ಎಫ್‌ಡಿಎ ಪರೀಕ್ಷೆಯ ಕೆಪಿಎಸ್‌ಸಿ ಕೀ ಉತ್ತರಗಳು ( 28-02-2021 ನಡೆದ ಪರೀಕ್ಷೆ) : ಪತ್ರಿಕೆ-2 | ಸಾಮಾನ್ಯ ಕನ್ನಡ
ಈ ಕೆಳಗಿನ ವಾಖ್ಯಗಳಲ್ಲಿ ಪ್ರಶ್ನೆ ಸಂಖ್ಯೆ 1 ರಿಂದ 6 ರ ವರೆಗೆ ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ / ಇಂಗ್ಲಿಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ
1. ಲಿರಿಕ್ ಎನ್ನುವ ಸಾಹಿತ್ಯ ಪ್ರಕಾರವು ಇಂಗ್ಲಿಷ್ ನಿಂದ ಬಂತು
1) ಭಾವಗೀತೆ✔
2) ಕಥನಗೀತೆ
3) ಗೀತಾ ರೂಪಕ
4) ನವ್ಯ ಕವನ
2. ಅವರಿಗೆ ಕನ್ನಡದಲ್ಲಿ ‘ಪ್ಲೂಯೆನ್ಸ್’ ಇದೆ
1) ನಿರರ್ಗಳತೆ✔
2) ಪ್ರಾಸಬದ್ಧತೆ
3) ಗೊತ್ತಿಲ್ಲದಿರುವುದು
4) ವಿರಳತೆ
6. ಎಲ್ಲಾ ರಾಜ್ಯಗಳಿಗೂ ತನ್ನದೇ ಆದ ಸ್ಟೇಟ್ ಎಂಬ್ಲಮ್ ಹೊಂದಿರುತ್ತದೆ
1) ರಾಜ್ಯ ಲಾಂಛನ✔
2) ರಾಜ್ಯ ಚಿನ್ಹೆ
3) ರಾಜ್ಯ ಸಂಕೇತ
4) ರಾಜ್ಯ ಚಿತ್ರ
7. ಬಸರಿ ಎಂದರೆ _______
1) ಹೊಟ್ಟೆಯಲ್ಲಿ ಮಗುವುಳ್ಳ ಹೆಂಗಸು
2) ಬಹಳ ಸರಿಯಾದುದು
3) ಒಂದು ಜಾತಿಯ ಮರ✔
4) ಹೊರಕ್ಕೆ ಹಾಕು
8. ಸಂಧಿಕಾರ್ಯವಾಗುವಾಗ ಪೂರ್ವ ಪದದ ಒಂದು ಅಕ್ಷರವು ಸಂಧಿಯಾದ ಪಾದದಲ್ಲಿ ಇಲ್ಲದಿದ್ದರೆ ಅಂಥ ಸಂಧಿಯನ್ನು ________ ಸಂಧಿ ಎನ್ನುತ್ತೇವೆ.
1) ಆಗಮ ಸಂಧಿ
2)ಆದೇಶ ಸಂಧಿ
3) ಲೋಪ ಸಂಧಿ✔
4) ಯಾಕಾರಾಗಮ ಸಂಧಿ
9) ‘ಪಡುವಣ’ ಎಂಬುದು ___________ ವಾಚಕ
1) ಪ್ರಕಾರವಾಚಕ
2) ದಿಗ್ವಾಚಕ✔
3) ಸಂಖ್ಯಾವಾಚಕ
4) ಸರ್ವನಾಮ
10. ಹಾಲಿನಿಂದ ತುಪ್ಪವು ತಯಾರಾಗುತ್ತದೆ. ಇಲ್ಲಿ ಹಾಲಿನಿಂದ ಎಂಬುದು __________ ವಿಭಕ್ತಿ
1) ತೃತೀಯಾ✔
2) ಷಷ್ಠಿ
3) ಸಪ್ತಮಿ
4) ಪ್ರಥಮ
11. ‘ಮೆಲ್ಲ ಮೆಲ್ಲಗೆ ನಡೆ’ ಈ ವಾಖ್ಯದಲ್ಲಿ ‘ಮೆಲ್ಲ ಮೆಲ್ಲಗೆ’ ಎಂಬುದು _________ ಕ್ರಿಯಾ ವಿಶೇಷಣವಾಗಿದೆ.
1) ತೀರಿ ವಾಚಕ✔
2) ಅನುಕರಣ ವಾಚಕ
3) ಪ್ರಶ್ನೆ ವಾಚಕಾ
4) ಆವೃತ್ತಿ ವಾಚಕ
12. ಸಿರಿವಂತ ಎಂಬುದು
1)ಭಾವನಾಮ✔
2) ಅಂಕಿತನಾಮ
3) ಅನ್ವರ್ಥ ನಾಮ
4) ರೂಢ ನಾಮ
13. ‘ಸುಲಿದ ಬಾಲೆಯ ಹಣ್ಣಿನಂದರಿ’ ಎಂಬುದು ________
1) ಉಪಮಾಲಂಕಾರ✔
2) ರೂಪಕಾಲಂಕಾರ
3) ಉತ್ಪ್ರೇಕ್ಷಾಲಂಕಾರ
4) ದೀಪಕಾಲಂಕಾರ
14. ‘ದೇವರೇ ನೀನೇ ಈ ಸಂಕಟದಿಂದ ಪಾರುಮಾಡು’ . ಈ ವಾಖ್ಯದಲ್ಲಿ ‘ನೀನೇ ‘ ಎಂಬುದು _________ ಅವ್ಯಯ
1) ಕ್ರಿಯಾರ್ಥಕ
2) ಅವಧಾರಣಾರ್ಥಕ✔
3) ಭಾವಬೋಧಕ
4) ಸಂಬೋಧಕವಾಚನ
15. ‘ಪರ್ವತ’ ಎಂಬ ಪದವು ________ ಉದಾಹರಣೆ
1) ಅಂಕಿತನಾಮ
2) ಅನ್ವರ್ಥನಾಮ
3) ರೂಢನಾಮ✔
4) ಭಾವನಾಮ
ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 16 ರಿಂದ 17) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ
16. 1)ಕದ
2) ಮರ
3) ರಾಜಾ✔
4) ಕರಿದು
17. 1) ಭೂಮಿ✔
2) ನೀರು
3) ಭಾನು
4) ಮೀನು
ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 18 ರಿಂದ 22 ರ ವರೆಗೆ ) ತದ್ಭವ ಪದಗಳನ್ನು ಬರೆಯಿರಿ
18. ಯುಗ್ಮ
1) ಜುಗ್ಗ✔
2)ಯುಗ
3) ಜುಗ
4) ಜನಿವಾರ
19. ಪತಿವ್ರತೆ
1) ಹದಿಬದೆ✔
2) ಗ್ರಹಿಣಿ
3) ಸಾವಿತ್ರಿ
4) ಹೆಂಗಸು
20. ಭಾಷಾ
1) ಭಾಸೆ
2) ಭಾಷೆ✔
3) ಭಾಸಾ
4) ಬಾಶಾ
21. ಯಜ್ಞ
1) ಯಾಗ
2) ಹವಾನ
3) ಜನ್ನ✔
4) ಹೋಮ
22. ಕಪಟ
1) ಗಪತಾ
2) ವಂಚನೆ
3) ಕಾವಲು✔
4) ಕವದು
23. ಇದು ಅಚ್ಚಗನ್ನಡದ ಒಂದು ಪದ
1) ಗ್ರಾಮ
2) ರಾಜ್ಯ
3) ಊರು✔
4) ಭಾಷೆ
24. ಕನ್ನಡ ವರ್ಣಮಾಲೆಯ ವಿವರ ಇರುವ ಕನ್ನಡದ ಒಂದು ಶಾಸನ
1) ಹೆಲ್ಮಿಡಿ ಶಾಸನ
2) ಜಿನವಲ್ಲಭನ ಶಾಸನ
3) ಕೆರೆಸಂತೆ ಶಾಸನ✔
4) ತಳಂಗೆರೆ ಶಾಸನ
25. ಇದು ಕರ್ಮಧಾರೆಯ ಸಮಾಸಕ್ಕೆ ಒಂದು ಉದಾಹರಣೆ
1) ಬೆಳ್ಗೂಡೆ✔
2) ಅರಮನೆ
3) ಅಂಗೈ
4) ಆ ಮನೆ
26. ಕನ್ನಡದ ಮೊಟ್ಟಮೊದಲ ಉಪಲಬ್ದವಾದ ಗ್ರಂಥ
1) ಕವಿರಾಜಮಾರ್ಗ✔
2) ವಡ್ಡಾರಾಧನೆ
3) ವಿಕ್ರಮಾರ್ಜುನ ವಿಜಯಂ
4) ಧಾರ್ಮ ಪರೀಕ್ಷೆ
27. ಇದು ಪಂಪನ ಬಿರುದುಗಳಲ್ಲೊಂದು
1) ಅಮ್ಮನ ಗಂಧವಾರನ
2) ಸರ್ವಜ್ಞ
3) ನಾಡೋಜ✔
4) ಕವಿವರ ಕಾಮಧೇನು
28. ಸ್ವರಕ್ಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ, ಇದನ್ನು ವ್ಯಾಕರಣದಲ್ಲಿ ಹೀಗೆ ಹೇಳುತ್ತಾರೆ
1) ಪ್ರಕೃತಿ ಭಾವ✔
2) ಸಂಧಿ ವಿಕಲ್ಪ
3) ಕೃದಂಕ
4) ವಿಶೇಷಣ
29. ಕೆ. ಎಸ್ . ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರತಿದೆ..?
1) ತೆರೆದ ಬಾಗಿಲು
2) ಮೈಸೂರು ಮಲ್ಲಿಗೆ
3) ದೀಪದ ಮಲ್ಲಿ
4) ದುಂಡು ಮಲ್ಲಿಗೆ✔
30. ‘ಅಭಿನವ ಪಂಪ’ ಎಂದು ತನ್ನನ್ನು ಕರೆದುಕೊಂಡ ಕವಿ
1) ಪೊನ್ನ
2) ರನ್ನ
3) ಜನ್ನ
4) ನಾಗಚಂದ್ರ✔
31. ಪಂಪೆಹ ಹರೀಶ್ವರನ ವರಸುತನೆಂದು ತನ್ನನ್ನು ಗುರುತಿಸಿಕೊಂಡ ಕವಿ
1) ಹರಿಹರ
2) ರಾಧವಾನ್ಕ✔
3) ಕುಮಾರವ್ಯಾಸ
4) ಮುದ್ದಣ
32. ಅರ್ಧವನ್ನು ವಿಭಜಿಸಿವುದು ಎನ್ನುವುದಕ್ಕೆ ಹೀಗೆ ಹೇಳುತ್ತಾರೆ
1) ಸಮಾಸ
2) ಸಂಧಿ
3)ವಿಭಕ್ತಿ✔
4) ಕೃದಂಕ
33. ‘ಕನ್ನಡದ ಆದಿಕವಿ’ ಎಂದು ಗುರುತಿಸುವ ಕವಿ
1) ಕುಮಾರವ್ಯಾಸ
2) ಪಂಪ✔
3ಜನ್ನ
4) ರನ್ನ
34. ‘ಅಶ್ವತ್ಥಾಮನ್’ ಇದು __________ ನಾಟಕ
1) ಸಾಮಾಜಿಕ
2) ಚಾರಿತ್ರಿಕ
3) ಸುಖಾಂತ
4) ದುರಂತ✔
35. ಕನ್ನಡಲ್ಲಿ ಒಟ್ಟು ______ ವಿಭಕ್ತಿ ಪ್ರತ್ಯಯಗಳಿವೆ
1) 6
2) 7
3) 8✔
4) 9
36. ದಾಖಲೆ ಇರುವ ಕನ್ನಡದ ಅತ್ಯಂತ ಪ್ರಾಚಿನ ಪದ
1) ಅಗಸ
2) ಆಗಸ
3) ಇಸಿಲ✔
4) ಕಣ್ಣಿಲ
ಕೆಳಗಿನ ಕ್ರಿಯಾಪದವನ್ನು ( ಪ್ರಶ್ನೆ 37ಮತ್ತು 38 ) ನಿಷೇದಾರ್ಥಕದಲ್ಲಿ ಬರೆಯಿರಿ
37. ಬಂದನು
1) ಬರುವುದಿಲ್ಲ
2) ಬರನು✔
3) ಬಾರನು
4) ಬರಲಾರನು
38. ತಿನ್ನಿ
1) ತಿನ್ನನು
2) ತಿನ್ನುವುದಿಲ್ಲ
3) ತಿನ್ನರು
4) ತಿನ್ನೇನು✔
39. ಬಟ್ಟೆ – ಈ ಪದದ ನಾನಾರ್ಥಗಳು ಯಾವುವು..?
1) ವಸ್ತ್ರ ಮತ್ತು ಭೂಮಿ
2) ವಸ್ತ್ರ ಮತ್ತು ಸೂರ್ಯ
3) ವಸ್ತ್ರ ಮತ್ತು ಮರ
4) ವಸ್ತ್ರ ಮತ್ತು ದಾರಿ✔
40. ಕೆಳಗಿನವುಗಳಲ್ಲಿರುವ ಅನುಕರಣವಾಚಿ ಪದವನ್ನು ಗುರುತಿಸಿ
1) ಊರೂರು
2) ಅಲ್ಲಲ್ಲಿ
3) ಸರಸರ✔
4) ಮರಗಿಡ
41. ‘ಭಕ್ತಿ ಭಂಡಾರಿ’ – ಎಂದು ಪ್ರಸಿದ್ಧರಾದ ವಚನಕಾರರು ಯಾರು..?
1) ಅಲ್ಲಮಪ್ರಭು
2) ಬಸವಣ್ಣ✔
3) ಅಂಬಿಗರ ಚೌಡಯ್ಯ
4) ಸಿದ್ದರಾಮ
42. ಕುಮಾರವ್ಯಾಸನ ಕೃತಿ ಯಾವುದು ..?
1) ಜೈಮಿನಿ ಭಾರತ
2) ತೊರೆವೆ ರಾಮಾಯಣ
3) ಕರ್ನಾಟಕ ಭಾರತ ಕಥಾಮಂಜರಿ✔
4) ಶ್ರೀ ರಾಮಾಯಣ ದರ್ಶನಂ
43. ಕಾರಕರಿಸು ಪದದ ಸಮಾನಾರ್ಥಕ ಪದ ______
1) ಕಳವಳ
2) ಮಿತಿಮೀರಿ
3) ಊರುಗೋಲು
4) ಚಿಂತಿಸು✔
44. ‘ನಜಭಜಜಂಜರಂ’ ಇದು ಯಾವ ವೃತ್ತದ ಲಕ್ಷಣ
1) ಚಂಪಕಮಾಲೆ✔
2) ಮಹಾ ಗ್ರಸ್ಥರೆ
3) ಉತ್ಪಲ ಮಾಲೆ
4) ಶಾರ್ದೂಲವಿಕ್ರೀಡಿತ
45. ‘ಇವನೊಬ್ಬ’ – ಈ ಪದದಲ್ಲಿರುವ ಸಂಧಿ ಯಾವುದು
1) ಆಗಮ ಸಂಧಿ
3) ಲೋಪ ಸಂಧಿ✔
3) ಆದೇಶ ಸಂಧಿ
4) ಸವರ್ಣದೀರ್ಘ ಸಂಧಿ
46. ಉಣ್ಮು ಎಂದರೆ
1) ಹೊರಹೊಮ್ಮು✔
2) ಉಬ್ಬಿರುವ
3) ಉಂಟು
4) ಉಡು
47. ವರ್ಧಕ ಷಟ್ಪದಿಯ 3 ಮತ್ತು ಆರನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು..?
1) 28
2) 30
3) 32✔
4) 34
48. ‘ಬದುಕು’ ಬದಲಿಸಬಹುದು – ಮಿದು ಯಾರ ಕೃತಿ
1) ವೈದೇಹಿ
2) ನೇಮಿಚಂದ್ರ✔
3) ಮಾಲತಿ ಪಟ್ಟಣಶೆಟ್ಟಿ
4) ಜಿ. ಎಸ್. ಶಿವರುದ್ರಪ್ಪ
49. ‘ಮಾಡುವುದಕ್ಕೆ ಧೃಢಮನಸ್ಸು ಬೇಕು ಚಾರಣ ಸಂಕಲ್ಪಶಕ್ತಿ‘
A B C D E
– ಈ ವಾಖ್ಯದ ಸರಿಯಾದ ರೂಪ
1) ABCDE
2) BDEAC
3) DABEC✔
4) EABDC
50. ಮಗು ಹುಟ್ಟಿತು ಇದು
1) ಸಕರ್ಮಕ ಕ್ರಿಯಾಪದ
2) ಅಕರ್ಮಕ ಕ್ರಿಯಾಪದ✔
3) ಪೂರ್ಣ ಕ್ರಿಯಾಪದ
4) ಸಾಪೇಕ್ಷ ಕ್ರಿಯಾಪದ
51. ಕಿವಿ ನೆಟ್ಟಗಾಗು
1. ಇನ್ನೊಬ್ಬರ ಮಾತಲ್ಲಿ ಬಾಯಿಹಾಕು
2. ಕದ್ದು ಕೇಳು
3. ಕಿವಿ ಎತ್ತರಿಸು
4. ಕುತೂಹಲ ಹೆಚ್ಚಾಗು✔
52. ಎಂಜಲು ಕೈಯಲ್ಲಿ ಕಾಗೆ ಓಡಿಸಿದವ
1. ಪಕ್ಷಿಯನ್ನು ಗೌರವಿಸುವನು
2. ಸಂಪ್ರದಾಯವಾದಿ
3. ಸೂಕ್ಷ್ಮ ಸ್ವಭಾವ
4. ಜಿಪುಣ✔
53. ಹಿತ್ತಾಳೆ ಕಿವಿ
1. ಕಿವಿ ಕೇಳಿಸದವ
2. ಚುರುಕು ಬುದ್ದಿ
3. ಚಾಡಿ ಮಾತು ಕೇಳುವ ಸ್ವಭಾವ✔
4. ಒಂದು ಬಗೆಯ ಕಿವಿಯ ಆಭರಣ
54. ಹೊಟ್ಟೆಗೆ ಹಾಕಿಕೊ
1. ಕ್ಷಮಿಸು✔
2. ಚೆನ್ನಾಗಿ ತಿನ್ನು
3. ಕಾಣದ ಹಾಗೆ ಇಡು
4. ಮರೆತು ಬಿಡು
55. ಎದೆ ತಟ್ಟಿ ಹೇಳು
1. ಜಂಭದಿಂದ ಹೇಳು
2. ಅಹಂಕಾರದಿಂದ ಹೇಳು
3. ವಿನಯದಿಂದ ಹೇಳು
4. ಧೈರ್ಯದಿಂದ ಹೇಳು✔
56. ತಿರುಕನ ಕನಸು
1. ಭಿಕ್ಷುಕನ ಕನಸು
2. ನನಸಾಗದ ಇಚ್ಚೆ✔
3. ಈಡೇರದ ಬಯಕೆ
4. ಬಡವನ ಬದುಕು
57. ಗಗನ ಕುಸುಮ
1. ಕೈಗೆ ಎಟುಕದ್ದು✔
2. ಸುಂದರವಾದ ಹೂವು
3. ಹುಣ್ಣಿಮೆ ಚಂದ್ರ
4. ಆಕಾಶದ ನಕ್ಷತ್ರ
58. ಅಧಿಕ ಪ್ರಸಂಗ ಮಾಡು
1. ಹೆಚ್ಚಿಗೆ ಮಾತಾಡು
2. ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಭಾಗವಹಿಸು✔
3. ಅಲ್ಲದ ಕೆಲಸ ಮಾಡು
4. ಕೋಪಗೊಳ್ಳು
59. ಮೈ ಬಗ್ಗಿಸು
1. ತಲೆಬಾಗಿ ನಡೆ
2. ಶರಾಣಗು
3. ಶ್ರಮಪಡು✔
4. ಯೋಗಮಾಡು
60. ‘ ಸದಭಿರುಚಿ’ ಈ ಪದವನ್ನು ಬಿಡಿಸಿದಾಗ
1. ಸದ್+ ಅಭಿರುಚಿ
2. ಸದ್ಯ + ಅಭಿರುಚಿ
3. ಸತ್ + ಅಭಿರುಚಿ✔
4. ಸತ್ + ಅಭಯರುಚಿ
61. ‘ ಗುಲಾಬಿ’ ಯಾವ ಭಾಷೆಯ ಪದ?
1. ಇಂಗ್ಲೀಷ್
2. ಪೋರ್ಚುಗೀಸ್
3. ಕನ್ನಡ
4. ಉರ್ದು✔
62. ‘ ಪಶ್ಚಿಮ’ ಕ್ಕೆ ಕನ್ನಡದಲ್ಲಿ ಏನೆನ್ನುವರು?
1. ಮೂಡಣ
2. ಪಡುವಣ✔
3. ತೆಂಕಣ
4. ಬಡಗಣ
ಈ ಕೆಳಗೆ ( ಪ್ರಶ್ನೆ ಸಂಖ್ಯೆ 63 ರಿಂದ 67 ರವರೆಗೆ) ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಡವಾಗಿದೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.
63. P. ಹರಿಹರನು ರಾಜನಾಗಿ ತನ್ನ ಸಹೋದರರ ನೆರವನ್ನು ಪಡೆದನು.
Q. ಇವರು ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿ ಕನ್ನಡ ಸಂಸ್ಕøತಿಯನ್ನು ಬೆಳೆಸಿದರು.
R. ರಾಜ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಒಬ್ಬೊಬ್ಬರನ್ನು ಒಂದೊಂದು ಭಾಗಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.
S.ವಿಜಯನಗರ ಸಾಮ್ರಾಜ್ಯ ಸಂಗಮ ಪುತ್ರರಾದ ಹಕ್ಕ- ಬುಕ್ಕರಿಂದ ಸ್ಥಾಪಿತವಾಯಿತು.
1)QRSP
2)PQRS
3)SRQP
4)SQPR✔
64. P. ಕೆಲವರ ಬದುಕು ಸ್ವಾರಸ್ಯಕರವಾಗಿದ್ದರೂ ಸಾಧಾರಣ ಕೃತಿಗಳನ್ನು ರಚಿಸಿದ್ದಾರೆ.
Q. ಒಂದು ಭಾಷೆಯನ್ನೆ ಶ್ರೀಮಂತಗೊಳಿಸುವಂತಹ ಕೃತಿಗಳನ್ನು ರಚಿಸಿ ಕಣರೆಯಾಗಿದ್ದಾರೆ.
R. ಕೆಲವರು ದೊಡ್ಡ ಲೇಖಕರಾಗಿ ಹೋಗಿದ್ದಾರೆ.
S. ಆದರೆ ಅಂತಹವರ ಬದುಕು ಸ್ವಾರಸ್ಯಕರವಾಗಿರುವುದಿಲ್ಲ.
1)PSRQ
2)RQSP✔
3)SQPR
4)QRPS
65. P. ಇದು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯುತ್ತಾರೆ.
Q. ಕ್ರಿ.ಶ 700 ರ ಬಾದಾಮಿ ಶಾಸನದ ಮೂರು ಪದ್ಯಗಳಲ್ಲಿ ಪ್ರಥಮ ದರ್ಶನವಾಗುತ್ತದೆ.
R.ನಾಗವರ್ಮನು ತನ್ನ ಕೃತಿಯಲ್ಲಿ ಉಲ್ಲೇಖಿಸಿರುವ ‘ ಏಳೆ’ ತ್ರಿಪದಿಗೆ ಮೂಲವಾಗಿರಬೇಕು.
S. ತ್ರಿಪದಿ ನಮಗೆ ಉಪಲಬ್ಧವಾದ ಅತ್ಯಂತ ಪ್ರಾಚೀನ ಛಂದೋರೂಪ.
1)SQPR✔
2)PSRQ
3)QSRP
4)RPQS
66. P. ಮನುಷ್ಯನು ಮಾತ ಮಾತನಾಡುವ ಕಲೆ ಬಲ್ಲವನಾಗಿದ್ದಾನೆ.
Q. ಈ ಜೀವಜಾಲದಲ್ಲಿ ಕೆಲವೆ ಕೆಲವು ಜೀವಿಗಳು ಮಾತ್ರ ಧ್ವನಿ ಉತ್ಪಾದಿಸುವವುಗಳಾಗಿವೆ. ಅವುಗಳಲ್ಲಿ
R. ಮನುಷ್ಯನ ಮಾತಿಗೆ ಪೂರಕವಾಗಿ ನಗುವೆಂಬ ಅನುಭವದ ಆಭರಣವನ್ನು ದೇವನಿತ್ತ ಕೊಡುಗೆ.
S. ಪ್ರಪಂಚದಲ್ಲಿ ಎಂಬತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂಬ ತರ್ಕವಿದೆ.
1)QPSR
2)SPRQ
3)RSPQ
4)SQPR✔
67. P. ಚಂಪುವಿನ ಮೊದಲ ಉಲ್ಲೇಖ 2ನೆಯ ನಾಗವರ್ಮನ ಗ್ರಂಥದಲ್ಲಿ ಬಂದಿದೆ.
Q. ಆದರೆ ಅವನ್ನು ಚಂಪುವೆಂದು ಕರೆದವರು ವಿರಳ.
R. ಅವನ ಸಮಕಾಲೀನನಾದ ಉದಯಾದಿತ್ಯನ ಗ್ರಂಥದಲ್ಲಿಯೂ ಬಂದಿದೆ.
S. ಕನ್ನಡ ಕವಿಗಳಲ್ಲಿ ಕೆಲವರು ಮೊದಲಿನಿಂದಲೇ ಚಂಪುಗಳನ್ನು ಬರೆದಿದ್ದಾರೆ
1) RSQP
2)QPRS
3)SQPR✔
4)PRSQ
ಕೆಳಗಿನ ಪದಗಳಿಗೆ ( ಪ್ರಶ್ನೆ ಸಂಕ್ಯೆ 68 ರಿಂದ 77) ವಿರುದ್ಧಾರ್ಥಕ ಪದಗಳನ್ನು ಗುರುತಿಸಿ.
68. ತಿರೆ
1. ಕ್ಷೋಣಿ
2. ಅವನಿ
3. ಭೂಲೋಕ
4. ಆಕಾಶ✔
69. ಉಕ್ತ
1. ನಿರುಕ್ತ
2. ಅನುಕ್ತ✔
3. ಮರುಕ್ತ
4. ಸೆರುಕ್ತ
70. ಪರ್ಣ
1. ಅಪರ್ಣ✔
2. ವಿಪರ್ಣ
3. ಸುಪರ್ಣ
4. ಕುಪರ್ಣ
71. ಮುಂಚು
1. ಹೆಂಚು
2. ಕಂಚು
3. ಸಂಚು
4. ಹಿಂಚು✔
72. ಕಲಿ
1. ವೀರ
2. ಧೀರ
3. ಶೂರ
4. ಹೇಡಿ✔
73. ಇಂಬೆಳಕು
1. ಚಂಬೆಳಕು
2. ಹೊಂಬೆಳಕು
3. ನಿಂಬೆಳಕು
4. ನಿರ್ಬೆಳಕು✔
74. ಅಂತಿಕ
1. ಸಮೀಪ
2. ದೂರ✔
3. ಕೊನೆಯ
4. ಹತ್ತಿರ
75. ಭೂಯಿಷ್ಟ
1. ಅತಿಶಯವಾದ
2. ಹೆಚ್ಚಾದ
3. ಅಧಿಕ
4. ಕನಿಷ್ಠ✔
76. ಸೊಲಪು
1. ಒನಪು
2. ಅರಿಪು
3. ಸಬಲ
4. ಗಂಭೀರ✔
77. ಉದಕ
1. ಸಾಧಕ
2. ಬಾಧಕ
3. ಅಧಿಕ
4. ಅಗ್ನಿ✔
ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ ( ಪ್ರಶನೆ 78 ರಿಂದ 81 ವರೆಗೆ) ಒಂದು ಪದ ಉಳಿದ್ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ
78. 1) ಕಾರು
2) ಲಾರಿ
3) ಬಸ್ಸು
4) ಸೈಕಲ್✔
79. 1) ಬುದ್ಧ✔
2) ಬಸವ
3) ಆಲಮ
4) ಜಂಗಮ
80. 1) ಕುದುರೆ
2) ನಾಯಿ
3) ಸಿಂಹ
4) ಹಾವು✔
81. 1) ಆನೆ
2) ಕುದುರೆ
3) ರಥ
4) ಒಂಟೆ✔
ಕೆಳಗಿನ ವಾಕ್ಯಗಳಲ್ಲಿ ( ಪ್ರಶ್ನೆ ಸಂಖ್ಯೆ 82 ರಿಂದ 90 ರ ವರೆಗೆ ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪ್ಪಿಲ್ಲದಿದ್ದರೆ ‘ತಪ್ಪಿಲ್ಲ’ ಎಂದು ಗುರುತಿಸಿ
82. ಪಾಂಡವರು ಕಳುಹಿಸಿದ ಕೃಷ್ಣಸಂಧಾನ ಮುರಿದುಬಿತ್ತು
1) ಕೃಷ್ಣಮ್ ಸಂಧಾನ
2) ಕೃಷ್ಣಾ ಸಂದಾನ
3) ಕೃಷ್ಣಾ ಸಂಧಾನ
4) ತಪ್ಪಿಲ್ಲ✔
83. ಬ್ರಾಹ್ಮಣನಿಗೆ ಮಂತ್ರನುಷ್ಠಾನವೇ ಆಧಾರ
1) ಮುಂತಾನುಷ್ಠಾನ
2) ಮಂತ್ರನಷ್ಠಾನ
3) ಮಂತ್ರಾನುಷ್ಠಾನ✔
4) ತಪ್ಪಿಲ್ಲ
84. ಸಭೆ ಹರ್ಷೋದ್ಗಾರದಿಂದ ಮುಗಿಯಿತು
1) ಹರ್ಷೋದ್ಗಾರ✔
2) ಹರ್ಷೋದ್ಗರ
3) ಹರ್ಷೋದ್ಗಾರಾ
4) ತಪ್ಪಿಲ್ಲ
85. ಅವರು ದೃಢೀಕರಣ ಕೇಳಿದರು
1) ಧೃಡೀಕರಣ
2) ದೃಢೀಕರಣ✔
3) ದ್ರುಢೀಕರಣ
4) ಧೃಢೀಕರಣ
86. ಕೋಟ್ಯಂತರ ರೂಪಾಯಿ ಹಗರಣವನ್ನು ಬಯಲಿಗೆಳೆದರು
1) ಕೋಟ್ಯಾಂತರ
2) ಕೋಟ್ಯಂತಾರ
3) ಕೋಟಿಯಂತರ
4) ತಪ್ಪಿಲ್ಲ✔
87. ಸಾಲಭಾಧೆಯಿಂದ ನರಳಿದರು
1) ಸಾಲಭಾಧೆ
2) ಸಾಲಬಾಧೆ✔
3) ಸಾಲಬಾದೆ
4) ತಪ್ಪಿಲ್ಲ
88. ಒಳ್ಳೆಯ ಕಾರ್ಯಕ್ಕೆ ಮೀನಾಮೇಷ ಎಣಿಸಬಾರದು
1) ಮೀನಮೇಷ✔
2) ಮೀನಾಮೇಶ
3) ಮೀನಮೇಸ
4) ತಪ್ಪಿಲ್ಲ
89. ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ
1) ಪಶುಪತಸ್ತ್ರ
2) ಪಾಶಪತುಸ್ತ್ರ
3) ಪಾಶುಪಾತಾಸ್ತ್ರ
4) ತಪ್ಪಿಲ್ಲ✔
90. ರಾಮ ಕ್ಷತ್ರಧರ್ಮದಲ್ಲೇ ನಡೆದ
1) ಕ್ಷತಿಧರ್ಮ
2) ಕ್ಷಾತ್ರಧರ್ಮ✔
3) ಕ್ಷಾತ್ರಧಾರ್ಮ
4) ತಪ್ಪಿಲ್ಲ
ಕೆಳಗಿನ ಪದಗಳಿಗೆ (ಪ್ರಶ್ನೆ 91 ರಿಂದ 100 ರ ವರೆಗೆ) ಸರಿಯಾದ ಅರ್ಥವನ್ನು ಗುರುತಿಸಿ
91. ಅಂತರ್ಧಾನ
1) ಮಾಯಾಜಾಲ
2) ಅರ್ಥೈಸಿಕೋ
3) ಮಾಯವಾಗು✔
4) ಜೀರ್ಣಿಸಿಕೊ
92. ಅಡಕ
1) ಅಡಗಿಸು
2) ಲಗತ್ತಿಸು✔
3) ದೊಡ್ಡದು ಮಾಡು
4) ಅಡಕೆ
93. ಉಂಡಲಿಗೆ
1) ಉಂಡನಾಳಿಗೆ
2) ಎಳ್ಳುಂಡೆ
3) ಕಜ್ಜಾಯ
4) ಕಡುಬು✔
94. ಖೇದ
1) ಇಂದ್ರ
2) ಖೇಚರ
3) ಭಾನು
4) ಹಳ್ಳಿ✔
95. ಅಲಿನಿ
1) ಮರಿದುಂಬಿ
2) ಹೆಣ್ಣುದುಂಬಿ✔
3) ಗಂಡುದುಂಬಿ
4) ದೊಡ್ಡದುಂಬಿ
96. ಕೂಷ್ಮಾಂಡ
1) ಸೋರೆಕಾಯಿ
2) ಕುಂಬಳಕಾಯಿ✔
3) ಪಡುವಲಕಾಯಿ
4) ಹೀರೆಕಾಯಿ
97. ಅರ್ಕ
1) ಚಂದ್ರ
2) ಸೂರ್ಯ✔
3) ನಕ್ಷತ್ರ
4) ಆಕಾಶ
98. ವಿಬುಧ
1) ದಡ್ಡ
2) ಸೋಮಾರಿ
3) ಪಂಡಿತ✔
4) ದುಷ್ಟ
99. ತೃಣ
1) ಅಲ್ಪ
2) ಗೀಳು
3) ಹೀನ
4) ಹುಲ್ಲು✔
100. ಪಂಕ
1) ಕಮಲಾ
2) ಕೆಸರು✔
3) ತಿಳಿನೀರು
4) ಪಣ
# ಎಫ್‌ಡಿಎ ಪರೀಕ್ಷೆಯ ಕೆಪಿಎಸ್‌ಸಿ ಕೀ ಉತ್ತರಗಳು ( 28-02-2021 ನಡೆದ ಪರೀಕ್ಷೆ) : ಪತ್ರಿಕೆ-1 | ಸಾಮಾನ್ಯ ಜ್ಞಾನ