Current AffairsLatest UpdatesSports

Cheteshwar Pujara retires : ಕ್ರಿಕೆಟ್‌ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ

Share With Friends

Cheteshwar Pujara retires from all forms of Indian cricket : ಭಾರತ ಟೆಸ್ಟ್ ತಂಡದಲ್ಲಿ ದಶಕಗಳ ಕಾಲ ನಂಬಿಗಸ್ಥ ಬ್ಯಾಟರ್ ಆಗಿದ್ದ ಚೇತೇಶ್ವರ ಪೂಜಾರ ಅವರು ನಿವೃತ್ತಿ ಹೊಂದುವುದಾಗಿ ಭಾನುವಾರ ಘೋಷಿಸಿದ್ದಾರೆ. 2023ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಅವರು ಆ ಬಳಿಕ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ 37 ವರ್ಷದ ಪೂಜಾರ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ. ಈಗಾಗಲೇ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿರುವ ಅವರು ಅದೇ ವೃತ್ತಿಯನ್ನು ಮುಂದುವರಿಸುವ ಸಾಧ್ಯತೆ ಇದೆ.

ಈ ವರ್ಷ ರೋಹಿತ್‌ ಶರ್ಮಾ (ಟೆಸ್ಟ್‌), ವಿರಾಟ್‌ ಕೊಹ್ಲಿ (ಟೆಸ್ಟ್‌), ರವಿಚಂದ್ರನ್‌ ಅಶ್ವಿನ್‌ (ಎಲ್ಲಾ ಮಾದರಿ) ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ (Cricket) ನಿವೃತ್ತಿ ಘೋಷಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ಜನಿಸಿದ 37 ವರ್ಷದ ಪೂಜಾರ 2010ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದರು. ಟೀಂ ಇಂಡಿಯಾದಲ್ಲಿ ಅತಿಹೆಚ್ಚು ರನ್‌ ಗಳಿಸಿದ 8ನೇ ಟೆಸ್ಟ್‌ ಬ್ಯಾಟರ್‌ ಎನಿಸಿಕೊಂಡಿದ್ದರು. ಇದುವರೆಗೆ 103 ಟೆಸ್ಟ್‌, 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಟೀಂ ಇಂಡಿಯಾ ಪರ 103 ಟೆಸ್ಟ್‌ ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 7,195 ರನ್‌ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ತವರಿನಲ್ಲಿ ನಡೆದ ಒಟ್ಟು ಟೆಸ್ಟ್‌ನಲ್ಲಿ 3,839 ರನ್ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ ಆಗಿದ್ದ ಪೂಜಾರ, ಸ್ವದೇಶಿ ಮತ್ತು ವಿದೇಶಗಳಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಕಳೆದ ವರ್ಷಗಳಲ್ಲಿ ಸಂಪೂರ್ಣವಾಗಿ ಫಾರ್ಮ್‌ ಕಳೆದುಕೊಂಡಿದ್ದರು. ಇದು ಅವರನ್ನು ನಿವೃತ್ತಿಯ ಕಡೆಗೆ ಸೆಳೆದಿರಬಹುದು ಎಂದು ಹೇಳಲಾಗುತ್ತಿದೆ.

ಟೆಸ್ಟ್‌ ಸ್ಪೆಷಲಿಸ್ಟ್‌ ಖ್ಯಾತಿಯ ಭಾರತದ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar Pujara) ಅವರು ಭಾವನಾತ್ಮಕ ಪೋಸ್ಟ್‌ ಮಾಡುವ ಮೂಲಕ ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನವನ್ನು ಕೊನೆಗೊಳಿಸಿದರು. ಪೂಜಾರ ಅವರ ಕ್ರಿಕೆಟ್‌ ಸಾಧನೆಯ ವಿವರ ಇಲ್ಲಿದೆ.

13 ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ 43.60 ಸರಾಸರಿಯಲ್ಲಿ 7195 (ಟೆಸ್ಟ್) ರನ್ ಗಳಿಸಿರುವ ಪೂಜಾರ, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 19 ಶತಕಗಳು ಸೇರಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21301 ರನ್ ಗಳಿಸಿದ್ದಾರೆ.

2018-19ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅವರು 521 ರನ್ ಗಳಿಸಿದರು. ಪೂಜಾರ 100 ಟೆಸ್ಟ್ ಪಂದ್ಯಗಳನ್ನು ಆಡಿದ 15ನೇ ಭಾರತೀಯ ಆಟಗಾರನೂ ಹೌದು.

ಚೇತೇಶ್ವರ ಪೂಜಾರ ಸಾಧನೆಗಳು
ಟೆಸ್ಟ್ ಪಂದ್ಯಗಳು: 103
ಟೆಸ್ಟ್ ಇನ್ನಿಂಗ್ಸ್: 176
ಟೆಸ್ಟ್ ರನ್‌ಗಳು: 7,195
ಟೆಸ್ಟ್ ಬ್ಯಾಟಿಂಗ್ ಸರಾಸರಿ: 44.37
ಟೆಸ್ಟ್ ಶತಕಗಳು / ಅರ್ಧಶತಕಗಳು: 19 / 35
ಗರಿಷ್ಠ ಟೆಸ್ಟ್ ಸ್ಕೋರ್: 206
ಟೆಸ್ಟ್‌ಗಳಲ್ಲಿ ಎದುರಿಸಿದ ಚೆಂಡುಗಳು: 16,217
ಪ್ರಥಮ ದರ್ಜೆ ಪಂದ್ಯಗಳು: 278
ಪ್ರಥಮ ದರ್ಜೆ ರನ್‌ಗಳು: 21,301
ಪ್ರಥಮ ದರ್ಜೆ ಸರಾಸರಿ: 51.83
ಪ್ರಥಮ ದರ್ಜೆ ಶತಕಗಳು / ಅರ್ಧಶತಕಗಳು: 66 / 81

ಪ್ರಮುಖ ಸಾಧನೆಗಳು ಮತ್ತು ದಾಖಲೆಗಳು
*ಕೇವಲ 11 ಪಂದ್ಯಗಳಲ್ಲಿ (18ನೇ ಟೆಸ್ಟ್ ಇನ್ನಿಂಗ್ಸ್) 1,000 ಟೆಸ್ಟ್ ರನ್‌ಗಳನ್ನು ತಲುಪಿದ ಮೊದಲ ಭಾರತೀಯ.
*ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಭಾರತೀಯನೊಬ್ಬ ಎದುರಿಸಿದ ಅತಿ ಹೆಚ್ಚು ಎಸೆತಗಳು: 525 ಎಸೆತಗಳು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತೀಯರಿಂದ ಅತಿ ಹೆಚ್ಚು ದ್ವಿಶತಕಗಳು (12 ದ್ವಿಶತಕಗಳು). ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು (302, 352, 306) ಗಳಿಸಿದ ಒಂಬತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.
*ಭಾರತ ಪರ ದಾಖಲಾದ ನಿಧಾನಗತಿಯ ಟೆಸ್ಟ್ ಅರ್ಧಶತಕ (196 ಎಸೆತಗಳು).
*2013 ರಲ್ಲಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ.

error: Content Copyright protected !!