ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಎಂದೇ ಹೇಳಲಾಗುತ್ತಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.ಹೊಸ ಪರಮಾಣು-ಸಾಮರ್ಥ್ಯದ ಕ್ಷಿಪಣಿ ಸಂಪೂರ್ಣವಾಗಿ ಸಂಯೋಜಿತ ವ್ಯವಸ್ಥೆಗಳಿಂದ ಕೂಡಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ಅಗ್ನಿ ಸರಣಿಯ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1000 ರಿಂದ 2000 ಕಿ.ಮೀ ನಡುವಿನ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಭಾರತೀಯ ಸೇನಾ ಬತ್ತಳಿಕೆಯಲ್ಲಿರುವ ಬ್ರಹ್ಮೋಸ್ ಸೇರಿದಂತೆ ಹಲವು ಕ್ಷಿಪಣಿಗಳು ದೂರಗಾಮಿ ವಲಯದ್ದಾಗಿದ್ದು, ಪ್ರಸ್ತುತ ನೆರೆಯ ವೈರಿ ರಾಷ್ಟ್ರಗಳ ಹತ್ತಿರದ ಪ್ರದೇಶಗಳನ್ನು ಗುರಿಯಾಗಿರಿಸಿಕೊಳ್ಳಬಹುದಾದ ಹೊಸ ಅಸ್ತ್ರಗಳ ಬಗ್ಗೆ ಈಗ ಹೆಚ್ಚಿನ ಗಮನ ಹರಿಸಲಾಗಿದೆ. ಅಗ್ನಿ ಪ್ರೈಮ್ ಕ್ಷಿಪಣಿ ಚೀನಾದ ಹಲವು ಪ್ರಮುಖ ಪ್ರದೇಶಗಳನ್ನು ಟಾರ್ಗೆಟ್ ಮಾಡಬಹುದು ಎಂದು ಹೇಳಲಾಗುತ್ತಿದೆ.
# ಪಿನಾಕಾ ರಾಕೆಟ್ ಯಶಸ್ವಿ ಪರೀಕ್ಷೆ
ಜುಲೈ 25 ರಂದು, ಒಡಿಶಾ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ (ಎಂಬಿಆರ್ಎಲ್) ನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 122 ಎಂಎಂ ಕ್ಯಾಲಿಬರ್ ರಾಕೆಟ್‌ನ ವರ್ಧಿತ ಶ್ರೇಣಿಯ ಆವೃತ್ತಿಗಳನ್ನು ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷಿಸಿತು. ಜುಲೈ 24 ಮತ್ತು ಜುಲೈ 25 ರಂದು, ಒಡಿಶಾ ಕರಾವಳಿಯ ಐಟಿಆರ್ ಚಂಡಿಪುರದಲ್ಲಿ ಎಂಬಿಆರ್ಎಲ್ನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್‌ನ ವಿಸ್ತೃತ ಶ್ರೇಣಿಯ ಆವೃತ್ತಿಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷಿಸಿತು.