GKLatest Updates

ಭಾರತೀಯ ರೈಲ್ವೆ ಕುರಿತ ಸಂಪೂರ್ಣ ಮಾಹಿತಿ

Share With Friends

ಭಾರತೀಯ ರೈಲ್ವೆ : 
ಭಾರತದಲ್ಲಿ ಮೊದಲು ರೈಲುಗಳ ಒಡಾಟ ಪ್ರಾರಂಭವಾದದ್ದು ಏಪ್ರಿಲ್ 16, 1853 ರಂದು ಮುಂಬಯಿ ಮತ್ತು ಥಾಣೇ ನಡುವೆ. ಅಂದಿನಿಂಧ ಇಂದಿನವರೆಗೆ ಭಾರತದಲಲಿ ರೈಲ್ವೇ ಸಂಪರ್ಕ ಜಳ ವ್ಯಾಪಕವಾಗಿ ಹರಡಿದ್ದು, ಇದು ಏಷ್ಯಾದಲ್ಲೇ ಅತೀ ದೊಡ್ಡ ಮತ್ತು ಪ್ರಪಂಚದಲ್ಲಿ ಹೊಂದಿರುವ ಉದ್ಯಮವಾಗಿದ್ದು, ನಮ್ಮ ದೇಶದ ಏಕೈಕ ಅತಿ ದೊಡ್ಡ ಸರ್ಕಾರಿ ಸಂಸ್ಥೆಯಾಗಿದೆ. ಇದು ರಷ್ಯಾದ ನಂತರ ಪ್ರಪಂಚದಲ್ಲೇ ಅತೀ ಹೆಚ್ಚು ವಿದ್ಯೂದೀಕರಣಗೊಂಡ ರೈಲು ಮಾರ್ಗಗಳನ್ನು ಹೊಂಧಿದೆ. ಇಂದು ದೇಶದಲ್ಲಿ ಒಟ್ಟಾರೆ, 119,630ಕಿ.ಮೀ (2015-16) ಉದ್ದದ ರೈಲು ಮಾರ್ಗವಿದೆ.

ವಿವಿಧ ರೈಲು ಮಾರ್ಗಗಳು :
ಭಾರತದಲ್ಲಿ ಮುಖ್ಯವಾಗಿ 3 ವಿಧದ ಮಾರ್ಗಗಳಿವೆ. ಅವುಗಳೆಂದರೆ,
1.ಬ್ರಾಡ್‍ಗೇಜ್: ರೈಲು ಹಳಿಗಳ ನಡುವಿನ ಅಂತರ: 1.67 ಮೀ
2.ಮೀಟರ್‍ಗೇಜ್: ರೈಲು ಗಳೀಗಳ ನಡುವಿನ ಅಂತರ: 1.00 ಮೀ
3.ನ್ಯಾರೋಗೇಜ್: ರೈಲು ಹಳಿಗಳ ನಡುವಿನ ಅಂತರ; 0,.762 ಮೀ

ರೈಲ್ವೆ ವಲಯಗಳು
ಭಾರತದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 16 ರೈಲು ವಲಯಗಳಿವೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ 9 ರೈಲ್ವೆ ವಲಯಗಳು ಈ ಕೆಳಗಿನಂತಿವೆ
ಸಂಖ್ಯೆ -ವಲಯ -ಮುಖ್ಯಕಛೇರಿ -ಸ್ಥಾಪನೆ
1.ದಕ್ಷಿಣ ವಲಯ ಚೆನ್ನೈ 1951
2.ಕೇಂದ್ರವಲಯ ಮುಂಬಯಿ ವಿ.ಟಿ 1951
3.ಪಶ್ಚಿಮವಲಯ ಮುಂಬಯಿ 1951
4.ಉತ್ತರವಲಯ ನವದೆಹಲಿ 1952
5.ಈಶಾನ್ಯ ವಲಯ ಗೋರಖ್‍ಪುರ 1952
6.ಪೂರ್ವವಲಯ ಕೊಲ್ಕತ್ತ 1955
7.ಆಗ್ನೇಯ ವಲಯ ಕೊಲ್ಕತ್ತ 1958
8.ಈಶಾನ್ಯ ಗಡಿವಲಯ ಮಾಲಿಗೋನ್-ಗುವಾಹಟಿ 1958
9.ದಕ್ಷಿಣ ಮಾಧ್ಯೆವಲಯ ಸಿಕಂದರಾಬಾದ್ 1966

2002ರ ನಂತರ ಇನ್ನೂ 7 ಹೆಚ್ಚುವರಿ ರೈಲ್ವೇ ವಲಯಗಳನ್ನು ಸ್ಥಾಪಿಸಲಾಗಿದೆ. ಈಗ ಭಾರತೀಯ ರೈಲ್ವೆಯು ಒಟ್ಟು 16 ವಲಯಗಳನ್ನು ಮತ್ತು 68 ವಿಭಾಗಗಳನ್ನು ಹೊಂದಿದಂತಾಗಿದೆ. ಹೆಚ್ಚುವರಿಯಾಗಿ ಸ್ಥಾಪಿಸಲ್ಪಟ್ಟ ರೈಲ್ವೆ ವಲಯಗಳೆಂದರೆ;
ಸಂಖ್ಯೆ -ವಲಯದ -ಹೆಸರು -ಮುಖ್ಯಕಛೇರಿ- ಸ್ಥಾಪನೆ

ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆಯಲ್ಲಿ ಏನೇನಿದೆ..?

1.ಪೂರ್ವ ಮಧ್ಯ ರೈಲ್ವೇ ಹಾಜಿಪುರ್ 2002
2.ನೈರುತ್ಯ ರೈಲ್ವೇ ಹುಬ್ಬಳ್ಳಿ 2003
3.ಉತ್ತರ ಮಧ್ಯ ರೈಲ್ವೇ ಅಲಹಾಬಾದ್ 2003
4.ವಾಯುವ್ಯ ರೈಲ್ವೇ ಜೈಪುರ 2002
5.ಪೂರ್ವ ಕರಾವಳಿ ರೈಲ್ವೆ ಭುವನೇಶ್ವರ್ 2003
6.ಪಶ್ಚಿಮ ಮಧ್ಯ ರೈಲ್ವೆ ಜಬಲ್‍ಪುರ 2003
7.ಆಗ್ನೇಯ ಮಧ್ಯ ರೈಲ್ವೆ ಬಿಲಾಸ್‍ಪುರ 2003

ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳು
1.ಚಿತ್ತರಂಜನ್ ಲೋಕೋಮೋಟಿವ್ ವಕ್ರ್ಸ್ – ಚಿತ್ತರಂಜನ್ 1950 – ರೈಲ್ವೆ ಇಂಜಿನ್‍ಗಳು
2.ಡೀಸೆಲ್ ಲೋಕೋಮೋಟಿವ್ ವಕ್ರ್ಸ್ – ವಾರಣಾಸಿ 1964 – ರೈಲ್ವೆ ಇಂಜಿನ್‍ಗಳು
3.ಇಂಟೆಗ್ರಲ್ ಕೋಚ್ ಪ್ಯಾಕ್ಟರಿ ಪೆರಂಬೂರು – 1955 – ರೈಲ್ವೆ ಬೋಗಿಗಳು
4.ರೈಲು ಗಾಲಿ ಕಾರ್ಖಾನೆ ಯಲಹಂಕ – 1983 – ಚಕ್ರಗಳ ಮತ್ತು ಆಕ್ಸ್‍ಲ್‍ಗಳು
5.ಡೀಸೆಲ್ ಕಾಂಪೋನೆಟ್ಸ್ ವಕ್ರ್ಸ್ – ಪಾಟಿಯಾಲ ಡೀಸೆಲ್ ಇಂಜಿನ್‍ನ ಬಿಡಿ ಭಾಗಳು
6.ರೈಲು ಕೋಚ್ ಪ್ಯಾಕ್ಟರಿ ಕಪುರ್‍ತಲ – 1988 – ಬೋಗಿಗಳು,

ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ

ಮತ್ತಷ್ಟು ಮಾಹಿತಿ :

1.ಭಾರತದಲ್ಲಿ ಮೊದಲು ಅಂಚೆ ಸೇವೆ ಪ್ರಾರಂಭವಾಗಿದ್ದು -1837
2.ಮೊದಲು ಅಂಚೆ ಚೀಟಿ ಬಿಡುಗಡೆಯಾದದ್ದು -1852 ಕರಾಚಿಯಲ್ಲಿ
3.ಮೊದಲ ಅಖಿಲ-ಭಾರತ ಅಂಚೆ ಚೀಟಿ ಬಿಡುಗಡೆಯಾದದ್ದು -1854
4.ಮನಿ ಆರ್ಡರ್ ಸೇವೆ ಪ್ರಾರಂಭವಾದದ್ದು -1880
5.ಏರ್‍ಮೇಲ್ ಸೇವೆ ಪ್ರಾರಂಭವಾದದ್ದು (ಅಲಹಬಾದ್‍ನಿಂದ ನೈನಿತಾಲ್) -1911
6.ಪಿನ್‍ಕೊಡ್ ಪ್ರಾರಂಭವಾದದ್ದು -1972       8. ಅಂಚೆ ವಲಯಗಳ ಒಟ್ಟು ಸಂಖ್ಯೆ -8
7.ಭಾರತಕ್ಕೆ ಸ್ವಾತಂತ್ರ್ಯ ಬಂದ ವೇಳೆಯಲ್ಲಿ ದೇಶದಾದ್ಯಂತ 23,344 ಅಂಚೆ ಕಛೇರಿಗಳಿದ್ದವು. ಇಂದು ದೇಶದಲ್ಲಿ 1,55,837
8.ಅಂಚೆ ಕಚೇರಿಗಳೀದೆ. ಇವುಗಳಲ್ಲಿ 1,39,280 ಕಚೇರಿಗಳು ಗ್ರಾಮೀಣ ಭಾಗದಲ್ಲೂ 16,557 ಕಚೇರಿಗಳು ನಗರ ಭಾಗದಲ್ಲೂ ಕಾರ್ಯನಿರ್ವಹಿಸುತ್ತಿವೆ.

ದೂರಸಂಪರ್ಕ ಸೇವೆ : 
ಮೊದಲ ದೂರವಾಣಿ ಲೈನ್(ಕಲ್ಕತ್ತ ಮತ್ತು ಡೈಮಂಡ್ ಬಂದರು ನಡುವೆ) -1851
ಮೊದಲ ದೂರವಾಣಿ ಸೇವೆ ಪ್ರಾರಂಭವಾದದ್ದು -1881(ಕಲ್ಕತ್ತ)
ಮೊದಲ ದೂರವಾಣಿ ವಿನಿಮಯ ಕೇಂದ್ರ ಪ್ರಾರಂಭವಾದದ್ದು -1881(50 ಲೈನ್ ಮಾತ್ರ)
ಮೊದಲ ಆಟೋಮ್ಯಾಟಿಕ್ ದೂರವಾಣಿ ವಿನಿಮಯ ಕೇಂದ್ರ ಪ್ರಾರಂಭವಾದದ್ದು -1913(ಸಿಮ್ಲದಲ್ಲಿ)

Leave a Reply

Your email address will not be published. Required fields are marked *

error: Content Copyright protected !!