GKSpardha Times

ಕರ್ನಾಟಕದ ಭೌಗೋಳಿಕ ಸನ್ನಿವೇಶ

Share With Friends

ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ. ಕರ್ನಾಟಕವು ಭಾರತದ ನೈರುತ್ಯ ಭಾಗದಲ್ಲಿದೆ. ಭಾರತದ ರಾಜ್ಯಗಳಲ್ಲಿ ಇದು 8 ನೇಯ ದೊಡ್ಡ ರಾಜ್ಯವಾಗಿದೆ. ಇದು 11 ಡಿಗ್ರಿ ಮತ್ತು 18 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 74 ಡಿಗ್ರಿ ಮತ್ತು 78 ಡಿಗ್ರಿ ಪೂರ್ವ ರೇಖಾಂಶ ನಡುವೆ ವಿಸ್ತಿರಿಸಿದೆ.

ಕರ್ನಾಟಕದ ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ, ನೈರುತ್ಯದಲ್ಲಿ ಕೇರಳ ರಾಜ್ಯಗಳಿವೆ. ಪಶ್ಚಿಮದಲ್ಲಿ ಸಮುದ್ರವಿದೆ. ರಾಜ್ಯದಲ್ಲಿ 310 ಜಿಲ್ಲೆಗಳು ಮತ್ತು 227 ತಾಲ್ಲೂಕುಗಳಿವೆ.

ಕರ್ನಾಟಕ : ಪ್ರಾಕೃತಿಕ ವಿಭಾಗಗಳು
ಕರ್ನಾಟಕವು ಭಾರತದ ಪರ್ಯಾಯ ಪ್ರಸ್ಥಭೂಮಿಯ ಒಂದು ಭಾಗವಾಗಿದ್ದು, ವಿವಿಧ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು.
1.ಕರಾವಳಿ ಪ್ರದೇಶ
2.ಮಲೆನಾಡು
3.ಮೈದಾನ

1.ಕರಾವಳಿ ಪ್ರದೇಶ :
ಇದು ಕರ್ನಾಟಕದ ಪಶ್ಚಿಮ ಭಾಗ, ಮಲೆನಾಡು ಮತ್ತು ಅರಬೀ ಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಉತ್ತರದಲ್ಲಿ ಗೋವಾ ತೀರದಿಂದ ದಕ್ಷಿಣದಲ್ಲಿ ಕೇರಳ ತೀರದವರೆಗೆ (324 ಕಿ.ಮೀ) ವ್ಯಾಪಿಸಿದೆ. ಇದರಲ್ಲಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳು ಸೇರಿವೆ. ರಾಜ್ಯದ ಕರಾವಳಿ ಉತ್ತರದಲ್ಲಿ ಕಿರಿದಾಗಿದ್ದು, ದಕಿಣದಲ್ಲಿ ಅಗಲವಾಗಿದೆ. ಈ ಮೂಲಕ ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ಅನೇಕ ನದಿಗಳು ದಾಟುತ್ತವೆ. ತೀರಕ್ಕೆ ಸಮೀಪದಲ್ಲಿ ದ್ವೀಪಗಳಿವೆ. ಉದಾ: ಸೆಂಟ್‍ಮೇರಿ ದ್ವೀಪ (ಕೋಕನಟ್ ದ್ವೀಪ). ಈ ಕರಾವಳಿಯಲ್ಲಿ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರಿದೆ. ಅದನ್ನು “ ಕರ್ನಾಟಕದ ಹೆಬ್ಬಾಗಿಲು)” ಎನ್ನುವರು.

2.ಮಲೆನಾಡು :
ಇದು ಗುಡ್ಡಗಾಡು ಪ್ರದೇಶವಾಗಿದ್ದು, ಕರಾವಳಿ ಮತ್ತು ಮೈದಾನಗಳ ನಡುವೆ ವಿಸ್ತರಿಸಿದೆ. ಇದನ್ನು “ಸಹ್ಯಾದ್ರಿ ಸರಣಿಗಳು” ಎಂತಲೂ ಕರೆಯಲಾಗುತ್ತದೆ. ಇದು ಕರ್ನಾಟಕದ ಅತಿ ಪ್ರಮುಖ ಪ್ರಾಕೃತಿ ವಿಭಾಗ. ಇಲ್ಲಿ ಹೆಚ್ಚು ಮಳೆ ಬೀಳುವುದರಿಂದ ದಟ್ಟವಾದ ಅರಣ್ಯ ಹಾಗೂ ವನ್ಯಧಾಮಗಳಿವೆ. ಅನೇಕ ನದಿಗಳು ಇಲ್ಲಿ ಉಗಮವಾಗುತ್ತದೆ. ರಾಜ್ಯದಲ್ಲೆ ಅತಿ ಹೆಚ್ಚು ಮಳೆ ಬೀಳುವ “ ಆಗುಂಬೆ” ಈ ವಿಭಾಗದಲ್ಲಿದೆ. ಕೆಲವು ಎತ್ತರವಾದ ಬೆಟ್ಟಗಳೂ ಇವೆ. ಅವುಗಳಲ್ಲಿ ಒಂದಾದ “ಮುಳ್ಳಯ್ಯನಗಿರಿ’ (1913 ಮೀ) ರಾಜ್ಯದಲ್ಲೇ ಎತ್ತರವಾದುದು.

3.ಮೈದಾನ ಪ್ರದೇಶ :
ಇದು ಮಲೆನಾಡಿನಿಂದ ಪೂರ್ವ ಭಾಗದಲ್ಲಿದ್ದು, ಏರುದಿಣ್ಣೆಗಳಿಂದ ಕೂಡಿದ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಇದನ್ನು ಈ ಪ್ರದೇಶದ ಮಧ್ಯ ಭಾಗದಲ್ಲಿ ಹರಿಯುವ ತುಂಗಭಧ್ರಾ ನದಿಯನ್ನಾಧರಿಸಿ ಎರಡು ವಿಭಾಗಗಳಾಗಿ. ಅವುಗಳೆಂದರೆ: ಉತ್ತರ ಮೈಧಾನ ಮತ್ತು ದಕ್ಷಿಣ ಮೈದಾನ

ಎ.ಉತ್ತರ ಮೈಧಾನ ;ಸಮತಟ್ಟಾದ ಮೇಲ್ಮೈವುಳ್ಳ ವಿಶಾಲವಾದ ಪ್ರಸ್ಥಭೂಮಿ. ಅಲ್ಲಲ್ಲಿ ಕೆಲವು ಚಪ್ಪಟೆ ಮೇಲ್ತುದಿಯನ್ನುಳ್ಳ ಬೆಟ್ಟಗಳಿವೆ. ಈ ಮೈಧಾನದ ಬಾಗವು ಬಸಾಲ್ಟ್ ಶಿಲೆಗಳಿಂದ ರಚಿತವಾಗಿದ್ದು, ಕಪ್ಪು ಮಣ್ಣಿನಿಂದ ಆವರಿಸಿದೆ. ಇದು ಪೂರ್ವದ ಕಡೆಗೆ ಇಳಿಜಾರು ಹೊಂದಿದೆ. ಇದನ್ನು ಅನುಸರಿಸಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತವೆ. ಉತ್ತರದ ಮೈದಾನವು ಅತಿ ಕಡಿಮೆ ಮಳೆಯನ್ನು ಪಡೆಯುತ್ತದೆ.

ಬಿ.ದಕ್ಷಿಣ ಮೈಧಾನ : ಇದನ್ನು ಮೈಸೂರು ಪ್ರಸ್ಥಭೂಮಿ ಎಂದು ಕರೆಯಲಾಗಿದೆ. ಇದು ಸಾಕಷ್ಟು ಏರುದಿಣ್ಣೆಗಳನ್ನುಳ್ಳ ಮೇಲ್ಮೈ ಲಕ್ಷಣ ಹಾಗೂ ಬೆಟ್ಟಗಳ ಸಾಲುಗಳನ್ನು ಹೊಂದಿದೆ. ಅವುಗಳೆಂದರೆ- ಬಿಳಿಗಿರಿರಂಗನ ಬೆಟ್ಟ, ಮಲೆಮಹಾದೇಶ್ವರ ಬೆಟ್ಟ, ನಂದಿ ಬೆಟ್ಟ, ಚಾಮುಂಡಿ ಬೆಟ್ಟ ಮೊದಲಾದವಿ. ಉತ್ತರದ ಮೈದಾನದಂತೆ ಇದೂ ಸಹ ಪೂರ್ವದ ಕಡೆಗೆ ಇಳಿಜಾರಿದೆ. ಅದನ್ನನುಸರಿಸಿ ‘ಕಾವೇರಿ ನದಿ’ ಹರಿಯುವುದು.ಈ ಪ್ರಾಕೃತಿಕ ವಿಭಾಗದ ಬಹುಭಾಗವು ಕೆಂಪು ಮಣ್ಣಿನಿಂದ ಕೂಡಿದೆ. ಉತ್ತರದ ಮೈದಾನಕ್ಕಿಂತ ಈ ವಿಭಾಗದಲ್ಲಿ ಹೆಚ್ಚು ಮಳೆ ಬೀಳುವುದು.