GKMultiple Choice Questions SeriesQUESTION BANKQuizScienceSpardha Times

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08

Share With Friends

1. ಧ್ವನಿ ಈ ಕೆಳಗಿನವುಗಳ ಪೈಕಿ ಯಾವುದರಲ್ಲಿ ಚಲಿಸುವುದಿಲ್ಲ..?
ಎ. ಗಾಳಿ
ಬಿ. ಮರಳು
ಸಿ. ನಿರ್ವಾತ ಪ್ರದೇಶ
ಡಿ. ನೀರು

2. ನೀರಿನೊಳಗೆ ವಸ್ತುಗಳನ್ನು ಕಂಡು ಹಿಡಿಯಲು ಬಳಸುವ ತರಂಗ...
ಎ. ಅಲ್ಟ್ರಾವೈಲೆಟ್ ತರಂಗ
ಬಿ. ಎಲೆಕ್ಟ್ರೋಮ್ಯಾಗ್ನೇಟಿಕ್ ತರಂಗ
ಸಿ. ಶ್ರವಣಾತೀತ ತರಂಗ
ಡಿ. ಇನ್‍ಫ್ರಾರೆಡ್ ತರಂಗ

3. ಈ ಕೆಳಕಂಡ ಕೊರತೆಯಿಂದ ಧ್ವನಿಯು ತೆರೆದ ಸ್ಥಳದಲ್ಲಿ ಪ್ರತಿಧ್ವನಿಸುವುದಿಲ್ಲ…
ಎ. ಅಂತಗ್ರಹಣ
ಬಿ. ಪ್ರತಿಬಿಂಬಕ
ಸಿ. ಪ್ರೇಷಕ
ಡಿ. ಹರಡುವ

4. ಮನುಷ್ಯನ ಕಿವಿಗಳಿಗೆ ಕೇಳಿಸುವ ಶಬ್ದ ತರಂಗಗಳನ್ನು —- ಎನ್ನುತ್ತಾರೆ.
ಎ. ಅಸಾಧಾರಣ
ಬಿ. ಶ್ರವ್ಯ
ಸಿ. ಶ್ರವಣಾತೀತ
ಡಿ. ಶ್ರವ್ಯ ಮತ್ತು ಶ್ರವಣಾತೀತ

5. ನೇರಳಾತೀತ ವಿಕಿರಣಗಳನ್ನು ಆವಿಷ್ಕರಿಸಿದವನು..
ಎ. ಡಬ್ಲ್ಯೂ ರಾಂಟ್ಜನ್
ಬಿ. ಟಿ.ಎ. ಎಡಿಸನ್
ಸಿ. ಜೆ.ಡಬ್ಲ್ಯೂ ರಿಟ್ಜರ್
ಡಿ. ಮ್ಯಾಕ್ಸ್‍ಪ್ಲಾಂಕ್

6. ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಪೋಟೋಪ್..
ಎ. ರೇಡಿಯೋಕಾರ್ಬನ್
ಬಿ.ರೇಡಿಯೋಕೋಬಾಲ್ಟ್
ಸಿ. ರೇಡಿಯೋಕಾಫರ್
ಡಿ. ರೇಡಿಯೋರಂಜಕ

7. ಪರಮಾಣು ರಿಯಾಕ್ಟರ್‍ದಿಂದ ಪರಮಾಣುಶಕ್ತಿ ಹೇಗೆ ಉತ್ಪತ್ತಿಯಾಗುತ್ತದೆ..?
ಎ. ಪರಮಾಣುಗಳ ಬೆಸುಗೆಯಿಂದ
ಬಿ. ಪರಮಾಣುಗಳ ಸ್ವಯಂ ಒಡೆಯುವಿಕೆಯಿಂದ
ಸಿ. ಅನಿರ್ಬಂಧಿತ ಸರಪಣಿ ಕ್ರಿಯೆಯಿಂದ
ಡಿ. ನಿರ್ಬಂಧಿತ ಸರಪಳಿ ಕ್ರಿಯೆಯಿಂದ

8. ಮೊದಲ ಪರಮಾಣುಬಾಂಬನ್ನು ತಯಾರಿಸಿದವರು..
ಎ. ಹೆಚ್.ಜೆ. ಭಾಭಾ
ಬಿ. ಐರೀನ್‍ಕ್ಯೂರಿ
ಸಿ. ರುದರ್ ಪೋರ್ಡ್
ಡಿ. ಒಟ್ಟೊಹಾನ್

9. ಭಾರತದಲ್ಲಿ ಪ್ರಪ್ರಥಮ ಅಣುಶಕ್ತಿ ಕೇಂದ್ರವನ್ನು ಸ್ಥಾಪಿಸಿರುವುದು ಈ ರಾಜ್ಯದಲ್ಲಿ….
ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಮಹಾರಾಷ್ಟ್ರ
ಡಿ. ತಮಿಳುನಾಡು

10. ಕೈಗಾ ಅಣುಸ್ಥಾವರ ಇರುವುದು..
ಎ. ಬೆಂಗಳೂರು
ಬಿ. ದಕ್ಷಿಣ ಕನ್ನಡ
ಸಿ. ಉತ್ತರಕನ್ನಡ
ಡಿ. ಬೆಳಗಾವಿ

11. ಭಾರತದ ಮೊಟ್ಟ ಮೊದಲ ಅಣುಸ್ಥಾವರ ಇದಾಗಿದೆ….
ಎ. ನರೋರ
ಬಿ. ಕೈಗಾ
ಸಿ. ಕಲ್ಪಕಂ
ಡಿ. ತಾರಾಪುರ

12. ನರೋರ ಅಣುವಿದ್ಯುತ್ ಕೇಂದ್ರ ಎಲ್ಲಿದೆ..?
ಎ. ಮಹಾರಾಷ್ಟ್ರ
ಬಿ. ಗುಜರಾತ್
ಸಿ. ತಮಿಳುನಾಡು
ಡಿ. ಉತ್ತರಪ್ರದೇಶ

13. ಮೊದಲ ಅಣುಬಾಂಬನ್ನು ಜಪಾನಿನ ಮೇಲೆ ಯಾವ ವರ್ಷ ಹಾಕಲಾಯಿತು..?
ಎ. 1945
ಬಿ. 1939
ಸಿ. 1946
ಡಿ. 1947

14. ಹೈಡ್ರೋಜನ್ ಬಾಂಬ್‍ನ ಕಾರ್ಯದ ತತ್ವವು ಈ ಕೆಳಗಿನವುಗಳಲ್ಲಿ ಯಾವುದನ್ನು ಆಧರಿಸಿದೆ..?
ಎ. ರಾಸಾಯನಿಕ ಪ್ರತಿಕ್ರಿಯೆ
ಬಿ. ಪರಮಾಣು ಬೀಜ ಸಮ್ಮಿಲನ
ಸಿ. ಪರಮಾಣು ಬೀಜ ವಿದಳನ
ಡಿ. ಸ್ವಾಭಾವಿಕ ವಿಕಿರಣಪಟುತ್ವ

15. ಸೂರ್ಯನ ಅಗಾಧ ಶಕ್ತಿಗೆ ಈ ಕ್ರಿಯೆ ಕಾರಣ….
ಎ. ಬೈಜಿಕ ವಿದಳನ
ಬಿ. ಬೈಜಿಕ ಸಮ್ಮಿಲನ
ಸಿ. ಪರಮಾಣು ವಿಕಿರಣ ಕ್ರಿಯೆ
ಡಿ. ಬೈಜಿಕ ವಿದಳನ ಮತ್ತು ಸಮ್ಮಿಲನ

16. ನ್ಯೂಕ್ಲಿಯರ್ ರಿಯಾಕ್ಟರ್‍ನಲ್ಲಿ ಈ ಕೆಳಕಂಡವುಗಳಲ್ಲಿ ನ್ಯೂಟ್ರಾನ್‍ಗಳನ್ನು ಹೀರಿಕೊಳ್ಳುವ ಯಾವ ಸಾಮಗ್ರಿಯನ್ನು ಬಳಸಲಾಗುತ್ತದೆ..?
ಎ. ಸೀಸ
ಬಿ. ಸತು
ಸಿ. ಯುರೇನಿಯಂ
ಡಿ. ಕ್ಯಾಡ್ಮಿಯಂ

17. ಒಂದು ಉಪಗ್ರಹ ಭೂಸ್ಥಿರ ಪಥದಲ್ಲಿ ಭೂಮಿಯ ಸುತ್ತಲೂ ಸಮನಾಂತರ ವೇಗದಿಂದ ಭೂಮಧ್ಯರೇಖೆಯ ಮೇಲೆ ಸುತ್ತುವ ಅವಧಿ..
ಎ. ವರ್ಷಕ್ಕೊಮ್ಮೆ
ಬಿ. ದಿನಕ್ಕೊಮ್ಮೆ
ಸಿ. ಮೂರು ತಿಂಗಳಿಗೊಮ್ಮೆ
ಡಿ. ಹತ್ತು ವರ್ಷಗಳುಗೊಮ್ಮೆ

18. ಭಾರತದಲ್ಲಿ ಉಪಗ್ರಹಗಳನ್ನು ನಿಯಂತ್ರಿಸುವ ಮುಖ್ಯ ಕೇಂದ್ರ ಎಲ್ಲಿದೆ..?
ಎ. ಶ್ರೀಹರಿಕೋಟಾ
ಬಿ. ತುಂಬಾ
ಸಿ. ಹಾಸನ
ಡಿ. ಬೆಂಗಳೂರು

19. ಆರ್ಯಭಟ ಒಬ್ಬ ಪ್ರಸಿದ್ಧ..
ಎ. ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ
ಬಿ. ವೈದ್ಯ ಮತ್ತು ಗಣಿತ ಶಾಸ್ತ್ರಜ್ಞ
ಸಿ. ಖಗೋಳಶಾಸ್ತ್ರಜ್ಞ ಮತ್ತು ವೈದ್ಯ
ಡಿ. ವೈದ್ಯ ಹಾಗೂ ಜೋತಿಷಿ

20. ಭಾರತ ಹಾರಿಸಿದ ಮೊದಲ ಉಪಗ್ರಹ..
ಎ. ಆರ್ಯಭಟ
ಬಿ. ಭಾಸ್ಕರ
ಸಿ. ವರಾಹ
ಡಿ. ಇನ್ಸಾಟ

# ಉತ್ತರಗಳು :
1. ಸಿ. ನಿರ್ವಾತ ಪ್ರದೇಶ
2. ಸಿ. ಶ್ರವಣಾತೀತ ತರಂಗ
3. ಬಿ. ಪ್ರತಿಬಿಂಬಕ
4. ಬಿ. ಶ್ರವ್ಯ
5. ಸಿ. ಜೆ.ಡಬ್ಲ್ಯೂ ರಿಟ್ಜರ್
6. ಎ. ರೇಡಿಯೋಕಾರ್ಬನ್
7. ಡಿ. ನಿರ್ಬಂಧಿತ ಸರಪಳಿ ಕ್ರಿಯೆಯಿಂದ
8. ಡಿ. ಒಟ್ಟೊಹಾನ್
9. ಸಿ. ಮಹಾರಾಷ್ಟ್ರ
10. ಸಿ. ಉತ್ತರಕನ್ನಡ
11. ಡಿ. ತಾರಾಪುರ
12. ಡಿ. ಉತ್ತರಪ್ರದೇಶ
13. ಎ. 1945
14. ಬಿ. ಪರಮಾಣು ಬೀಜ ಸಮ್ಮಿಲನ
15. ಬಿ. ಬೈಜಿಕ ಸಮ್ಮಿಲನ
16. ಡಿ. ಕ್ಯಾಡ್ಮಿಯಂ
17. ಬಿ. ದಿನಕ್ಕೊಮ್ಮೆ
18. ಸಿ. ಹಾಸನ
19. ಎ. ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ
20. ಎ. ಆರ್ಯಭಟ

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07

error: Content Copyright protected !!