POLICE EXAMSpardha Times

ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ಹೇಗಿರಬೇಕು..?

Share With Friends

ರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು ಎಂದು ಇಲ್ಲಿ ನೀಡಲಾಗಿದೆ. ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಸಿವಿಲ್‌ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆಯನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಡೆಸಲಿದ್ದು, 100 ಅಂಕಗಳಿಗೆ ಆಬ್ಜೆಕ್ಟಿವ್ ಮಾದರಿಯ ಬಹುವಿಧ ಆಯ್ಕೆ ಪ್ರಶ್ನೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ 2 ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಬಹುದು. ಪ್ರಶ್ನೆ ಪತ್ರಿಕೆಯಲ್ಲಿ 100 ಪ್ರಶ್ನೆಗಳು ಇರಲಿದ್ದು, ಒಂದು ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. 1 ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಪರೀಕ್ಷೆಯ ಅವಧಿ 1 ಗಂಟೆ 30 ನಿಮಿಷ ಇರುತ್ತದೆ.

# ಪ್ಲಾನ್ ಮಾಡಿಕೊಳ್ಳಿ :
ಅಕ್ಟೋಬರ್ 17 ಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ಮುಗಿಯುತ್ತದೆ. ನಂತರ ಪರೀಕ್ಷೆ ಯಾವ ತಿಂಗಳಲ್ಲಿ ನಡೆಯಬಹುದು ಎಂಬ ಬಗ್ಗೆ ಅಂದಾಜು ಮಾಹಿತಿ ತಿಳಿದುಕೊಳ್ಳಿ. ನಂತರ ನಿಮಗೆ ಎಷ್ಟು ದಿನ ಸಿಗುತ್ತದೆಯೋ ಅದರ ಆಧಾರದಲ್ಲಿ, ಮೇಲಿನ ಪಠ್ಯಕ್ರಮಕ್ಕೆ ಅನುಗುಣವಾಗಿ ಯಾವೆಲ್ಲಾ ವಿಷಯಗಳಲ್ಲಿ ವೀಕ್‌ ಇದ್ದಿರೋ ಆ ವಿಷಯಗಳ ಬಗ್ಗೆ ಓದಲು ಪ್ಲಾನ್‌ ಮಾಡಿಕೊಳ್ಳಿ. ಪರೀಕ್ಷೆ ದಿನದೊಳಗೆ ಆ ವಿಷಯಗಳನ್ನು ಓದಿಕೊಂಡು, ಪುನರಾವಲೋಕನಕ್ಕೂ ಸಮಯ ಸಿಗುವಂತೆ ಓದಲು ನಿಗದಿತ ಸಮಯವನ್ನು ಮೀಸಲಿಡಿ.

# ಸೋರ್ಸ್‌ ಕಲೆಕ್ಟ್‌ ಮಾಡಿಕೊಳ್ಳಿ
ಸಾಧ್ಯವಾದಲ್ಲಿ 10-15 ವರ್ಷಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನಡೆದ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಕಲೆಕ್ಟ್‌ ಮಾಡಿಕೊಳ್ಳಿ. ಅಷ್ಟೂ ಪತ್ರಿಕೆಗಳನ್ನು ರೆಫರ್ ಮಾಡಿ ಉತ್ತರಿಸಿ.

ಈಗಾಗಲೇ ಪೊಲೀಸ್ ಆಗಿರುವ ಸ್ನೇಹಿತರು ಇದ್ದರೇ ಅವರ ಸಲಹೆ ಪಡೆಯಿರಿ. ಅಥವಾ ತರಬೇತಿ ಕೇಂದ್ರಗಳಲ್ಲಿ ಓದುತ್ತಿರುವ ಸ್ನೇಹಿತರಿದ್ದಲ್ಲಿ, ಲೈಬ್ರರಿಗಳಲ್ಲಿ ಕುಳಿತು ಓದುವ ಸ್ನೇಹಿತರಿದ್ದಲ್ಲಿ ಅವರೊಂದಿಗೆ ಸಂವಹನ ನಡೆಸಿ ಸಲಹೆ ಪಡೆದುಕೊಳ್ಳಿ. ಅವರ ಜೊತೆ ಓದುವುದರಿಂದ ಪರಸ್ಪರ ಸ್ಟಡಿ ಮೆಟೀರಿಯಲ್‌ಗಳನ್ನು ಉಪಯೋಗಿಸಿಕೊಳ್ಳಬಹುದು. ಪ್ರಶ್ನೆ ಪತ್ರಿಕೆಗಳು ಸ್ನೇಹಿತರ ಬಳಿ ಸಿಗದಿದ್ದಲ್ಲಿ, ಬುಕ್‌ ಸ್ಟೋರ್‌ಗಳಲ್ಲಿ ಪ್ರಶ್ನೆ ಪತ್ರಿಕೆಗಳ ಸೆಟ್‌ ಬುಕ್‌ಗಳನ್ನು ಖರೀದಿಸಿ ಓದಿರಿ.

# ಅಧಿಕೃತ ಬುಕ್  ಓದಿ :
ರಾಜ್ಯ-ದೇಶ-ವಿದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಒಂದು ವರ್ಷದ ಬುಕ್‌ಗಳನ್ನು ಖರೀದಿಸಿ ಓದಿರಿ. ಅಲ್ಲದೇ ನೀವು ವೀಕ್‌ ಎನಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ನಿರ್ದಿಷ್ಟ ಲೇಖಕರು ಬರೆದಿರುವ ಬುಕ್‌ಗಳನ್ನು ಓದಿರಿ. ಉದಾಹರಣೆಗೆ ಗಂಗಾಧರ್ ಅಥವಾ ರಾಜಶೇಖರ್‌ರವರು ಬರೆದಿರುವ ಸಂವಿಧಾನ ಪುಸ್ತಕ, ಭೂಗೋಳಕ್ಕೆ ಡಾ.ರಂಗನಾಥ್‌ರವರು ಬರೆದಿರುವ ಪುಸ್ತಕ ಹಾಗೂ ಸರ್ಕಾರಿ ಪಠ್ಯ ಪುಸ್ತಕಗಳನ್ನು ಓದಿರಿ. ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಾಗಿಯೇ ಪ್ರತ್ಯೇಕವಾಗಿ ಬುಕ್‌ಗಳು ಲಭ್ಯವಿದ್ದು, ಇವುಗಳನ್ನು ಸಹ ರೆಫರ್ ಮಾಡಬಹುದು.

# ಶಾಲಾ ಪಠ್ಯಪುಸ್ತಕ  ಓದಿ :
ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ಜ್ಞಾನಕ್ಕಾಗಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಶಾಲಾ ಪಠ್ಯ ಪುಸ್ತಕಗಳನ್ನು ಓದಬೇಕು. ಬೇಸಿಕ್‌ ಅಪ್‌ಡೇಟ್ ಅನ್ನು ಈ ಪುಸ್ತಕಗಳಿಂದ ಪಡೆಯಬಹುದಾಗಿದ್ದು, ಇತರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೆಚ್ಚು ಸಹಾಯಕವಾಗುತ್ತದೆ.

# ಪ್ರಚಲಿತ ವಿದ್ಯಮಾನಗಳ  ಅಪ್‌ಡೇಟ್ ಇರಲಿ :
ಈ ಹಿಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ Year Book ಓದುವುದರ ಜೊತೆಗೆ, ಪ್ರಸ್ತುತದ ಪ್ರಚಲಿತ ವಿದ್ಯಮಾನಗಳ ಅಪ್‌ಡೇಟ್‌ಗಾಗಿ ದಿನನಿತ್ಯ ದಿನ ಪತ್ರಿಕೆಗಳನ್ನು ಓದಬೇಕು. ಡೈಲಿ ನ್ಯೂಸ್ ಪೇಪರ್‌ಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರಿಯ ಪ್ರಚಲಿತ ವಿದ್ಯಮಾನಗಳು, ಕಾಯ್ದೆಗಳು, ನಿರ್ಧಾರಗಳು, ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಅರಣ್ಯ ಕಾಯ್ದೆಗಳ ಬಗ್ಗೆಯೂ ಗಮನಹರಿಸಬೇಕು.

ಈ ಹಿಂದೆ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿದರೆ ಯಾವ ಪುಸ್ತಕಗಳನ್ನು ಓದಬೇಕು, ಎಲ್ಲಿಂದ ಮಾಹಿತಿಗಳನ್ನು ಕಲೆಹಾಕಬೇಕು, ಹೇಗೆ ಸಿದ್ಧತೆ ಇರಬೇಕು. ಪೇಪರ್ ಅನ್ನು ಹೇಗೆ ಓದಬೇಕು ಎಂಬೆಲ್ಲಾ ಮಾಹಿತಿ ತಿಳಿಯುತ್ತದೆ. ಕೆಲವೊಮ್ಮೆ ಎರಡು ಮೂರು ವರ್ಷಗಳ ಹಿಂದಿನ ಪ್ರಶ್ನೆಗಳು ರಿಪೀಟ್ ಆಗುವ ಅವಕಾಶ ಇರುತ್ತದೆ. ಆದ್ದರಿಂದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಅಗತ್ಯ.

# ಮೆಂಟಲ್ ಎಬಿಲಿಟಿ :
ಸಾಮಾನ್ಯ ಜ್ಞಾನ ಹೊರಡುಪಡಿಸಿ ಸುಲಭವಾಗಿ ಅಂಕಗಳನ್ನು ಗಳಿಸಬಹುದಾದ ವಿಭಾಗ ಮೆಂಟಲ್‌ ಎಬಿಲಿಟಿ ಪ್ರಶ್ನೆಗಳದ್ದು. ದಿನನಿತ್ಯ, ಅದರಲ್ಲೂ ಸಮಯ ವೇಸ್ಟ್‌ ಆಗಬಾರದು ಎಂದರೆ ಮಧ್ಯಾಹ್ನದ ಸಮಯದಲ್ಲಿ ಲೆಕ್ಕಗಳನ್ನು ಬಿಡಿಸುವ ಪ್ರ್ಯಾಕ್ಟೀಸ್ ಮಾಡಿ. ಈ ಸಮಯದಲ್ಲಿ ಗಣಿತ ಸಮಸ್ಯೆಗಳನ್ನು ಬಿಡಿಸುವುದರಿಂದ ನಿದ್ದೆಯ ಮೂಡ್ ಸಹ ಮಾಯವಾಗುತ್ತದೆ. ಪ್ರತಿದಿನ ಕನಿಷ್ಟ 5 ಮಾದರಿಯ 10 ಪ್ರಶ್ನೆಗಳನ್ನಾದರೂ ಬಿಡಿಸುತ್ತಾ ಬಂದರೆ, ಪರೀಕ್ಷೆಯಲ್ಲಿ ಕೇಳುವ ಮೆಂಟಲ್‌ ಎಬಿಲಿಟಿ ವಿಭಾಗದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಅಂಕಗಳು ಗ್ಯಾರಂಟಿ.

# ಮೊಬೈಲ್‌ ಸದುಪಯೋಗ ಪಡಿಸಿಕೊಳ್ಳಿ :
ಇಂದು ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನಿರ್ಧಿಷ್ಟ ಪರೀಕ್ಷೆಗಳಿಗಾಗಿಯೇ ಪ್ರಶ್ನೆ ಪತ್ರಿಕೆಗಳನ್ನು ಅಪ್‌ಡೇಟ್‌ ಮಾಡುವ, ಸೋರ್ಸ್‌ಗಳನ್ನು ಅಪ್‌ಡೇಟ್ ಮಾಡಿರುವ ಬಗ್ಗೆ ನೋಡಬಹುದು. ಅಲ್ಲದೇ ಯೂಟ್ಯೂಬ್‌ನಲ್ಲಿ ಪ್ರತಿಯೊಂದು ಟಾಪಿಕ್‌ಗಳ ಬಗ್ಗೆ, ಪರೀಕ್ಷೆ ತಯಾರಿಗೆ ಮಾಹಿತಿಯನ್ನು ಹಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ನೀಡಲಾಗುತ್ತಿದೆ. ಇವುಗಳನ್ನು ಟ್ರಾವೆಲ್ ಮಾಡುವ ಸಂಧರ್ಭದಲ್ಲಿ ಸದುಪಯೋಗ ಪಡಿಸಿಕೊಳ್ಳಿ.

 # ಪುನರಾವಲೋಕನಕ್ಕೆ ಕನಿಷ್ಟ 1-2 ತಿಂಗಳು ಮೀಸಲಿಡಿ : 
ತಯಾರಿ ಎಷ್ಟು ಮುಖ್ಯವೋ, ಓದಿದ ಮಾಹಿತಿಯನ್ನು ಮತ್ತೊಮ್ಮೆ ಓದುವುದು ಅಷ್ಟೇ ಮುಖ್ಯ. ಒಂದು ಬಾರಿ ಓದಿದ್ದು ಸಾಕು ಎಂದು ಹೊಸ ಹೊಸ ಪಠ್ಯವನ್ನೇ ಓದಿದರೆ ಗೊತ್ತಿರುವ ಮಾಹಿತಿಯೂ ಕನ್‌ಫ್ಯೂಶ್‌ ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಪುನರಾವಲೋಕನ ಅತ್ಯಗತ್ಯ.

# ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯ ಪಠ್ಯಕ್ರಮ (Syllabus)
ಸಾಮಾನ್ಯ ಜ್ಞಾನ, ಭಾರತ ಸಂವಿಧಾನ, ಇತಿಹಾಸ – ಭಾರತ ಮತ್ತು ಕರ್ನಾಟಕ, ಭೂಗೋಳ – ಭಾರತ ಮತ್ತು ಕರ್ನಾಟಕ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತದ ಆಡಳಿತ ಕರ್ನಾಟಕ ಸರ್ಕಾರ ಮತ್ತು ಪಾಲಿಟಿಕ್ಸ್‌, ಅರ್ಥಶಾಸ್ತ್ರ ನೀತಿ ಶಿಕ್ಷಣ, ಪ್ರಚಲಿತ ವಿದ್ಯಮಾನಗಳು

ಮೆಂಟಲ್‌ ಎಬಿಲಿಟಿಗೆ ಸಂಬಂಧಿಸಿದಂತೆ ಎಲ್ಲಾ ಮಾದರಿಯ ಲೆಕ್ಕ ವಿಧಾನಗಳ ಬಗ್ಗೆ, ಹಿಂದಿನ ಪ್ರಶ್ನೆ ಪತ್ರಿಕೆಗಳಲ್ಲಿ ನೀಡಿರುವ ಲೆಕ್ಕಗಳನ್ನು ನೋಡಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content Copyright protected !!