Court QuizLatest Updates

Civil Cases : ಸಿವಿಲ್ ಪ್ರಕರಣಗಳಲ್ಲಿ ನಿಮ್ಮ ಪರ ವಕೀಲರನ್ನು ಬದಲಾಯಿಸಬಹುದೇ..?

Share With Friends

Civil Cases : ಸಿವಿಲ್ ಪ್ರಕರಣದಲ್ಲಿ ಯಾವ ಹಂತದಲ್ಲಿದ್ದರೂ ಸಹ, ನಿಮ್ಮ ಇಚ್ಛೆಯಂತೆ ವಕೀಲರನ್ನು ಬದಲಾಯಿಸಬಹುದು. ನೀವು ಹೊಸ ವಕೀಲರನ್ನು ಆಯ್ಕೆ ಮಾಡಿದ ನಂತರ, ಅವರು Vakalatnama (ವಕೀಲರ ಅಧಿಕಾರ ಪತ್ರ) ಮೇಲೆ ಸಹಿ ಪಡೆಯುತ್ತಾರೆ.

ಹಳೆಯ ವಕೀಲರಿಗೂ ಪ್ರಕರಣದಿಂದ No Objection (NOC) ಕೊಡಿಸುವುದು ಸಾಮಾನ್ಯ ವಿಧಾನ.ಕೆಲವೊಮ್ಮೆ ಹಳೆಯ ವಕೀಲರು ಸಹಕರಿಸದಿದ್ದರೆ, ನ್ಯಾಯಾಲಯವೇ ವಿಷಯವನ್ನು ಪರಿಶೀಲಿಸಿ ನಿಮ್ಮ ಹೊಸ ವಕೀಲರನ್ನು ಅನುಮತಿಸಬಹುದು.

ನಂತರ ನ್ಯಾಯಾಲಯದಲ್ಲಿ ಹೊಸ ವಕೀಲರು ತಮ್ಮ Memo of Appearance ಸಲ್ಲಿಸುತ್ತಾರೆ.ಅದರ ಬಳಿಕ ಪ್ರಕರಣದಲ್ಲಿ ನಿಮ್ಮ ಪರವಾಗಿ ಹೊಸ ವಕೀಲರೇ ಪ್ರತಿನಿಧಿಸುತ್ತಾರೆ.

ಸಾಮಾನ್ಯವಾಗಿ, ಹಳೆಯ ವಕೀಲರಿಂದ No Objection Certificate (NOC) ತೆಗೆದು ಹೊಸ ವಕೀಲರು ಜೊತೆಗೆ ಈ ಅರ್ಜಿ ಸಲ್ಲಿಸುತ್ತಾರೆ. ಹಳೆಯ ವಕೀಲರು NOC ಕೊಡದಿದ್ದರೆ, ಕಾರಣ ತಿಳಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.


error: Content Copyright protected !!