➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-19
1) ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ಯಾರು..?
2) ಒಂದೇ ಅಣುಸೂತ್ರವಿರುವ ಆದರೆ ಬೇರೆ ಬೇರೆ ರಚನಾ ಸೂತ್ರವಿರುವ ಸಂಯುಕ್ತಗಳಿಗೆ ಎನೆನ್ನುವರು..?
3) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ?
4) ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ನೆಪವೊಡ್ಡಿ ಬ್ರಿಟಿಷರು ಕಿತ್ತು ಕೊಂಡ ಮೊದಲ; ರಾಜ್ಯ ಯಾವುದು..?
5) ಋಗ್ವೇದವನ್ನು ಇಂಗ್ಲೀಷಗೆ ಅನುವಾದಿಸಿದವರು ಯಾರು..?
6) ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಶಿಯನ್ ಯಾರು..?
7) ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿ ಯಾರು?
8) ಇಂಗ್ಲೆಂಡ್‍ನ ಉದ್ಯಾನವನ ಎಂದು ಯಾವ ನಗರವನ್ನು ಕರೆಯುತ್ತಾರೆ..?
9) ಎರಡು ಬಾರಿ ಎವರೆಸ್ಟ್ ಶಿಖರ ಏರಿದ ಮೊದಲ ಮಹಿಳೆ ಯಾರು..?
10) ಮೆಟಲರ್ಜಿ ಎಂದರೇನು..?
# ಉತ್ತರಗಳು :
1. ಟಿಪ್ಪು ಸುಲ್ತಾನ
2. ಸಮಾಂಗಿಗಳು
3. ಸರ್ ಜಾನ್ ಮೇಡೆ
4. ಸತಾರ
5. ಮ್ಯಾಕ್ಸ್ ಮುಲ್ಲರ್
6. ರವೀಂಧ್ರನಾಥ ಠಾಗೋರ್(1913)
7. ಲಿಯಾಖತ್ ಅಲಿ ಖಾನ್(1947)
8. ಕೆಂಟ್
9. ಸಂತೋಷ್ ಯಾದವ್,ಭಾರತ (1993)
10. ಲೋಹಗಳ ಕುರಿತ ಅಧ್ಯಯನ( ಲೋಹಶಾಸ್ತ್ರ)