Current AffairsSpardha Times

ಹೊಸ ಬಾಹ್ಯಾಕಾಶ ಕೇಂದ್ರದತ್ತ ಜಿಗಿದ ಚೀನಾದ ಗಗನ ಯಾತ್ರಿಗಳು

Share With Friends

ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶ‌ಸ್ವಿಯಾಗಿ ಉಡಾವಣೆಗೊಂಡಿದೆ. ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆನ್‌ಶಾವ್-12 ನೌಕೆ ಬೆಳಗ್ಗೆ 9:22ಕ್ಕೆ ಉಡಾವಣೆಯಾಗಿದ್ದು, ನೌಕೆಯು ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾನಿಗಳನ್ನು ಹೊತ್ತು ನೂತನ ಬಾಹ್ಯಾಕಾಶ ನಿಲ್ದಾಣದತ್ತ ಸಾಗಿದೆ.

# ‘ಟಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಮೂವರು ಗಗನ ಯಾತ್ರಿಗಳು ಮೂರು ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ’. ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಸಮಯದಲ್ಲಿ ಇದು ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ.

# 2003 ರಲ್ಲಿ ಚೀನಾ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿತ್ತು. ಆ ಮೂಲಕ ಬಾಹ್ಯಾಕಾಶಕ್ಕೆ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿದ ಜಗತ್ತಿನ ಮೂರನೇ ರಾಷ್ಟ್ರ ಎಂಬ ಕೀರ್ತಿಗೆ ಚೀನಾ ಭಾಜನವಾಗಿತ್ತು. ಇದಕ್ಕೂ ಮೊದಲು ಅಮೆರಿಕ ಮತ್ತು ಸೋವಿಯತ್ ರಷ್ಯಾ ಈ ಸಾಧನೆ ಮಾಡಿತ್ತು.

# ಈ ಯೋಜನೆಯಲ್ಲಿ ಚೀನಾ ಒಟ್ಟು 14 ಮಂದಿ ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹೊಂದಿದೆ. ನೂತನ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಚ್ಚುವರಿ ವಿಭಾಗಗಳನ್ನು ಸೇರಿಸಲು ಮತ್ತು ಸಿಬ್ಬಂದಿ ಮತ್ತು ಸರಬರಾಜುಗಳನ್ನು ಕಳುಹಿಸಲು ಮುಂದಿನ ವರ್ಷದಲ್ಲಿ ಯೋಜಿಸಲಾದ 11 ಮಾನವ ಸಹಿತ ಉಡಾವಣೆಗಳಲ್ಲಿ ಹಾಲಿ ಉಡಾವಣೆ ಮೂರನೆಯದು.

# ಮೂರು ತಿಂಗಳಲ್ಲಿ ಹೊಸ ಮೂರು ಸದಸ್ಯರ ಸಿಬ್ಬಂದಿ ಮತ್ತು ಸರಕು ಸಾಗಣೆ ನೌಕೆಯನ್ನು ಮತ್ತೆ ಉಡಾವಣೆ ಮಾಡಲಾಗುತ್ತದೆ. ಅಂತೆಯೇ ಮುಂದಿನ ಉಡಾವಣೆಗಳಲ್ಲಿ ಮಹಿಳೆಯರನ್ನು ನಿಲ್ದಾಣಕ್ಕೆ ಕಳುಹಿಸಲು ಚೀನಾ ಯೋಜನೆ ಹೊಂದಿದೆ ಎಂದು ಹೇಳಲಾಗಿದೆ.

# ಚೀನಾದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯ 100ನೇ ವರ್ಷದ ಸಂಭ್ರಮ ಜುಲೈ 1ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಉಡಾವಣೆಗೆ ಭಾರಿ ಪ್ರಚಾರ ನೀಡಲಾಗಿದೆ. ಉಡಾವಣೆಗೊಂಡ 10 ನಿಮಿಷಗಳ ನಂತರ ರಾಕೆಟ್‌ ಕಕ್ಷೆಯನ್ನು ತಲುಪಿದ್ದು, ಬಾಹ್ಯಾಕಾಶ ನೌಕೆ ರಾಕೆಟ್‌ನಿಂದ ಬೇರ್ಪಟ್ಟಿದೆ.

# ಈ ಮೂಲಕ ಚೀನಾ ತನ್ನ ದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದು, ಮಾನವ ಸಹಿತ ಚೊಚ್ಚಲ ರಾಕೆಟ್‌ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಬಾಹ್ಯಾಕಾಶ ಯಾನಿಗಳನ್ನು ಕರೆದೊಯ್ಯುವ ಮಹತ್ವಾಕಾಂಕ್ಷಿ ಮಿಷನ್ ಇದಾಗಿದ್ದು, ಇದರ ಮೂಲಕ ವಿಶ್ವದ ಪ್ರಬಲ ಬಾಹ್ಯಾಕಾಶ ಶಕ್ತಿಯಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಚೀನಾದ್ದಾಗಿದೆ. ಗಗನಯಾತ್ರಿಗಳು ಮೂರು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯಲಿದ್ದಾರೆ.

error: Content Copyright protected !!