ಕೇಂದ್ರದ ಮಾಜಿ ಸಚಿವ ದಿಲೀಪ್‍ರಾಯ್‍ಗೆ 3 ವರ್ಷ ಜೈಲು
ಕಲ್ಲಿದ್ದಲು ಹಗರಣದಲ್ಲಿ ಅಪರಾ ಎಂದು ಘೋಷಿಸಲ್ಪಟ್ಟಿದ್ದ ಕೇಂದ್ರದ ಮಾಜಿ ಸಚಿವ ದಿಲೀಪ್‍ರಾಯ್‍ಗೆ ವಿಶೇಷ ನ್ಯಾಯಾಲಯ 3 ವರ್ಷಗಳ ಜೈಲುಶಿಕ್ಷೆ ವಿಸಿದೆ.1996ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ನಿಯಮಬಾಹಿರವಾಗಿ ಅನುಮತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿದ್ದರು. ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. 20 ವರ್ಷಗಳ ನಂತರ ಈಗ ದಿಲೀಪ್‍ರೈ ಅಪರಾ ಎಂದು ಘೋಷಿಸಿದ ಸಿಸಿಬಿ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದ್ದು 3 ವರ್ಷಗಳ ಜೈಲುಶಿಕ್ಷೆಯನ್ನು ಆದೇಶಿಸಿದೆ. ಇದಕ್ಕೆ ಸಹಕರಿಸಿದ ಮತ್ತಿಬ್ಬರಿಗೂ ಕೂಡ ಕಾರಾಗೃಹ ಶಿಕ್ಷೆ ವಿಸಲಾಗಿದೆ. ಅಟಲ್‍ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ದಿಲೀಪ್ ರೈ ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರಾಗಿದ್ದರು.
1999ರಲ್ಲಿ ನಡೆದ ಜಾರ್ಖಂಡ್ ಕಲ್ಲಿದ್ದಲು ಹಂಚಿಕೆ ಅಕ್ರಮ ಹಗರಣದಲ್ಲಿ ಕಲ್ಲಿದ್ದಲು ಸಚಿವಾಲಯದಲ್ಲಿದ್ದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್‌ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರವಾಲಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಲಾಗಿತ್ತು. ತಮ್ಮ ವಯಸ್ಸು ಹಾಗೂ ಈ ಹಿಂದೆ ಯಾವುದೇ ಶಿಕ್ಷೆಗೆ ಒಳಗಾಗದೆ ಇರುವುದನ್ನು ಪರಿಗಣಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಅಪರಾಧಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.