GKScienceSpardha Times

ಸಂತಾನೋತ್ಪತ್ತಿ (ಮಾನವನಲ್ಲಿ ಪ್ರಜನನ) : ನೆನಪಿನಲ್ಲಿಡಬೇಕಾದ ಅಂಶಗಳು

Share With Friends

1. ಜೀವಿಗಳು ತಮ್ಮನ್ನೇ ಹೋಲುವ ಜೀವಿಗಳಿಗೆ ಜನ್ಮಕೊಡುವುದಕ್ಕೆ ಹೀಗೆನ್ನುವರು-                                                – ಪ್ರಜನನ (ಸಂತಾನೋತ್ಪತ್ತಿ)

2. ಲಿಂಗಾಣುಗಳ(ಗ್ಯಾಮೀಟ್‍ಗಳ) ಸಂಯೋಗದಿಂದ ಉಂಟಾಗುವ ಸಂತಾನೋತ್ಪತ್ತಿ-                                          – ಲೈಂಗಿಕ ಸಂತಾನೋತ್ಪತ್ತಿ

3. ಲಿಂಗಾಣುಗಳ (ಗ್ಯಾಮೀಟ್‍ಗಳ) ಸಂಯೋಗವಿಲ್ಲದೆ ಉಂಟಾಗುವ ಸಂತಾನೋತ್ಪತ್ತಿ-                                        – ನಿರ್ಲಿಂಗ ಸಂತಾನೋತ್ಪತ್ತಿ

4. ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ಏನೆನ್ನುವರು-
–  ಗರ್ಭಧಾರಣೆ

5. ಪ್ರಾಣಿಗಳಲ್ಲಿ ಲಿಂಗಾಣುಗಳನ್ನು ಉತ್ಪತ್ತಿಮಾಡುವ ವಿಶೇಷವಾದ ಅಂಗಗಳು– 
–  ಜನನಾಂಗಗಳು

6. ಪುರುಷ ಲೈಂಗಿಕಕೋಶಕ್ಕೆ ಹೀಗೆನ್ನುತ್ತಾರೆ –   
–  ವೀರ್ಯಾಣು 

7. ಸ್ತ್ರೀಯರಲ್ಲಿ ಅಂಡಾಣುಗಳನ್ನು ಉತ್ಪತ್ತಿ ಮಾಡುವ ಅಂಗ –
–  ಅಂಡಾಶಯಗಳು

8. ಎರಡು ಲಿಂಗಾಣುಗಳ(ಅಂಡ ಮತ್ತು ವೀರ್ಯಾಣು) ಸಂಯೋಗಗೊಳ್ಳುವ ಕ್ರಿಯೆಯನ್ನು ಏನೆಂದು ಕರೆಯುತ್ತಾರೆ.-
–  ನಿಷೇಚನ

9. ಅಂಡ ಮತ್ತು ವೀರ್ಯಾಣುಗಳು ಸ್ತ್ರೀಯರ ದೇಹದೊಳಗೆ ಸಂಯೋಗಗೊಳ್ಳುವುದರಿಂದ , ಮಾನವರಲ್ಲಿ ನಿಷೇಚನವನ್ನು ಏನೆಂದು ಕರೆಯುತ್ತಾರೆ –   
–  ಅಂತರ್‍ನಿಷೇಚನ

10. ವೀರ್ಯಾಣು ಮತ್ತು ಅಂಡಾಣುವಿನ ಸಂಯೋಗದಿಂದ ಉಂಟಾಗುವ ರಚನೆ –
–  ಭ್ರೂಣ

11. ಬೆಳೆಯುತ್ತಿರುವ ಭ್ರೂಣ ಮತ್ತು ಗರ್ಭಕೋಶದ ಒಳಗೋಡೆಯ ನಡುವಿನ ಪೊರೆಯೇ –
–  ಪ್ಲಾಸೆಂಟಾ

12. ಬೆಳೆಯುವ ಬ್ರೂಣಕ್ಕೆ ಆಹಾರ ಒದಗಿಸುವ ಪದಾರ್ಥ –
–  ಯೋಕ್

13. ಯೋಕ್ ಇದರಲ್ಲಿ ಮಾತ್ರ ಇರುತ್ತದೆ-
–  ಅಂಡಾಣು

14. ಮಾನವನ ಗರ್ಭಾವಧಿಯ ಕಾಲ-
–  38 ವಾರಗಳು ಅಥವಾ ಸುಮಾರು 280 ದಿನಗಳು

15. ನಾಯಿಯಲ್ಲಿ ಗರ್ಭಾವಧಿಯ ಕಾಲ –
–  63 ದಿನಗಳು

16. ಕುದುರೆಯಲ್ಲಿ ಗರ್ಭಾವಧಿಯ ಕಾಲ-
–  332-342 ದಿಗಳು

17. ಕೋತಿಯ ಗರ್ಭಾವಧಿಯ ಕಾಲ-
–  226- 332 ದಿನಗಳು

18. ಆನೆಯ ಗರ್ಭಾವಧಿಯ ಕಾಲ –
– 616 ದಿನಗಳು

19. ಸ್ತ್ರೀಯರಲ್ಲಿ ಗರ್ಭಧಾರಣೆ ನಡೆಯುವ ಭಾಗ-
–  ಫಿಲೋಫಿನ್‍ನಾಳ

20. ವೃಷಣಗಳ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ ಯಾವುದು
–  ಸೆಮಿನಿಫೆರಸ್ ನಾಳ

21. ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಆಹಾರ ಮತ್ತು ಆಮ್ಲಜನಕವನ್ನು ಸರಬರಾಜಾಗುವುದು ಇದರ ಮೂಲಕ-
–  ಹೊಕ್ಕಳುಬಳ್ಳಿ

22. ವೀರ್ಯಾಣು ಮತ್ತು ಅಂಡಾಣುವಿನ ಮಿಲನವನ್ನು ಹೆಣ್ಣಿನ ದೇಹದ ಹೊರಗೆ ಪ್ರಯೋಗಶಾಲೆಯಲ್ಲಿ ಕೃತಕ ಪರಿಸರ ನಿರ್ಮಿಸಿ ನಂತರ ಅದನ್ನು ಹೆಣ್ಣಿನ ದೇಹದ ಒಳಗೆ ಪ್ರವೇಶಿಸುವ ತಂತ್ರಜ್ಞಾನ
 ಪ್ರನಾಳ ಶಿಶು

23. ಪ್ರಥಮ ಪ್ರನಾಳಶಿಶು –
– ಲೂಯಿಸ್ ಜಾನ್ ಬ್ರೌನ್

24. ಪ್ರಪ್ರಥಮ ಪ್ರನಾಳ ಶಿಶುವುನ ಜನನವಾದದ್ದು-     
–  25 ಜುಲೈ 1978 (ಇಂಗ್ಲೆಂಡ್)

25. ಭಾರತದ ಮೊದಲ ಪ್ರನಾಳಶಿಶು–   
–  ದುರ್ಗಾ ಅಲಿಯಾಸ್ ಕನಿಪ್ರಿಯಾ ಅಗರ್‍ವಾಲ್

26. ಭಾರತದ ಮೊದಲ ಪ್ರನಾಳಶಿಶುವನ್ನು ಸೃಷ್ಟಿಸಿದವರು ಯಾರು –                                                                           – ಡಾ. ಸುಭಾಷ್ ಮುಖ್ಯೋಪಾಧ್ಯಾಯರು

27. ಐವಿಎಫ್ ನ ವಿಸ್ತ್ರತ ರೂಪ –
–  ಇನ್ ವಿಟ್ರೋ ಫರ್ಟಿಲೈಜೇಶನ್

28. ಸ್ತ್ರೀಯರಿಗೆ ನಡೆಸುವ ಸಂತಾನಹರಣ ಶಸ್ತ್ರಚಿಕಿತ್ಸೆ-   
– ಟ್ಯುಬೆಕ್ಟಮಿ

29. ಪುರುಷರಿಗೆ ನಡೆಸುವ ಸಂತಾನಹರಣ ಶಸ್ತ್ರಚಿಕಿತ್ಸೆ –
– ವ್ಯಾಸೆಕ್ಟಮಿ

30. ಗಂಡು ಮತ್ತು ಹೆಣ್ಣು ಲಿಂಗಗಳು ಎರಡೂ ಬೇರೆ ಬೇರೆಯಾಗಿರುವ ಜೀವಿಗಳನ್ನು ಎನೆನ್ನುವರು –              – ಏಕಲಿಂಗಿಗಳು

31. ಏಕಲಿಂಗಗಳಿಗೆ ಉದಾಹರಣೆ –
–  ಮೀನುಗಳು, ಊಭಯವಾಸಿಗಳು, ಪಕ್ಷಿಗಳು , ಸ್ತನಿಗಳು

32. ಗಂಡು ಮತ್ತು ಹೆಣ್ಣು ಲಿಂಗಗಳು ಎರಡೂ ಒಂದೇ ಜೀವಿಯಲ್ಲಿದ್ದರೆ ಅದನ್ನು ಏನೆನ್ನುವರು –                    –  ದ್ವಿಲಿಂಗಿಗಳು

33. ದ್ವಿಲಿಂಗಿಗಳಿಗೆ ಉದಾಹರಣೆ –
–  ಲಾಡಿಹುಳು, ಎರೆಹುಳು ಇತ್ಯಾದಿ.

34. ಗಂಡು ಮತ್ತು ಹೆಣ್ಣು ಎರಡೂ ಲಿಂಗಾಣುಗಳು ಒಂದೇ ಜೀವಿಯಲ್ಲಿ ಉತ್ಪತ್ತಿಯಾದರೆ ಅಂತಹ ಜೀವಿಯನ್ನು ಏನೆನ್ನುವರು –   
–  ಹಾರ್ಮೋಪ್ರೋಡೈಟ್ ಅಥವಾ ಮಾನೀಷಿಯಸ್

35. ಗಂಡು ಮತ್ತು ಹೆಣ್ಣು ಲಿಂಗಾಣುಗಳು ಬೇರೆ ಬೇರೆ ಜೀವಿಯಲ್ಲಿ ಉತ್ಪತ್ತಿಯಾದರೆ ಅಂತಹ ಜೀವಿಯನ್ನು ಏನೆನ್ನುವರು-
–  ಡೈಯೀಷಿಯಸ್

36. ಮಿಯಾಸಿಸ್ ಕೊಶ ವಿಭಜನೆಯಲ್ಲಿ ದ್ವಿಗುಣಿತ ಪ್ರಜನನ ಕೋಶಗಳು ಏಕಗುಣಿತವಾಗುವ ಪ್ರಕ್ರಿಯೆ- –  –  –   ಗೆಮಿಟೋ ಜೆನಿಸಿಸ್

37. ಗೆಮಿಟೋಜೆನಿಸಿಸ್ ಎಲ್ಲಿ ನಡೆಯುತ್ತದೆ-
–  ಗೊನಾಡ್‍ಗಳಲ್ಲಿ

38. ಸ್ಟರ್ಮೆಟೋಜೆನಿಸಿಸ್ ಎಂದರೆ –
–  ವೀರ್ಯಾಣು( ಗಂಡು ಲಿಂಗಾಣು ಉತ್ಪತ್ತಿ)

39. ಊಜೆನಿಸಿಸ್ ಎಂದರೆ –
–  ಅಂಡಾಣು( ಹೆಣ್ಣು ಲಿಂಗಾಣು ಉತ್ಪತ್ತಿ.

40. ಅಂಡಾಶಯದಲ್ಲಿ ಪೂರ್ಣಬೆಳೆದ ಅಂಡಾಣು –
–  ಗ್ರಾಫಿಯನ್ ಫಾಲಿಕಲ್

41. ಅಂಡಾಶಯದಲ್ಲಿ ಅಂಡಾಶಯದ ಕುಹರಗಳ ಬೆಳವಣಿಗೆಗೆ ಸಹಾಯವಾದ ಹಾರ್ಮೋನು ಯಾವುದು –
–  ಕುಹರಚೋದಕ ಹಾರ್ಮೋನು

42. ಋತುಚಕ್ರ ಪ್ರಾರಂಭವಾಗುವ ಹಂತ
–  ಪ್ಯೂಬರ್ಟಿ

43. ಋತುಚಕ್ರ ನಿಲ್ಲುವ ಹಂತ –
–  ಮೆನೋಪಾಸ್

44. ಪ್ರೆಗ್ನೆನ್ಸಿಯ ಹಾರ್ಮೋನ್ –
–  ಪ್ರೊಜೆಸ್ಟಿರಾನ್

45. ಹೆರಿಗೆ ಸಂದರ್ಭದಲ್ಲಿ ಗರ್ಭಕೋಶದ ಸ್ನಾಯುಗಳ ಸಂಕುಚನೆಯನ್ನು ಪ್ರಚೋದಿಸು ಹಾರ್ಮೋನು –  –  ರಿಲ್ಯಾಕ್ಸಿನ್

46. ಪುರುಷರಲ್ಲಿ ವೀರ್ಯಾಣುಗಳು ಈ ಭಾಗದಲ್ಲಿ ಶೇಖರಣೆಯಾಗಿರುತ್ತದೆ-
–  ಎಪಿಡೈಡಮಿಸ್

47. ಸ್ತ್ರೀಯರ ಅಂಡಾಶಯಗಳು ಬಿಡುಗಡೆಮಾಡುವ ಎರಡು ಹಾರ್ಮೋನುಗಳು-
–  ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರಾನ್

48. ಹೆಣ್ಣಿನ ಗರ್ಭಾಶಯದೊಳಕ್ಕೆ ಬಿಡುಗಡೆಯಾಗುವ ವೀರ್ಯಾಣುಗಳ ಜೀವಿತಾವಧಿ
–  48 ಗಂಟೆಗಳು

49. ಹೆರಿಗೆಯ ಸಮಯದಲ್ಲಿ ಪಿಟ್ಯುಟರಿ ಗರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನು –
–  ಆಕ್ಸಿಟೋಸಿನ್

50. ಆರೋಗ್ಯವಂತ ಮನುಷ್ಯನಲ್ಲಿ ದಿನವೊಂದಕ್ಕೆ ಬಿಡುಗಡೆಯಾಗುವ ವೀರ್ಯಾಣುಗಳ ಸಂಖ್ಯೆ –
–  30 ಮಿಲಿಯನ್

 

 

 

 

 

error: Content Copyright protected !!