Job NewsLatest Updates

Home Guard Recruitment : ಹಾಸನ ಜಿಲ್ಲೆಯಲ್ಲಿ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿ

Share With Friends

Home Guard Recruitment: Recruitment of Volunteer Home Guards in Hassan District

ಹಾಸನ ಜಿಲ್ಲಾ ಗೃಹರಕ್ಷಕದಳವು ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲ್ಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ (Volunteer Home Guard) – ಗೌರವ ಸದಸ್ಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. SSLC ಪಾಸಾದ ಮತ್ತು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರು ಈ ನೇಮಕಾತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಡಳಿತವು ತಿಳಿಸಿದೆ.

ಯಾರು ಅರ್ಜಿ ಸಲ್ಲಿಸಬಹುದು?
ಹಾಸನ ಜಿಲ್ಲೆ ನಿವಾಸಿಗಳಿಗಷ್ಟೇ ಈ ನೇಮಕಾತಿಯಲ್ಲಿ ಭಾಗವಹಿಸುವ ಅವಕಾಶವಿದೆ. ಪುರುಷರ ಜೊತೆಗೆ ಮಹಿಳೆಯರೂ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ಸೇವೆ ಸಲ್ಲಿಸಲು ಅರ್ಜಿ ಹಾಕಬಹುದಾಗಿದೆ.

ಅರ್ಹತೆಗಳ ವಿವರ
ವಯೋಮಿತಿ: 19 ರಿಂದ 50 ವರ್ಷ
ಶೈಕ್ಷಣಿಕ ಅರ್ಹತೆ: SSLC ಉತ್ತೀರ್ಣ
ವಾಸಸ್ಥಳ: ಅಭ್ಯರ್ಥಿಯ ಮನೆ ಘಟಕದ ಠಾಣೆಯಿಂದ 6 ಕಿ.ಮೀ ವ್ಯಾಪ್ತಿಯಲ್ಲಿರಬೇಕು
ದೈಹಿಕ ಸಾಮರ್ಥ್ಯ: ಆರೋಗ್ಯವಂತರು, ದೃಢಕಾಯ ಹಾಗೂ ಸೇವಾ ಮನೋಭಾವ ಹೊಂದಿರಬೇಕು

ಅರ್ಜಿಯೊಂದಿಗೆ ಸೇರಿಸಬೇಕಾದ ದಾಖಲೆಗಳು
SSLC ಅಂಕಪಟ್ಟಿ
ಜನ್ಮ ದಿನಾಂಕದ ದೃಢೀಕರಣ
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ವೈದ್ಯಕೀಯ ಆರೋಗ್ಯ ಪ್ರಮಾಣಪತ್ರ
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
SBI ಬ್ಯಾಂಕ್ ಪಾಸ್‌ಬುಕ್ ನಕಲು (ಕಡ್ಡಾಯ)

ಪೋಲಿಸ್ ವೆರಿಫಿಕೇಶನ್ (OTT/OITTI)
ಅರ್ಜಿಪತ್ರ ಪಡೆಯುವುದು & ಸಲ್ಲಿಸುವುದು
ಅರ್ಜಿಪತ್ರ ವಿತರಣೆ ಪ್ರಾರಂಭ: 01-12-2025
ಎಲ್ಲಿ ಪಡೆಯುವುದು: ಹಾಸನ ಜಿಲ್ಲಾ ಗೃಹರಕ್ಷಕದಳದ ಕಚೇರಿ
ಅರ್ಜಿಶುಲ್ಕ: ಉಚಿತ
ಸಲ್ಲಿಸುವ ಅಂತಿಮ ದಿನಾಂಕ: 31-12-2025
ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸ್ವತಃ ಹಾಜರಾಗಿ ಅರ್ಜಿ ಸಲ್ಲಿಸಬೇಕು.

ಸಂಪರ್ಕಿಸುವ ವಿಳಾಸ
ಕಮಾಂಡೆಂಟ್,
ಜಿಲ್ಲಾ ಗೃಹರಕ್ಷಕದಳದ ಕಚೇರಿ,
ಅಗ್ನಿಶಾಮಕ ಠಾಣಾ ಆವರಣ,
ಡೈರಿ ವೃತ್ತ, ಹಾಸನ – 573201
ದೂರವಾಣಿ: 08172-240690


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!