Current AffairsSpardha Times

ನೂತನ ಕೇಂದ್ರ ಸಚಿವ ಸಂಪುಟ : ಸಚಿವರುಗಳ ಪಟ್ಟಿ

Share With Friends

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರರ್ಕಾರ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿ ಪಕ್ಷಗಳ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ, ಇದೆ ವೇಳೆ 71 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದೆ 2014ರಲ್ಲಿ 46 ಸಚಿವರು, 2019ರಲ್ಲಿ 58 ಸಚಿವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಮೋದಿ ಸೇರಿ 72 ಸಂಪುಟ ಸದಸ್ಯರಲ್ಲಿ 30 ಸಂಪುಟ ದರ್ಜೆ ಸಚಿವರು, ಐವರಿಗೆ ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ಸದಸ್ಯರಿಗೆ ರಾಜ್ಯ ಖಾತೆ ನೀಡಲಾಗಿದೆ. ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು ಅದರ ಕುರಿತ ಕಂಪ್ಲೀಟ್ ಮಾಹಿತಿ ಕೆಳಕಂಡಂತಿದೆ.

ಯಾರಿಗೆ ಯಾವ ಖಾತೆ..?
ರಾಜನಾಥ್‌ ಸಿಂಗ್‌
-ರಕ್ಷಣಾ ಸಚಿವಾಲಯ
ಜೆಡಿ ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ರಸಾಯನಿಕ ಗೊಬ್ಬರ
ಅಮಿತ್‌ ಶಾ – ಗೃಹ ಸಚಿವಾಲಯ / ಸಹಕಾರ ಸಚಿವಾಲಯ
ನಿತಿನ್‌ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಎಸ್‌.ಎಸ್‌. ಚೌಹಾಣ್‌ – ಕೃಷಿ ಮತ್ತು ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ.
ನಿ.ಸೀತಾರಾಮನ್‌ – ಹಣಕಾಸು ಸಚಿವಾಲಯ
ಎಸ್‌.ಜೈಶಂಕರ್‌ – ವಿದೇಶಾಂಗ ಸಚಿವಾಲಯ
ಎಚ್‌ಡಿ.ಕುಮಾರಸ್ವಾಮಿ – ಬೃಹತ್‌ ಕೈಗಾರಿಕೆ/ ಉಕ್ಕು
ಗಜೇಂದ್ರ ಸಿಂಗ್‌ ಶೇಖಾವತ್‌ – ಪ್ರವಾಸೋದ್ಯಮ/ ಸಂಸ್ಕೃತಿ
ಅಶ್ವಿನಿ ವೈಷ್ಣವ್‌ – ಮಾಹಿತಿ ಮತ್ತು ಪ್ರಸಾರ/ ರೈಲ್ವೆ
ರಾಮಮೋಹನ ನಾಯ್ಡು – ನಾಗರೀಕ ವಿಮಾನಯಾನ
ಧರ್ಮೇಂದ್ರ ಪ್ರದಾನ – ಮಾನವ ಸಂಪನ್ಮೂಲ ಅಭಿವೃದ್ಧಿ
ಅನ್ನಪೂರ್ಣಾ ದೇವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಭೂಪೇಂದ್ರ ಯಾದವ್‌ – ಪರಿಸರ ಅರಣ್ಯ ಹವಾಮಾನ ಬದಲಾವಣೆ
ಸಿಆರ್‌ ಪಾಟೀಲ್‌ – ಜಲಶಕ್ತಿ
ಕಿರಣ್‌ ರಿಜಿಜು – ಸಂಸದೀಯ ವ್ಯವಹಾರ
ರವನೀತ್‌ ಸಿಂಗ್‌ ಬಿಟ್ಟು – ಅಲ್ಪಸಂಖ್ಯಾತ ವ್ಯವಹಾರ
ಜ್ಯೋತಿರಾಧಿತ್ಯ ಸಿಂಧ್ಯಾ – ಟೆಲಿಕಾಂ
ಗಿರಿರಾಜ್‌ ಸಿಂಗ್‌ – ಜವಳಿ
ಪ್ರಹ್ಲಾದ್‌ ಜೋಶಿ – ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು
ಹರ್ದೀಪ್‌ ಸಿಂಗ್‌ ಪುರಿ – ಪೆಟ್ರೋಲಿಯಂ.
ಪಿಯುಷ್‌ ಗೋಯಲ್‌ – ವಾಣಿಜ್ಯ ಮತ್ತು ಕೈಗಾರಿಕೆ.
ಜಿತನ್‌ರಾಮ್‌ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ.
ರಾಜೀವ್‌ ರಂಜನ್‌ಸಿಂಗ್‌ – ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶುಸಂಗೋಪನೆ.
ಸರ್ಬಾನಂದ ಸೋನಾವಾಲ್‌ – ಬಂದರು, ಜಲಸಾರಿಗೆ.
ಡಾ.ವೀರೇಂದ್ರ ಕುಮಾರ್‌ – ಸಾಮಾಜಿಕ ನ್ಯಾಯ ಸಬಲೀಕರಣ.
ರಾಮ್‌ ಮೋಹನ್‌ ನಾಯ್ಡು – ನಾಗರೀಕ ವಿಮಾನಯಾನ
ಜೋಯಲ್‌ ಓರಾಂ – ಬುಡಕಟ್ಟು ಅಭಿವೃದ್ಧಿ.
ಡಾ.ಎಂ.ಮಂಡಾವಿಯ – ಕಾರ್ಮಿಕ ಕಲ್ಯಾಣ/ ಯುವಜನ ಮತ್ತು ಕ್ರೀಡೆ.
ಜಿ.ಕಿಶನ್‌ ರೆಡ್ಡಿ – ಕಲ್ಲಿದ್ದಲು/ ಗಣಿ
ಚಿರಾಗ್‌ ಪಾಸ್ವಾನ್‌ – ಆಹಾರ ಸಂಸ್ಕರಣಾ ಕೈಗಾರಿಕೆ

ರಾಜ್ಯ ಸಚಿವರು- ಸ್ವತಂತ್ರ ನಿರ್ವಹಣೆ
ರಾವ್‌ ಇಂದ್ರಜಿತ್‌ಸಿಂಗ್‌ – ವಿಜ್ಞಾನ ತಂತ್ರಜ್ಞಾನ.
ಜಿತೇಂದ್ರ ಸಿಂಗ್‌ – ಭೂ ವಿಜ್ಞಾನ
ಎ.ರಾಮ್‌ಮೇಘವಾಲ್‌ – ಕಾನೂನು ಮತ್ತು ನ್ಯಾಯ/ ಸಂಸದೀಯ ವ್ಯವಹಾರ
ಪ್ರತಾಪ್‌ರಾವ್‌ ಜಾಧವ್‌ – ಆಯುಷ್‌ ಇಲಾಖೆ (ಆರೋಗ್ಯ ರಾಜ್ಯ ಖಾತೆ)
ಜಯಂತ್‌ ಚೌಧರಿ – ಕೌಶಲ್ಯಾಭಿವೃದ್ಧಿ / ಶಿಕ್ಷಣ (ರಾಜ್ಯಖಾತೆ)

ವಿವಿಧ ಖಾತೆಗಳ ರಾಜ್ಯ ಸಚಿವರು
ಜಿತಿನ್‌ ಪ್ರಸಾದ್‌
– ವಾಣಿಜ್ಯ ಮತ್ತು ಕೈಗಾರಿಕೆ / ಮಾಹಿತಿ ತಂತ್ರಜ್ಞಾನ
ಶ್ರೀಪಾದ್‌ ನಾಯ್ಕ್‌ – ಇಂಧನ
ಪಂಕಜ್‌ ಚೌಧರಿ – ಹಣಕಾಸು
ಕ್ರಿಷನ್‌ಪಾಲ್‌ ಗುರ್ಜಾರ್‌ – ಸಹಕಾರ
ರಾಮ್‌ದಾಸ್‌ ಅಠಾವಳೆ – ನ್ಯಾಯ ಸಬಲೀಕರಣ
ರಾಮನಾಥ್‌ ಠಾಕೂರ್‌ – ಕೃಷಿ/ ರೈತರ ಸಬಲೀಕರಣ
ನಿತ್ಯಾನಂದ ರಾಯ್‌ – ಗೃಹ ಸಚಿವಾಲಯ
ಅನುಪ್ರಿಯಾ ಪಟೇಲ್‌ – ಆರೋಗ್ಯ/ ರಾಸಾಯನಿಕ, ಗೊಬ್ಬರ
ವಿ.ಸೋಮಣ್ಣ – ಜಲಶಕ್ತಿ/ ರೈಲ್ವೆ
ಚಂದ್ರಶೇಖರ್‌ ಪೆಮ್ಮಸಾನಿ– ಗ್ರಾಮೀಣ ಅಭಿವೃದ್ಧಿ/ ಸಂವಹನ
ಎಸ್‌.ಸಿ.ಸಿಂಗ್‌ ಬಘೇಲ್‌ – ಪಶುಸಂಗೋಪನೆ/ ಮೀನುಗಾರಿಕೆ/ ಪಂಚಾಯತ್‌ ರಾಜ್‌
ಶೋಭಾ ಕರಂದ್ಲಾಜೆ – ಸಣ್ಣ, ಮಧ್ಯಮ ಕೈಗಾರಿಕೆ/ ಕಾರ್ಮಿಕ
ಕೀರ್ತಿವಧನ್‌ ಸಿಂಗ್‌- ಪರಿಸರ/ ಅರಣ್ಯ/ ವಿದೇಶಾಂಗ ವ್ಯವಹಾರ/ ಹವಾಮಾನ ಬದಲಾವಣೆ
ಬಿ.ಎಲ್‌.ವರ್ಮಾ– ಗ್ರಾಹಕ ವ್ಯವಹಾರ/ ಆಹಾರ ಪೂರೈಕೆ/ ಸಾಮಾಜಿ ನ್ಯಾಯ ಸಬಲೀಕರಣ
ಶಾಂತನು ಠಾಕೂರ್‌- ಬಂದರು, ಜಲಸಾರಿಗೆ
ಸುರೇಶ್‌ ಗೋಪಿ- ನೈಸರ್ಗಿಕ ಅನಿಲ/ ಪ್ರವಾಸೋದ್ಯಮ
ಡಾ.ಎಲ್‌.ಮುರುಗನ್‌ – ಮಾಹಿತಿ ಪ್ರಸಾರ/ ಸಂಸದೀಯ ವ್ಯವಹಾರ
ಅಜಯ್‌ ಟಮ್ಟಾ– ಸಾರಿಗೆ/ ಹೆದ್ದಾರಿ
ಬಂಡಿ ಸಂಜಯ್‌ ಕುಮಾರ್‌ – ಗೃಹ ಸಚಿವಲಾಯ
ಕಮಲೇಶ್‌ ಪಾಸ್ವಾನ್‌- ಗ್ರಾಮೀಣ ಅಭಿವೃದ್ಧಿ
ಭಾಗೀರಥ ಚೌಧರಿ- ಕೃಷಿ/ ರೈತರ ಸಬಲೀಕರಣ
ಸತೀಶ್‌ಚಂದ್ರ ದುಬೆ- ಕಲ್ಲಿದ್ದಲು/ ಗಣಿಗಾರಿಕೆ
ಸಂಜಯ್‌ ಸೇಠ್‌- ರಕ್ಷಣಾ ಇಲಾಖೆ
ರವನೀತ್‌ ಸಿಂಗ್‌ ಬಿಟ್ಟು– ಆಹಾರ ಸಂಸ್ಕರಣೆ ಕೈಗಾರಿಕೆ/ ರೈಲ್ವೆ
ದುರ್ಗಾದಾಸ್‌ ಉಕೆ – ಬುಡಕಟ್ಟು ವ್ಯವಹಾರ
ರಕ್ಷಾ ನಿಖಿಲ್‌ ಖಡ್ಸೆ – ಯುವಜನ ಕ್ರೀಡೆ.
ಸುಖಾಂತಾ ಮಜುಂದಾರ್‌ – ಶಿಕ್ಷಣ, ಈಶಾನ್ಯ ರಾಜ್ಯಗಳ ಅಭಿವೃದ್ದಿ
ಸಾವಿತ್ರಿ ಠಾಕೂರ್‌ – ಮಹಿಳೆ ಮತ್ತು ಮಕ್ಕಳ ಅಭಿವೃದ್ಧೊ
ತೋಕನ್‌ ಸಾಹುಲ್‌ – ವಸತಿ ಮತ್ತು ನಗರಾಭಿವೃದ್ಧಿ
ರಾಜ್‌ಭೂಷಣ್‌ ಚೌಧರಿ – ಜಲಶಕ್ತಿ
ಭೂಪತಿರಾಜು ಶ್ರೀನಿವಾಸ್‌ ವರ್ಮಾ – ಬೃಹತ್‌ ಕೈಗಾರಿಕೆ, ಉಕ್ಕು
ಹರ್ಷ ಮಲ್ಹೋತ್ರಾ – ಸಹಕಾರ ವ್ಯವಹಾರ/ ಸಾರಿಗೆ ಹೆದ್ದಾರಿ
ನಿಮುಬೆನ್‌ ಬಂಬಿನಿಯಾ – ಗ್ರಾಹಕ ವ್ಯವಹಾರ / ಆಹಾತ ಮತ್ತು ನಾಗರೀಕ ಪೂರೈಕೆ
ಮುರಳಿಧರ್‌ ಮೊಹಲ್‌ – ಸಹಕಾರ/ ನಾಗರೀಕ ವಿಮಾನಯಾನ
ಜಾರ್ಜ್‌ ಕುರಿಯನ್‌ – ಅಲ್ಪಸಂಖ್ಯಾತ ಕಲ್ಯಾಣ/ ಮೀನುಗಾರಿಕೆ/ ಪಶುಸಂಗೋಪನೆ
ಪಬಿತ್ರ ಮಾರ್ಗರಿಟ – ಜವಳಿ/ ಬಾಹ್ಯ ವ್ಯವಹಾರ


ಕರ್ನಾಟಕದಲ್ಲಿ ಸಚಿವ ಸ್ಥಾನ ಪಡೆದವರು ಮತ್ತು ಖಾತೆಗಳ ವಿವರ
1.ನಿರ್ಮಲಾ ಸೀತಾರಾಮನ್‌ – ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರ (ಕ್ಯಾಬಿನೆಟ್‌)
2.ಪ್ರಲ್ಹಾದ ಜೋಶಿ– ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ (ಕ್ಯಾಬಿನೆಟ್‌)
3.ಎಚ್‌ಡಿ ಕುಮಾರಸ್ವಾಮಿ-ಬೃಹತ್‌ ಕೈಗಾರಿಕೆ ಮತ್ತು ಉಕ್ಕು (ಕ್ಯಾಬಿನೆಟ್‌)
4.ಶೋಭಾ ಕರಂದ್ಲಾಜೆ – ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಉದ್ಯೋಗ ಮತ್ತು ಕಾರ್ಮಿಕ ಸಹಾಯಕ ಸಚಿವೆ(ರಾಜ್ಯ ಖಾತೆ)
5.ವಿ ಸೋಮಣ್ಣ – ಜಲ ಶಕ್ತಿ ಮತ್ತು ರೈಲ್ವೇ ಸಹಾಯಕ ಸಚಿವ (ರಾಜ್ಯ ಖಾತೆ)


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋತ ಮೂವರಿಗೂ ಕೇಂದ್ರದಲ್ಲಿ ಮಂತ್ರಿಗಿರಿ ಸಿಕ್ಕಿದೆ :
ರವನೀತ್ ಸಿಂಗ್-
ಪಂಜಾಬ್
ಜಾರ್ಜಿ ಕುರಿಯನ್-ಕೇರಳ
ಎಲ್. ಮುರುಗನ್- ತಮಿಳುನಾಡು


7 ಮಹಿಳಾ ಮಂತ್ರಿಗಳು :
ಏಳು ಮಹಿಳಾ ನಾಯಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಾಗಿದೆ, ಇಬ್ಬರಿಗೆ ಮಾತ್ರ ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಾಗಿದೆ.
ಕ್ಯಾಬಿನೆಟ್ ದರ್ಜೆ :
1.ನಿರ್ಮಲಾ ಸೀತಾರಾಮನ್
2.ಅನ್ನಪೂರ್ಣ ದೇವಿ

ಮಹಿಳಾ ರಾಜ್ಯ ಮಂತ್ರಿಗಳು :
3.ಅನುಪ್ರಿಯಾ ಪಟೇಲ್
4.ಶೋಭಾ ಕರಂದ್ಲಾಜೆ
5.ರಕ್ಷಾ ನಿಖಿಲ್ ಖಡ್ಸೆ
6.ಸಾವಿತ್ರಿ ಠಾಕೂರ್
7.ನಿಮುಬೆನ್ ಜಯಂತಿಭಾಯ್ ಬಂಬಾನಿಯಾ


Leave a Reply

Your email address will not be published. Required fields are marked *

error: Content Copyright protected !!