ಪ್ರಚಲಿತ ಘಟನೆಗಳ ಕ್ವಿಜ್ – 15 ಮತ್ತು 19-12-2023
1. ರಾಮ ಮಂದಿರದ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್(Ram Janmabhoomi Teerth Trust)ನ ಖಜಾಂಚಿ ಯಾರು.. ?
1) ಮಹಂತ್ ನೃತ್ಯಗೋಪಾಲ್ ದಾಸ್
2) ಗೋವಿಂದ ದೇವಗಿರಿ
3) ಚಂಪತ್ ರೈ
4) ನೃಪೇಂದ್ರ ಮಿಶ್ರಾ
2. ಇತ್ತೀಚೆಗೆ ಸುದ್ದಿಯಲ್ಲಿದ್ದ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆ (RATS), ಯಾವ ಅಂತಾರಾಷ್ಟ್ರೀಯ ಸಂಸ್ಥೆಗೆ ಸಂಬಂಧಿಸಿದೆ..?
1) ವಿಶ್ವಸಂಸ್ಥೆ (UN)
2) ಶಾಂಘೈ ಸಹಕಾರ ಸಂಸ್ಥೆ (SCO)
3) ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)
4) ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ASEAN)
3. ಇತ್ತೀಚೆಗೆ ಶಿಕ್ಷಣಕ್ಕಾಗಿ ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ನೈಹೋಲ್ಮ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ..?
1) ಸವಿತಾ ಲಡೇಜ್
2) ಸಂಜೀವ ಪ್ರಸಾದ್
3) ರಾಜೇಶ್ವರಿ ಶ್ರೀಧರ್
4) ಪುಷ್ಪಕ್ ಭಟ್ಟಾಚಾರ್ಯ
4. ಪ್ರತಿ ವರ್ಷ ಡಿಸೆಂಬರ್ 16ರಂದು ಆಚರಿಸಲಾಗುವ ವಿಜಯ್ ದಿವಸ್(Vijay Diwas), 1971ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ವಿಜಯವನ್ನು ಸ್ಮರಿಸುತ್ತದೆ. ಈ ದಿನ ಪಾಕಿಸ್ತಾನದ ಕಡೆಯಿಂದ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿದವರು ಯಾರು..?
1) ಜನರಲ್ ಟಿಕ್ಕಾ ಖಾನ್
2) ಜನರಲ್ ಅಯೂಬ್ ಖಾನ್
3) ಜನರಲ್ ಯಾಹ್ಯಾ ಖಾನ್
4) ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ
5. ಇತ್ತೀಚಿಗೆ ಸುದ್ದಿಯಲ್ಲಿದ್ದ EKAMRA ಯೋಜನೆ ಯಾವ ರಾಜ್ಯಕ್ಕೆ ಸೇರಿದ್ದು.. ?
1) ಪಶ್ಚಿಮ ಬಂಗಾಳ
2) ಮಧ್ಯಪ್ರದೇಶ
3) ಒಡಿಶಾ
4) ಕರ್ನಾಟಕ
6. ಅರ್ಜೆಂಟೀನಾದ ಹೊಸ ಅಧ್ಯಕ್ಷರು ಯಾರು, ಇತ್ತೀಚೆಗೆ ಅರ್ಜೆಂಟೀನಾದ ಪೆಸೊ(Argentine peso)ದ 50% ಅಪಮೌಲ್ಯೀಕರಣದಂತಹ ಕಠಿಣ ಆರ್ಥಿಕ ಕ್ರಮಗಳನ್ನು ಘೋಷಿಸಿದರು.. ?
1) ಜೇವಿಯರ್ ಮಿಲೀ
2) ಸೆರ್ಗಿಯೋ ಮಸ್ಸಾ
3) ಪೆಟ್ರೀಷಿಯಾ ಬುಲ್ರಿಚ್
4) ಜುವಾನ್ ಶಿಯಾರೆಟ್ಟಿ