ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕ ಬೇಟೆ
ಈ ಬಾರಿಯ ಪ್ಯಾರಲಿಂಪಿಕ್ ನಲ್ಲಿ ಸಹ ಭಾರತ ಇತಿಹಾಸ ಸೃಷ್ಟಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಎಚ್1 ಪಂದ್ಯದಲ್ಲಿ 19 ವರ್ಷದ ಅವನಿ ಲೆಖರ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಪ್ಯಾರಲಿಂಪಿಕ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ.
ಪ್ಯಾರಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖರಿ ನಾಲ್ಕನೆಯವರಾಗಿದ್ದಾರೆ. 19 ವರ್ಷದ ಅವನಿ ಒಟ್ಟು 249.6 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದಿನ ಪ್ಯಾರಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972ರಲ್ಲಿ), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016ರಲ್ಲಿ) ಮತ್ತು ಹೈಜಂಪ್ ನಲ್ಲಿ 2016ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.
ಎಸ್ ಎಚ್ 1 ರೈಫಲ್ ವಿಭಾಗದಲ್ಲಿ ಅವನಿ ಲೇಖರ ಗನ್ ನ್ನು ಕೈಗಳಿಂದ ಬಂದೂಕನ್ನು ಹಿಡಿದುಕೊಳ್ಳಲು ಸಮರ್ಥರಾಗಿದ್ದರು. ಪ್ಯಾರಲಿಂಪಿಕ್ ನಲ್ಲಿ ಕ್ರೀಡಾಪಟುಗಳು ತಮ್ಮ ಕಾಲುಗಳಲ್ಲಿ ದುರ್ಬಲತೆ ಹೊಂದಿರುವವರು ಕುಳಿತುಕೊಂಡು ಸಾಧ್ಯವಾದವರು ನಿಂತುಕೊಂಡು ಸ್ಪರ್ಧಿಸುತ್ತಾರೆ.
# ಬೆಳ್ಳಿ ಗೆದ್ದ ಯೋಗೇಶ್, ದೇವೇಂದ್ರ, ಸುಂದರ್ ಸಿಂಗ್ ಗುರ್ಜ್ಜಾರ್ ಕಂಚು
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕತುನಿಯಾ ಹಾಗೂ ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಜಝಾರಿಯಾ ಬೆಳ್ಳಿ ಪದಕ ಜಯಿಸಿದ್ದಾರೆ. 24ರ ಹರೆಯದ ಯೋಗೇಶ್ ದೆಹಲಿಯ ಕಿರೋರಿಮಲ್ ಕಾಲೇಜಿನಲ್ಲಿ ಬಿ.ಕಾಂ ಪದವೀಧರನಾಗಿದ್ದು, ಬೆಳ್ಳಿಯನ್ನು ಗೆಲ್ಲುವ ತನ್ನ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಡಿಸ್ಕ್ ಅನ್ನು 44.38 ಮೀ ದೂರಕ್ಕೆ ಎಸೆಯುವ ಮೂಲಕ ಉತ್ತಮ ಪ್ರದರ್ಶನ ತೋರಿಸಿದ್ದಾರೆ
2004ರ ಅಥ್ಲೆನ್ಸ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಇದೀಗ ಮೂರನೇ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕ ಪಡೆದುಕೊಂಡಿದ್ದಾರೆ.
ಜಾವೆಲಿನ್ ಥ್ರೋನಲ್ಲಿ ಸುಂದರ್ ಸಿಂಗ್ ಗುರ್ಜ್ಜಾರ್ ಕಂಚಿನ ಪದಕ ಗೆದ್ದಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ದೇವೇಂದ್ರ ಜಝಾರಿಯಾ ಮತ್ತು ಸುಂದರ್ ಸಿಂಗ್ ಗುರ್ಜ್ಜಾರ್ ಅವರು ಜಾವೆಲಿನ್ ಥ್ರೋ ಕ್ಲಾಸ್ ಎಫ್ 46 ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಈವರೆಗೆ ಭಾರತ 7ಪದಕಗಳ ಸಾಧನೆ :
* ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 7 ಪದಕ ಬಂದಿದೆ. 1 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗಳಿಸಿದ್ದಾರೆ.
* ಭಾರತದ ಪದಕ ಬೇಟೆ ಇಂದು ಕೂಡ ಮುಂದುವರೆದಿದ್ದು, ಜಾವೆಲಿನ್ ಥ್ರೋ ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಬಂದಿದೆ. ದೇವೇಂದ್ರ ಜಜಾರಿಯಾ ಬೆಳ್ಳಿ, ಸುಂದರ ಸಿಂಗ್ ಅವರು ಕಂಚಿನ ಪದಕ ಗಳಿಸಿದ್ದಾರೆ.
* ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕತಾರಿಯಾ ಬೆಳ್ಳಿ ಪದಕ ಗಳಿಸಿದ್ದಾರೆ.
* ಅವನಿ ಲೇಖಾರಾ ಮಹಿಳೆಯರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
* ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಫೈನಲ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.
* ಹೈ ಜಂಪರ್ ನಿಶಾದ್ ಕುಮಾರ್ ಕೂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.
* ವಿನೋದ್ ಕುಮಾರ್ ಪುರುಷರ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
# ಕ್ರೀಡೆಗಳು
# ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಕ್ರೀಡೆಗಳಿಗೆ ಸಂಬಂಧಿಸಿದ ಪ್ನಶ್ನೆಗಳ ಸಂಗ್ರಹ
# ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
# ವಿಶ್ವದ ಪ್ರಮುಖ ಸ್ಟೇಡಿಯಂಗಳು, ಪ್ರಮುಖ ಕ್ರೀಡೆಗಳಲ್ಲಿನ ಆಟಗಾರರ ಸಂಖ್ಯೆ
# ಒಲಿಂಪಿಕ್ ಗೇಮ್ಸ್ ವಿಶೇಷತೆಗಳು : Olympic Games
# ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಕುರಿತ ಮಹತ್ವದ ಪ್ರಶ್ನೆಗಳು
# ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
# ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ