GKSpardha Times

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಬೆಸೆಯುವ ಅಖಿಲ ಭಾರತ ಸೇವೆಗಳು

Share With Friends

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರಗಳ ನಡುವೆ ಉತ್ತಮ ಬಾಂಧವ್ಯ ರೂಪಿಸುವಲ್ಲಿ ಕೇಂದ್ರ ಅಖಿಲ ಭಾರತ ಸೇವೆಗಳು ಪ್ರಮುಖ ಪಾತ್ರವಹಿಸುತ್ತವೆ. ಅಖಿಲ ಭಾರತ ಸೇವೆಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗಳ ಮೂಲಕ ಸೂಕ್ತವಾದ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಿವಿಧ ರಾಜ್ಯಗಳಿಗೆ ನಿಯೋಜಿಸುವ ಜವಾಬ್ದಾರಿಯನ್ನು ಸಂವಿಧಾನ್ಮಕ ಸಂಸ್ಥೆಯಾದಂತಹ ‘ಕೇಂದ್ರ ಲೋಕಸೇವಾ ಆಯೋಗ’(ಯುಪಿಎಸ್‍ಸಿ) ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ.

ಅಖಿಲ ಭಾರತ ಸೇವೆಗಳಲ್ಲಿ ಪ್ರಮುಖವಾಗಿ ಮೂರು ಸೇವೆಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಬಾಂಧವ್ಯವನ್ನು ವೃದ್ಧಿಸಲು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಕಾರ್ಯನಿರ್ವಹಿಸುತ್ತಿವೆ. ಅಂತಹ ಸೇವೆಗಳೆಂದರೆ-
1. ಭಾರತೀಯ ಆಡಳಿತ ಸೇವೆ(ಐಎಎಸ್)
2. ಭಾರತೀಯ ಪೋಲಿಸ್ ಸೇವೆ(ಐಪಿಎಸ್)
3. ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್)
ಈ ಮೂರು ಸೇವೆಗಳು ಭಾರತದಲ್ಲಿ ಅಖಿಲ ಭಾರತ ಸೇವೆಗಳಾಗಿದ್ದು, ಇವುಗಳು ದೇಶಾದ್ಯಂತ ಕಾರ್ಯವ್ಯಾಪ್ತಿಯನ್ನು ಹೊಂದಿವೆ.

1. ಭಾರತೀಯ ಆಡಳಿತ ಸೇವೆ
ಭಾರತೀಯ ಆಡಳಿತ ಸೇವೆಯು ಭಾರತ ದೇಶದ ನಾಗರಿಕ ಆಡಳಿತ ಸೇವೆಯಾಗಿದೆ. ಇದನ್ನು ಆರಂಭದಲ್ಲಿ ಐಸಿಎಸ್ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ‘ಐಎಎಸ್’ ಎಂದು ನಾಮಕರಣ ಮಾಡಲಾಯಿತು. ಐ.ಎ.ಎಸ್ ಅಧಿಕಾರಿಗಳು ಜಿಲ್ಲೆಗಳಲ್ಲಿ ಡೆಪ್ಯೂಟಿ ಕಮೀಷನರ್‍ಗಳಾಗಿ, ಜಿಲ್ಲಾಧೀಕಾರಿಗಳಾಗಿ, ಡಿಸ್ಟ್ರಿಕ್ಟ್ ಕಲೆಕ್ಟರ್‍ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಐ.ಎ.ಎಸ್ ಅಧಿಕಾರಿಗಳಲ್ಲಿ ಅತ್ಯುನ್ನತ ಹುದ್ದೆ ಎಂದರೆ ಕ್ಯಾಬಿನೆಟ್ ಕಾರ್ಯದರ್ಶಿ ಹುದ್ದೆಯಾಗಿದೆ.

2. ಭಾರತೀಯ ಪೋಲಿಸ್ ಸೇವೆ 
ಭಾರತೀಯ ಪೋಲಿಸ್ ಸೇವೆಯು ಅಖಿಲ ಭಾರತ ಸೇವೆಯಾಗಿದ್ದು,1948ರಲ್ಲಿ ಆರಂಭಿಸಲಾಗಿತ್ತು. ಈ ಐ.ಪಿಎಸ್ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಭಾರತೀಯ ಪೋಲಿಸ್ ಸೇವೆಯಲ್ಲಿ ಅತ್ಯನ್ನತ ಐ.ಪಿ.ಎಸ್ ಅಧಿಕಾರಿಯೆಂದರೆ ಗುಪ್ತದಳ (ಐ.ಬಿ)ದ ನಿರ್ದೇಶಕರ ಹುದ್ದೆಯಾಗಿದೆ.

3. ಭಾರತೀಯ ಅರಣ್ಯ ಸೇವೆ
ಭಾರತೀಯ ಅರಣ್ಯ ಸೇವೆಯು ಭಾರತದ ಅಖಿಲ ಭಾರತ ಸೇವೆಗಳ ಒಂದು ಸೇವೆಯಾಗಿದೆ. ಯುಪಿಎಸ್‍ಸಿಯವರು ಪ್ರತ್ಯೇಕವಾಗಿ ಅರಣ್ಯ ಇಲಾಖೆಗೆ ಅಖಿಲ ಭಾರತ ಸೇವೆಯನ್ನು ನೀಡುವ ಉದ್ದೇಶದಿಂದ ಭಾರತೀಯ ಅರಣ್ಯ ಸೇವೆ ಪರೀಕ್ಷೆಯನ್ನು ನಡೆಸುತ್ತಾರೆ. 1966ರಿಂದ ಆಧುನಿಕ ಭಾರತೀಯ ಅರಣ್ಯ ಸೇವೆಯನ್ನು ಆರಭಿಸಲಾಯಿತು.

ಇವರು ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ದೇಶಾದ್ಯಂತ ವಿವಿಧ ರಾಜ್ಯಗಳ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆಗಾಗಿ ಈ ಅಧಿಕಾರಿಗಳು ಶ್ರಮಿಸುತ್ತಾರೆ. ಅಖಿಲ ಭಾರತ ಸೇವೆಗಳಿಗೆ ನಿಯೋಜಿಸುವ ಮೊದಲು ಸೇವಾ ಪೂರ್ವ ತರಬೇತಿಯನ್ನು ನೀಡಲಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!