ಜನವರಿ 8 : ಭೂಮಿಯ ಪರಿಭ್ರಮಣ ದಿನ
ಪ್ರತಿ ವರ್ಷ, ಜನವರಿ 8 ರಂದು ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ))ವನ್ನು ಆಚರಿಸಲಾಗುತ್ತದೆ. 1851 ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞ ಲಿಯೋನ್ ಫೌಕಲ್ಟ್ ಅವರು ಭೂಮಿ ಹೇಗೆ ತಿರುಗುತ್ತದೆ ಎಂಬುದನ್ನು ಹಿತ್ತಾಳೆಯ ಚೆಂಡಿನಂತಿರುವ ಯಂತ್ರವೊಂದರ ಮೂಲಕ ತೋರಿಸಿಕೊಟ್ಟರು. ಈಗ ಫೌಕಲ್ಟ್ ಪೆಂಡುಲಮ್ ಎಂದು ಕರೆಯಲ್ಪಡುವ ಈ ಯಂತ್ರವು ಭೂಮಿಯ ಪರಿಭ್ರಮಣೆಯನ್ನು ವೈಜ್ಞಾನಿಕವಾಗಿ ತೋರಿಸಿಕೊಟ್ಟಿತು.
ಈ ಪೆಂಡುಲಂ ಈಗ ವಿಶ್ವದೆಲ್ಲೆಡೆ ಇರುವ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ನೋಡಲು ಸಿಗುತ್ತದೆ. ಅಲ್ಲದೆ ಭೂಮಿಯ ಗುರುತ್ವಾಕರ್ಷಣೆಗೂ ಈ ಭೂಮಿಯ ಪರಿಭ್ರಮಣೆಯೇ ಕಾರಣ ಎಂದು ಈ ಪೆಂಡುಲಂ ತೋರಿಸಿಕೊಟ್ಟಿದೆ. ಇಂಥದ್ದೊಂದು ಐತಿಹಾಸಿಕ ಅನ್ವೇಷಣೆ ಮಾಡಿದ ನೆನಪಿಗಾಗಿ ಪ್ರತಿವರ್ಷ ಜನವರಿ 8 ಅನ್ನು ಅತ್ಸ್‌ರ್ ರೋಟೇಶನ್ ಡೇ ಅಥವಾ ಪೃಥ್ವಿ ಪರಿಭ್ರಮಣ ದಿನ ಎಂದು ಆಚರಿಸಲಾಗುತ್ತದೆ.
ತನ್ನ ಅಕ್ಷದ ಮೇಲೆ ಭೂಮಿಯ ತಿರುಗುವಿಕೆಯ ಪ್ರಮುಖ ಆವಿಷ್ಕಾರವನ್ನು ಗುರುತಿಸಲು ಮೀಸಲಾಗಿರುವ ದಿನವಾಗಿದೆ. ಭೂಮಿಯ ತಿರುಗುವಿಕೆಯ ದಿನವು ಶೈಕ್ಷಣಿಕ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಮಕ್ಕಳಿಗೆ, ನಮ್ಮ ಗ್ರಹದ ಡೈನಾಮಿಕ್ಸ್ ಬಗ್ಗೆ ಕಲಿಯಲು ಮತ್ತು ಪ್ರೇರೇಪಿಸಲು. ಹಾಗೂ ಮಕ್ಕಳಲ್ಲಿ ಕುತೂಹಲ ಮತ್ತು ಭೂಮಿಯ ತಿರುಗುವಿಕೆಯ ವಿದ್ಯಮಾನದ ಆಳವಾದ ತಿಳುವಳಿಕೆಯನ್ನು ಪ್ರೋತ್ಸಾಹಿಸುತ್ತದೆ.
ಲಿಯಾನ್ ಫೌಕಾಲ್ಟ್ (Léon Foucault) ಅವರ ಪ್ರಯೋಗವು ಭೂಮಿಯ ತಿರುಗುವಿಕೆಯನ್ನು ಸಾಬೀತುಪಡಿಸಿತು ಮಾತ್ರವಲ್ಲದೆ ಪರಿಕಲ್ಪನೆಯನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಮತ್ತು ಅರ್ಥವಾಗುವಂತೆ ಮಾಡಿದೆ.
✦ ಭಾರತ ಸ್ವಾತಂತ್ರ್ಯ ಸಂಗ್ರಾಮ ಹೇಗಿತ್ತು..? ಇಲ್ಲಿದೆ ಸಂಪೂರ್ಣ ಚಿತ್ರಣ