➤ ಬಹುಆಯ್ಕೆಯ ಪ್ರಶ್ನೆಗಳ ಸರಣಿ – 3
1. ಪ್ರವಾದಿ ಮಹಮದನು ಜನಿಸಿದ್ದು ಎಲ್ಲಿ?
ಎ. ಜೇರುಸೇಲಂ ಬಿ. ಮನಾಮ
ಸಿ. ಮೆಕ್ಕಾ ಡಿ. ಕಾಬೂಲ್
2. ಗ್ರೀಸನಲ್ಲಿ ಮೊದಲ ಒಲಂಪಿಕ್ ಕ್ರೀಡೆಗಳು ಯಾವಾಗ ನಡೆದವು?
ಎ. ಕ್ರಿ.ಪೂ.740 ಬಿ. ಕ್ರಿ.ಪೂ. 780
ಸಿ. ಕ್ರಿ.ಪೂ.760 ಡಿ. ಕ್ರಿ.ಪೂ.776
3. ಕ್ರಿ.ಶ. 1492 ರಲ್ಲಿ ವೆಸ್ಟ್ ಇಂಡೀಸ್‍ನ್ನು ಯಾರು ಶೋಧಿಸಿದರು?
ಎ. ವಾಸ್ಕೋಡಿಗಾಮಾ
ಬಿ. ಕೊಲಂಬಸ್ ಸಿ. ಪಿಯರ್ರೆ
ಡಿ. ಮೇಲಿನ ಯಾರು ಅಲ್ಲ
4. 1953 ರಲ್ಲಿ ನಿಧನರಾದ ರಷ್ಯಾದ ಕಮ್ಯೂನಿಷ್ಟ ನಾಯಕ ಯಾರು?
ಎ. ಲೆನಿನ್
ಬಿ. ಸ್ಟಾಲಿನ್
ಸಿ. ಬ್ರೇಜ್ನೇವ್
ಡಿ. ಇವರು ಯಾರೂ ಅಲ್ಲ
5. ಹಿಟ್ಲರ್ ಪ್ರಾರಂಭಿಸಿದ ಪಕ್ಷ ಯಾವುದು?
ಎ. ಲೇಬರ್ ಪಕ್ಷ
ಬಿ. ಡೆಮಾಕ್ರಟಿಕ್ ಪಕ್ಷ
ಸಿ. ನಾಜಿ ಪಕ್ಷ
ಡಿ. ಯಾವೂದು ಅಲ್ಲ
6. ಈ ಕೆಳಗಿನ ಯಾವ ಘಟನೆಯ ನಂತರ ಭಾರತವು ಬ್ರಿಟಿಷ್ ಪಾರ್ಲಿಮೆಂಟಿನ ನೇರ ಆಡಳಿತಕ್ಕೆ ಒಳಪಟ್ಟಿತು.?
ಎ. 1764 ರ ಬಕ್ಸಾರ್ ಕದನ
ಬಿ. 1857 ರ ಸಿಪಾಯಿ ದಂಗೆ
ಸಿ. 1757 ರ ಪ್ಲಾಸಿ ಕದನ
ಡಿ.1765 ರ ಅಲಹಾಬಾದ್ ಒಪ್ಪಂದ
7. ಭಾರತದಲ್ಲಿ ವಿಶ್ವವಿದ್ಯಾಲಯಗಳು ಯಾರ ಕಾಲದಲ್ಲಿ ಮೊದಲಿಗೆ ಪ್ರಾರಂಭವಾದವು?
ಎ. ಲಾರ್ಡ್ ಕ್ಯಾನಿಂಗ್
ಬಿ. ಲಾರ್ಡ್ ಮೆಕಾಳೆ
ಸಿ. ಲಾರ್ಡ್ ವಾರನ್ ಹೇಸ್ಟೀಂಗ್ಸ್
ಡಿ. ಲಾರ್ಡ್ ವಿಲಿಯಂ ಬೆಂಟಿಂಕ್
8. ಭಾರತದಲ್ಲಿ ಪ್ರಮುಖ ಸೂಫಿ ಮಂದಿರ ಎಲ್ಲಿದೆ?
ಎ. ಅಜ್ಮೀರ್
ಬಿ. ಶಹನಾಜಾಬಾದ್
ಸಿ. ಬೀದರ್
ಡಿ. ಪಾಂಡುವಾ
9. ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೊಟೆ ಯಾವುದು?
ಎ. ಸೇಂಟ್ ಜಾರ್ಜ್ ಕೋಟೆ, ಮದ್ರಾಸ್
ಬಿ. ಪೋರ್ಟ್ ವಿಲಿಯಂ , ಕಲ್ಕತ್ತಾ
ಸಿ. ಬಾಂಬೆ ಕೋಟೆ
ಡಿ. ಯಾವುದು ಅಲ್ಲ
10. ಈ ಕೆಳಗಿನ ಯಾವ ಘಟನೆಯಿಂದ ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕೆ ರಹದಾರಿ ದೊರಕಿತು?
ಎ. ಪ್ಲಾಸಿಕದನ, 1757
ಬಿ. ಬಕ್ಸಾರ ಕದನ, 1764
ಸಿ. ಇಬ್ರಾಹಿಂಖಾನನ ಫರ್ಮಾನು,1690
ಡಿ. ಫರೂಕ್ ಸಿಯಾರ್‍ನ ಫರ್ಮಾನು,1717
11. ಮಹಾತ್ಮಾಗಾಂಧಿಯವರು ‘ ಮಾಡು ಇಲ್ಲವೆ ಮಡಿ’ ಎಂಬ ಕರೆಯನ್ನು ಯಾವ ನಗರದಲ್ಲಿ ನೀಡಿದರು?
ಎ. ಕಾನ್ಪುರ
ಬಿ. ಮದ್ರಾಸ್
ಸಿ. ಮುಂಬಯಿ
ಡಿ. ಕಲ್ಕತ್ತ
12. ಗಾಂಧಾರ ಕಲಾ ಶಾಲೆಯೊಂದಿಗೆ ಸಂಬಂಧಿಸಿದ ಸಂತತಿ ಯಾವುದು?
ಎ. ಕುಶಾನರು
ಬಿ. ಮೌರ್ಯರು
ಸಿ. ಚಾಲುಕ್ಯರು
ಡಿ. ಗುಪ್ತರು
13. ಭಾರತದಲ್ಲಿ ಫ್ರೇಂಚರ ಅಧಿಪತ್ಯಕ್ಕೆ ಕೊನೆ ಹಾಡಿದ ಯುದ್ಧ ಯಾವುದು?
ಎ. ಮೊದಲ ಕರ್ನಾಟಿಕ್ ಯುದ್ಧ
ಬಿ. ವಾಂಡಿವಾಷ್ ಕದನ
ಸಿ. ಎರಡನೇ ಕರ್ನಾಟಿಕ್ ಯುದ್ಧ
ಡಿ. ಪ್ಲಾಸಿ ಕದನ
14. ಭಾರತದಲ್ಲಿ ಬ್ರಿಟಿಷರು ತಮ್ಮ ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಲಾಯಿತು?
ಎ. ಆಗ್ರಾ
ಬಿ. ಮುಂಬಯಿ
ಸಿ. ಮದ್ರಾಸ್
ಡಿ. ಸೂರತ್
15. ಅರುಣ ಆಸಫ್ ಅಲಿಯವರು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾರೆ?
ಎ. ಕ್ವಿಟ್ ಇಂಡಿಯಾ ಚಳುವಳಿ
ಬಿ. ಖಿಲಾಫತ್ ಚಳುವಳಿ
ಸಿ. ಬಾರ್ಡೋಲಿ ಸತ್ಯಾಗ್ರಹ
ಡಿ. ಕಾಯ್ದೆ ಭಂಗ ಚಳುವಳಿ
16. 1905 ರಲ್ಲಿ ಭಾರತ ಸೇವಕ ಸಂಘವನ್ನು ಯಾರು ಸ್ಥಾಪಿಸಿದರು?
ಎ. ರಾಜೇಂದ್ರ ಪ್ರಸಾದ್
ಬಿ. ನರೇಂದ್ರ ದೇವ್
ಸಿ. ಗೋಪಾಲ್ ಕೃಷ್ಣ ಗೋಖಲೆ
ಡಿ. ಸಿ. ಆರ್. ದಾಸ್
17. ಮಹಾಬಲಿಪುರಂನಲ್ಲಿನ ದೇವಾಲಯಗಳನ್ನು ಯಾವ ಸಂತತಿಗೆ ಸೇರಿದ ರಾಜರು ಕಟ್ಟಿಸಿದರು?
ಎ. ಪಲ್ಲವ
ಬಿ. ಗುಪ್ತ
ಸಿ. ಕುಶಾನ
ಡಿ. ಚೋಳ
18. ಅಮೀರ್ ಖುಸ್ರೋ ಯಾರ ಆಸ್ಥಾನದ ಪ್ರಖ್ಯಾತ ಕವಿಯಾದ್ದನು?
ಎ. ಜಹಾಂಗೀರ್
ಬಿ. ಅಕ್ಬರ್
ಸಿ. ಅಲ್ಲಾವುದ್ದೀನ್ ಖಿಲ್ಜಿ
ಡಿ. ಬಹದ್ದೂರ ಷಾ
19. ಫ್ರೇಂಚರಿಗೆ ಮಚಲಿಪಟ್ಟಣವನ್ನು ನೀಡಿದವರು ಯಾರು?
ಎ. ಮುಜಾಫರ್ ಜಂಗ್
ಬಿ. ಸಾಲಾಬತ್ ಜಂಗ್
ಸಿ. ಅಸಫ್ ಜಂಗ್
ಡಿ. ಅಲ್ಬೇರುನಿ
20. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ‘ ಸಿಪಾಯಿ ದಂಗೆ’ಯು ಎಲ್ಲಿಂದ ಪ್ರಾರಂಭವಾಯಿತು?
ಎ. ಝಾನ್ಸಿ
ಬಿ. ಮೀರತ್
ಸಿ. ಗ್ವಾಲಿಯರ್
ಡಿ. ಆಗ್ರಾ
21. ‘ ಅನ್ ಟು ದಿ ಲಾಸ್ಟ್’ ಕೃತಿಯನ್ನು ರಚಿಸಿದವರು ಯಾರು?
ಎ. ಸ್ಟಾಲಿನ್
ಬಿ. ಮಹಾತ್ಮಾ ಗಾಂಧಿ
ಸಿ. ಲೆನಿನ್
ಡಿ. ಜಾನ್ ರಸ್ಕಿನ್
22. ವಿಶ್ವ ವಿಖ್ಯಾತ ‘ ಮಯೂರ ಸಿಂಹಾಸನವನ್ನು’ ಈ ಕೆಳಗಿನ ಯಾವ ಮೊಗಲ್ ಸ್ಮಾರಕದಲ್ಲಿ ಇಡಲಾಗಿತ್ತು?
ಎ. ನ್ಯೂ ಆಗ್ರಾ ಪೋರ್ಟ್
ಬಿ. ದೆಹಲಿಯ ಕೆಂಪು ಕೋಟೆಯ ಅರಮನೆ
ಸಿ. ಫತೇಫುರ್ ಸಿಕ್ರಿಯ ದಿವಾನ್- ಕಿ- ಖಾಸ್
ಡಿ. ಆಗ್ರಾದ ಮೋತಿ ಮಹಲ್
23. ಈ ಕೆಳಗಿನ ಯಾವುದು ಭಾರತದಲ್ಲಿ ಫ್ರೆಂಚರ ವಸಾಹತು ಆಗಿರಲಿಲ್ಲ?
ಎ. ಚಂದರ್‍ನಗರ
ಬಿ. ಪಾಂಡಿಚೇರಿ
ಸಿ. ಗೋವಾ
ಡಿ. ಮಾಹೆ
24. ಆಧುನಿಕ ಭಾರತದಲ್ಲಿ ಸ್ಥಳೀಯ ಸ್ವ ಸರ್ಕಾರಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಎ. ಲಾರ್ಡ್ ಕರ್ಜನ್
ಬಿ. ಲಾರ್ಡ್ ರಿಪ್ಪನ್
ಸಿ. ಲಾರ್ಡ್ ಲಿಟ್ಟನ್
ಡಿ. ಲಾರ್ಡ್ ಮಾಯೋ
25. ಸಾಂಚಿ ಬೌದ್ದ ಸೂಪ್ತವನ್ನು ಯಾರು ನಿರ್ಮಿಸಿದರು?
ಎ.ಚಂದ್ರಗುಪ್ತ ಮೌರ್ಯ
ಬಿ. ಅಶೋಕ
ಸಿ. ಎರಡನೇ ಚಂದ್ರಗುಪ್ತ
ಡಿ. ಸಮುದ್ರಗುಪ್ತ
# ಉತ್ತರಗಳು :
1) ಸಿ. ಮೆಕ್ಕಾ
2) ಡಿ. ಕ್ರಿ.ಪೂ.776
3)ಬಿ. ಕೊಲಂಬಸ್
4)ಬಿ. ಸ್ಟಾಲಿನ್
5)ಸಿ. ನಾಜಿ ಪಕ್ಷ
6)ಬಿ. 1857 ರ ಸಿಪಾಯಿ ದಂಗೆ
7)ಎ. ಲಾರ್ಡ್ ಕ್ಯಾನಿಂಗ್
8)ಎ. ಅಜ್ಮೀರ್
9)ಎ. ಸೇಂಟ್ ಜಾರ್ಜ್ ಕೋಟೆ, ಮದ್ರಾಸ್
10)ಡಿ. ಫರೂಕ್ ಸಿಯಾರ್‍ನ ಫರ್ಮಾನು,1717
11)ಸಿ. ಮುಂಬಯಿ
12)ಎ. ಕುಶಾನರು
13)ಬಿ. ವಾಂಡಿವಾಷ್ ಕದನ
14)ಡಿ. ಸೂರತ್
15)ಎ. ಕ್ವಿಟ್ ಇಂಡಿಯಾ ಚಳುವಳಿ
16)ಸಿ. ಗೋಪಾಲ್ ಕೃಷ್ಣ ಗೋಖಲೆ
17)ಡಿ. ಚೋಳ 18)ಸಿ. ಅಲ್ಲಾವುದ್ದೀನ್ ಖಿಲ್ಜಿ
19)ಎ. ಮುಜಾಫರ್ ಜಂಗ್
20)ಬಿ. ಮೀರತ್
21) ಡಿ. ಜಾನ್ ರಸ್ಕಿನ್
22)ಬಿ. ದೆಹಲಿಯ ಕೆಂಪು ಕೋಟೆಯ ಅರಮನೆ
23)ಸಿ. ಗೋವಾ
24) ಬಿ. ಲಾರ್ಡ್ ರಿಪ್ಪನ್
25)ಬಿ. ಅಶೋಕ