‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
Droupadi Murmu : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಯುದ್ಧ ವಿಮಾನ ರಾಫೆಲ್‌ನಲ್ಲಿ ಹಾರುವ ಮೂಲಕ ರಾಫೆಲ್ ಯುದ್ಧ ವಿಮಾನದಲ್ಲಿ ಹಾರಿದ ಮೊದಲ ರಾಷ್ಟ್ರಪತಿ ಎಂಬ ಇತಿಹಾಸ ನಿರ್ಮಿಸಿದರು.ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ (ಅಕ್ಟೋಬರ್ 29) ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಬುಧವಾರ ಬೆಳಿಗ್ಗೆ ಅವರು ಹರ್ಯಾಣದ ಅಂಬಾಲದಲ್ಲಿರುವ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿ ಯುದ್ಧ ವಿಮಾನವನ್ನು ಏರಿದರು.
ಏಪ್ರಿಲ್ 8, 2023 ರಂದು, ಮುರ್ಮು ಅವರು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರದ ಮುಖ್ಯಸ್ಥರಾದರು. ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಕ್ರಮವಾಗಿ ಜೂನ್ 8, 2006 ಮತ್ತು ನವೆಂಬರ್ 25, 2009 ರಂದು ಪುಣೆ ಬಳಿಯ ಲೋಹೆಗಾಂವ್ನ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಎರಡನೇ ಬಾರಿಗೆ ಯುದ್ದ ವಿಮಾನವನ್ನು ಹತ್ತಿದ ಮುರ್ಮು
ಅಂದಹಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಯುದ್ದ ವಿಮಾನ ಹತ್ತುತ್ತಿರುವುದು ಇದೇ ಮೊದಲೇನಲ್ಲ. 2023ರ ಏಪ್ರಿಲ್ 28 ರಂದು ಅಸ್ಸಾಂನ ತೇಜ್ಪುರ ವಾಯುನೆಲೆಯಿಂದ ಮೊದಲ ಬಾರಿಗೆ ಸುಖೋಯ್-30 ಎಂಕೆಐ ಯುದ್ದ ವಿಮಾನವನ್ನು ಹತ್ತಿದ್ದರು.ಈ ಮೂಲಕ ಯುದ್ದವಿಮಾನ ಹತ್ತಿದ ಮೂರನೇಯ ಭಾರತದ ರಾಷ್ಟ್ರಪತಿಯಾಗಿದ್ದಾರೆ.
ಇನ್ನು, ಕೇವಲ ಮುರ್ಮು ಮಾತ್ರವಲ್ಲದೇ ಭಾರತದ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಭಾರತದ ಮೊದಲ ರಾಷ್ಟ್ರಪತಿಯಾಗಿರುವ ಪ್ರತಿಭಾ ಪಾಟೀಲ್ ಸಹ ಈ ಮೊದಲು ಯುದ್ದ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪುಣೆ ಬಳಿಯ ವಾಯುನೆಲೆಯಿಂದ ಸುಖೋಯ್-30 ಎಂಕೆಐ ಫೈಟರ್ ಜೆಟ್ ನಲ್ಲಿ ಹಾರಾಟ ನಡೆಸಿದ್ದರು.ಅನಂತರ 2009ರಲ್ಲಿ ಪ್ರತಿಭಾ ಪಾಟೀಲ್ ಸಹ ಅದೇ ವಾಯುನೆಲೆಯಿಂದ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ದೇಶದ ಎರಡು ಯುದ್ಧ ವಿಮಾನದಲ್ಲಿ ಹಾರಿದ ಮೊದಲ ರಾಷ್ಟ್ರಪತಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಾದಲ್ಲಿರುವ ವಾಯುಪಡೆ ನಿಲ್ದಾಣದಿಂದ ರಫೇಲ್ ವಿಮಾನದಲ್ಲಿ ಹಾರಾಟ ನಡೆಸಿದರು. ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾದರು.
ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ
ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ನಡೆಸಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್ ಅನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿತ್ತು. ನಂತರ ಪಾಕಿಸ್ತಾನವು ಪೈಲಟ್ ಅನ್ನು ಶಿವಾಂಗಿ ಸಿಂಗ್ ಎಂದು ಗುರುತಿಸಿತ್ತು. ಆದಾಗ್ಯೂ, ಭಾರತವು ಒಂದೇ ಒಂಡು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಬಹಿರಂಗಪಡಿಸಿದೆ.
ಶಿವಾಂಗಿ ಸಿಂಗ್ ಯಾರು?
ಉತ್ತರ ಪ್ರದೇಶದ ವಾರಾಣಸಿಯ ಫುಲ್ವಾರಿಯಾದಲ್ಲಿ ಜನಿಸಿದ ಶಿವಾಂಗಿ ಸಿಂಗ್ ತಮ್ಮ ಮನೆಯಿಂದ ದೊಡ್ಡ ಕನಸುಗಳನ್ನು ಕಂಡರು. ಅವರ ತಂದೆ ಕುಮಾರೇಶ್ವರ ಸಿಂಗ್, ತಾಯಿ ಸೀಮಾ ಸಿಂಗ್ ಮತ್ತು ಮೂವರು ಒಡಹುಟ್ಟಿದವರು, ಈ ಕುಟುಂಬದಲ್ಲಿ ದೇಶಭಕ್ತಿ ಆಳವಾಗಿ ಬೇರೂರಿತ್ತು. ಅವರ ತಾಯಿಯ ಅಜ್ಜ ಬಿ.ಎನ್. ಸಿಂಗ್, ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು.
ಶಿವಾಂಗಿ ವಾರಾಣಸಿಯ ಸೇಂಟ್ ಮೇರಿ ಶಾಲೆ ಮತ್ತು ನಂತರ ಸೇಂಟ್ ಜಾರ್ಜ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಯಾವಾಗಲೂ ತನ್ನ ಅಧ್ಯಯನದಲ್ಲಿ ಅಗ್ರಸ್ಥಾನ ಗಳಿಸುತ್ತಿದ್ದ ಶಿವಾಂಗಿ 12 ನೇ ತರಗತಿಯಲ್ಲಿ ಶೇ.89 ಅಂಕಗಳನ್ನು ಗಳಿಸಿದ್ದರು. ಅವರು ಭಗವಾನ್‌ಪುರದ ಸನ್‌ಬೀಮ್ ಮಹಿಳಾ ಕಾಲೇಜಿನಿಂದ ಬಿ.ಎಸ್ಸಿ ಪದವಿಯನ್ನು ಪಡೆದರು. ಮತ್ತು ಅದೇ ಸಮಯದಲ್ಲಿ ಎನ್‌ಸಿಸಿಗೆ ಸೇರುವ ಮೂಲಕ ತಮ್ಮ ಮಿಲಿಟರಿ ಕನಸುಗಳನ್ನು ರೂಪಿಸಿಕೊಳ್ಳಲು ಪ್ರಾರಂಭಿಸಿದರು.
ಅವರು ಕ್ರೀಡಾ ಕ್ಷೇತ್ರದಲ್ಲಿ ಅಷ್ಟೇ ಪ್ರವೀಣರಾಗಿದ್ದರು, ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಚಿನ್ನದ ಪದಕವನ್ನು ಗೆದ್ದರು. ಅವರು 2013 ರ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಉತ್ತರ ಪ್ರದೇಶ ಎನ್‌ಸಿಸಿ ತುಕಡಿಯನ್ನು ಪ್ರತಿನಿಧಿಸಿದರು. ಒಮ್ಮೆ ತಮ್ಮ ತಾಯಿಯ ಅಜ್ಜನೊಂದಿಗೆ ವಾಯುಪಡೆಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದು. ವಾಯುಪಡೆಯಿಂದ ಅವರು ತುಂಬಾ ಪ್ರಭಾವಿತರಾದರು, ಶಿವಾಂಗಿ ಸಿಂಗ್ ಯುದ್ಧ ವಿಮಾನ ಪೈಲಟ್ ಆಗಲು ನಿರ್ಧರಿಸಿದರು.
2015 ರಲ್ಲಿ ಶಿವಾಂಗಿ ಭಾರತೀಯ ವಾಯುಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಒಂದೂವರೆ ವರ್ಷಗಳ ಕಾಲ ಕಠಿಣ ತರಬೇತಿಯನ್ನು ಪಡೆದರು. 2017 ರಲ್ಲಿ, ಅವರು ದೇಶದ ಮೊದಲ ಐದು ಮಹಿಳಾ ಯುದ್ಧ ವಿಮಾನ ಪೈಲಟ್‌ಗಳ ಐತಿಹಾಸಿಕ ತಂಡದಲ್ಲಿ ಸೇರಿಸಲ್ಪಟ್ಟರು.
ತರಬೇತಿಯ ನಂತರ, ಅವರು MiG-21 ನಂತಹ ಸೂಪರ್‌ಸಾನಿಕ್ ಯುದ್ಧ ವಿಮಾನಗಳನ್ನು ಹಾರಿಸಿದರು. ಈ ಸಮಯದಲ್ಲಿ, ಅವರನ್ನು ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ವಾಯುನೆಲೆಗೆ ನಿಯೋಜಿಸಲಾಯಿತು. ಅಲ್ಲಿ ಅವರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಕೆಲಸ ಮಾಡಿದ್ದರು.
- ಉಡಾವಣೆಗೊಂಡ ಕೇವಲ 3.5 ಗಂಟೆಗಳಲ್ಲೇ ಬಾಹ್ಯಾಕಾಶ ನಿಲ್ದಾಣ ತಲುಪಿ ಹೊಸ ದಾಖಲೆ ಬರೆದ ಚೀನಾದ ಶೆನ್ಝೌ-21(Shenzhou 21)
- ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಪಟ್ಟಿ (Central Government Schemes)
- Trishul Military Exercise : ಪಾಕ್ ಗಡಿ ಬಳಿ ʼತ್ರಿಶೂಲ್ʼ ಸಮರಾಭ್ಯಾಸ ಆರಂಭಿಸಿದ ಭಾರತ : Explanation
- ಇಂದಿರಾ ಗಾಂಧಿ ಅವರ ಕುರಿತ ಮಹತ್ವದ ಬಹು ಆಯ್ಕೆ ಪ್ರಶ್ನೆಗಳು ( MCQs on Indira Gandhi)
- Recruitment : ಮಂಡ್ಯ ಜಿಲ್ಲಾ ಪಂಚಾಯತ್ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ

