GKScienceSpardha Times

‘ಕಾಂತತ್ವ’ಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು

Share With Friends

1. ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಕಾಂತ – ಮಾಗ್ನಟೈಟ್
2. ಹಡಗು ಮತ್ತು ವಿಮಾನಗಳು ದಿಕ್ಕನ್ನು ತಿಳಿಯಲು ಬಳಸುವ ಸಾಧನ – ದಿಕ್ಸೂಚಿ
3. ನಾವಿಕರ ದಿಕ್ಸೂಚಿಯಲ್ಲಿ ಇದನ್ನು ಬಳಸುತ್ತಾರೆ – ಸೂಜಿಕಾಂತ
4. ದಿಕ್ಸೂಚಿಯನ್ನು ಮೊದಲು ತಯಾರಿಸದವರು – ಚೀನಾ
5. ಕಾಂತದ 2 ಧ್ರುವಗಳನ್ನು ಪ್ರತ್ಯೇಕಿಸಲು ಅಸಾಧ್ಯ ಮತ್ತು ಭೂಮಿಯು ಒಂದು ಕಾಂತದಂತೆ ವರ್ತಿಸುತ್ತದೆ. ಎಂದು ತಿಳಿಸಿದವರು –ವಿಲಿಯಂ ಗಿಲ್‍ಬರ್ಟ್

6. ಕಾಂತದಿಂದ ಆಕರ್ಷಿಸಲ್ಪಡುವ ವಸ್ತುಗಳು – ಕಾಂತೀಯ ವಸ್ತುಗಳು
7. ಕಾಂತದಿಂದ ಆಕರ್ಷಿಸಲ್ಪಡದ ವಸ್ತುಗಳು – ಅಕಾಂತೀಯ ವಸ್ತುಗಳು
8. ಭೂಮಿಯ ಮೇಲೆ ಸ್ವತಂತ್ರವಾಗಿ ತೂಗಿಬಿಟ್ಟ ಕಾಂತವು ಈ ದಿಕ್ಕಿನಲ್ಲಿ ನಿಲ್ಲುತ್ತದೆ –ಉತ್ತರ ಮತ್ತು ದಕ್ಷಿಣ
9. ಕಾಂತಗಳಿಗೆ ಇಲ್ಲಿ ಆಕರ್ಷಣಾ ಶಕ್ತಿ ಹೆಚ್ಚಾಗಿದೆ –ಧ್ರುವಗಳಲ್ಲಿ
10. ಕಾಂತದ ಸಜಾತೀಯ ಧ್ರುವಗಳು ಪರಸ್ಪರ – ವಿಕರ್ಷಿಸುತ್ತವೆ

11. ಸಜಾತೀಯ ಎರಡು ಕಾಂತದ ಧ್ರುವಗಳನ್ನು ದೂರತಳ್ಳುವ ಬಲ – ವಿಕರ್ಷಣಾಬಲ
12. ಕಾಂತದ ಎರಡು ವಿಜಾತೀಯ ಧ್ರುವಗಳ ನಡುವಿನ ಬಲ –ಆಕರ್ಷಣಾಬಲ
13. ಸಜಾತೀಯ ಧ್ರುವಗಳ ವಿಕರ್ಷಣೆ ಮತ್ತು ವಿಜಾತೀಯ ಧ್ರುವಗಳ ಆಕರ್ಷಣೆ ಬಗ್ಗೆ ತಿಳಿಸಿದ ನಿಯಮ – ಕಾಂತ ಧ್ರುವಗಳ ನಿಯಮ
14. ಕಾಂತವನ್ನು ಕಾಯಿಸಿ ಬಿಸಿ ಮಾಡುವುದರಿಂದ ಕಾಂತತ್ವ ನಷ್ಟವಾಗುತ್ತದೆ. ನಷ್ಟವಾಘಲು ಕಾರಣ ಅಣುಗಳ ಚಲನ ಶಕ್ತಿ ಅಧಿಕವಾಗುವುದು.
15. ಕಾಂತದ ಸುತ್ತಲು ಇರುವ ಬಲ – ಕಾಂತಬಲ

16. ಕಾಂತಬಲ ಇರುವ ಪ್ರದೇಶವೇ – ಕಾಂತಕ್ಷೇತ್ರ
17. ಕಾಂತಕ್ಷೇತ್ರವನ್ನು ಬಿಂಬಿಸು ರೇಖೆಗಳು –ಕಾಂತೀಯ ರೇಖೆಗಳು
18. ಕಾಂತೀಯ ವಸ್ತುಗಳಿಗೆ ಉದಾಹರಣೆ – ಕಬ್ಬಿಣ, ನಿಕ್ಕಲ್, ಕೋಬಾಲ್ಟ್, ಉಕ್ಕು, ಆಲ್ನಿಕೋ
19. ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಕ್ಷೀಣ ಕಾಂತೀಯತೆಯನ್ನು ತೋರುವ ಕಾಂತೀಯ ವಸ್ತುಗಳು- ಡಯಾಕಾಂತೀಯ ವಸ್ತುಗಳು
ಉದಾ-ಆ 0ಟಮನಿ, ಸೀಸ, ಚಿನ್ನ, ನೀರು
20. ಕಾಂತಕ್ಷೇತ್ರದಲ್ಲಿ ಕಾಂತೀಯತೆಯನ್ನು ತೋರುವ ವಸ್ತುಗಳು –ಪ್ಯಾರಾಕಾಂತೀಯ ವಸ್ತುಗಳು
ಉದಾ -ಪ್ಲಾಟಿನಂ, ಅಲ್ಯುಮಿನಿಯಂ, ಕ್ರೋಮಿಯಮ್, ಕಾಪರ್ ಸಲ್ಫೇಟ್

21. ಒಳ್ಳೆಯ ಕಾಂತೀಯ ಗುಣಗಳನ್ನು ಹೊಂದಿದ್ದು, ಬಾಹ್ಯಕಾಂತ ಕ್ಷೇತ್ರದಿಂದ ಸುಲಭವಾಗಿ ಕಾಂತೀಯವಾಗುವ ವಸ್ತುಗಳು – ಪೆರೋಕಾಂತೀಯ ವಸ್ತುಗಳು
ಉದಾ- ಕಬ್ಬಿಣ, ನಿಕ್ಕಲ್ ಕೊಬಾಲ್ಟ್
22. ಕಾಂತದ ವಿದ್ಯಮಾನವನ್ನು ವಿವರಿಸಿದ ವಾದ – ಅಣುವಾದ
23. ಕಾಂತದ ಗುಣ ಇರುವ ವಸ್ತುಗಳಲ್ಲಿ ಅಣುಗಳು ಯಾವ ರೀತಿ ಜೋಡಣೆಯಾಗಿರುತ್ತದೆ –ಏಕ ದಿಕ್ಕಿನಲ್ಲಿ ಪರಸ್ಪರ ಸಮಾಂತರವಾಗಿ
24. ಶಾಶ್ವತ ಕಾಂತಗಳ ತಯಾರಿಕೆಗೆ ಬಳಸುವ ವಿಧಾನ -ವಿದ್ಯುತ್ ವಿಧಾನ
25. ಶಾಶ್ವತ ಕಾಂತಗಳ ತಯಾರಿಕೆಗೆ ಬಳಸುವ ವಸ್ತುಗಳು –ಉಕ್ಕು ಮತ್ತು ಆಲ್ನಿಕೋ

26. ಟೆಲಿಫೋನ್, ಡೈನಮೋ, ವಿದ್ಯುತ್ ಮೋಟಾರ್ ಮುಂತಾದವುಗಳಲ್ಲಿ ಬಳಸುವ ಸಾಧನಗಳು – ವಿದ್ಯುತ್ ಸಾಧನಗಳು( ಎಲೆಕ್ಟ್ರೋ ಮ್ಯಾಗ್ನೈಟ್)
27. ಭೂಮಿಯೇ ಒಂದು ಕಾಂತ ಎಂಬ ಕಲ್ಪನೆಯನ್ನು ಪ್ರತಿಪಾದಿಸಿದವನು – ಗಿಲ್ಬರ್ಟ್
28. ಭೂಕಾಂತದ ದಕ್ಷಿಣ ಧ್ರುವ ಎಲ್ಲಿದೆ- ಕೆನಡಾದ ಹಡ್ಸನ್ ಕೊಲ್ಲಿಯ ಭಾಗದಲ್ಲಿ
29. ಭೂಕಾಂತದ ಉತ್ತರ ಧ್ರುವ ಎಲ್ಲಿದೆ- ಆಸ್ಟ್ರೇಲಿಯಾ ಖಂಡದ ದಕ್ಷಿಣ ಭಾಗದಲ್ಲಿ
30. ಕಾಂತ ಎಂದರೆ ಆಕರ್ಷಣೆ ಎಂದರ್ಥ.

31. ಭೂಮಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ಕಾಂತೀಯ ಗುನಗಳನ್ನು ಪಡೆದಿರುವ ಕಾಂತವನ್ನು ನೈಸರ್ಗಿಕ ಕಾಂತಗಳು ಎನ್ನುವರು. ಉದಾ – ಮ್ಯಾಗ್ನಟೈಟ್
32. ಕೃತಕವಾಗಿ ತಯಾರಿಸಿದ ವಿವಿಧ ಆಕೃತಿಯ ಕಾಂತಗಳಿಗೆ ಕೃತಕ ಕಾಂತಗಳು ಎನ್ನುವರು . ಉದಾ – ದಂಡಕಾಂತ, ಲಾಳಕಾಂತ, ಸೂಜಿಕಾಂತ

ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು

Leave a Reply

Your email address will not be published. Required fields are marked *

error: Content Copyright protected !!