ವಿದ್ಯುನ್ಮಾನ ಮತಯಂತ್ರ(EVM)ಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಚುನಾವಣಾ ಆಯೋಗ :
EVM to Get Colour Photos, Bold Fonts : Key Changes You Need to Know
ಇವಿಎಂಗಳ ಕುರಿತು ಕೇಂದ್ರ ಚುನಾವಣಾ ಆಯೋಗವು ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳು, ಸರಣಿ ಸಂಖ್ಯೆಗಳು ಗೋಚರಿಸುವಂತೆ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದು ಬಿಹಾರದಿಂದಲೇ ಆರಂಭವಾಗಲಿದೆ ಎಂದು ಇಸಿ ಸ್ಪಷ್ಟಪಡಿಸಿರುವುದು ಗಮನಾರ್ಹ.
ಬಿಹಾರ ವಿಧಾನಸಭಾ ಚುನಾವಣೆಯಿಂದ ಶುರುವಾಗಿ ಮುಂದಿನ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಬಣ್ಣದ ಫೋಟೋಗಳು ಇರಲಿವೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು (ಬುಧವಾರ) ತಿಳಿಸಿದೆ.ಬಿಹಾರ ವಿಧಾನಸಭಾ ಚುನಾವಣೆಯಿಂದ ಪ್ರಾರಂಭಿಸಿ, ಇನ್ನು ಮುಂದೆ ಎಲೆಕ್ಟ್ರಾನಿಕ್ ಮತಯಂತ್ರಗಳು(ಇವಿಎಂ) ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಹೊಂದಿರುತ್ತವೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
2015 ರಿಂದ, ಇವಿಎಂ ಮತಪತ್ರಗಳಲ್ಲಿ ಅಭ್ಯರ್ಥಿಗಳ ಕಪ್ಪು ಮತ್ತು ಬಿಳಿ ಫೋಟೋಗಳನ್ನು ಅಂಟಿಸಲಾಗುತ್ತಿದೆ. ಇದನ್ನು ಗುರುತಿಸಲು ಹಲವು ಮತದಾರರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತಪತ್ರಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಸುಲಭವಾಗಿ ಓದಲು ಮತ್ತು ಮತದಾರ ಸ್ನೇಹಿ ಮತಪತ್ರಗಳ ಬಿಡುಗಡೆಗೆ ಕ್ರಮ ಕೈಗೊಂಡಿದೆ. ಇದು ಬಿಹಾರ ವಿಧಾನಸಭೆ ಚುನಾವಣೆಯಿಂದಲೇ ಅನ್ವಯವಾಗಲಿದೆ.
ಇವಿಎಂ ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದ ಸ್ಪಷ್ಟತೆ ಮತ್ತು ಓದುವಿಕೆಯನ್ನು ಹೆಚ್ಚಿಸಲು 1961ರ ಚುನಾವಣಾ ನೀತಿ ನಿಯಮಗಳು, ಸೆಕ್ಷನ್ 49 ಬಿ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
“ಇನ್ನು ಮುಂದೆ, ಅಭ್ಯರ್ಥಿಗಳ ಛಾಯಾಚಿತ್ರಗಳನ್ನು ಇವಿಎಂ ಮತಪತ್ರದಲ್ಲಿ ಬಣ್ಣದಲ್ಲಿ ಮುದ್ರಿಸಲಾಗುತ್ತದೆ. ಅಭ್ಯರ್ಥಿಯ ಮುಖವು ಸ್ಪಷ್ಟವಾಗಿ ಕಾಣಲು ಫೋಟೋ ಜಾಗದ ನಾಲ್ಕನೇ ಮೂರು ಭಾಗವನ್ನು ಆಕ್ರಮಿಸಿಕೊಂಡಿರುತ್ತದೆ” ಎಂದು ಆಯೋಗ ಹೇಳಿದೆ. ಎಲ್ಲಾ ಅಭ್ಯರ್ಥಿಗಳ ಹೆಸರು, ಸರಣಿ ಸಂಖ್ಯೆಗಳು ಮತ್ತು ನೋಟಾ ಆಯ್ಕೆಯ ಅಕ್ಷರ ಗಾತ್ರ 30 ಇರಲಿದ್ದು, ಇವು ದಪ್ಪ ಅಕ್ಷಗಳಲ್ಲಿ ಮತ್ತು ಸ್ಪಷ್ಟವಾಗಿರಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದಲ್ಲಿ 2002ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Highlights : ಹೊಸ ವಿನ್ಯಾಸದ ಪ್ರಮುಖ ಲಕ್ಷಣಗಳು
*ಅಭ್ಯರ್ಥಿಗಳ ಬಣ್ಣದ ಛಾಯಾಚಿತ್ರಗಳು :
ಅಭ್ಯರ್ಥಿಗಳ ಫೋಟೋಗಳನ್ನು ಈಗ ಬಣ್ಣದಲ್ಲಿ ಮುದ್ರಿಸಲಾಗುವುದು, ಇದು ಮತದಾರರಿಗೆ ದೃಶ್ಯ ಗುರುತನ್ನು ಹೆಚ್ಚಿಸುತ್ತದೆ.
*ವರ್ಧಿತ ಛಾಯಾಚಿತ್ರ ಸ್ಥಳ:
ಅಭ್ಯರ್ಥಿಯ ಮುಖವು ಛಾಯಾಚಿತ್ರ ಸ್ಥಳದ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ, ಇದರಿಂದಾಗಿ ವ್ಯಕ್ತಿಗಳನ್ನು ಗುರುತಿಸುವುದು ಸುಲಭವಾಗುತ್ತದೆ.
*ಏಕರೂಪದ ಫಾಂಟ್ ಮತ್ತು ಶೈಲಿ:
NOTA (ಮೇಲಿನ ಯಾವುದೂ ಅಲ್ಲ) ಆಯ್ಕೆ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಹೆಸರುಗಳು ಒಂದೇ ಫಾಂಟ್ ಪ್ರಕಾರ ಮತ್ತು ಗಾತ್ರದಲ್ಲಿ ಗೋಚರಿಸುತ್ತವೆ, ಇದು ಪ್ರಮಾಣೀಕೃತ ಪ್ರಸ್ತುತಿ ಮತ್ತು ಸುಲಭವಾಗಿ ಓದಲು ಸಾಧ್ಯವಾಗುವಂತೆ ಮಾಡುತ್ತದೆ.
*ಅಭ್ಯರ್ಥಿಗಳಿಗೆ ವಿನ್ಯಾಸ:
ಒಂದು ಮತಪತ್ರದ ಹಾಳೆಯಲ್ಲಿ ಗರಿಷ್ಠ 15 ಅಭ್ಯರ್ಥಿಗಳನ್ನು ಪ್ರದರ್ಶಿಸಲಾಗುತ್ತದೆ.
*ನೋಟಾ ನಿಯೋಜನೆ:
ನೋಟಾ ಆಯ್ಕೆಯು ಯಾವಾಗಲೂ ಅಭ್ಯರ್ಥಿಯ ಕೊನೆಯ ಹೆಸರಿನ ನಂತರ ಕಾಣಿಸಿಕೊಳ್ಳುತ್ತದೆ, ಪಟ್ಟಿಯ ಕೊನೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
*ಮೊದಲ ಅನುಷ್ಠಾನ ರಾಜ್ಯ : ಮುಂಬರುವ ಬಿಹಾರ ಚುನಾವಣೆಗಳಿಂದ ಮರುವಿನ್ಯಾಸಗೊಳಿಸಲಾದ ಮತಪತ್ರಗಳನ್ನು ಬಳಸಲಾಗುವುದು, ಇದು ಮೊದಲ ಅಧಿಕೃತ ಬಿಡುಗಡೆಯನ್ನು ಗುರುತಿಸುತ್ತದೆ.
*ರಾಷ್ಟ್ರವ್ಯಾಪಿ ಬಳಕೆ: ಮುಂಬರುವ ಎಲ್ಲಾ ರಾಜ್ಯ ಮತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ.
- ವಿದ್ಯುನ್ಮಾನ ಮತಯಂತ್ರ(EVM)ಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಚುನಾವಣಾ ಆಯೋಗ :
- Unemployment rate : ಆಗಸ್ಟ್ 2025ರಲ್ಲಿ ಭಾರತದ ನಿರುದ್ಯೋಗ ದರ ಶೇ. 5.1ಕ್ಕೆ ಇಳಿಕೆ
- ಸೆಪ್ಟೆಂಬರ್ 18 : ವಿಶ್ವ ಬಿದಿರು ದಿನ (World Bamboo Day) : ಬಿದಿರಿನ ಕುರಿತು ಅಚ್ಚರಿಯ ಸಂಗತಿಗಳು
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (18-09-2025)
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (17-09-2025)