ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
1. ಭೂಶೃಂಗಗಳು
➤ಮೊದಲ ಭೂಶೃಂಗ ಸಭೆ : 1992 ಜೂನ್ 3 ರಿಂದ 14 ರವರೆಗೆ ಬೆರೆಜಿಲ್‍ನ ರಿಯೋ ಡಿ ಜನಿರೋದಲ್ಲಿ ಜರುಗಿತು. ಇದನ್ನು ರಿಯೋ ಶೃಂಗ ಎಂದು ಕೂಡ ಕರೆಯುತ್ತಾರೆ. ಇದೊಂದು ವಿಶ್ವಸಂಸ್ಥೆಯ ಸಮ್ಮೇಳನವಾಗಿದೆ.
➤ಎರಡನೇ ಭೂಶೃಂಗಸಭೆ : 2002 ಆಗಸ್ಟ್ 26 ರಿಂದ ಸೆಪ್ಟೆಂಬರ್ 4 ರವರೆಗೆ ಎರಡನೇ ಭೂಶೃಂಗಸಭೆಯು ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನಲ್ಲಿ ಜರುಗಿತು. ಇದನ್ನು ರಿಯೋ + 10 ಎಂದು ಕರೆಯಲಾಗುತ್ತದೆ. ಇದು ಮೊದಲ ಶೃಂಗಸಭೆ ಜರುಗಿದ 10 ವರ್ಷಗಳ ನಂತರ ಜರುಗಿದ ಶೃಂಗಸಭೆಯಾಗಿದೆ.
➤ಮೂರನೇ ಭೂಶೃಂಗಸಭೆ : ಮೂರನೇ ಭೂಶೃಂಗಸಭೆಯು 2012 ಜೂನ್ 20 ರಿಂದ 22 ರವರೆಗೆ ಜರುಗಿತು. ಇದನ್ನು ರಿಯೋ + 20 ಎಂದು ಕರೆಯುವರು. ಮೂರನೇ ಭೂಶೃಂಗಸಭೆಯು ಬ್ರೆಜಿಲ್‍ನ ರಿಯೋ ಡಿ ಜನೀರೋದಲ್ಲಿ ಜರುಗಿತು.
2. ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ವಿಶ್ವಸಂಸ್ಥೆಯ ಪ್ರಮುಖ ವಾಹನವಾಗಿದೆ. 1974 ರಲ್ಲಿ ಮೊದಲ ಬಾರಿಗೆ ನಡೆದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಸುಸ್ಥಿರ ಬಳಕೆ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ.
ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ, ವಾರ್ಷಿಕವಾಗಿ 143ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ. ಪ್ರತಿ ವರ್ಷ, ವಿಶ್ವ ಪರಿಸರ ದಿನವು ಹೊಸ ವಿಷಯಗಳು ಒದಗಿಸಿದ್ದು, ಪ್ರಮುಖ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯಗಳು, ಸರ್ಕಾರಗಳು ಮತ್ತು ವಿಶ್ವಾದ್ಯಂತದ ಎಲ್ಲ ಪ್ರಸಿದ್ಧ ವ್ಯಕ್ತಿಗಳು ಪರಿಸರ ಕಾರಣಗಳನ್ನು ಪ್ರತಿಪಾದಿಸಲು ಅಳವಡಿಸಿಕೊಂಡಿದ್ದಾರೆ.
ಮಾನವ ಪರಿಸರ ಕುರಿತ ಸ್ಟಾಕ್‌ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನವನ್ನು ಸ್ಥಾಪಿಸಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು “ಕೇವಲ ಒಂದು ಭೂಮಿ” ಎಂಬ ವಿಷಯದೊಂದಿಗೆ ನಡೆಸಲಾಯಿತು. 1974 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ಮೂಲಕ ಈ ಚಟುವಟಿಕೆಗಳ ಕೇಂದ್ರವನ್ನು ತಿರುಗಿಸುವ ಆಲೋಚನೆ ಪ್ರಾರಂಭವಾಯಿತು.
3. ಪೃಥ್ವಿ ದಿನ
1970ರಿಂದ ಪ್ರತಿ ವರ್ಷವೂ ಏಪ್ರಿಲ್ 22ರಂದು `ಪೃಥ್ವಿ ದಿನ~ ಆಚರಿಸಲಾಗುತ್ತಿದೆ. 1960ರಲ್ಲಿ ನೆಲ ಮತ್ತು ಪೆಸಿಫಿಕ್ ಸಮುದ್ರ ದ್ವೀಪಗಳಲ್ಲಿ ಯುದ್ಧಾಸ್ತ್ರ, ಪರಮಾಣು ಬಾಂಬ್ ಪರೀಕ್ಷೆ ನಡೆಸಲಾಗಿತ್ತು. ಈ ದಶಕದಲ್ಲಿಯೇ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುವ್ಯವಸ್ಥಿತ ಪರಿಸರ ಸಂರಕ್ಷಣಾ ಸಂಸ್ಥೆಗಳಿರಲಿಲ್ಲ. ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಜನಸಾಂದ್ರತೆಯು ಹೆಚ್ಚಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಅಮೆರಿಕದ ಸೆನೆಟರ್ ಗೆಲಾರ್ಡ್ ನೆಲ್ಸನ್ ಮೊದಲ ಬಾರಿಗೆ ಧ್ವನಿ ಎತ್ತಿ ಚಳವಳಿ ಆರಂಭಿಸಿದರು.
ನಂತರ ಈ ಚಳವಳಿ ವಿಶ್ವ `ಪೃಥ್ವಿ ದಿನ’ದ ಹೆಸರು ಪಡೆಯಿತು. ಕೊಲಂಬಿಯಾ ಮತ್ತು ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದರಿಂದ ಪ್ರೇರೇಪಣೆಗೊಂಡು ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರು. ಮಿತಿಮೀರಿದ ವಾಹನಗಳು, ಕೈಗಾರಿಕೆಗಳಿಂದ ಆಗುವ ವಾಯುಮಾಲಿನ್ಯ, ವಿಷಕಾರಿ ರಾಸಾಯನಿಕಗಳು ಮತ್ತು ಕ್ರಿಮಿನಾಶಕಗಳಿಂದ ನೀರು ಯಾವ ರೀತಿ ಮಲಿನವಾಗುತ್ತಿದೆ ಎನ್ನುವುದರ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಪ್ರಯತ್ನಕ್ಕೆ 1970 ಏಪ್ರಿಲ್ 22ರಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
4. ಅರ್ಥ್ ಅವರ್
ಪ್ರತಿ ವರ್ಷ ವಲ್ರ್ಡ್ ವೈಡ್ ಫಂಡ್‍ರವರು ಮಾರ್ಚ್ ತಿಂಗಳ ಕೊನೆಯ ಶನಿವಾರದಂದು ರಾತ್ರಿ 8.30 ರಿಂದ 9.30 ರ ಒಂದು ಗಂಟೆ ಅವಧಿಗೆ ಅನಗತ್ಯವಾದ ದೀಪಗಳನ್ನು ಆರಿಸಿ ಭೂಮಿ ಸಂರಕ್ಷಿಸುವ , ತಾಪಮಾನ ತಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ವಿಶ್ವ ವನ್ಯಜೀವಿ ನಿಧಿ) ಸಂಘಟನೆ ಕರೆಯಂತೆ 2007ರಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವ ಪ್ರಯತ್ನವಾಗಿ ಅನಗತ್ಯ ವಿದ್ಯುತ್ ದೀಪಗಳು ಮತ್ತು ಇತರ ಉಪಕರಣಗಳನ್ನು ಬಳಸದಿರುವ ಪ್ರತಿಜ್ಞೆ ಕೈಗೊಳ್ಳಲಾಗಿದೆ.2007ರಲ್ಲಿ ಮೊದಲ ಬಾರಿ ಅರ್ಥ್ ಅವರ್ ಆಚರಿಸಲು ಕರೆ ನೀಡಿದಾಗ ಸಿಡ್ನಿ ನಗರದ 22 ಲಕ್ಷ ಮಂದಿ ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು ಆರಿಸಿ ಸ್ಪಂದಿಸಿದರು. 2008ರಲ್ಲಿ ಜಗತ್ತಿನ ಇತರ ಹಲವು ನಗರಗಳು ಅರ್ಥ್ ಅವರ್ ಆಚರಣೆಯಲ್ಲಿ ಭಾಗಿಯಾದವು. ಭಾರತದ ಹಲವು ನಗರಗಳೂ ಅರ್ಥ್ ಅವರ್ ಆಚರಿಸಿದವು.
5. ವಿಶ್ವಜಲದಿನ
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವಜಲದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜಲ ದಿನವನ್ನು ಮಾರ್ಚ್ 22ರಂದು ಸಿಹಿ ನೀರಿನ ಪ್ರಾಮುಖ್ಯದ ಮೇಲೆ ಗಮನ ಕೇಂದ್ರೀಕರಿಸುವುದಕ್ಕಾಗಿ ಮತ್ತು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸಲು ಶಿಫಾರಸು ಮಾಡಲಾಯಿತು. ಅದೇ ವರ್ಷ ಡಿ. 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ 1993 ಮಾರ್ಚ್ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು.
6. ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನ
ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 16, 1987 ರಲ್ಲಿ ಓಜೋನ್ ಸಂರಕ್ಷಣೆಗಾಗಿ ಮಾಂಟ್ರಿಯಲ್ ಒಪ್ಪಂದ ಕೈಗೊಳ್ಳಲಾಯಿತು. ಇದರ ಸ್ಮರಣಾರ್ಥ ಸೆಪ್ಟೆಂಬರ್ 16 ರಂದು ಅಂತರಾಷ್ಟ್ರೀಯ ಓಜೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.