದೆ.
ವಿದ್ಯುತ್ ವಾಹನಗಳು, ಚಾರ್ಜರ್ಗಳು ಮತ್ತು ದೂರಸಂಪರ್ಕ ಸಾಧನಗಳಲ್ಲಿ ಬಳಸಲಾಗುವ ಸಾಫ್ಟ್ ಫೆರೈಟ್ ಕೋರ್ಗಳ ಆಮದಿನ ಮೇಲೆ, CIF (ವೆಚ್ಚ, ವಿಮಾ ಸರಕು ಸಾಗಣೆ) ಮೌಲ್ಯದ ಮೇಲೆ 35% ವರೆಗೆ ಸುಂಕ ವಿಧಿಸಲಾಗಿದೆ.
ಸುಂಕ ವಿಧಿಸಿದ ಉತ್ಪನ್ನಗಳು :
ಸಾಫ್ಟ್ ಫೆರೈಟ್ ಕೋರ್ಗಳು (ಇವಿಗಳು, ಚಾರ್ಜರ್ಗಳು, ದೂರಸಂಪರ್ಕ ಸಾಧನಗಳಲ್ಲಿ ಬಳಸಲಾಗುತ್ತದೆ) ನಿರ್ವಾತ ನಿರೋಧಕ ಫ್ಲಾಸ್ಕ್ಗಳು, ಅಲ್ಯೂಮಿನಿಯಂ ಫಾಯಿಲ್
ಟ್ರೈಕ್ಲೋರೋ ಐಸೊಸೈನೂರಿಕ್ ಆಮ್ಲ (ನೀರು ಸಂಸ್ಕರಣಾ ರಾಸಾಯನಿಕ)
ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಪೇಸ್ಟ್ ರೆಸಿನ್,
ವಿಧಿಸಲಾದ ಸುಂಕ :
ಸಾಫ್ಟ್ ಫೆರೈಟ್ ಕೋರ್ಗಳು: CIF ಮೌಲ್ಯದ ಮೇಲೆ 35% ವರೆಗೆ ಸುಂಕ
ನಿರ್ವಾತ ನಿರೋಧಕ ಫ್ಲಾಸ್ಕ್: ಪ್ರತಿ ಟನ್ಗೆ $1,732
ಅಲ್ಯೂಮಿನಿಯಂ ಫಾಯಿಲ್: ಪ್ರತಿ ಟನ್ಗೆ $873 ವರೆಗೆ (ಆರು ತಿಂಗಳವರೆಗೆ ತಾತ್ಕಾಲಿಕ)
ಟ್ರೈಕ್ಲೋರೋ ಐಸೊಸೈನೂರಿಕ್ ಆಮ್ಲ: ಪ್ರತಿ ಟನ್ಗೆ $276 ರಿಂದ $986 (ಚೀನಾ ಮತ್ತು ಜಪಾನ್ಗೆ ಅನ್ವಯಿಸುತ್ತದೆ)
ಪಿವಿಸಿ ಪೇಸ್ಟ್ ರೆಸಿನ್: ಪ್ರತಿ ಟನ್ಗೆ $89 ರಿಂದ $707 (ಚೀನಾ, ಕೊರಿಯಾ ಆರ್ಪಿ, ಮಲೇಷ್ಯಾ, ನಾರ್ವೆ, ತೈವಾನ್ ಮತ್ತು ಥೈಲ್ಯಾಂಡ್ಗೆ ಅನ್ವಯಿಸುತ್ತದೆ)
2017ರಲ್ಲಿ ಚೀನಾ ಟೆಂಪರ್ಡ್ ಗ್ಲಾಸ್ ಮೇಲೆ ಆಂಟಿ ಡಂಪಿಂಗ್ ತೆರಿಗೆ
ಮೊಬೈಲ್ ಫೋನ್ಗಳ ಪರದೆ ರಕ್ಷಣೆಗೆ ಬಳಸುವ ಚೀನಾ ನಿರ್ಮಿತ ಟೆಂಪರ್ಡ್ ಗ್ಲಾಸ್ಗಳ ಆಮದಿನ ಮೇಲೆ ಭಾರತ 2017ರಲ್ಲೇ ಸುರಿ ವಿರೋಧಿ (ಆ್ಯಂಟಿ ಡಂಪಿಂಗ್) ತೆರಿಗೆ ಹೇರಿತ್ತು. ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಆಮದಾಗುವ ಚೀನಾದ ಅಗ್ಗದ ವಸ್ತುಗಳಿಂದ ದೇಶೀಯ ಉದ್ಯಮವನ್ನು ರಕ್ಷಿಸಲು ಸರಕಾರ ಈ ಕ್ರಮ ಕೈಗೊಂಡಿತ್ತು. ಚೀನಾದಿಂದ ಆಮದಾಗುವ ಪ್ರತಿ ಟನ್ ಟೆಂಪರ್ಡ್ ಗ್ಲಾಸ್ಗಳ ಮೇಲೆ 52.85 ಡಾಲರ್ನಿಂದ 136.21 ಡಾಲರ್ ವರೆಗೂ ಆ್ಯಂಟಿ ಡಂಪಿಂಗ್ ಶುಲ್ಕ ವಿಧಿಸಿತ್ತು.
ಚೀನಾ ರೇಷ್ಮೆ ಪೂರೈಗೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ವಾರಣಾಸಿಗೆ ರೇಷ್ಮೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ. ಈ ಕುರಿತಾಗಿ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ. ಈ ಸಂಬಂಧ ಬುಧವಾರ ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ವಾರಣಾಸಿಗೆ ತೆರಳಲಿದೆ.