GKScienceSpardha Times

ನ್ಯೂನತಾ ಕಾಯಿಲೆಗಳು, ಕಾರಣಗಳು ಮತ್ತು ಲಕ್ಷಣಗಳು

Share With Friends

ಪೋಷಕಾಂಶಗಳು ದೀರ್ಘಕಾಲದವರೆಗೆ ನಿಯಮಿತವಾಗಿ ಆಹಾರದಲ್ಲಿ ದೊರೆಯದೇ ಇದ್ದಲ್ಲಿ ನ್ಯೂನತಾ ಕಾಯಿಲೆಗಳು ಉಂಟಾಗುತ್ತದೆ. ಆಹಾರದಲ್ಲಿ ಪೋಷಕಾಂಶಗಳ ಕೊರತೆಯನ್ನು “ ನ್ಯೂನ ಪೋಷಣೆ” ಎನ್ನುವರು. ನ್ಯೂನ ಪೋಷಣೆ ಎಂಬುದು ಆಹಾರ ಕ್ರಮದಲ್ಲಿ ಪೋಷಕಾಂಶಗಳು ನಿರಂತರವಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುವುದರಿಂದ ಅಥವಾ ಕಡಿಮೆಯಾಗುವುದರಿಂದಲೂ ಉಂಟಾಗಬಹುದು.

1. ನ್ಯೂನತಾ ಕಾಯಿಲೆ   :   ಫ್ರೆನೋಡರ್ಮ
* ನ್ಯೂನ ಪೋಷಕಾಂಶ: ಕೊಬ್ಬು
* ಲಕ್ಷಣಗಳು: >ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕಗಳು ಏಳುತ್ತವೆ.
>ಚರ್ಮ ಒಣಗಿದಂತಾಗಿ ಮಂದವಾಗುತ್ತದೆ.

2. ನ್ಯೂನತಾ ಕಾಯಿಲೆ:    ಕ್ವಾಷಿಯೋರಕರ್
* ನ್ಯೂನ ಪೋಷಕಾಂಶ: ಪ್ರೋಟೀನ್‍ಗಳು
* ಲಕ್ಷಣಗಳು:
>ಕುಂಠಿತ ಬೆಳವಣಿಗೆ
>ಊದಿಕೊಂಡ ಉದರ
> ಕೃಶಗೊಂಡ ಕೈಕಾಲುಗಳು
>ಮಾಂಸ ಖಂಡಗಳ ಜೋತು ಬೀಳುವಿಕೆ
>ಬುದ್ಧಿ ಮಾಂದ್ಯತೆ
> ಚರ್ಮ ಮತ್ತು ಕೂದಲು ವಿವರ್ಣವಾಗುವುದು

3. ನ್ಯೂನ ಕಾಯಿಲೆ :     ಪೋಷಣಾ ಮರಾಸ್ಮಸ್
*ನ್ಯೂನ ಪೋಷಕಾಂಶ:    ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‍ಗಳು
*ಲಕ್ಷಣಗಳು : > ಕುಂಠಿತ ಬೆಳವಣಿಗೆ
>ಎಡಿಮಾ
>ಚರ್ಮ ಮತ್ತು ಕೂದಲು ವಿವರ್ಣವಾಗುವುದು.
> ಮಾಂಸಖಂಡಗಳು ಜೋತು ಬೀಳುವುದರಿಂದ ಚರ್ಮದ ಮಡಿಕೆ ಉಂಟಾಗುವುದು.

4. ನ್ಯೂನ ಕಾಯಿಲೆ:    ಇರುಳುಗಣ್ಣು ಅಥವಾ ನಿಶಾಂಧತೆ
*ನ್ಯೂನ ಪೋಷಣೆ:     ವಿಟಮಿನ್ ಎ
* ಲಕ್ಷಣಗಳು: > ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು.
> ಕಣ್ಣುಗಳ ಶುಷ್ಕತೆ

5. ನ್ಯೂನತಾ ಕಾಯಿಲೆ :    ಬೆರಿಬೆರಿ
* ನ್ಯೂನ ಪೋಷಣೆ :    ವಿಟಮಿನ್ ಬಿ
* ಲಕ್ಷಣಗಳು : > ಸ್ನಾಯುಗಳ ಬಲಹೀನತೆ,ನೋವು, ಜೋಮು ಹಿಡಿಯುವಿಕೆ
>ಮಕ್ಕಳಲ್ಲಿ ಕುಂಠಿತ ಬೆಳವಣಿಗೆ
> ಪಾಶ್ರ್ವವಾಯು ಉಂಟಾಗಬಹುದು.

6. ನ್ಯೂನ ಕಾಯಿಲೆ:   ಸ್ಕರ್ವಿ
* ನ್ಯೂನ ಪೋಷನೆ :   ವಿಟಮಿನ್ ಸಿ
* ಲಕ್ಷಣಗಳು : >ಒಸಡುಗಳು ಮತ್ತು ಆಂತರಿಕ ಅಂಗಗಳಲ್ಲಿ ರಕ್ತ ಸ್ರಾವ.
> ಸಾಮಾನ್ಯವಾದ ನಿಶ್ಯಕ್ತಿ.
> ರಕ್ತಹೀನತೆ
> ಕಾಲುಗಳಲ್ಲಿ ಊತ

7. ನ್ಯೂನತಾ ಕಾಯಿಲೆ :    ರಿಕೆಟ್ಸ್
*ನ್ಯೂನ ಪೋಷಣೆ :   ವಿಟಮಿನ್ ಡಿ
*ಲಕ್ಷಣಗಳು : > ಕುಂಠಿತ ಬೆಳವಣಿಗೆ
>ಬಿಲ್ಲಿನ ಹಾಗೆ ಬಾಗಿರುವ ಕಾಲುಗಳು
>ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು ಹಾಗೂ ತಲೆಬುರಡೆ

8. ನ್ಯೂನ ಕಾಯಿಲೆ :     ಆಸ್ಟಿಯೋಮಮೋಸಿಯಾ
* ನ್ಯೂನ ಪೊಷಣೆ : ವಿಟಮಿನ್ ಡಿ
* ಲಕ್ಷಣಗಳು : ಮೂಳೆಗಳ ಬಿಧುರತೆ
> ಹಿಗ್ಗಿದ ಕೀಲುಗಳು ಮತ್ತು ದವಡೆಗಳು
> ಮೂಳೆಗಳ ವಿಕೃತ ಬೆಳವಣಿಗೆ

9. ನ್ಯೂನ ಕಾಯಿಲೆ :    ಸರಳ ಗಳಗಂಡ
*ನ್ಯೂನ ಪೋಷಣೆ :   ಅಯೋಡಿನ್
*ಲಕ್ಷಣಗಳು : > ಥೈರಾಯಿಡ್ ಗ್ರಂಥಿಯ ಊತದಿಂದ ಗಂಟಲು ವಿಸ್ತøತಗೊಳ್ಳುತ್ತದೆ.
>ಚಯಾಪಚಯ ಕ್ರಿಯೆಗಲ ಮೇಲೆ ಅಡ್ಡ ಪರಿಣಾಮ

10. ನ್ಯೂನ ಕಾಯಿಲೆ :    ರಕ್ತಹೀನತೆ
* ನ್ಯೂನ ಪೋಷಣೆ :      ವಿಟಮಿನ್ ಬಿ12
* ಲಕ್ಷಣಗಳು : > ರಕ್ತದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕುಂಠಿತಗೊಳ್ಳುತ್ತದೆ.
> ಹೀಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

 

 

 

 

error: Content Copyright protected !!