ಭಾರತ ಇತಿಹಾಸದ ಪ್ರಮುಖ ಘಟನೆಗಳ ಸಂಗ್ರಹ : ಭಾಗ – 1
1. 3000-2500 : ಸಿಂಧೂ ನದಿ ಬಯಲಿನ ನಾಗರೀಕತೆ
2. 1900 : ಆರ್ಯನ್ನರಿಂದ ಉತ್ತರಭಾರತದ ಮೇಲೆ ಆಕ್ರಮಣ
3. 1500 : ಋಗ್ವೇದದ ರಚನೆ
4. 1000 : ಭಾರತದಲ್ಲಿ ಕಬ್ಬಿಣದ ಬಳಕೆ ಪ್ರಾರಂಭ
5. 599 : ಕುಂದನ್ ಎಂಬಲ್ಲಿ ಮಹಾವೀರನ ಜನನ
6. 527 : ಮಹಾವೀರನ ನಿರ್ವಾಣ
7. 483 : ಗೌತಮ ಬುದ್ಧನ ನಿರ್ವಾಣ
8. 364-321 : ಮಗಧದಲ್ಲಿ ನಂದರ ಆಳ್ವಿಕೆ
9. 326-325 : ಭಾರತದ ಮೇಲೆ ಅಲೆಕ್ಸಾಂಡರ್ ಚಕ್ರವರ್ತಿಯ ದಾಳಿ
10. 321 : ಮೌರ್ಯ ಸಾಮ್ರಾಜ್ಯದ ಪ್ರಾರಂಭ
11. 323 : ಬೆಬಿಲೋನಿನಲ್ಲಿ ಅಲೆಗ್ಸಾಂಡರ್‍ನ ಸಾವು
12. 273- 232 : ಸಾಮ್ರಾಟ ಅಶೋಕನ ಆಳ್ವಿಕೆಯ ಅವಧಿ
13. 261-260 : ಕಳಿಂಗ ಯುದ್ಧ (ಅಶೋಕನ ಕೊನೆಯ ಯುದ್ಧ)
14. 257 : ಅಶೋಕನ ಮೇಲೆ ಉಪಗುಪ್ತ ಎಂಬುವವನಿಂದ ಬೌದ್ಧ ಧರ್ಮದ ಪ್ರಭಾವ
15. 250 : ಪಾಟಲೀಪುತ್ರದಲ್ಲಿ ಮೂರನೇ ಧರ್ಮ ಸಮ್ಮೇಳನ
16. 187 : ಪುಶ್ಯಾಮಿತ್ರ ಸಾಮ್ರಾಜ್ಯದ ಪ್ರಾರಂಭ
17. 75-28 : ಕಣ್ವರು ಆಳಿದ ಅವಧಿ
18. 58 : ಉಜ್ಜಯಿನಿಯ ವಿಕ್ರಮಾದಿತ್ಯನಿಂದ ವಿಕ್ರಮ ಶಕೆಯ ಪ್ರಾರಂಭ
19. 64 : ಮಿಂಗ್‍ಟಿ ಎಂಬ ಚೀನಾದ ಚಕ್ರವರ್ತಿಯಿಂದ ಬೌದ್ಧ ಗ್ರಂಥಗಳಿಗಾಗಿ ಭಾರತಕ್ಕೆ ನಿಯೋಗ
20. 78 : ಸಕ ಶಕೆಯ ಆರಂ
21. 120-162 : ಕಾನಿಷ್ಕನ ಆಳ್ವಿಕೆ
22. 250 : ಶಾತವಾಹನ ಸಾಮ್ರಾಜ್ಯದ ಪತನ
23. 320 : ಗುಪ್ತ ಸಂತತಿಯ ಪ್ರಾರಂಭ
24. 320- 335 : ಮೊದಲನೆ ಚಂದ್ರಗುಪ್ತನ ಆಳ್ವಿಕೆಯ ಕಾಲ
25. 335-375 : ಸಮುದ್ರಗುಪ್ತನ ಆಳ್ವಿಕೆಯ ಕಾಲ
26. 405-411 : ವಿಕ್ರಮಾದಿತ್ಯನ ಕಾಲದಲ್ಲಿ ಚೀನಾದ ಪ್ರವಾಸಿ ‘ಫಾಹಿಯಾನ’ನ ಭಾರತ ಪ್ರವಾಸ
27. 413-455 : ಮೊದಲನೆ ಕುಮಾರಗುಪ್ತನ ಆಳ್ವಿಕೆಯ ಕಾಲ, ನಳಂದ ವಿಶ್ವವಿದ್ಯಾಲಯದ ಸ್ಥಾಪನೆ
28. 455-461 : ಸ್ಕಂದಗುಪ್ತನ ಆಳ್ವಿಕೆಯ ಕಾಲ, ಹೂಣರು ಭಾರತದ ಮೇಲೆ ದಾಳಿ ನಡೆಸುತ್ತಾರೆ.
29. 467-540 : ಗುಪ್ತ ಸಾಮ್ರಾಜ್ಯದ ಪತನದ ಅವಧಿ
30. 543-755 : ಬಾದಾಮಿ ಚಾಲುಕ್ಯರ ಆಳ್ವಿಕೆಯ ಅವಧಿ
31. 560-903 : ಕಾಂಜೀಪುರಂನಲ್ಲಿ ಮಹಾ ಪಲ್ಲವರ ಆಳ್ವಿಕೆಯ ಅವಧಿ
32. 606-647 : ಹರ್ಷವರ್ಧನನ ಆಳ್ವಿಕೆಯ ಕಾಲ
33. 622 : ಹಿಜಿರ ಶಕೆಯ ಪ್ರಾರಂಭ
34. 629-645 ; ಚೀನಾದ ಪ್ರವಾಸಿ ಹ್ಯೂಯನ್-ತ್ಸಾಂಗ್‍ನ ಭಾರತ ಪ್ರವಾಸ
35. 712 : ಅರಬರ ಮಹಮದ್ ಬಿನ್ ಖಾಸಿಂನಿಂದ ಸಿಂದ್‍ನ ಆಕ್ರಮಣ
36. 753 : ರಾಷ್ಟ್ರಕೂಟ ಸಂತತಿಯ ಪ್ರಾರಂಭ
37. 753- 973 : ದಖ್ಖನಿನಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಅವಧಿ
38. 770-810 :ಪಾಲರ ಖ್ಯಾತ ದೊರೆ ಧರ್ಮಪಾಲನ ಆಳ್ವಿಕೆಯ ಅವಧಿ
39. 788 : ಆದಿ ಶಂಕರಾರ್ಚಯರ ಜನನ
40. 871- 1173 : ತಂಜಾವೂರಿನಲ್ಲಿ ಮಹಾಚೋಳರ ಆಳ್ವಿಕೆಯ ಅವಧಿ
41. 973 -1183 : ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಅವಧಿ
42. 1001 -1026 : ಸುಲ್ತಾನ್ ಘಜ್ನಿ ಮಹಮದ್ ಭಾರತದ ಮೇಲೆ 17 ಬಾರಿ ದಂಡೆಯಾತ್ರೆ ಮಾಡುತ್ತಾನೆ
43. 1025 – 1026 : ಘಜ್ನಿ ಮಹಮದ್‍ನ ಕೊನೆಯ ದಂಡೆಯಾತ್ರೆಯಲ್ಲಿ ಸೋಮನಾಥ ದೇವಾಲಯದ ನಾಶ
44. 1020 -1030 : ಭಾರತದಲ್ಲಿ ಅಲ್ಬೇರೂನಿಯ ಪ್ರವಾಸ
45. 1076 -1435 : ಒರಿಸ್ಸಾದಲ್ಲಿ ಪೂರ್ವಗಂಗರ ಆಳ್ವಿಕೆಯ ಕಾಲ, ಪುರಿಯಲ್ಲಿ ಜಗನ್ನಾಥ ದೇವಾಲಯಗಳ ನಿರ್ಮಾಣ
46. 1106- 1141 : ಹೊಯ್ಸಳರ ದೊರೆಯಾದ ವಿಷ್ಣುವರ್ಧನನ ಆಳ್ವಿಕೆಯ ಕಾಲ, ರಾಮಾಣುಜರಿಗೆ ಆಶ್ರಯ, ಹಳೇಬೀಡಿನ ಹೋಯ್ಸಳೇಶ್ವರ ದೇವಾಲಯದ ನಿರ್ಮಾಣ
47. 1175 : ಘೋರಿ ಮಹಮದ್‍ನಿಂದ ಪಂಜಾಬ್ ಮೇಲೆ ವಿಜಯ
48. 1191 : ಮೊದಲನೇ ತರೈನ್ ಯುದ್ಧದಲ್ಲಿ ಮಹಮದ್ ಘೋರಿಗೆ ಪೃಥ್ವಿರಾಜ್ ಚೌಹಾನ್‍ನಿಂದ ಸೋಲು
49. 1192 : ಎರಡನೇ ತರೈನ್ ಯುದ್ಧದಲ್ಲಿ ಮಹಮದ್ ಘೋರಿಯಿಂದ ಪೃಥ್ವಿರಾಜ್ ಚೌಹಾನನಿಗೆ ಸೋಲು
50. 1206 : ಕುತುಬ್- ಉದ್-ದಿನ್- ಐಬಕ್‍ನಿಂದ ಭಾರತದಲ್ಲಿ ಗುಲಾಮಿ ಸಂತತಿಯ ಸ್ಥಾಪನೆ
51. 1210 : ಕುತುಬ್-ಉದ್-ದಿನ್-ಐಬಕ್‍ನ ಸಾವು
52. 1216- 1323 : ಮಧುರೈನಲ್ಲಿ ಪಾಂಡ್ಯರ ಆಳ್ವಿಕೆ
53. 1231 : ದೆಹಲಿಯಲ್ಲಿ ಕುಬ್ ಮಿನಾರ್ ನಿರ್ಮಾನ ಪೂರ್ಣ
54. 1236 : ರಜಿಯ ಸುಲ್ತಾನ್ ದೆಹಲಿಯ ರಾಣಿಯಾಗಿ ಅಧಿಕಾರ ಸ್ವೀಕಾರ
55. 1290 -1320 : ದೆಹಲಿಯಲ್ಲಿ ಖಿಲ್ಜಿಗಳ ಆಳ್ವಿಕೆ ಅವಧಿ
56. 1320 : ದೆಹಲಿಯಲ್ಲಿ ಘಿಯಾಸ್-ಉಲ್-ದಿನ್-ತುಘಲಕ್‍ನಿಂದ ತುಘಲಕ್ ಸಂತತಿಯ ಆಳ್ವಿಕೆಯ ಸಂಸ್ಥಾಪನೆ
57. 1320- 1414 : ದೆಹಲಿಯಲ್ಲಿ ತುಘಲಕರ ಆಳ್ವಿಕೆಯ ಕಾಲ
58. 1327 : ಮಹಮದ್-ಬಿನ್- ತುಘಲಕ್ ದೆಹಲಿಯಿಂದ ದೌಲತಾಬಾದಿಗೆ ರಾಜಧಾನಿಯನ್ನು ಸ್ಥಳಾಂತರಿಸುತ್ತಾನೆ
59. 1329 : ತಾಮ್ರz ನಾಣ್ಯಗಳ ಚಲಾವಣೆ ಆರಂಭ
60. 1334 -1337 : ಮಧುರೈನಲ್ಲಿ ಸುಲ್ತಾನರ ಆಳ್ವಿಕೆಯ ಕಾಲ
61. 1336 : ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ
62. 1336 – 1342 : ಮೊರಕ್ಕೊ ಪ್ರವಾಸಿ ಇಬ್ನಾ ಬತೂನನ ಭಾರತ ಪ್ರವಾಸ
63. 1347 : ದಕ್ಷಿಣ ಭಾರತದಲ್ಲಿ ಬಹುಮನಿ ಸಾಮ್ರಾಜ್ಯ ಸ್ಥಾಪನೆ
64. 1347 -1518 : ಬಹುಮನಿ ರಾಜರ ಆಳ್ವಿಕೆಯ ಕಾಲ
65. 1398 : ತೈಮೂರ್ ಲಾಂಗ್‍ನ ಭಾರತದ ದಾಳಿ
66. 1420 : ವೆನಿಸ್‍ನ ಪ್ರವಾಸಿ ನಿಕೊಲೊಡಿ ಕಾಂಟೆಯ ವಿಜಯನಗರ ಭೇಟಿ
67. 1429 : ಗುಲ್ಬರ್ಗಾದಿಂದ ಬೀದರ್‍ಗೆ ಬಹುಮನಿ ರಾಜಧಾನಿಯ ವರ್ಗಾವಣೆ
68. 1443 : ಪರ್ಷಿಯನ್ ಪ್ರವಾಸಿ ಅಬ್ದುಲ್ ರಜಾಕನ ಭಾರತ ಭೇಟಿ
69. 1451 – 1526 : ದೆಹಲಿಯಲ್ಲಿ ಲೋಧಿ ಸುಲ್ತಾನರ ಆಳ್ವಿಕೆಯ ಕಾಲ
70. 1469 : ಸಿಖ್‍ಪಂಥ ಸಂಸ್ಥಾಪಕ ಗುರುನಾನಕರ ಜನನ
71. 1490 -1686 : ಬಿಜಾಪುರದಲ್ಲಿ ಆದಿಲ್ ಶಾಹಿಗಳ ಆಳ್ವಿಕೆಯ ಕಾಲ
72. 1498 : ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮನು ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡು ಹಿಡಿಯುತ್ತಾನೆ.
73. 1510 : ಪೋರ್ಚುಗೀಸರಿಂದ ಗೋವಾದ ಆತಿಕ್ರಮಣ
74. 1518 – 1687 : ಗೋಲ್ಕಂಡದಲ್ಲಿ ಕುತುಬ್ ಶಾಹಿಗಳ ಆಳ್ವಿಕೆಯ ಅವಧಿ
75. 1526 : ಮೊದಲ ಪಾಣಿಪತ್ ಯುದ್ಧ, ಮೊಘಲ್ ಸಾಮ್ರಾಜ್ಯ ಸ್ಥಾಪನೆ
76. 1535 : ಪೋರ್ಚುಗೀಸ್ ಪ್ರವಾಸಿ ನ್ಯೂನಿಜ್‍ನಿಂದ ವಿಜಯನಗರ ಭೇಟಿ
77. 1555 : ಹುಮಾಯೂನನಿಂದ ದೆಹಲಿಯ ಆತಿಕ್ರಮಣ
78. 1556 -1605 : ಅಕ್ಬರನ ಆಳ್ವಿಕೆಯ ಅವಧಿ
79. 1565 : ತಾಳಿಕೋಟೆಯ ಯುದ್ಧ, ವಿಜಯನಗರದ ಅತಿಕ್ರಮಣ
80. 1571 : ಪತೇಪುರಸಿಕ್ರಿಯ ನಿರ್ಮಾಣ
81. 1581- 1582 : ಅಕ್ಬರ್‍ನಿಂದ ದಿನ್- ಇಲಾಹಿ ಸ್ಥಾಪನೆ
82. 1600 : ಬ್ರಿಟಿಷರಿಂದ ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ
83. 1605 : ಅಕ್ಬರನ ಸಾವು, ಜಹಾಂಗೀರನ ಸಿಂಹಾಸನ ಏರಿಕೆ
84. 1605 -1627 : ಜಹಾಂಗಿರನ ಆಳ್ವಿಕೆಯ ಅವಧಿ
85. 1627 : ಮರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಜನನ
86. 1627- 1658 : ಷಹಜಹಾನ್‍ನ ಆಳ್ವಿಕೆ ಅವಧಿ
87. 1658 – 1707 : ಔರಂಗಜೇಬನ ಆಳ್ವಿಕೆಯ ಅವಧಿ
88. 1659 : ಶಿವಾಜಿಯಿಂದ ಅಫ್‍ಜಲ್‍ಖಾನ್‍ನ ಕೊಲೆ
89. 1664 : ಷಹಜಹಾನ್‍ನ ಸಾವು
90. 1668 : ಔರಂಗಜೇಬನಿಂದ ಧಾರ್ಮಿಕ ಕಟ್ಟಳೆಗಳ ಝಾರಿ
91. 1670 : ಶಿವಾಜಿಯಿಂದ ಎರಡನೇ ಬಾರಿ ಸೂರತ್ ಮೇಲೆ ದಾಳಿ
92. 1674 : ಶಿವಾಜಿಗೆ ಕಿರೀಟಧಾರಣೆ, ಛತ್ರಪತಿ ಎಂಬ ಬಿರುದಾಂಕಿತ
93. 1675 : ಸಿಖ್ಖರ ಒಂಬತ್ತನೆ ಗುರು ತೇಜಬಹದ್ದೂರ್‍ಗೆ ಮರಣದಂಡನೆ
94. 1680 : ಶಿವಾಜಿಯ ಸಾವು
95. 1686 : ಔರಂಗಜೇಬನಿಂದ ಬಿಜಾಪುರದ ವಶ
96. 1687 : ಔರಂಗಜೇಬನಿಂದ ಗೋಲ್ಕಂಡದ ವಶ
97. 1707 : ಔರಂಗಜೇಬನ ಸಾವು
98. 1708 : ಗುರುಗೋವಿಂದ ಸಿಂಗ್‍ನ ಮರಣ
99. 1714 : ಪೇಶ್ವೆ ಆಳ್ವಿಕೆಯ ಪ್ರಾರಂಭ
100. 1742 : ಮರಾಠರಿಂದ ಬಂಗಾಳದ ಆಕ್ರಮಣ