GKScienceSpardha Times

ಗಾಜು ಮತ್ತು ಸಿಮೆಂಟ್ ಗೆ ಸಂಬಂಧಿಸಿದ ಪ್ರಶ್ನೆಗಳು

Share With Friends

1. ಗಾಜು ಯಾವ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕೂಡಿದೆ..?
• ಸೋಡಿಯಮ್ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಸಿಲಿಕೇಟ್

2. ಗಾಜಿನ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು..?
• 1. ಮರಳು (ಸಿಲಿಕಾನ್ ಡೈ ಆಕ್ಸೈಡ್) (ಸಿಲಿಕಾ)
2. ಸುಣ್ಣದಕಲ್ಲು (ಕ್ಯಾಲ್ಸಿಯಂ ಕಾರ್ಬೋನೇಟ್)
3. ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೋನೆಟ್)

3. ಗಾಜಿನ ಉತ್ಪಾದನೆ ಹೇಗೆ ಮಾಡಲಾಗುತ್ತದೆ..?
• ನಯವಾಗಿ ಪುಡಿಮಾಡಿದ ಕಚ್ಚಾವಸ್ತುಗಳನ್ನು ಕುಲುಮೆಗೆ ಸೇರಿಸಿ ಸುಮಾರು 1700 ಡಿಗ್ರಿ ಸೆಲ್ಸಿಯಸ್ ತಾಪವನ್ನು ಕೊಡಬೇಕು. ಆಗ ಕಚ್ಚಾವಸ್ತುಗಳು ಕರಗಿ ರಾಸಾಯನಿಕವಾಗಿ ಸೇರಿ ಗಾಜು ಉಂಟಾಗುತ್ತದೆ. ಈ ರೀತಿ ಉಂಟಾದ ಅತಿ ತಂಪಿತ ದ್ರವದ ಗಾಜನ್ನು ವಿವಿಧ ಆಕಾರಗಳಿಗೆ ಅಚ್ಚುಗಳಲ್ಲಿ ಎರಕ ಹೊಯ್ಯಲಾಗುತ್ತದೆ.

4. ಗಾಜಿನ ಉತ್ಪಾದನೆಯಲ್ಲಿ ಗಾಜಿನಲ್ಲ್ಲಿ ಉಂಟಾದ ಗಾಳಿಯ ಗುಳ್ಳೆಗಳನ್ನು ತೆಗೆಯಲು ಬಳಸುವ ರಾಸಾಯನಿಕಗಳು ಯಾವುವು?
• ‘ಬೋರಾಕ್ಸ್’ ಅಥವಾ ‘ಅಲ್ಯೂಮಿನಿಯಂಪುಡಿ’ಯನ್ನು ಸೇರಿಸಿ ಕಾಯಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಗಾಳಿಯ ಗುಳ್ಳೆಗಳು ತಪ್ಪಿಸಿಕೊಳ್ಳುತ್ತವೆ.

5. ಗಾಜನ್ನು ನಿಧಾನವಾಗಿ ತಂಪುಮಾಡುವ ಪ್ರಕ್ರಿಯೆಗೆ ಏನೆಂದು ಹೆಸರು?
• ‘ ಅನಿಲನ’ ಕ್ರಿಯೆ ಎಂದು ಹೆಸರು.

6. ಗಾಜಿನ ಅನಿಲನ ಕ್ರಿಯೆಯಿಂದ ಆಗುವ ಅನುಕೂಲವೇನು?
• ಒತ್ತಡವನ್ನು ತಡೆಯುವ ಸಾಮಥ್ರ್ಯ ಹೊಂದುತ್ತದೆ ಮತ್ತು ಛಿಧುರತೆಯನ್ನು ಹೋಗಲಾಡಿಸುತ್ತದೆ.

7. ಗಾಜಿನ ಉತ್ಪಾದನೆಯಲ್ಲಿ “ಕ್ವಂಚಿಂಗ್” ಎಂದರೇನು.?
• ಗಾಜನ್ನು ಬೇಗನೇ ತಂಪು ಮಾಡುವ ಪ್ರಕ್ರಿಯೆಗೆ “ ಕ್ವಂಚಿಂಗ್” ಎಂದು ಹೆಸರು.

8. ಗಾಜಿನ “ ಕ್ವಂಚಿಂಗ್” ವಿಧಾನದ ಲಾಭವೇನು?
• ‘ಕ್ವಂಚಿಂಗ್’ ವಿಧಾನದಿಂದ ಗಾಜು ತುಂಬಾ ಗಟ್ಟಿ ಮತ್ತು ಛಿದುರತೆಯನ್ನು ಪಡೆಯುತ್ತದೆ.

9. ಗಾಜಿನ ಗುಣಗಳು ಯಾವುವು?
• ಬಲಯುತ ಮತ್ತು ಪಾರದರ್ಶಕ ವಸ್ತು
• ಅದು ಕರಗುವಿಕೆಗೆ ಪ್ರತಿರೋಧ ಹೊಂದಿದೆ.
• ಸಾಮಾನ್ಯ ತಾಪದಲ್ಲಿ ಇದು ಇತರ ರಾಸಾಯನಿಕಗಳೊಂದಿಗೆ ವರ್ತಿಸುವುದಿಲ್ಲ.
• ಕಾಯಿಸಿದಾಗ ಕ್ರಮೇಣ ಮೆದುವಾಗಿ ನಂತರ ನಿಧಾನವಾಗಿ ಹರಿಯಲು ಪಾರಂಭಿಸುತ್ತದೆ.

10. ಗಾಜಿಗೆ ಬಣ್ಣ ಕೊಡುವ ರಾಸಾಯನಿಕಗಳು ಯಾವುವು?
• ಹಳದಿ ಬಣ್ಣ
ರಾಸಾಯನಿಕಗಳು: ಕ್ಯಾಡ್ಮಿಯಂ ಸಲ್ಫೈಡ್, ಸೀರಿಯಂ ಆಕ್ಸೈಡ್,ಕಬ್ಬಿಣದ ಲವಣಗಳು
• ಹಸಿರು ಬಣ್ಣ
ರಾಸಾಯನಿಕಗಳು : ಕ್ರೋಮೀಕ್ ಆಕ್ಸೈಡ್, ಫೆರಸ್ ಆಕ್ಸೈಡ್
• ನೀಲಿ ಬಣ್ಣ
ರಾಸಾಯನಿಕಗಳು : ಕೋಬಾಲ್ಟ್ ಆಕ್ಸೈಡ್, ಕ್ಯುಪ್ರಿಕ್ ಆಕ್ಸೈಡ್
• ಕೆಂಪು ಬಣ್ಣ
ರಾಸಾಯನಿಕಗಳು : ಕ್ಯುಪ್ರಸ್ ಆಕ್ಸೈಡ್, ಚಿನ್ನದ ಸಾಲ್
• ಬಿಳಿ ಬಣ್ಣ
ರಾಸಾಯನಿಕಗಳು : ಟಿನ್(ತವರ) ಆಕ್ಸೈಡ್
• ಕಪ್ಪು ಬಣ್ಣು
ರಾಸಾಯನಿಕಗಳು: ಮ್ಯಾಂಗನೀಸ್ ಡೈ ಆಕ್ಸೈಡ್, ಫೆರಿಕ್ ಆಕ್ಸೈಡ್

11. ಗಾಜಿನ ವಿಧಗಳು ಯಾವುವು? ಅವುಗಳ ಗುಣಗಳು ಹಾಗೂ ಉಪಯೋಗ ತಿಳಿಸಿ.
• ಸೋಡಾಗಾಜು
ಗುಣಗಳು : ಕಡಿಮೆ ತಾಪದಲ್ಲಿಯೂ ಮೆದುವಾಗಿರುತ್ತದೆ.

ಉಪಯೋಗ : ಕಿಟಕಿ ಗಾಜುಗಳು, ಸೀಸೆಗಳು, ಪಾತ್ರೆಗಳು

ಬೋರೋ ಸಿಲಿಕೇಟ್ ಗಾಜು(ಪೈರೆಕ್ಸ್ ಗಾಜು)
ಗುಣಗಳು : ತಾಪದ ಏರಿಳಿತಗಳನ್ನು ತಡೆಯುತ್ತವೆ.
ಉಪಯೋಗ : ಪ್ರಯೋಗಶಾಲಾ ಉಪಕರಣಗಳು

• ಸೀಸದ ಗಾಜು( ಪ್ಲಿಂಟ್ ಗಾಜು)
ಗುಣಗಳು : ಅತ್ಯುಚ್ಚ ಪಾರದರ್ಶಕ ಹಾಗೂ ಹೆಚ್ಚಿನ ವಕ್ರೀಭವನದ ಸೂಚ್ಯಂಕ ಮತ್ತು ವಿಕಿರಣಗಳನ್ನು ಹೀರುತ್ತವೆ.
ಉಪಯೋಗ : ಮಸೂರಗಳು,ಅಶ್ರಗಗಳು, ಬೈಜಿಕ ಸ್ಥಾವರಗಳಲ್ಲಿನ ಕಿಟಕಿ ಗಾಜುಗಳು, ಕನ್ನಡಕ ಗಾಜುಗಳು

• ಬಣ್ಣದ ಗಾಜು
ಗುಣಗಳು : ಸೇರಿಸಿದ ವಿವಿಧ ಆಕ್ಸೈಡ್‍ಗಳಿಗನುಗುಣವಾಗಿ ವಿವಿಧ ಬಣ್ಣಗಳನ್ನು ತೋರುತ್ತವೆ.
ಉಪಯೋಗ : ಅಲಂಕಾರಿಕ ವಸ್ತುಗಳು, ಕಿಟಕಿ ಗಾಜುಗಳು

• ಸುರಕ್ಷಾ ಗಾಜು
ಗುಣಗಳು : ಹೆಚ್ಚಿನ ಒತ್ತಡವನ್ನು ತಡೆಯುತ್ತವೆ.
ಉಪಯೋಗ : ಮೋಟಾರು ವಾಹನಗಳ ಮುಂಭಾಗದ ಗಾಜು, ಮೋಟಾರು ವಾಹನಗಳ ಕಿಟಕಿಗಳ ತೆರೆಗಳು

ಗುಂಡು ನಿರೋಧಕ ಗಾಜು
ಗುಣಗಳು : ಇದರ ಮೂಲಕ ಗುಂಡು ತೂರುವುದಿಲ್ಲ. ಒಡೆದು ಚೂರುಗಳಾಗುವುದಿಲ್ಲ.
ಉಪಯೋಗ : ಗುಂಡು ನಿರೋಧಕ ಕವಚ, ವಾಹನಗಳಿಗೆ ಗುಂಡು ನಿರೋಧಕವಾಗಿ

• ದೃಗ್ನಾರು
ಗುಣಗಳು: ಹಗುರ, ಬಲಯುತ ಮತ್ತು ಅಗ್ನಿನಿರೋಧಕವಾಗಿದೆ.
ಉಪಯೋಗ : ಅಗ್ನಿ ನಿರೋಧಕ ತೆರೆಗಳು, ಮೋಟಾರು ವಾಹನಗಳ ಬಿಡಿಭಾಗಗಳು.

12. ಸಂಶ್ಲೇಷಿತ ಪ್ಲಾಸ್ಟಿಕನ್ನು ಎರಡು ತೆಳುವಾದ ಗಾಜಿನ ಹಾಳೆಗಳ ನಡುವೆ ಸೇರಿಸಿದಾಗ ದೊರೆಯುವ ಗಾಜು ಯಾವುದು?
• ಸುರಕ್ಷಾ ಗಾಜು

13. ಬೈಜಿಕ ಸ್ಥಾವರಗಳಲ್ಲಿ ಸೀಸದ ಗಾಜನ್ನು ಬಳಸಲು ಕಾರಣವೇನು?
• ಸೀಸದ ಗಾಜು ವಿಕಿರಣಗಳನ್ನು ಹೀರಿಕೊಳ್ಳುವುದರಿಂದ ಜೈವಿಕ ಸ್ಥಾವರಗಳಲ್ಲಿ ಬಳಸಲಾಗುತ್ತದೆ.

14. ಪ್ರಯೋಗಶಾಲಾ ಉಪಕರಣಗಳ ತಯಾರಿಕೆಯಲ್ಲಿ ಬೋರೋಸಿಲಿಕೇಟ್ ಗಾಜನ್ನು ಬಳಸಲು ಕಾರಣವೇನು?
• ಕಾರಣವೆನೆಂದರೆ ಅವು ತಾಪದ ಏರಿಳಿತಗಳನ್ನು ತಡೆದುಕೊಂಡು ಒಡೆಯುವುದಿಲ್ಲ.

15. ಗಾಜಿನ ಒಂದು ವಿಶಿಷ್ಟ ಗುಣವೇನು?
• ದ್ರವರೂಪದಲ್ಲದ್ದಾಗ ಗಾಜಿಗೆ ಯಾವ ಆಕೃತಿಯನ್ನು ಕೊಡಲಾಗುವುದೋ ಅದೇ ಆಕೃತಿಯನ್ನು ಅದು ಘನವಸ್ತುವಾದಾಗಲೂ ಇಟ್ಟುಕೊಳ್ಳುವುದು ಗಾಜಿನ ಒಂದು ವಿಶಿಷ್ಟ ಗುಣ.

16. ಗಾಜಿನ ಮೇಲೆ ಕೆತ್ತನೆ ಮಾಡಲು ಬಳಸುವ ಆಮ್ಲ ಯಾವುದು?
• ಸಲ್ಫುರಿಕ್ ಆಮ್ಲ

17. ದೃವೀಕರಣ ಗಾಜನ್ನು ಬಿಸಿಲುಗಾಜನ್ನಾಗಿ ಉಪಯೋಗಿಸುತ್ತಾರೆ ಏಕೆಂದರೆ?
• ಏಕೆಂದರೆ ಅದು ದೃವೀಕರಣದ ಮೂಲಕ ಬೆಳಕಿನ ತೀಕ್ಷ್ಣತೆಯನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.

18. ಸಿಮೆಂಟ್‍ನ ರಾಸಾಯನಿಕ ಹೆಸರೇನು?
• ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಅಲ್ಯೂಮಿನೇಟ್

19. ಸಿಮೆಂಟನ್ ಸಂಶೋಧಕರು ಯಾರು?
• ಆಸ್ಟಡಿನ್, 1824 ರಲ್ಲಿ

20. ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು?
• ಜೇಡಿಮಣ್ಣು – ಅಲ್ಯೂಮಿನಿಯಂ ಸಿಲಿಕೇಟ್
• ಸುಣ್ಣದಕಲ್ಲು- ಕ್ಯಾಲ್ಸಿಯಂ ಕಾರ್ಬೋನೇಟ್
• ಜಿಪ್ಸಂ -ಕ್ಯಾಲ್ಸಿಯಂ ಸಲ್ಫೇಟ್

21. ಸಿಮೆಂಟ್ ತಯಾರಿಕೆಗೆ ಬಳಸುವ ಕುಲುಮೆ ಯಾವುದು?
• ಉರುಳು ಕುಲುಮೆ

22. ಸಿಮೆಂಟ್ ತಯಾರಿಕಾ ವಿಧಾನ ತಿಳಿಸಿ.
ಜೇಡಿಮಣ್ಣು ಮತ್ತು ಸುಣ್ಣದಕಲ್ಲನ್ನು ನಯವಾಗಿ ಅರೆದು ನೀರಿನೊಂದಿಗೆ ಸೇರಿಸಲಾಗುತ್ತದೆ. ಇವುಗಳ ಅನುರೂಪ ಮಿಶ್ರಣಕ್ಕೆ “ಸ್ಲರ್ರಿ” ಎಂದು ಹೆಸರು. ಇದನ್ನು ಉರುಳು ಕುಲುಮೆಗೆ ಕಳಿಸಲಾಗುತ್ತದೆ. ಕುಲುಮೆಯ ಕೆಳ ತುದಿಯಿಂದ ಸುಮಾರು 1600 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಗಾಳಿಯನ್ನು ಊದಲಾಗುತ್ತದೆ. ಈ ಹೆಚ್ಚಿನ ತಾಪದಿಂದಾಗಿ ಸ್ಲರ್ರಿಯಲ್ಲಿರುವ ನೀರು ಆವಿಯಾಗಿ ಸಿಮೆಂಟ್‍ನ ಉಂಡೆಗಳಾಗುತ್ತವೆ. ಈ ಉಂಡೆಗಳಿಗೆ “ಕ್ಲಿಂಕರ್ಸ್” ಎನ್ನುವರು. ಇವುಗಳನ್ನು ಪುಡಿಮಾಡಿ 3% ಜಿಪ್ಸಂ ಲವಣವನ್ನು ಸೇರಿಸಲಾಗುತ್ತದೆ. ಇದು ಸಿಮೆಂಟ್ ಬೇಗ ಗಡುಸಾಗುವುದನ್ನು ತಡೆಯುತ್ತದೆ.

23. ಸಿಮೆಂಟ್ ನೀರಿನೊಂದಿಗೆ ಗಡುಸಾಗುವ ದರವನ್ನು ನಿಯಂತ್ರಿಸಲು ಬಳಸುವ ವಸ್ತು ಯಾವುದು?
• ಜಿಪ್ಸಂ

24. ಸಿಮೆಂಟ್‍ನ ‘ಗಟ್ಟೀಕರಣ” ಎಂದರೇನು?
• ಸಿಮೆಂಟ್ ನೀರಿನೊಂದಿಗೆ ಸೇರಿ ಗಟ್ಟಿಯಾಗುವುದನ್ನು ‘ಗಟ್ಟೀಕರಣ’ ಎನ್ನುತ್ತೇವೆ. ನೀರಿನೊಂದಿಗೆ ಮರಳು ಮತ್ತು ಸಿಮೆಂಟ್ ಮಿಶ್ರಣವು ಹಲವಾರು ಸಂಕಿರ್ಣ ಬದಲಾವಣೆಗಳಿಗೆ ಒಳಪಡುತ್ತವೆ.

25. ನೀರಿನೊಂದಿಗೆ ಸತ್ಕರಿಸಿ ಸಿಮೆಂಟನ್ನು ಗಟ್ಟಿ ಮಾಡುವ ಪ್ರಕ್ರಿಯೆಗೆ ಎನೆಂದು ಹೆಸರು?
• ಜಲಸತ್ಕಾರ

26. ಸಿಮೆಂಟ್‍ನ ‘ಜಲಸತ್ಕಾರ’ ಕ್ರಿಯೆ ಹೇಗಾಗುತ್ತದೆ?
• ಸಿಮೆಂಟನ್ನು ಮರಳು ಮತ್ತು ನೀರಿನೊಂದಿಗೆ ಸೇರಿಸಿದಾಗ, ಸಿಮೆಂಟ್‍ನಲ್ಲಿರುವ ಕ್ಯಾಲ್ಸಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಅಲ್ಯೂಮಿನೇಟ್‍ಗಳ ನಡುವೆ ರಾಸಾಯನಿಕ ಕ್ರಿಯೆ ನಡೆದು ಶಾಖ ಬಿಡುಗಡೆಯಾಗುತ್ತದೆ. ಈ ಶಾಖ ಹೊರಬರಲು ಪ್ರಯತ್ನಿಸಿದಾಗ ಸಿಮೆಂಟ್ ಬಿರುಕು ಬಿಡುತ್ತದೆ. ಸಿಮೆಂಟ್‍ಗೆ ನೀರು ಹಾಕಿದಾಗ ಆ ಶಾಖವನ್ನು ನೀರು ಹೀರಿಕೊಳ್ಳುತ್ತದೆ. ಆದ್ದರಿಂದ ಸಿಮೆಂಟ್‍ಗೆ ಸುಮಾರು 2 ವಾರಗಳ ಕಾಲ ಜಲಸತ್ಕಾರ ಮಾಡಬೇಕು. ಇದರಿಂದ ಸಿಮೆಂಟ್ ಬಿರುಕು ಬಿಡುವುದಿಲ್ಲ.

 

error: Content Copyright protected !!